ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021: ಬೆಡ್, ದಿಂಬು, ಕರ್ಟನ್‌ಗಳು ರಿಯಾಯಿತಿಯಲ್ಲಿ

Get up to 10% Instant Discount on ICICI Bank, Kotak and Rupay Credit/Debit cards & EMI. Sale ending soon!
ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಅಕ್ಟೋಬರ್ 3ರಿಂದ ಪ್ರಾರಂಭವಾಗಿದ್ದು ಈ ಸೇಲ್ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ, ಅಷ್ಟರೊಳಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಗುಣಮಟ್ಟದ ವಸ್ತುಗಳನ್ನು ಶೇ. 50ಕ್ಕೂ ಅಧಿಕ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ.
ಅಮೆಜಾನ್ ದಿಂಬುಗಳು, ಮ್ಯಾಟ್ರಸ್, ಕರ್ಟನ್, ಬೆಡ್‌ಶೀಟ್‌ಗಳು ತುಂಬಾ ರಿಯಾಯಿತಿಯಲ್ಲಿ ದೊರೆಯಲಿದ್ದು ನಿಮ್ಮ ಬೆಡ್ ರೂಂಗೆ ಹೊಸ ಲುಕ್ ನೀಡಬಯಸುವುದಾದರೆ ಅಮೆಜಾನ್‌ನಲ್ಲಿ ಬಾರೀ ಡಿಸ್ಕೌಂಟ್‌ನಲ್ಲಿ ಖರೀದಿಸಿ ಮನೆಯ ಅಂದ ಹೆಚ್ಚಿಸಬಹುದು, ಬನ್ನಿ ಯಾವ-ಯಾವ ವಸ್ತುಗಳಿಗೆ ಎಷ್ಟಿ ರಿಯಾಯಿತಿ ನೀಡಲಾಗಿದೆ ಎಂದು ನೋಡೋಣ:
1. ವೇಕ್‌ಫಿಟ್ ಆರ್ಥೋಪೀಡಿಕ್ ಮೆಮೋರಿ ಫಾಮ್ ಸಿಂಗಲ್ ಸೈಜ್ ಮ್ಯಾಟ್ರಸ್
ಬೆನ್ನು ನೋವು, ಭುಜ ನೋವು ಇವೆಲ್ಲಾ ಸಮಸ್ಯೆಯಿದ್ದವರು ಈ ಬೆಡ್‌ನಲ್ಲಿ ಮಲಗಿದರೆ ಒಳ್ಳೆಯ ರಿಲೀಫ್ ಸಿಗುವುದು. ಇಂಚಿನ ಸಿಂಗಲ್ ಸೈಜ್ ಮ್ಯಾಟ್ರಸ್ ಇದಾಗಿದ್ದು ನಿಮ್ಮ ಬೆನ್ನಿಗೆ ಒಳ್ಳೆಯ ಸಪೋರ್ಟ್ ನೀಡುತ್ತದೆ. ಅಲ್ಲದೆ ದೂಳು, ತಿಗಣೆ ಇವೆಲ್ಲಾ ಈ ಬೆಡ್ ಮೇಲೆ ಇರಲ್ಲ. ಆದ್ದರಿಂದ ತುಂಬಾ ಸೆನ್ಸಿಟಿವ್ ತ್ವಚೆ ಇರುವವರಿಗೆ ಈ ಬೆಡ್ ಉತ್ತಮವಾದ ಆಯ್ಕೆ ಆಗಿದೆ. ಇದರ ಮೇಲೆ ಮಲಗಿದರೆ ಯಾವುದೇ ಭಂಗವಿಲ್ಲದೆ ಸುಖ ನಿದ್ದೆಗೆ ಜಾರಬಹುದು.
2. ಡ್ಯೂರೋಫ್ಲೆಕ್ಸ್ ಬ್ಯಾಕ್ ಮ್ಯಾಜಿಕ್ ಮ್ಯಾಟ್ರಸ್: ಬೆನ್ನಿಗೆ ಒಳ್ಳೆಯ ಸಪೋರ್ಟ್
ಹೆಸರೇ ಈ ಡ್ಯೂರೋಪ್ಲೆಕ್ಸ್‌ನ ಗುಣವನ್ನು ಹೇಳುತ್ತದೆ. ಬ್ಯಾಕ್ ಮ್ಯಾಜಿಕ್ ಮ್ಯಾಟ್ರಸ್ ಬೆನ್ನಿಗೆ ಒಳ್ಳೆಯ ಸಪೋರ್ಟ್ ನೀಡುವುದರಿಂದ ಇದರಲ್ಲಿ ಮಲಗಿ ಎದ್ದರೆ ಬೆನ್ನಿಗೆ ತುಂಬಾ ಆರಾಮ ಅನಿಸುವುದು. ಇದರಲ್ಲಿ ಮಲಗಿದರೆ ನಿಮ್ಮ ದೇಹದ ಭಂಗಿಯನ್ನು ಸರಿಯಾಗಿಡುವುದು. ಬ್ಲೂ-ಗ್ರೇ ಕಲರ್‌ನ ಮ್ಯಾಟ್ರಸ್ ನಿಮ್ಮ ಬೆಡ್‌ರೂಂನ ಅಂದವನ್ನು ಹೆಚ್ಚಿಸುವಂತೆಯೂ ಇದೆ.
3. ಮಾಮ್ಸ್ ಮೂನ್‌ನ ಅಲ್ಟ್ರಾ ಸಾಫ್ಟ್ U ಶೇಪ್‌ನ ಪಿಲ್ಲೋ
ಪ್ರೆಗ್ನೆನ್ಸಿ ಸಮಯದಲ್ಲಿ ಮಲಗಲು ಅನುಕೂಲವಾಗುವಂತೆ ಈ ದಿಂಬನ್ನು ಸಿದ್ಧಪಡಿಸಲಾಗಿದೆ, ಇದು ನಿಮ್ಮ ದೇಹದ ಆಕಾರಕ್ಕೆ ಹೊಂದುವಂತೆ ಇದ್ದುಇದನ್ನು ಬಳಸಿ ಮಲಗುವುದರಿಂದ ತುಂಬಾನೇ ಕಂಫರ್ಟ್ ಅನಿಸುವುದು. ಗರ್ಭಿಣಿಯರಿಗೆ ಈ ದಿಂಬು ತುಂಬಾನೇ ಅನುಕೂಲಕರವಾಗಿದೆ.
4. ಬೋನ್ನೆಲ್ ಸ್ಪ್ರಿಂಗ್ ಮತ್ತು HR ಫೋಮ್ ಕಿಂಗ್ ಸೈಜ್ ಮ್ಯಾಟ್ರಸ್
ಕಿಂಗ್ ಸೈಜ್ ಬೆಡ್‌ಗೆ ತುಂಬಾನೇ ಕಂಫರ್ಟ್ ನೀಡುವ ಬೆಡ್ ಇದಾಗಿದೆ. ಇದರಲ್ಲಿ HR ಫೋಮ್ ಇರುವುದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಸುಖ ನಿದ್ದೆ ಕೊಡುತ್ತದೆ. ಇದರಲ್ಲಿ ಹತ್ತಿಯನ್ನು ತುಂಬಾನೇ ಬಳಸಿರುವುದರಿಂದ ಮಲಗಲು ಮೃದುವಾಗಿದೆ. ಜೊತೆಗೆ ಒಳ್ಳೆಯ ಗುಣಮಟ್ಟದ ಮ್ಯಾಟ್ರಸ್ ಇದಾಗಿದ್ದು ತುಂಬಾ ಸಮಯ ಬಾಳಿಕೆ ಕೂಡ ಬರುತ್ತದೆ.
5. ವೇಕ್‌ಫಿಟ್ ಹೋಲೋ ಫೈ ಬರ್ ಪಿಲ್ಲೋ
ನಿಮ್ಮ ತಲೆ ಹಾಗೂ ಭುಜಕ್ಕೆ ಒಳ್ಳೆಯ ಸಪೋರ್ಟ್ ನೀಡುವಂತೆ ಅತ್ಯುತ್ತಮವಾದ ತಂತ್ರಜ್ಞಾನ ಬಳಸಿ ಇದನ್ನು ತಯಾರಿಸಲಾಗಿದೆ. ಇದನ್ನು ಮೈಕ್ರೋಫೈಬರ್‌ನಿಂದ ಮಾಡಲಾಗಿದ್ದು ಮೃದುವಾಗಿದೆ ಜೊತೆಗೆ ತುಂಬಾ ಕಾಲ ಬಾಳಿಕೆ ಬರುತ್ತದೆ. ಈ ದಿಂಬು ನಿಮಗೆ ಸುಖ ನಿದ್ದೆ ನೀಡುವುದು.
6. ಕುತ್ತಿಗೆ ನೋವು, ಭುಜ ನೋವು ಇರುವವರಿಗೆ ಮೆಮೋರಿ ಫಾಮ್ ದಿಂಬು
ನಿಮಗೆ ಕುತ್ತಿಗೆ ನೋವು , ಭುಜದ ನೀವು ಇದ್ದರೆ ಇಂಥ ದಿಂಬಿನ ಮೇಲೆ ಮಲಗಿದರೆ ನೋವು ತುಂಬಾ ಕಡಿಮೆಯಾಗುವುದು. ಇದರಲ್ಲಿ ದೂಳು ಕೂರುವುದಿಲ್ಲ, ದೇಹಕ್ಕೆ ಒಳ್ಳೆಯ ಸಪೋರ್ಟ್ ನೀಡುವುದು, ಒತ್ತಡವನ್ನು ಕಡಿಮೆ ಮಾಡುವುದು. ಈ ದಿಂಬಿನ ಮೇಲೆ ತಲೆ ಇಟ್ಟ ತಕ್ಷಣ ನಿದ್ದೆ ಬರುವುದು, ಅಷ್ಟೊಂದು ಚೆನ್ನಾಗಿದೆ.
7. ಸೋಲೊಮೊ ಮೆಮೋರಿ ಫೋಮ್ ದಿಂಬು
ತುಂಬಾ ಕಡಿಮೆ ತೂಕದ ಈ ದಿಂಬನ್ನು ಪಾಲಿಸ್ಟರ್‌ನಿಂದ ಮಾಡಲಾಗಿದೆ. ಇದು ನೋಡಲು ಲಕ್ಷುರಿಯಾಗಿದೆ. ನೋಡಲು ತುಂಬಾ ಸ್ಟೈಲಿಷ್ ಆಗಿರುವ ಈ ದಿಂಬು ಅಷ್ಟೇ ಕಂಫರ್ಟ್ ನೀಡುವುದು.
8. ಏರೋಹೆವನ್ ಸ್ಯಾಟಿನ್ ಟರ್ಕಿಷ್ ಡಿಸೈನರ್ ದಿಂಬುಗಳು-5 ಸೆಟ್
ನಿಮ್ಮ ಬೆಲೆ ಬಾಳುವ ದಿಂಬುಗಳನ್ನು ಇದರೊಳಗೆ ಹಾಕಿಟ್ಟು ಸಂರಕ್ಷಣೆ ಮಾಡಬಹುದು. ಇವುಗಳು ನಿಮ್ಮ ಕೋಣೆಯ ಅಂದವನ್ನು ಕೂಡ ಹೆಚ್ಚಿಸುವುದು. ಈ ದಿಂಬುಗಳು ತುಂಬಾ ಸಮಯದವರೆಗೆ ಬಾಳಿಕೆ ಬರುತ್ತವೆ.
9. ಫ್ರೆಷ್ ಫ್ರಂ ಲೂಮ್ ಪ್ರಿಂಟೆಡ್ ಕರ್ಟನ್ಸ್
ನಿಮ್ಮ ಮನೆಯ ಕಿಟಕಿಯ ಅಂದವನ್ನು ಹೆಚ್ಚಿಸುವ ಈ ಕರ್ಟನ್ ಅನ್ನು ಪಾಲಿಸ್ಟರ್‌ನಿಂದ ಮಾಡಲಾಗಿದೆ. ಇದು ಮನೆಗೆ ಲಕ್ಷುರಿ ಲುಕ್ ನೀಡುವುದು. ಇದನ್ನು ಸ್ವಚ್ಛಗೊಳಿಸುವುದು ಕೂಡ ಸುಲಭವಾಗಿದೆ.
10. ಮೈಕ್ರೋಫೈಬರ್ ಕಿಂಗ್ ಸೈಜ್ ಪ್ರಿಂಟೆಡ್ ಡಬಲ್ ಶೀಟ್ -2 ಸೆಟ್
ಕಿಂಗ್‌ಸೈಜ್ ಬೆಡ್‌ಗೆ ಸರಿಹೊಂದುವ ಬೆಡ್‌ಶೀಟ್ ಇದಾಗಿದೆ. ಈ ಬೆಡ್‌ಶೀಟ್ ಮೃದುವಾಗಿದ್ದು 100% ಕಾಟನ್‌ನಿಂದ ತಯಾರಿಸಲಾಗಿದೆ. ಇದನ್ನು ಹಾಸಿದರೆ ತುಂಬಾ ಕೂಲ್ ಆಗಿರುವುದು.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































