ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್ 2021:ಪುರುಷರ, ಮಹಿಳೆಯರ ಡ್ರೆಸ್‌, ಚಳಿಗಾಲದ ಜಾಕೆಟ್‌ ಮೇಲೆ ಭಾರೀ ರಿಯಾಯಿತಿ

By Boldsky Desk
ಅಮೆಜಾನ್‌

ದಸರಾ ಹಬ್ಬದ ಸಂಭ್ರಮ ಆರಂಭವಾಗಿದೆ ಇನ್ನೂ ಬಟ್ಟೆ ಖರೀದಿಸಿಲ್ಲವೇ ಚಿಂತೆ ಬೇಡ, ಅಮೆಜಾನ್‌ ನೀಡುತ್ತಿರುವ ಭಾರೀ ರಿಯಾಯಿತಿಯಲ್ಲಿ ನಿಮ್ಮ ಇಡೀ ಕುಟುಂಬಕ್ಕೆ ಅತಿ ಕಡಿಮೆ ಬಜೆಟ್‌ನಲ್ಲೇ ಬಟ್ಟೆ ಖರೀದಿಸಬಹುದು.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2021 ಈಗಾಗಲೇ ಶುರುವಾಗಿದೆ. ಈ ಆಫರ್‌ನಲ್ಲಿ ಗ್ರಾಹಕರಿಗೆ ಮಕ್ಕಳಿಗೆ, ಪುರುಷರಿಗೆ, ಮಕ್ಕಳಿಗೆ ಗ್ರಾಂಡ್‌ ಲುಕ್‌ ನೀಡುವ ಬಟ್ಟೆಗಳ ಮೇಲೆ 80 % ವರೆಗೆ ರಿಯಾಯಿತಿ ನೀಡುತ್ತಿದೆ. ಅಲ್ಲದೆ, HDFC ಡೆಬಿಟ್/ಕ್ರೆಡಿಟ್ ಕಾರ್ಡ್ ಮತ್ತು EMI ಮೇಲೆ ಹೆಚ್ಚುವರಿ 10 % ರಿಯಾಯಿತಿ ನೀಡುತ್ತದೆ. ತಮ್ಮ ಕಾರ್ಡ್‌ ಬಳಸಿ ರಿಯಾಯಿತಿ ಪಡೆಯಲು 8ನೇ ಅಕ್ಟೋಬರ್ ಕೊನೆಯ ದಿನ.

ಟಿ-ಶರ್ಟ್ಸ್‌, ಲೆಹೆಂಗಾ, ಗಾಗ್ರಾ, ಸೆಲ್ವಾರ್‌ ಸೆಟ್‌, ಕುರ್ತಾ ಸೆಟ್‌ಗಳು ಆಫರ್‌ನಲ್ಲಿ ನಿಮಗೆ ಸಿಗಲಿದೆ. ಅಲ್ಲದೇ ಚಳಿಗಾಲಕ್ಕೆ ಧರಿಸಬಹುದಾದ ಬ್ರಾಂಡೆಡ್‌ ಜಾಕೆಟ್‌ಗಳ ಮೇಲೂ ಉತ್ತಮ ರಿಯಾಯಿತಿ ಇದೆ. ಇನ್ನೇಕೆ ತಡ ಸ್ಟಾಕ್‌ ಮುಗಿಯುವ ಮುನ್ನ ಖರೀದಿಸಿ.
ಆಫರ್‌ನಲ್ಲಿರುವ ಆಯ್ದ ಕೆಲವು ಬಟ್ಟೆಗಳ ಪಟ್ಟಿ ನೋಡಿ:

1. ಬಿಬಾ ಗರ್ಲ್ಸ್‌ ಲೆಹೆಂಗಾ ಚೋಲಿ

ದಸರಾ ಹಬ್ಬ, ಮನೆಯಲ್ಲಿ ಶುಭ ಸಮಾರಂಭ ಯಾವುದೇ ಕಾರ್ಯಕ್ರಮಗಳಿಗೆ ಮಕ್ಕಳಿಗೆ ಗ್ರಾಂಡ್‌ ಲುಕ್‌ ನೀಡುತ್ತದೆ ಈ ಲೆಹೆಂಗಾ ಚೋಲಿ. ಪಿಂಕ್‌ ಹಾಗೂ ಹಳದಿ ಬಣ್ಣದ ಕಾಂಬಿನೇಷನ್‌ ಹಾಗೂ ಲೆಹೆಂಗಾದಲ್ಲಿ ಸಣ್ಣ ಸಣ್ಣ ಬುಟ್ಟ ಡಿಸೈನ್‌ ಹೆಚ್ಚು ರಿಚ್‌ ಆಗಿ ಕಾಣುವಂತೆ ಮಾಡುತ್ತದೆ. ಈ ಸಾಂಪ್ರದಾಯಿಕ ಉಡುಪು ಹತ್ತಿಯಿಂದ ತಯಾರಿಸಿದ್ದು, 3 ಪೀಸ್‌ ಇದೆ.

2. ಆನಿ ಡಿಸೈನರ್ ಮಹಿಳಾ ಕಾಟನ್ ಕುರ್ತಾ
ಹಬ್ಬಗಳಿಗೆ, ಸಣ್ಣಪುಟ್ಟ ಪಾರ್ಟಿ ಅಥವಾ ಕಚೇರಿಯಲ್ಲಿನ ಶುಭ ಸಂದರ್ಭಗಳಲ್ಲಿ ಧರಿಸಲು ಆನಿ ಡಿಸೈನರ್‌ನ ಈ ಕಾಟನ್‌ ಕುರ್ತಾ ಸೆಟ್‌ ಎಲ್ಲಾ ಕಾರ್ಯಕ್ರಮಗಳಿಗೂ ಸೂಕ್ತವಾಗಿದೆ. ಅತೀ ಕಡಿಮೆ ಬೆಲೆಯಲ್ಲಿ ಮತ್ತು ಹತ್ತಿಯಲ್ಲಿ ತಯಾರಿಸಲಾಗಿರುವ ಈ ಹೂವಿನ ಮುದ್ರಿತ ಕುರ್ತಾ ಸೆಟ್ ಮುಕ್ಕಾಲು ತೋಳಿನ ಕುರ್ತಾ, ಪಿಂಕ್-ಹ್ಯೂಡ್ ಪ್ಯಾಂಟ್ ಮತ್ತು ಗುಲಾಬಿ ಬಣ್ಣದ ದುಪಟ್ಟಾವನ್ನು ಒಳಗೊಂಡಿರುತ್ತದೆ. ನಿಮಗೆ ಲುಕ್‌ ಅಂದವಾಗಿಸಲು ಇಂದೇ ಈ ಕುರ್ತಾ ಸೆಟ್‌ ಖರೀದಿಸಿ.

3. ನೈಕ್ ಪುರುಷರ ಕ್ಯಾಶುಯಲ್
ಇನ್ನೇನು ಚಳಿಗಾಲ ಆರಂಭವಾಗಲಿದೆ, ನೀವು ಬೆಚ್ಚಗಿನ ಉಡುಗೆಯನ್ನು ಖರೀದಿಸಲು ಬಯಸಿದರೆ, ನಿಮಗೆ ಖಂಡಿತವಾಗಿಯೂ ಸೊಗಸಾದ ಮತ್ತು ಬೇಡಿಕೆಗೆ ಸರಿಹೊಂದುವ ಈ ಜಾಕೆಟ್‌ ಖರೀದಿಸಿ. ನೈಕ್‌ ಕಂಪನಿಯ ಈ ಕ್ಯಾಶುವಲ್ ಬ್ಲಾಕ್-ಹ್ಯೂಡ್ ಜಾಕೆಟ್ ನಿಮಗೆ ಹೆಚ್ಚು ಕಂಫರ್ಟ್‌ ಆಗಿರುತ್ತದೆ ಜತೆಗೆ ಬೆಚ್ಚಗಿರಿಸುತ್ತದೆ. ಮೇಲ್ಭಾಗವು ಕತ್ತು ಪೂರ್ಣ ಕವರ್‌ ಆಗಲಿದ್ದು, ಉದ್ದನೆಯ ತೋಳು ಮತ್ತು ಜಿಪ್ಪರ್‌ನೊಂದಿಗೆ ಬರುತ್ತದೆ.

4. ರೈಟ್ರಾಸ್ ಕಾಟನ್‌ ಅನಾರ್ಕಲಿ
ಹಬ್ಬದ ಸೀಸನ್‌ನಲ್ಲಿ ಖರೀಸಲು ಅತ್ಯುತ್ತಮವಾದ ಉಡುಗೆ ಇದು. ಈ ಹಬ್ಬವನ್ನು ಇನ್ನಷ್ಟು ಚೆಂದವಾಗಿಸಲು ಈ ಗ್ರಾಂಡ್‌ ಲುಕ್ ನೀಡುವ ರೈಟ್ರಾಸ್‌ ಕಂಪನಿಯ ಪ್ರಿಂಟೆಡ್‌ ಕಾಟನ್‌ ಅನಾರ್ಕಲಿ ನಿಮ್ಮದಾಗಿಸಿಕೊಳ್ಳಿ. ಈ ಕೆಂಪು ಮತ್ತು ಕಿತ್ತಳೆ ಹೂವಿನ ಕಸೂತಿ ಕುರ್ತಾ ನಿಮಗೆ ಸೂಕ್ತವಾಗಲಿದೆ. ಅನಾರ್ಕಲಿಯ ಮೆಲ್ಭಾಗದಲ್ಲಿ ಸಣ್ಣ ಸಣ್ಣ ವರ್ಕ್‌ ಮಾಡಲಾಗಿದ್ದು, ರೋಮಾಂಚಕ ಸ್ಪ್ಲಾಶ್‌ನೊಂದಿಗೆ ಈ ಅನಾರ್ಕಲಿ ನಿಮಗೆ ಉತ್ತಮ ಅಂದವನ್ನು ನೀಡುತ್ತದೆ.

5. ಜ್ಯೋಕು ಕುರ್ತಾ, ಪ್ಯಾಂಟ್‌ ಮತ್ತು ದುಪಟ್ಟ ಸೆಟ್
ಈ ಕುರ್ತಾ, ಪ್ಯಾಂಟ್ ಮತ್ತು ದುಪಟ್ಟಾ ಸೆಟ್ ಸಂಪೂರ್ಣವಾಗಿ ವಾರ್ಡ್ರೋಬ್‌ಗೆ ಯೋಗ್ಯವಾಗಿದೆ, ಏಕೆಂದರೆ ಇದನ್ನು ಹಬ್ಬದ ಸಂದರ್ಭದಲ್ಲಿ ಹಾಗೂ ಕಚೇರಿಗೆ ಧರಿಸಬಹುದು. ಗುಲಾಬಿ ಮತ್ತು ಬಿಳಿ ವರ್ಣಗಳಿಂದ ಎದ್ದು ಕಾಣುವ ಈ ಕಾಟನ್‌ ಸೆಟ್ ವಿಶೇಷವಾಗಿ ಕುರ್ತಾ ಮತ್ತು ದುಪಟ್ಟದ ರವಿಕೆ ಮೇಲೆ ಅದ್ಭುತವಾದ ಡಿಸೈನ್‌ ಇದೆ. ಈ ಕಾಂಬಿನೇಷನ್‌ ಸಹ ಹೆಚ್ಚು ಟ್ರೆಂಡಿ ಆಗಿದೆ ಅಲ್ಲದೇ ಈ ಕುರ್ತಾ ಸೆಟ್ ಭಾರೀ ರಿಯಾಯಿತಿಯೊಂದಿಗೆ ನಿಮಗೆ ಸಿಗುತ್ತಿದೆ.

6. ಅಮೆಜಾನ್ ಬ್ರಾಂಡ್ - ಪುರುಷರ ಸ್ಲಿಮ್ ಕ್ಯಾಶುಯಲ್ ಟ್ರೌಸರ್ಸ್
ಕಾಟನ್‌ ಬಟ್ಟೆಯ ಈ ಪ್ಯಾಂಟ್‌ ಕಚೇರಿ, ಹಬ್ಬ, ಯಾವುದೇ ಕಾರ್ಯಕ್ರಗಳಿಗೆ ಹಾಕಲು ಹೊಂದುತ್ತದೆ. ಈ ಬೂದು -ಬಣ್ಣದ ಪ್ಯಾಂಟ್ ಅನ್ನು ಯಾವುದೇ ಶೈಲಿಯ ಶರ್ಟ್‌ನೊಂದಿಗೆ ಸಹ ಧರಿಸಬಹುದು. ಇದು ನಿಮ್ಮ ವಾರ್ಡ್ರೋಬ್‌ನಲ್ಲಿ ಇಡಬಹುದಾದ ಕಲೆಕ್ಷನ್‌ ಆಗಿದೆ. ಫಿಟ್‌ ಆಗಿ ಕಾಣುವ ಇದು ನಿಮ್ಮ ಲುಕ್‌ಗೆ ಇನ್ನಷ್ಟು ಮೆರುಗು ನೀಡುತ್ತದೆ. ಈ ಪ್ಯಾಂಟ್ ಸೈಡ್ ಸ್ಕೂಪ್ ಮತ್ತು ಬ್ಯಾಕ್ ವೆಲ್ಟ್ ಪಾಕೆಟ್‌ಗಳೊಂದಿಗೆ ಬರುತ್ತದೆ. ಔಪಚಾರಿಕ ಈ ಪ್ಯಾಂಟ್‌ಗಳು ನಿಮ್ಮ ಬಜೆಟ್‌ನಲ್ಲಿ ಸುಲಭವಾಗಿ ಬರಬಹುದು.

7. ಅಲೆನ್ ಸೊಲ್ಲಿ ಮೆನಸ್‌ ರೆಗ್ಯುಲರ್ ಫಿಟ್ ಪೋಲೊ
ಅಲೆನ್ ಸೊಲ್ಲಿ ಕಂಪನಿಯ ಕಾಟನ್‌ನ ರೆಗ್ಯುಲರ್-ಫಿಟ್ ಪೋಲೊ ಟೀ ಶರ್ಟ್ ಕ್ಲಾಸಿ, ಸೆಮಿ ಫಾರ್ಮಲ್ ಉಡುಗೆಯಾಘು ಧರಿಸಬಹುದು. ಶುದ್ಧ ಕಾಟನ್‌ ಬಟ್ಟೆಯ ಈ ಟೀ ಶರ್ಟ್ ತಿಳಿ-ಹಸಿರು ಬಣ್ಣವನ್ನು ಹೊಂದಿದೆ. ಕಡಿಮೆಬೆಲೆ ಇರುವ ಈ ಟೀ ಶರ್ಟ್ ಅನ್ನು ನೀವು ಸಹ ಖರೀದಿಸಬಹುದು ಹಾಗೂ ಧರಿಸಿದಾಗ ಅತ್ಯುತ್ತಮ ಅನುಭವ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

8. ರೂಬಿ ಕಾಟನ್ ಕುರ್ತಾ ಸೆಟ್
ನೀವು ವಿಶಿಷ್ಟವಾಗಿ ಕಾಣಲು ಬಯಸಿದರೆ ಮತ್ತು ನೀವು ಕಪ್ಪು ಬಣ್ಣದ ಪ್ರಿಯರಾದರೆ ಖಂಡಿತವಾಗಿಯೂ ಇದು ನಿಮ್ಮ ಕಲೆಕ್ಷನ್‌ನಲ್ಲಿ ಇರಬೇಕಾದ ಡ್ರೆಸ್‌. ಈ ಕಪ್ಪು ಕುರ್ತಾ ಸೆಟ್ ಬಟ್ಟೆಯು ಹತ್ತಿಯ ಮಿಶ್ರಣವಾಗಿದ್ದು, ಪ್ಯಾಂಟ್‌ ಫಲಾಜೋ ವಿನ್ಯಾಸದಲ್ಲಿದೆ ಹಾಗೂ ಅದಕ್ಕೆ ಚಿನ್ನ ಬಣ್ಣದ ಡಿಸೈನ್‌ ಇದೆ. ಸಂಪೂರ್ಣ ಡ್ರೆಸ್‌ ಕಪ್ಪು ಹಾಗೂ ಚಿನ್ನದ ಬಣ್ಣದ ಕಾಂಬಿನೇಷನ್‌ ಆಗಿದೆ. ಕುರ್ತಾ, ಪಲಾಜೋ, ದುಪ್ಪಟ್ಟಾ 3ಪೀಸ್‌ ಇರುತ್ತದೆ. ನೀವು ಈ ಕುರ್ತಾ ಸೆಟ್ ಅನ್ನು ಚಿನ್ನ ಅಥವಾ ಆಕ್ಸಿಡೈಸ್ಡ್ ಬೆಳ್ಳಿ ಆಭರಣಗಳೊಂದಿಗೆ ಧರಿಸಿದರೆ ನಿಮ್ಮ ಲುಕ್‌ ಕ್ಲಾಸಿ ಆಗಿರುತ್ತದೆ. ಈ ಕುರ್ತಾ ಸೆಟ್ ಆಕರ್ಷಕ ರಿಯಾಯಿತಿಯೊಂದಿಗೆ ಬರುತ್ತದೆ, ಹಾಗಾಗಿ ಸ್ಟಾಕ್‌
ಮುಗಿಯುವ ಮುನ್ನ ಖರೀದಿಸಿ.

9. ಕೊಲಂಬಿಯಾ ಮೆನ್ಸ್ ಆಲ್ಫಾ ಟ್ರಯಲ್ ಡೌನ್ ಜಾಕೆಟ್ ಇನ್ಸುಲೇಟೆಡ್
ವಾಟರ್-ರೆಸಿಸ್ಟೆಂಟ್ ಇರುವ ಮತ್ತು ಸುಲಭವಾಗಿ ಮಡಿಸಲು ಆಗುವಂಥ ಕೊಲಂಬಿಯಾ ಮೆನ್ ಇನ್ಸುಲೇಟೆಡ್ ಜಾಕೆಟ್ ಟ್ರೆಂಡ್‌ ಫಾಲೋ ಮಾಡುವವರು ಹೊಂದಿರಬೇಕಾದ ಜಾಕೆಟ್‌. ಚಳುಗಾಲಕ್ಕೆ ಹೆಚ್ಚು ಆಪ್ತವಾದ ಈ ಜಾಕೆಟ್‌ ಇದು ಟ್ರೆಕ್ಕಿಂಗ್, ಕ್ಯಾಂಪಿಂಗ್ ಅಥವಾ ಸಾಮಾನ್ಯವಾಗಿ ಪ್ರಯಾಣಿಸಲು ಸೂಕ್ತವಾಗಿದೆ. ನಿಮ್ಮನ್ನು ಬೆಚ್ಚಗಿಡಲು ತುಂಬು ತೋಳಿನ ಈ ಜಾಕೆಟ್‌ ಉತ್ತಮ ಫಿಟ್ ಆಗಿದೆ, ಹೊಂದಾಣಿಕೆ ಮಾಡಬಹುದಾದ ಅವಕಾಶವನ್ನು ಸಹ ಹೊಂದಿದೆ. ಇದರ ಓಮ್ನಿ ಹೀಟ್ 3 ಡಿ ತಂತ್ರಜ್ಞಾನ ಚರ್ಮಕ್ಕೆ ಮೃದುವಾಗಿಸುತ್ತದೆ ಮತ್ತು ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಬೆಚ್ಚಗಿರಿಸುತ್ತದೆ.

10. ಫೋರ್ಟ್ ಕಾಲಿನ್ಸ್ ಮಹಿಳಾ ಜಾಕೆಟ್
ಈ ಕೆಂಪು ನೈಲಾನ್ ಜಾಕೆಟ್ ಚಳಿಗಾಲಕ್ಕೆ ಸೂಕ್ತವಾಗಿದೆ ಮತ್ತು ಇದನ್ನು ಪೈಜಾಮಾ ಮತ್ತು ಜೀನ್ಸ್ ಜೊತೆ ಸೇರಿಸಬಹುದು. ಹೆವಿ ಲುಕ್‌ ನೀಡುವ ಈ ಬಾಂಬರ್ ಜಾಕೆಟ್ ಜಿಪ್ಪರ್ ಅನ್ನು ಹೊಂದಿದೆ ಮತ್ತು ಯಾವುದೇ ಸಮಯದಲ್ಲಿ ನೀವು ಎದ್ದು ಕಾಣುವಂತೆ ಮಾಡುತ್ತದೆ. ಈ ಜಾಕೆಟ್ ಕೆಂಪು ಹಾಗೂ ಕಪ್ಪು ಎರಡು ಬಣ್ಣದಲ್ಲಿದೆ ಮತ್ತು ಇದು ಖಂಡಿತವಾಗಿಯೂ ದುಬಾರಿ ಇಲ್ಲ. ಆದ್ದರಿಂದ, ಚಳಿಗಾಲಕ್ಕೆ ನಿಮ್ಮ ಲುಕ್‌ ಹೆಚ್ಚಿಸಲು ವಾರ್ಡ್‌ರೋಬ್‌ನಲ್ಲಿ ಇರಬಹುದಾದ ಜಾಕೆಟ್‌ ಇದಾಗಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion