Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
Gold Rate India: ಮತ್ತೆ ಗಗನಕ್ಕೇರಿದ ಚಿನ್ನದ ಜೊತೆ ಬೆಳ್ಳಿ ಬೆಲೆ! ಎಷ್ಟಿದೆ ಎಂದು ಈಗಲೇ ಚೆಕ್ ಮಾಡಿ
ಅತೀ ಸುರಕ್ಷಿತ ಹೂಡಿಕೆಗಳಲ್ಲಿ ಚಿನ್ನ (Gold) ಕೂಡಾ ಒಂದು. ಆದ್ರೆ ಭಾರತದಲ್ಲಿ ಚಿನ್ನದ ಬೆಲೆ (Gold Rate in India) ದಿನೇ ದಿನೇ ಏರಿಳಿತಗಳಾಗುತ್ತಲೇ ಇದೆ. ಚಿನ್ನದ ಬೆಲೆ ಕಡಿಮೆಯಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಜನರಿಗೆ ಮತ್ತೆ ನಿರಾಸೆ ಮೂಡಿಸಿದೆ. ಈ ಮೂಲಕ ಮತ್ತೆ ಚಿನ್ನದ ಬೆಲೆ ಗಗನಕ್ಕೇರಿದೆ. ಹಾಗಿದ್ರೆ ಭಾರತದಲ್ಲಿ ಇಂದು ಯಾವ ನಗರದಲ್ಲಿ ಎಷ್ಟಿದೆ ಬೆಲೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ ಬೆಲೆ ಮತ್ತೆ ಇಂದು ಏರಿಕೆ ಕಂಡಿದೆ. ಪಾತಾಳಕ್ಕಿಳಿದಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಗಗನಕ್ಕೇರಿದೆ. ಅದೇ ರೀತಿ ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹12,317 ರೂ. ಆಗಿದೆ. ನಿನ್ನೆ ₹12,300 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ ₹17 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹98,536 ರೂ. ಆಗಿದ್ದು, ನಿನ್ನೆ ₹98,400 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ₹136 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,23,170 ರೂ. ಆಗಿದ್ದು, ನಿನ್ನೆಗಿಂತ ₹170 ರೂ ಏರಿಕೆಯಾಗಿದ್ದು, ನಿನ್ನೆ 1,23,000 ರೂ. ಇತ್ತು. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,31,700 ರೂ. ಆಗಿದ್ದು, ನಿನ್ನೆ 12,30,000 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ 1,700 ರೂ.ನಷ್ಟು ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
ಇಂದು 22K ಚಿನ್ನದ 1 ಗ್ರಾಂ ಬೆಲೆಯಲ್ಲೂ ಇಂದು ಏರಿಕೆಯಾಗಿದೆ. ಅದೇ ರೀತಿ ಇಂದು ಚಿನ್ನದ ಬೆಲೆ 11,290 ರೂ. ಆಗಿದ್ದು, ನಿನ್ನೆ ₹11,275 ರೂ. ಇತ್ತು. ಈ ಮೂಲಕ ಕೇವಲ ₹15 ರೂ. ಏರಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 90,320 ರೂ. ಆಗಿದ್ದು, ನಿನ್ನೆ 90,200 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ ₹120 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,12,900 ರೂ ಆಗಿದ್ದು, ನಿನ್ನೆ ₹1,12,750 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹150 ರೂ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು 11,29,000 ರೂ. ಆಗಿದ್ದು, ನಿನ್ನೆ ₹11,27,500 ರೂ. ಇತ್ತು. ಒಂದೇ ದಿನದಲ್ಲಿ 1,500 ರೂ. ಏರಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,238 ರೂ. ಆಗಿದ್ದು, ನಿನ್ನೆ 9,225 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ಚಿನ್ನದಲ್ಲಿ ಕೇವಲ ₹13 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹73,904 ರೂ. ಆಗಿದ್ದು, ನಿನ್ನೆ 73,800 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹104 ರೂ. ಏರಿಕೆಯಾಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 92,380 ರೂ. ಆಗಿದ್ದು, ನಿನ್ನೆಗಿಂತ ಇಂದು ₹130 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದಲ್ಲೂ 1,300 ರೂ. ಏರಿಕೆಯಾಗಿದ್ದು, ಒಟ್ಟು ಬೆಲೆ 9,23,800 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,382, 22K ರೂ. 11,350, 18K ರೂ. 9,475
ಮುಂಬೈ: 24K ರೂ. 12,317, 22K ರೂ. 11,290, 18K ರೂ. 9,238
ದೆಹಲಿ: 24K ರೂ. 12,332, 22K ರೂ. 11,303, 18K ರೂ. 9,251
ಕೋಲ್ಕತ್ತಾ: 24K ರೂ. 12,317, 22K ರೂ. 11,290, 18K ರೂ. 9,238
ಬೆಂಗಳೂರು: 24K ರೂ. 12,317, 22K ರೂ. 11,290, 18K ರೂ. 9,238
ಹೈದರಾಬಾದ್: 24K ರೂ. 12,317, 22K ರೂ. 11,290, 18K ರೂ. 9,238
ಕೇರಳ: 24K ರೂ. 24K ರೂ. 12,317, 22K ರೂ. 11,290, 18K ರೂ. 9,238
ಪುಣೆ: 24K ರೂ. 12,317, 22K ರೂ. 11,290, 18K ರೂ. 9,238
ವಡೋದರಾ: 24K ರೂ. 12,322, 22K ರೂ. 11,293, 18K ರೂ. 9,241
ಅಹಮದಾಬಾದ್: 24K ರೂ. 12,322, 22K ರೂ. 11,293, 18K ರೂ. 9,241
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 3 ರ ರಾಯಿಟರ್ಸ್ ವರದಿ ಪ್ರಕಾರ, ಕಳೆದ ವಾರ ಅಮೆರಿಕಾ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೋವೆಲ್ ಬಡ್ಡಿದರ ಕಡಿತ ಡಿಸೆಂಬರ್‌ನಲ್ಲಿ ನಡೆಯುವುದಿಲ್ಲ ಎಂಬ ಹೇಳಿಕೆ ಹೂಡಿಕೆದಾರರಲ್ಲಿ ನಿರಾಸೆಯನ್ನುಂಟುಮಾಡಿತು. ಆದ್ದರಿಂದ ಹೂಡಿಕೆದಾರರು ಮುಂದಿನ ಬಡ್ಡಿದರ ಕಡಿತದ ನಿರೀಕ್ಷೆಯನ್ನೂ ಕಡಿಮೆ ಮಾಡಿದರು. ಇನ್ನು ಡಾಲರ್ ಮೌಲ್ಯ ಹೆಚ್ಚಾಗಿದೆ. ಅದರಿಂದ ಚಿನ್ನದ ಬೇಡಿಕೆ ಇಳಿಕೆಯಾಗಿದೆ ಮತ್ತು ಬೆಲೆ ಸ್ಥಿರವಾಗಿದೆ. 0250 GMT ಯಂತೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.1% ದಷ್ಟು ಕುಸಿದು $3,997.94 ಗೆ ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಅತ್ತ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ದರವೂ ಏರಿಕೆಯಾಗಿದೆ. ನಿನ್ನೆ 1 ಗ್ರಾಂ ಬೆಳ್ಳಿ ಬೆಲೆ ₹152 ರೂ. ಇತ್ತು. ಆದರೆ ಇಂದು ₹154 ರೂ. ಇದೆ. ಈ ಮೂಲಕ ₹2 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ₹1,232 ರೂ. ಆಗಿದ್ದು, ನಿನ್ನೆ 1,216 ರೂ. ಇತ್ತು. ಅದೇ ರೀತಿ 10 ಗ್ರಾಂ ಬೆಳ್ಳಿ ದರ ₹1,540 ರೂ., 100 ಗ್ರಾಂ ಬೆಳ್ಳಿ ದರ ₹15,400 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,54,000 ರೂ. ಆಗಿದೆ.
ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ. ಆದ್ರೆ ಮಾರುಕಟ್ಟೆ ಬೆಳವಣಿಗೆಗಳನ್ನು ನೋಡಿಕೊಂಡು ಹೂಡಿಕೆ ಮಾಡಿದ್ರೆ ಉತ್ತಮ ಎನ್ನುತ್ತಾರೆ ಹಣಕಾಸು ತಜ್ಞರು.
Credit: Goodreturns



Click it and Unblock the Notifications