Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Bengaluru-Mantralaya Tour: ಬೆಂಗಳೂರಿನಿಂದ ಮಂತ್ರಾಲಯ ಹೋಗೋರಿಗೆ ಗುಡ್ ನ್ಯೂಸ್! ಸರ್ಕಾರದಿಂದ ಟೂರ್ ಪ್ಯಾಕೇಜ್
ದೇಶದ ಮೂಲೆ ಮೂಲೆಗಳಿಂದ ಅದೆಷ್ಟೋ ಭಕ್ತರು ಮಂತ್ರಾಲಯ, ತಿರುಪತಿ (Mantralaya-Tirupati) ಹೀಗೆ ತೀರ್ಥಕ್ಷೇತ್ರಗಳಿಗೆ ಪ್ರಯಾಣ ಬೆಳೆಸುತ್ತಾರೆ. ಅದರಲ್ಲೂ ಮಂತ್ರಾಲಯ ಕಡೆಗೆ ಬಹಳಷ್ಟು ಮಂದಿ ತಿಂಗಳಿಗೊಮ್ಮೆಯಾದ್ರೂ ಮಂತ್ರಾಲಕ್ಕೆ ಹೋಗುತ್ತಾರೆ. ಇದೀಗ ಮಂತ್ರಾಲಯಕ್ಕೆ ಹೋಗೋರಿಗೆ ಗುಡ್ ನ್ಯೂಸ್ ಒಂದಿದೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗೋರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಬಿಡುಗಡೆ ಮಾಡಿದೆ. ರಾಘವೇಂದ್ರ ಸ್ವಾಮಿ ಕರ್ನಾಟಕದ ಜನರ ಆರಾಧ್ಯ ದೇವರು. ಈ ದೇವಾಲಯ ಆಂಧ್ರಪ್ರದೇಶದ ಗಡಿಭಾಗದಲ್ಲಿದೆ.

ಅದರಲ್ಲೂ ಕರ್ನಾಟಕದಿಂದ ಅತೀ ಹೆಚ್ಚು ಭಕ್ತರು ರಾಘವೇಂದ್ರಸ್ವಾಮಿ ದರ್ಶನ ಪಡೆಯಲು ಮಂತ್ರಾಲಯ ಹೋಗುತ್ತಾರೆ. ಕರ್ನಾಟಕ ಮಾತ್ರವಲ್ಲದೇ ರಾಯರ ದರ್ಶನಕ್ಕೆ ಲಕ್ಷಾಂತರ ಮಂದಿ ಬರುತ್ತಾರೆ. ಅದೇ ಕಾರಣದಿಂದ ಇದೀಗ ಕೆಎಸ್‌ಟಿಡಿಸಿ ವಿಶೇಷ ಪ್ಯಾಕೇಜ್ ಘೋಷಿಸಿದೆ.
ಪ್ಯಾಕೇಜ್ ವಿವರಗಳು:
- ಪ್ಯಾಕೇಜ್ ಹೆಸರು: ಮಂತ್ರಾಲಯ ಟೂರ್ ಪ್ಯಾಕೇಜ್
- ಪ್ರಯಾಣದ ಅವಧಿ: 2 ದಿನಗಳು (1 ರಾತ್ರಿ ಪ್ರಯಾಣ ಸೇರಿದಂತೆ)
- ಪ್ರಾರಂಭ ಸ್ಥಳ: ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ಸ್ಟ್ಯಾಂಡ್, ಯಶವಂತಪುರ, ಬೆಂಗಳೂರು
- ಪ್ರಯಾಣ ಸಮಯ: ರಾತ್ರಿ 8 ಗಂಟೆಗೆ ಆರಂಭ (ಮರುದಿನ ಬೆಳಿಗ್ಗೆ ಮಂತ್ರಾಲಯ ತಲುಪಿದೆ)
- ಪ್ರತೀ ಬುಧವಾರ ಮತ್ತು ಶುಕ್ರವಾರ ಈ ಪ್ಯಾಕೇಜ್ ಇರುತ್ತದೆ.
ಪ್ರಯಾಣದ ವಿವರ:
ರಾಘವೇಂದ್ರ ಸ್ವಾಮಿ ದರ್ಶನ ಪಡೆಯೋರಿಗೆ, ಅದರಲ್ಲೂ ಬೆಂಗಳೂರಿನಿಂದ ಮಂತ್ರಾಲಯ ಹೋಗುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಬಸ್ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂತ್ರಾಲಯಕ್ಕೆ ತಲುಪಲಿದೆ. ಮಂತ್ರಾಲಯ ಜೊತೆಗೆ ಪಂಚಮುಖಿ ಆಂಜನೇಯ ದೇವಸ್ಥಾನ ಕೂಡಾ ದರ್ಶನ ಮಾಡುವ ಅವಕಾಶವಿದೆ. ಸಾಮಾನ್ಯ ಜನರಿಗೂ ಅನುಕೂಲವಾಗುವಂತೆ ಈ ದರ್ಶನ ಪ್ಯಾಕೇಜ್ ಅನ್ನು ಘೋಷಣೆ ಮಾಡಲಿದೆ.
ಪ್ಯಾಕೇಜ್ ದರ ಹೇಗಿದೆ?
ಈ ಪ್ಯಾಕೇಜ್‌ನಲ್ಲಿ ಪ್ರಯಾಣಿಸುವ ಭಕ್ತರು, ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು. ಆ ಮೂಲಕ 2,780 ರೂ. ಆಗಿರುತ್ತದೆ. ಜೊತೆಗೆ ಸೌಲಭ್ಯ ಕೂಡಾ ಇದೆ. ಬುಕ್ ಮಾಡಿ, 48 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದ್ರೆ, 10% ಕಡಿತಗೊಳಿಸಲಾಗುತ್ತದೆ. 24 ಗಂಟೆಗಳು ಮೊದಲು ಟಿಕೆಟ್ ರದ್ದು ಮಾಡಿದ್ರೆ 25% ಕಡಿತಗೊಳಿಸಲಾಗುತ್ತದೆ. 24 ಗಂಟೆಗಳ ಒಳಗೆ ರದ್ದು ಮಾಡಿದ್ರೆ ಯಾವುದೇ ಮರುಪಾವತಿ ಇರುವುದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೆಬ್‌ಸೈಟ್ ಓಪನ್ ಮಾಡಿ ಮಾಹಿತಿ ಪಡೆಯಬಹುದು.
ಇನ್ನು ಮರುದಿನ ಬೆಳಿಗ್ಗೆ 4:30 ಗಂಟೆಯಿಂದ 6ರವರೆಗೆ ಪ್ರಯಾನಿಕರಿಗೆ ರೆಡಿಯಾಗಲು ಅವಕಾಶ ಇರುತ್ತದೆ. ನಂತರ 6:30 ರಿಂದ 10 ಗಂಟೆ ಹೊತ್ತಿಗೆ ಮಠದಲ್ಲಿ ರಾಯರ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ. ನಂತರ ಬೆಳಿಗ್ಗೆ ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಪಂಚಮುಖಿ ಆಂಜನೇಯ ದೇವರ ದರ್ಶನಕ್ಕಾಗಿ ಬಸ್ ಅಲ್ಲಿಗೆ ಹೋಗುತ್ತದೆ. ಆ ನಂತರ ಮಧ್ಯಾಹ್ನದ ವೇಳೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಅದನ್ನು ಮುಗಿಸಿಕೊಂಡು ಬಸ್ ಹೊರಟು ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಮರಳಿ ಬೆಂಗಳೂರಿಗೆ ಬಂದು ಕೆಎಸ್‌ಟಿಡಿಸಿ ಬಸ್ ಬರಲಿದೆ.
Credit: Goodreturns



Click it and Unblock the Notifications
