ಅಮೆಜಾನ್ ಸೇಲ್: ಮನೆ ಬಳಕೆಯ ವಾಷಿಂಗ್ ಮೆಷಿನ್, ಫ್ರಿಡ್ಜ್ ಮುಂತಾದ ವಸ್ತುಗಳು ಶೇ. 60ರಷ್ಟು ರಿಯಾಯಿತಿ

ಅಮೆಜಾನ್ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಗೃಹಪಯೋಗಿ ವಸ್ತುಗಳು ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಿದೆ. ವಾಷಿಂಗ್ ಮೆಷಿನ್, ಫ್ರಿಡ್ಜ್, ಮೈಕ್ರೋ ವೇವ್, ಎ.ಸಿ ಹೀಗೆ ಹಲವು ಗೃಹಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ನಾವಿಲ್ಲಿ ದಿ ಬೆಸ್ಟ್ ಹೋಮ್ ಪ್ರಾಡೆಕ್ಟ್‌ಗಳ ಪಟ್ಟಿ ನೀಡಿದ್ದೇವೆ ನೋಡಿ:
1. ಎಲ್ ಜಿ ವಾಷಿಂಗ್ ಮಷಿನ್!
₹46,990.00 ಬೆಲೆಯ ವಾಷಿಂಗ್ ಮೆಷಿನ್ ₹29,490.00 ಬೆಲೆಗೆ ಲಭ್ಯವಾಗಲಿದೆ, ನಿಮಗೆ ₹17,500.00 ಉಳಿತಾಯವಾಗಲಿದೆ.
ಎಲ್ ಜಿ 7 ಕೆಜಿ ಇನ್ವಾರ್ಟರ್ ಟಚ್ ಫುಲ್ಲಿ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ವಿಥ್ ಹೀಟರ್ ಆಕರ್ಷಕ ಬೆಲೆಗೆ ಸಿಗುತ್ತಿದೆ. ಎಲ್ ಜಿಯ ಈ ಸೀರಿಸ್ ನ ವಾಷಿಂಗ್ ಮೆಷಿನ್ ಬೆಲೆ ಜಾಸ್ತಿ ಇದ್ದು ಆದರೆ ಈ ಬಾರಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಕೇವಲ ₹35,788.00 ಕ್ಕೆ ಸಿಗುತ್ತಿದೆ. ಈ ಅಡ್ವಾನ್ಸ್ ಡ್ ವಾಷಿಂಗ್ ಮಷಿನ್ ಜೊತೆಗೆ ನಿಮಗೆ ಚಕ್ರವಿರುವ ಮೆಟಲ್ ವೀಲಿಂಗ್ ಸ್ಟ್ಯಾಂಡ್ ಕೂಡ ಸಿಗುತ್ತದೆ. ಅಲ್ಲದೇ ಎಲ್ ಜಿ 7 ಕೆಜಿ ವಾಷಿಂಗ್ ಮೆಷಿನ್ ಗೆ ಸರಿ ಹೊಂದುವ ಕವರ್ ಕೂಡ ಸಿಗುತ್ತಿದೆ. ಇವೆಲ್ಲವೂ ಕೇವಲ₹35,788.00 ರೂ. ಈ ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವ, ಡ್ರೈ ಮಾಡುವ ವ್ಯವಸ್ಥೆ ಇದೆ. ಇನ್ನು ಈ ವಾಷಿಂಗ್ ಮಷಿನ್ ನಲ್ಲಿ 6 ಮೋಷನ್ ಡಿಡಿ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು, ಪ್ರತಿ ಬಟ್ಟೆಯ ಪ್ರಕಾರಕ್ಕೆ ಹೊಂದುವಂತೆ ಚಲನೆಯ ಸಂಯೋಜನೆಗಳನ್ನು ಒದಗಿಸುತ್ತದೆ. ಆದ್ದರಿಂದ ಇದು ಕಡಿಮೆ ಹಾನಿಯೊಂದಿಗೆ ಶಕ್ತಿಯುತವಾದ ತೊಳೆಯುವ ಕಾರ್ಯಕ್ಷಮತೆಯನ್ನು ನೀಡುತ್ತದೆ
ಪ್ರಾಡಕ್ಟ್ ಹೆಸರು : ಎಲ್ ಜಿ 7 ಕೆಜಿ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್
ಮಾಡೆಲ್ ನಂಬರ್ : FHM1207SDL
ಬಣ್ಣ : ಸಿಲ್ವರ್
ಡೈಮೆನ್ಷನ್: 600W x450D x 850H mm
ಪರ್ಫಾಮೆನ್ಸ್ : ಇಂಟೆನ್ಸಿವ್ ವಾಶ್
ಟೆಕ್ನಾಲಜಿ : ಇನ್ವಾರ್ಟರ್ ಡಿಡಿ
ಕ್ಯಾಪಸಿಟಿ : 7 ಕೆ.ಜಿ
ಸ್ಮಾರ್ಟ್ ಡಯಾಗ್ನಸಿಸ್
ಫುಲ್ ಟಚ್ ಕಂಟ್ರೋಲ್
2. ಹಿಸೆನ್ಸ್ ಸೈಡ್-ಬೈ-ಸೈಡ್ ಡೋರ್ ರೆಫ್ರಿಜರೇಟರ್!
₹74,990.00 ಬೆಲೆಯ ಫ್ರಿಡ್ಜ್ ₹55,990.00ಗೆ ದೊರೆಯಲಿದೆ. ₹19,000.00 ಲಾಭವಾಗಲಿದೆ.
ಹಿಸೆನ್ಸ್ 564 L ಇನ್ವರ್ಟರ್ ಫ್ರಾಸ್ಟ್-ಫ್ರೀ ಸೈಡ್-ಬೈ-ಸೈಡ್ ಡೋರ್ ರೆಫ್ರಿಜರೇಟರ್ ಜೊತೆಗೆ ವಾಟರ್ ಡಿಸ್ಪೆನ್ಸರ್ ಸದ್ಯ ಮಾರುಕಟ್ಟೆಯಲ್ಲಿರುವ ಟ್ರೆಂಡಿಂಗ್ ರೆಫಿಜರೇಟರ್ ಆಗಿದೆ. ಕಾಣಲು ಕಪಾಟಿನಂತೆ ಆಕರ್ಷಿತವಾಗಿರುವ ಈ ರೆಫ್ರಿಜರೇಟರ್ ತಂಪಾದ ನೀರು ಕೂಡ ರೆಫ್ರಿಜರೇಟರ್ ಮುಂಭಾಗ ಇರುವ ನಳ್ಳಿಯಿಂದ ಪಡೆಯಬಹುದು. ಸೈಡ್-ಬೈ-ಸೈಡ್ ಡೋರ್ ಗಳನ್ನು ಇದು ಹೊಂದಿದ್ದು, ಫ್ರಾಸ್ಟ್-ಫ್ರೀಯಾಗಿದೆ. ಸದ್ಯದ ಬೆಲೆ ₹55,990.00 ರೂ ಆಗಿದೆ. ಕಪ್ಪು ಬಣ್ಣದ ಈ ರೆಫ್ರಿಜರೇಟರ್ ಸ್ಟೈನ್ ಲೆಸ್ ಸ್ಟೀಲ್ ನಿಂದ ಮಾಡಲ್ಪಟ್ಟಿದೆ. ಇನ್ನು ಈ ಪ್ರಾಡಕ್ಟ್ ಮೇಲೆ ಮ್ಯಾನ್ಯುಫ್ಯಾಕ್ಚರ್ ವ್ಯಾರಂಟಿ 1 ವರ್ಷ, ಇನ್ನು ಕಂಪ್ರೇಸರ್ ವ್ಯಾರಂಟಿ 10 ವರ್ಷ. ಇನ್ನು ಡಿಜಿಟಲ್ ಕಂಪ್ರೇಸರ್ ನ್ನು ಇದು ಹೊಂದಿದೆ. ಅಲ್ಲದೇ ಮೆನೆಗೆ ತಲುಪಿದ 24 ರಿಂದ 36 ಗಂಟೆಯೊಳಗೆ ಮನೆಯಲ್ಲಿ ಇನ್ಸ್ಟಾಲ್ ಮಾಡಿ ಕೊಡುತ್ತಾರೆ.
ಬ್ರ್ಯಾಂಡ್ : ಹಿಸೆನ್ಸ್
ಕ್ಯಾಪಸಿಟಿ : 564 ಲೀಟರ್ಸ್
ಕಾನ್ಫಿಗರೇಶನ್ : ಸೈಡ್ ಬೈ ಸೈಡ್
ಬಣ್ಣ : ಕಪ್ಪು
ಫೀಚರ್ : ವಾಟರ್ ಡಿಸ್ಪೆನ್ಸರ್
ಡೀಫ್ರಾಸ್ಟ್ ಸಿಸ್ಟಮ್ : ಆಟೋಮ್ಯಾಟಿಕ್
ವೋಲ್ಟೇಜ್ : 230 ವೋಲ್ಟ್ಸ್
ಮೆಟಿರಿಯಲ್ : ಸ್ಟೈನ್ ಲೆಸ್ ಸ್ಟೀಲ್
3. ಎಲ್ ಜಿ ಮೈಕ್ರೋವೇವ್ ಓವನ್!
₹23,500.00 ಬೆಲೆಯ ಮೈಕ್ರೋವೇವ್ ಶೇ. 18ರಷ್ಟು ರಿಯಾಯಿತಿಯಲ್ಲಿ ₹19,305.00 ಬೆಲೆಗೆ ದೊರೆಯಲಿದೆ.
ಎಲ್ ಜಿ 28 ಎಲ್ ಚಾರ್ಕೋಲ್ ಕನ್ವೆಕ್ಷನ್ ಮೈಕ್ರೋವೇವ್ ಓವನ್ ಸದ್ಯ ಮಾರುಕಟ್ಟೆಯಲ್ಲಿರುವ ಒವೆನ್ ಗಳ ಪೈಕಿ ಅತ್ಯುತ್ತಮ ಪ್ರಾಡಕ್ಟ್. ಈ ಮೈಕ್ರೋವೇವ್ 28 ಲೀಟರ್ ಸಾಮರ್ಥ್ಯ ಹೊಂದಿದ್ದು, ದೊಡ್ಡ ಕುಟುಂಬಕ್ಕೆ ಸೂಕ್ತವಾಗಿದೆ. ಈ ಮೈಕ್ರೋವೇವ್ ನ್ನು ಅಡುಗೆ ಜೊತೆಗೆ ಬೇಕಿಂಗ್‌ಗೆ ಬಳಸಬಹುದು ಗ್ರಿಲ್ಲಿಂಗ್, ರೀ ಹೀಟಿಂಗ್, ಡಿಫ್ರಾಸ್ಟಿಂಗ್ ಗೂ ಉಪಯೋಗಿಸಬಹುದು. ಇನ್ನು ಉತ್ಪನ್ನಕ್ಕೆ 1 ವರ್ಷ ಮತ್ತು ಮ್ಯಾಗ್ನೆಟ್ರಾನ್‌ನಲ್ಲಿ 4 ವರ್ಷಗಳ ವ್ಯಾರಂಟಿಯನ್ನು ಕಂಪನಿ ಈ ಪ್ರಾಡಕ್ಟ್ ಮೇಲೆ ನೀಡಿದೆ. ಇವುಗಳಲ್ಲಿ ಟ್ಯಾಕ್ಟೈಲ್ ಬಟನ್ ಮೂಲಕ ತಾಪಮಾನ/ಟೈಮರ್ ಅನ್ನು ಸೆಟ್ ಮಾಡಬಹುದಾಗಿದೆ.ಇನ್ನು ಈ ಬಾಕ್ಸ್ ನಲ್ಲಿ 1 ಮೈಕ್ರೋವೇವ್ ಓವನ್, 1 ಗ್ಲಾಸ್ ಟ್ರೇ, 1 ರೋಟೇಟಿಂಗ್ ರಿಂಗ್, 1 ಮಲ್ಟಿ ಕುಕ್ ತವಾ, 1 ರೊಟಿಸ್ಸೆರಿ ಬಾರ್, 1 ರೊಟಿಸ್ಸೆರಿ ಹ್ಯಾಂಡಲ್, 1 ಶೆಲ್ಫ್, 1 ಹಾಲು ಪಾಶ್ಚರೀಕರಣ ಕಿಟ್, 1 ಓನರ್ ಮ್ಯಾನುವಲ್, 1 ಪಾಕವಿಧಾನ ಕೈಪಿಡಿ, 1 ಅಡುಗೆ ಪುಸ್ತಕ
ಬ್ರ್ಯಾಂಡ್ : ಎಲ್ ಜಿ
ಸಾಮರ್ಥ್ಯ: 28 ಲೀಟರ್
ವೈಶಿಷ್ಟ್ಯತೆಗಳು : ಪ್ರೋಗ್ರಾಮೆಬಲ್, ಆಟೋಕುಕ್, ಕಂಟ್ರೋಲ್ಪ್ಯಾನಲ್ಲಾಕ್, ಡಿಫ್ರಾಸ್ಟ್, ಇಂಟೀರಿಯರ್ಲೈಟ್, ಸೆಲ್ಫ್ ಕ್ಲೀನಿಂಗ್, ಟೈಮರ್, ಟರ್ನ್ಟೇಬಲ್
ಬಣ್ಣ : ಕಪ್ಪು
ವೋಲ್ಟೇಜ್ : 230 ವೋಲ್ಟ್ಸ್
4. ಫೇಬರ್ ಹೀಟ್ ಆಟೋ ಕ್ಲೀನ್ ಚಿಮಣಿ
₹31,990.00 ಬೆಲೆಯ ಗ್ಯಾಸ್ ಚಿಮಣಿ ಶೇ. 47ರಷ್ಟು ರಿಯಾಯಿತಿಯಲ್ಲಿ ₹16,990.00ಗೆ ದೊರೆಯಲಿದೆ.
ಫೇಬರ್ 90 cm 1200 m3/hr ಹೀಟ್ ಆಟೋ ಕ್ಲೀನ್ ಚಿಮಣಿ ಅತ್ಯುತ್ತಮ ಗೃಹಪಯೋಗಿ ಉತ್ಪನ್ನವಾಗಿದೆ. ಇನ್ನು 90 ಸೆಂಟಿಮೀಟರ್ ಗಾತ್ರದ ಗೋಡೆಯ ಚಿಮಣಿಗಳಿಗೆ 3-5 ಬರ್ನರ್ ಸ್ಟೌವ್ ಗಳಿರಲಿವೆ. ಜೊತೆಗೆ LED 2 x 1.5W ಇರುತ್ತವೆ. 1200 m3/hr ಸಕ್ಷನ್ ಸಾಮರ್ಥ್ಯವನ್ನು ಹೊಂದಿದೆ. ಅಡುಗೆಯ ಗಾತ್ರ - 200 ಚದರ ಅಡಿ ಹೊಂದಿದೆ. ಉತ್ಪನ್ನ ಡೆಲಿವರಿ ಆದ 36 ಗಂಟೆಯಲ್ಲಿ ಕಂಪನಿಯವರು ಇನ್ ಸ್ಟಾಲ್ ಮಾಡಿ ಕೊಡುತ್ತಾರೆ. ಮೋಟಾರ್ ಮತ್ತು ರೋಟರ್ ಮೇಲೆ 5 ವರ್ಷ, ಉತ್ಪನ್ನದ ಮೇಲೆ 1 ವರ್ಷ ವ್ಯಾರಂಟಿ ಇರಲಿದೆ. ಎಲೆಕ್ಟ್ರಾನಿಕ್ ಟಚ್ ಕಂಟ್ರೋಲ್ ಹೊಂದಿದೆ.
ಬ್ರ್ಯಾಂಡ್ : ಫೇಬರ್
ವಾರ್ಷಿಕ ಶಕ್ತಿಯ ಬಳಕೆ : 180 ಕಿಲೋವ್ಯಾಟ್ ಗಂಟೆಗಳು
ವೈಶಿಷ್ಟ್ಯತೆಗಳು : ಲೈಟ್, ಆಟೋ ಕ್ಲೀನ್, ಟಚ್ ಕಂಟ್ರೋಲ್
ಬಣ್ಣ : ಕಪ್ಪು
5. ಐರೋಬೋಟ್ ರೂಂಬಾ
₹1,01,900.00 ಮೌಲ್ಯದ ಸರ್‌ಫೇಸ್ ರಬ್ಬರ್ ಬ್ರೆಷ್ ಶೇ. 41ರಷ್ಟು ರಿಯಾಯಿತಿಯಲ್ಲಿ ₹59,900.00 ಬೆಲೆಗೆ ದೊರೆಯಲಿದೆ.
ಐರೋಬೋಟ್ ರೂಂಬಾ i7+ (i755020) ವೈಫೈ ಸಂಪರ್ಕಿತ ರೊಬೊಟಿಕ್ ವ್ಯಾಕ್ಯೂಮ್ ಡ್ಯುಯಲ್ ಮಲ್ಟಿ-ಸರ್ಫೇಸ್ ರಬ್ಬರ್ ಬ್ರಷ್‌ಗಳು ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯಂತ ಬೇಡಿಕೆಯ ವ್ಯಾಕ್ಯೂಮ್ ಕ್ಲೀನರ್. ಹಲವು ವಿಶೇಷತೆಗಳನ್ನು ಈ ವ್ಯಾಕ್ಯೂಮ್ ಕ್ಲೀನರ್ ಹೊಂದಿದೆ. iRobot 30 ವರ್ಷಗಳ ರೋಬೋಟಿಕ್ಸ್ ಪರಿಣತಿಯನ್ನು ಹೊಂದಿದೆ ಮತ್ತು 30 ಮಿಲಿಯನ್ ಹೋಮ್ ರೋಬೋಟ್‌ಗಳನ್ನು ವಿಶ್ವಾದ್ಯಂತ ಮಾರಾಟ ಮಾಡುತ್ತಿದೆ. ನೀವು ರೂಂಬಾ, ಬ್ರಾವಾ ಅಥವಾ ಎರಡನ್ನೂ ಆಯ್ಕೆ ಮಾಡಿಕೊಂಡರೆ ನಿಮ್ಮ ಮನೆಗಳ ಸ್ವಚ್ಛತೆಗೆ ಅವುಗಳು ಅಗತ್ಯವಿರುವ ವಿಶೇಷ ಕಾಳಜಿಯನ್ನು ನೀಡುತ್ತದೆ. ಐರೋಬೋಟ್ ರೂಂಬಾ ನಿಮ್ಮ ಮನೆಯಲ್ಲಿರುವ ಕಸ ಕಡ್ಡಿ, ಕೊಳಕನ್ನು ತಕ್ಷಣದಲ್ಲೇ ಸ್ವಚ್ಛ ಮಾಡುತ್ತದೆ. 7+ ನಿಮಗೆ ಬೇಕಾದಾಗ ಅವ್ಯವಸ್ಥೆಗಳನ್ನು ಸ್ವಚ್ಛಗೊಳಿಸುತ್ತದೆ. ಎಲ್ಲ ಕಡೆಗೂ ಸುಲಭವಾಗಿ ಇದು ಸಂಚರಿಸುತ್ತದೆ. ಸಣ್ಣ ಧೂಳು? ದೊಡ್ಡ ಕಸಗಳು? ಯಾವುದು ಇದ್ದರೂ- ಡ್ಯುಯಲ್ ಮಲ್ಟಿ-ಸರ್ಫೇಸ್ ರಬ್ಬರ್ ಬ್ರಷ್‌ಗಳು ಮತ್ತು 10X ಪವರ್-ಲಿಫ್ಟಿಂಗ್ ಸಕ್ಷನ್ 3-ಹಂತದ ಕ್ಲೀನಿಂಗ್ ಸಿಸ್ಟಮ್‌ನೊಂದಿಗೆ ಎಲ್ಲವನ್ನು ಸ್ವಚ್ಚಮಾಡುತ್ತದೆ. ಇನ್ನು ಈ ಉತ್ಪನ್ನ ಮೂಲಕ ನಿಮ್ಮ ನೆಲವನ್ನು ಸ್ವಚ್ಚಗೊಳಿಸಲು ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾವನ್ನು ಬಳ್ಸಿಕೊಂಡು ಕಮಾಂಡ್ ಮಾಡಿಕೊಳ್ಳಭುದು.
ಬ್ರ್ಯಾಂಡ್ : ಐರೋಬೋಟ್
ಬಣ್ಣ : ಲೈಟ್ ಸಿಲ್ವರ
ಸರ್ಫೇಸ್ ರೆಕಮಂಡೇಶನ್ : ಗಟ್ಟಿ ನೆಲ
ಕಂಟ್ರೋಲ್ ಟೈಪ್ : ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ
ಕ್ಲೀನಿಂಗ್ ಪಾತ್ ವಿಡ್ಥ್: 34 ಸೆಂಟಿಮೀಟರ್
6. ಪ್ಯಾನಾಸೋನಿಕ್ ಟ್ವಿನ್-ಕೂಲ್ ಇನ್ವರ್ಟರ್ ಸ್ಪ್ಲಿಟ್ ಏರ್ ಕಂಡೀಷನರ್
₹37,490.00 ಬೆಲೆಯ ಈ ಏರ್ ಕಂಡೀಷನರ್ ₹35,990.00 ಬೆಲೆಗೆ ದೊರೆಯಲಿದೆ.
ಪ್ಯಾನಾಸೋನಿಕ್ 1.5 ಟನ್ 3 ಸ್ಟಾರ್ ಟ್ವಿನ್-ಕೂಲ್ ಇನ್ವರ್ಟರ್ ಸ್ಪ್ಲಿಟ್ ಏರ್ ಕಂಡೀಷನರ್ ಸದ್ಯ ಇರುವ ಅತ್ಯುತ್ತಮ ಪ್ರಾಡಕ್ಟ್. ಭಾರೀ ರೀಯತಿ ಕೂಡ ನೀಡಲಾಗಿದೆ. ಇದರ ವಿಶೇಷತೆಗಳನ್ನು ಗಮನಿಸುವುದಾದರೆ, ಇದು ಟ್ವಿನ್ ಕೂಲ್ ಇನ್ವರ್ಟರ್ ಕಂಪ್ರೇಸರ್ ನ ಸ್ಪ್ಲಿಟ್ ಎಸಿಯಾಗಿರುವ ಕಾರಣ, ವೇರಿಯಬಲ್ ಸ್ಪೀಡ್ ಇನ್ವರ್ಟರ್ ಕಂಪ್ರೆಸರ್ ಇದು ಶಾಖದ ಹೊರೆಗೆ ಅನುಗುಣವಾಗಿ ಶಕ್ತಿಯನ್ನು ಸರಿಹೊಂದಿಸುತ್ತದೆ. ಇದು ಅತ್ಯಂತ ಶಕ್ತಿಯ ದಕ್ಷತೆ ಮತ್ತು ಕಡಿಮೆ-ಶಬ್ದ ಕಾರ್ಯಾಚರಣೆಯನ್ನು ಹೊಂದಿದೆ. 1.5 ಟನ್ - ಮಧ್ಯಮ ಗಾತ್ರದ ಕೊಠಡಿಗಳಿಗೆ ಸೂಕ್ತವಾಗಿದೆ. ಅಲ್ಲದೇ ಅಗತ್ಯಕ್ಕೆ ತಕ್ಕಂತೆ ರೂಂನ್ನು ಕೂಲ್ ಆಗಿ ಇಡುತ್ತದೆ. 1 ವರ್ಷ ಕಾಂಪ್ರಹೆನ್ಸಿವ್ , ಪಿಸಿಬಿಗೆ 5 ವರ್ಷ, ಕಂಪ್ರೆಸರ್ ಗೆ 10 ವರ್ಷಗಳು ವ್ಯಾಲಿಡಿಟಿ ಇದೆ.
ಬ್ರಾಂಡ್ : ಪ್ಯಾನಾಸೋನಿಕ್
ಸಾಮರ್ಥ್ಯ : 1.5 ಟನ್
ವಾರ್ಷಿಕ ಎನರ್ಜಿ ಬಳಕೆ : 1002.72 ಕಿಲೋವ್ಯಾಟ್ ಗಂಟೆಗಳು
ವೈಶಿಷ್ಟ್ಯಗಳು : ಶೀಲ್ಡ್ ಬ್ಲೂ ವಿರೋಧಿ ತುಕ್ಕು ತಂತ್ರಜ್ಞಾನ | PM 2.5 ಫಿಲ್ಟರ್ | ಸ್ಟೆಬಿಲೈಸರ್ ಮುಕ್ತ ಕಾರ್ಯಾಚರಣೆ | ಪವರ್ ಫುಲ್ ಮೋಡ್ | ಡ್ರೈ ಮೋಡ್ | ಹಿಡನ್ ಡಿಸ್ಪ್ಲೇ
7. ಬಾಷ್ ಡಿಶ್ ವಾಷರ್
₹47,990.00 ಬೆಲೆಯ ಈ ಡಿಶ್ ವಾಷರ್ ₹36,990.00 ಬೆಲೆಗೆ ಲಭ್ಯವಾಗಲಿದ್ದು ₹11,000.00 ಉಳಿತಾಯವಾಗಲಿದೆ.
ಬಾಷ್ 13 ಪ್ಲೇಸ್ ಸೆಟ್ಟಿಂಗ್ಸ್ ಡಿಶ್ ವಾಷರ್ ಗೆ ಅಮೆಜಾನ್ ಈ ಬಾರಿ ಭರ್ಜರಿ ರಿಯಾಯಿತಿ ನೀಡಿದೆ. ಗ್ರಾಹಕರು ಆಕರ್ಷಕ ಮೊತ್ತಕ್ಕೆ ಡಿಶ್ ವಾಷರ್ ಖರೀದಿಸಬಹುದು. ಇದರ ವಿಶೇಷತೆಯನ್ನು ಗಮನಿಸುವುದಾದರೆ, 4 - 5 ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ಈ ಉತ್ಪನ್ನ ಸೂಕ್ತವಾಗಿದೆ. 13 ಸ್ಥಳಗಳನ್ನು ಇದರೊಳಗೆ ಸೆಟ್ಟಿಂಗ್ ಮಾಡಲಾಗಿದೆ. ಬಾಷ್ ಡಿಶ್‌ವಾಶರ್‌ಗಳನ್ನು ಭಾರತೀಯ ಕಿಚನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಭಾರತೀಯ ಪಾತ್ರೆಗಳ ಎಲ್ಲಾ ಟೈಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದು ಜಿಡ್ಡಿನ ಮತ್ತು ಎಣ್ಣೆಯುಕ್ತ ಮಸಾಲಾ ಕಲೆಗಳನ್ನು ಸ್ವಚ್ಛಗೊಳಿಸಲು ಪರಿಪೂರ್ಣವಾಗಿದೆ. ಈ ಡಿಶ್ ವಾಷರ್ 6 ತೊಳೆಯುವ ಪ್ರೋಗ್ರಾಂಗಳನ್ನು ಹೊಂದಿದ್ದು, 3ನ್ನು ಆಯ್ಕೆ ಮಾಡಬಹುದಾಗಿದೆ. ಹಾಫ್ ಲೋಡ್ ಆಯ್ಕೆ ಸೇರಿದಂತೆ- ಕಡಿಮೆ ಪಾತ್ರೆಗಳಿಗೆ, ಹೆಚ್ಚುವರಿ ಒಣ ಆಯ್ಕೆ - ಉತ್ತಮ ಒಣಗಿಸುವ ವ್ಯವಸ್ಥೆಗಳು ಇದರಲ್ಲಿದೆ.
ಬ್ರಾಂಡ್ : ಬಾಷ್
ಸಾಮರ್ಥ್ಯ : 13 ಸ್ಥಳದ ಸೆಟ್ಟಿಂಗ್‌ಗಳು
ವೈಶಿಷ್ಟ್ಯಗಳು ಇಕೋ ಸೈಲೆನ್ಸ್ ಡ್ರೈವ್, ಡೋಸೇಜ್ ಅಸಿಸ್ಟ್, ಹಾಫ್ ಲೋಡ್ ಆಯ್ಕೆ, ಹೆಚ್ಚುವರಿ ಶುಷ್ಕ ಮತ್ತು ಆರೋಗ್ಯಕರವಾಗಿ ತೊಳೆಯುವುದು, ಗಾಜಿನ ರಕ್ಷಣೆ
ಬಣ್ಣ : ಬಿಳಿ
ವೋಲ್ಟೇಜ್ : 220
ಏನೆಲ್ಲ ಇರುತ್ತೆ: 1 ಡಿಶ್ವಾಶರ್, 1 ಇನ್ಲೆಟ್ ಪೈಪ್, 1 ಔಟ್ಲೆಟ್ ಪೈಪ್, 1 ಪ್ಲಗ್ನೊಂದಿಗೆ ಎಲೆಕ್ಟ್ರಿಕಲ್ ವೈರ್, ಯೂಸರ್ ಮ್ಯಾನುವಲ್ ಮತ್ತು 1 ಡಿಟರ್ಜೆಂಟ್ ಸ್ಯಾಂಪಲ್
8. ಯುರೇಕಾ ಫೋರ್ಬ್ಸ್ ಅಕ್ವಾಸರ್
₹16,000.00 ಬೆಲೆಯ ಅಕ್ವಾಶ್ಯೂರ್ ₹8,499.00 ಬೆಲೆಗೆ ಲಭ್ಯವಾಗಲಿದ್ದು ₹7,501.00 ಸೇವ್ ಆಗಲಿದೆ.
ಯುರೇಕಾ ಫೋರ್ಬ್ಸ್ ಅಕ್ವಾಸರ್ ನ ಅಕ್ವಾಗಾರ್ಡ್ ಅಮೇಜ್ RO+UV+MTDS 7L ವಾಟರ್ ಪ್ಯೂರಿಫೈಯರ್ ಅತ್ಯಂತ ಉತ್ತಮ ಪ್ರಾಡಕ್ಟ್ ಆಗಿದೆ. ಇದರ UV-C ಶುದ್ಧೀಕರಣವು 20 ನಿಮಿಷಗಳ ಕಾಲ ಕುದಿಸಿದ ನೀರಿನಂತೆ ಪ್ರತಿ ಹನಿ ನೀರು ಆರೋಗ್ಯಕರ ಮತ್ತು ಸುರಕ್ಷಿತವಾಗಿದೆ ಎಂದು ಖಚಿತಪಡಿಸುತ್ತದೆ.ಅಲ್ಲದೇ ಇದರಲ್ಲಿ, ಟೇಸ್ಟ್ ಅಡ್ಜಸ್ಟರ್ (MTDS) ನಿಯಂತ್ರಕವು ನೀರಿನ ಮೂಲವನ್ನು ಅವಲಂಬಿಸಿ ರುಚಿಯ ಹೊಂದಾಣಿಕೆಯನ್ನು ಸಕ್ರಿಯಗೊಳಿಸುತ್ತದೆ. ಎಲ್ಲಿ ಬೇಕಾದರೂ ಇದನ್ನು ಇನ್ ಸ್ಟಾಲ್ ಮಾಡಬಹುದಾಗಿದೆ. ಹೆಚ್ಚಿನ ಶೇಖರಣಾ ಸಾಮರ್ಥ್ಯ ಹೊಂದಿದ್ದು, ಟ್ಯಾಂಕ್ ತುಂಬಿದಾಗ LED ನೀರು ತುಂಬಿದೆ ಎಂದು ಸೂಚನೆ ನೀಡುತ್ತದೆ.
ಬ್ರಾಂಡ್ : ಯುರೇಕಾ ಫೋರ್ಬ್ಸ್
ಬಣ್ಣ: ಬೂದು
ಸಾಮರ್ಥ್ಯ : 7 ಲೀಟರ್
ಏನೆಲ್ಲ ಸಿಗುತ್ತೆ:ವಾಟರ್ ಪ್ಯೂರಿಫೈಯರ್, ಯೂಸರ್ ಮ್ಯಾನುವಲ್
9. ಡೈಸನ್ V8 ಅಬ್ಸಲ್ಯೂಟ್ ಕಾರ್ಡ್-ಫ್ರೀ ವ್ಯಾಕ್ಯೂಮ್ ಕ್ಲೀನರ್!
₹43,900.00 ಬೆಲೆಯ ವ್ಯಾಕ್ಯೂಮ್ ಕ್ಲೀನರ್ ₹29,899.00 ಲಭ್ಯವಾಗಲಿದ್ದು ₹14,001.00 (32%) ಲಾಭವಾಗಲಿದೆ.
ನೀವು ಡೈಸನ್ V8 ಅಬ್ಸಲ್ಯೂಟ್ ಕಾರ್ಡ್-ಫ್ರೀ ವ್ಯಾಕ್ಯೂಮ್ ಕ್ಲೀನರ್ ಖರೀದಿಸಿದರೆ ಅದಕ್ಕೆ ಉಚಿತ ಕ್ಲೀನಿಂಗ್ ಕಿಟ್ ಪಡೆಯಬಹುದಾಗಿದೆ. ಇದಕ್ಕಾಗಿ ಖರೀದಿ ಹಾಗೂ ಉಚಿತವಾಗಿ ಪಡೆಯುವ ಎರಡು ವಸ್ತುಗಳನ್ನು ಕಾರ್ಟ್ ನಲ್ಲಿ ಸೇವ್ ಮಾಡಬೇಕಿದೆ. ಇನ್ನು ಈ ಡೈಸನ್ V8 ಅಬ್ಸಲ್ಯೂಟ್ ಕಾರ್ಡ್-ಫ್ರೀ ವ್ಯಾಕ್ಯೂಮ್ ಕ್ಲೀನರ್ ಎಲ್ಲಾ ಧೂಳು, ಕಸವನ್ನು ಹೀರುವ ಮೂಲಕ ನಿಮ್ಮ ಕೋಣೆ, ಮನೆಯನ್ನು ಸ್ವಚ್ಚವಾಗಿ ಇಡುತ್ತದೆ. ಕೋಣೆಯ ಎಲ್ಲಾ ಭಾಗದಲ್ಲಿ ಈ ವಾಕ್ಯೂಮ್ ಕ್ಲೀನರನ್ನು ಬಳಸಬಹುದಾಗಿದೆ. ಇದು 115 ಏರ್ ವ್ಯಾಟ್‌ಗಳವರೆಗೆ ಉತ್ಪಾದಿಸುತ್ತವ ಕಾರಣ ಸುಲಭವಾಗಿ ಹೀರಿಕೊಳ್ಳುತ್ತದೆ.
ತಯಾರಕರು : ಡೈಸನ್ ಟೆಕ್ನಾಲಜಿ
ವೈಶಿಷ್ಟ್ಯ: ಸುಲಭವಾಗಿ ಮನೆ ಕ್ಲೀನ್, ಎಲ್ಲ ಕಡೆಗಳಲ್ಲೂ ಬಳಕೆ, ಧೂಳು, ಕಸ ಹೀರುವ ಸಾಮರ್ಥ್ಯ
10. ವರ್ಲ್ಪೂಲ್ 240 L ಮಲ್ಟಿ-ಡೋರ್ ರೆಫ್ರಿಜರೇಟರ್!
₹30,500.00 ಬೆಲೆಯ ಫ್ರಿಡ್ಜ್ ₹26,700.00ಗೆ ಲಭ್ಯವಾಗಲಿದ್ದು ₹3,800.00 (12%) ಉಳಿತಾಯವಾಗಲಿದೆ.
240 ಲೀಟರ್ ಸಾಮರ್ಥ್ಯ ಹೊಂದಿರುವ ವರ್ಲ್ಪೂಲ್ 240 L ಮಲ್ಟಿ-ಡೋರ್ ರೆಫ್ರಿಜರೇಟರ್ ದೊಡ್ಡ ಕುಟುಂಬಕ್ಕೆ ಸೂಟ್ ಆಗಿರುವ ರೆಫ್ರಿಜರೇಟರ್ ಆಗಿದೆ. ಉತ್ಪನ್ನದ ಮೇಲೆ 1 ವರ್ಷ,ಕಂಪ್ರೆಸರ್ ಮೇಲೆ 10 ವರ್ಷಗಳ ವ್ಯಾಲಿಡಿಟಿ ಇದೆ. ರೆಫಿಜರೇಟರ್ ಬಾಡಿ ಗ್ಲಾಸ್ ರೀತಿಯಲ್ಲಿ ಇರಲಿದ್ದು ಆಕರ್ಷಕವಾಗಿದೆ. ಆಹಾರಗಳನ್ನು ಅತ್ಯಂತ ಆರೋಗ್ಯಕರವಾಗಿ ಕಾಪಾಡುತ್ತದೆ.
ಬ್ರಾಂಡ್ : ವರ್ಲ್ಪೂಲ್
ಸಾಮರ್ಥ್ಯ : 240 ಲೀಟರ್
ವೈಶಿಷ್ಟ್ಯಗಳು : ಮೋಯಿಶ್ಚರ್ ರಿಟೆನ್ಷ್ನ್ ಟೆಕ್ನಾಲಜಿ,. ಮೈಕ್ರೋಬ್ಲಾಕ್ ತಂತ್ರಜ್ಞಾನ
ಡಿಫ್ರಾಸ್ಟ್ ಸಿಸ್ಟಮ್ : ಸ್ವಯಂಚಾಲಿತ
ಕಪಾಟುಗಳ ಸಂಖ್ಯೆ : 3
ಬಣ್ಣ : ಆಲ್ಫಾ ಸ್ಟೀಲ್
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































