Latest Updates
-
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ
Gold-Silver Rate: ಚಿನ್ನ ಪ್ರಿಯರಿಗೆ ಶಾಕ್, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್! ಎಷ್ಟು ಗೊತ್ತಾ ಇಂದಿನ ಬಂಗಾರದ ಬೆಲೆ?
ಅಯ್ಯೋ, ಚಿನ್ನ ಪ್ರಿಯರಿಗೆ ಬಿಗ್ ಶಾಕ್. ನಿನ್ನೆಯಷ್ಟೇ ಸಿಹಿಸುದ್ದಿ ನೀಡಿದ್ದ ಚಿನ್ನದ ಮಾರುಕಟ್ಟೆ, ಇಂದು ದಿಢೀರ್ ಏರಿಕೆಯಾಗುವ ಮೂಲಕ ಬಿಗ್ ಶಾಕ್ ನೀಡಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದೂ ಕೂಡ ಬೆಲೆ ಇಳಿಕೆಯಾಗುತ್ತೆ ಎಂದು ಆಸೆಯಲ್ಲಿದ್ದವರಿಗೆ, ಕೊನೆಗೂ ನಿರಾಸೆ ಮೂಡಿಸಿದೆ. ಹೌದು, ಇಂದು ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಹಾಗಿದ್ರೆ ಇಂದು 24K, 22K, 18K ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹12,448 ರೂ. ಆಗಿದ್ದು, ನಿನ್ನೆ ₹12,426 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹22 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹99,584 ರೂ. ಆಗಿದ್ದು, ನಿನ್ನೆ 99,408 ಇತ್ತು. ಒಟ್ಟು ₹176 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,24,480 ರೂ. ಆಗಿದ್ದು, ನಿನ್ನೆ 1,24,260 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ ₹220 ರೂ. ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ₹12,44,800 ರೂ. ಆಗಿದ್ದು, ಒಟ್ಟು 2,200 ರೂ.ನಷ್ಟು ಏರಿಕೆ ಕಂಡಿದೆ. ಈ ಹಿಂದಿನ ಬೆಲೆ ಏರಿಕೆಗೆ ಗಮಿಸಿದ್ರೆ ಇಂದು ಕಡಿಮೆ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 11,410 ರೂ. ಆಗಿದ್ದು, ನಿನ್ನೆ ₹11,390 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹20 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 91,280 ರೂ. ಆಗಿದ್ದು, ನಿನ್ನೆ 91,120 ರೂಪಾಯಿ ಇತ್ತು. 10 ಗ್ರಾಂ ಚಿನ್ನದ ಬೆಲೆ ಇಂದು ₹1,14,100 ರೂ ಆಗಿದ್ದು, ನಿನ್ನೆಗಿಂತ ಇಂದು 100 ರೂ ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,41,000 ರೂ. ಆಗಿದ್ದು, ನಿನ್ನೆ ₹11,39,000 ರೂ. ಇತ್ತು. .
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,336 ರೂ. ಆಗಿದ್ದು, ನಿನ್ನೆ 9,319 ರೂ. ಇತ್ತು. ಇಂದು ಒಟ್ಟು ₹17 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹74,688 ರೂ. ಆಗಿದ್ದು, ನಿನ್ನೆ 74,552 ರೂ. ಇತ್ತು. ಈ ಮೂಲಕ ನಿನ್ನೆಗಿಂತ ಇಂದು ₹136 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 93,360 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ ಇಂದು ಒಟ್ಟು ಬೆಲೆ 9,33,600 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 12,502, 22K ರೂ. 11,460, 18K ರೂ. 9,560
ಮುಂಬೈ: 24K ರೂ. 12,448, 22K ರೂ. 11,410, 18K ರೂ. 9,336
ದೆಹಲಿ: 24K ರೂ. 12,463, 22K ರೂ. 11,425, 18K ರೂ. 9,351
ಕೋಲ್ಕತ್ತಾ: 24K ರೂ. 12,448, 22K ರೂ. 11,410, 18K ರೂ. 9,336
ಬೆಂಗಳೂರು: 24K ರೂ. 12,448, 22K ರೂ. 11,410, 18K ರೂ. 9,336
ಹೈದರಾಬಾದ್: 24K ರೂ. 12,448, 22K ರೂ. 11,410, 18K ರೂ. 9,336
ಕೇರಳ: 24K ರೂ. 12,448, 22K ರೂ. 11,410, 18K ರೂ. 9,336
ಪುಣೆ: 24K ರೂ. 12,448, 22K ರೂ. 11,410, 18K ರೂ. 9,336
ವಡೋದರಾ: 24K ರೂ. 12,453, 22K ರೂ. 11,415, 18K ರೂ. 9,341
ಅಹಮದಾಬಾದ್: 24K ರೂ. 12,453, 22K ರೂ. 11,415, 18K ರೂ. 9,341
ಬೆಳ್ಳಿ ಬೆಲೆ ಎಷ್ಷಿದೆ?
ಚಿನ್ನದ ಬೆಲೆ ಏರಿಕೆಯಾದರೂ ಸಹ ಬೆಳ್ಳಿ ಬೆಲೆ ಮಾತ್ರ ಇಂದು ಕುಸಿತ ಕಂಡಿದೆ. ಅಂದರೆ ಇಂದು ಒಂದು ಗ್ರಾಂ ಬೆಳ್ಳಿ ಬೆಲೆ 161 ರೂ. ಆಗಿದ್ದು, ನಿನ್ನೆ ₹165 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹4 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹1,288 ರೂ. ಆಗಿದ್ದು, ನಿನ್ನೆ ₹1,320 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹32 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ₹1,610, 100 ಗ್ರಾಂ ಬೆಳ್ಳಿ ದರ ₹16,100, 1000 ಗ್ರಾಂ ಬೆಳ್ಳಿದರ ₹1,61,000 ರೂ. ಆಗಿದ್ದು, ನಿನ್ನೆಗಿಂತಲೂ ಭಾರೀ ಇಳಿಕೆ ಕಂಡಿದೆ.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 21ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ಚಿನ್ನದ ದರ ಏರಿಕೆಯಾಗಿದ್ದು, GMT 0436 ರ ಹೊತ್ತಿಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.6% ಇಳಿಕೆಯಾಗಿ $4,052.58 ಕ್ಕೆ ತಲುಪಿದೆ. ಈ ವಾರ ಬುಲಿಯನ್ ಮಾರುಕಟ್ಟೆ 0.7% ರಷ್ಟು ಕುಸಿತ ಕಂಡಿದೆ.
Credit: Goodreturns



Click it and Unblock the Notifications











