Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Kantara Chapter 1 Box Office Day 26: ಅವಸರ, ಆತುರ -1000 ಕೋಟಿ ಕನಸು ಭಗ್ನ? 26ನೇ ದಿನ ಗಳಿಸಿದ್ದೆಷ್ಟು ಕಾಂತಾರ?
ಹಿಂದೆ ಒಂದು ಕಾಲ ಇತ್ತು. ಕನ್ನಡ ಚಿತ್ರರಂಗಕ್ಕೆ ಎನ್ನಡ- ಎಕ್ಕಡ ಮುಳುವಾಗಿದ್ದ ದಿನಗಳವು. ಇದರ ನಡುವೆ ಬಾಲಿವುಡ್ಡು .. ಹಾಲಿವುಡ್ಡಿನ ಹಾವಳಿ ಬೇರೆ. ಆ ಕಾಲದಲ್ಲಿ ಕನ್ನಡದೊಂದು ಚಿತ್ರ ಹತ್ತು ಇಪ್ಪತ್ತು ಕೋಟಿಯನ್ನು ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆದರೆ ಅದೇ ಒಂದು ದೊಡ್ಡ ಸಾಧನೆಯಾಗಿತ್ತು. ಆದರೂ ಕೂಡ ಈ ಸಾಧನೆ ಅಕ್ಕ-ಪಕ್ಕದ ರಾಜ್ಯದವರು ಕೇವಲವಾಗಿ ನೋಡುತ್ತಿದ್ದರು.
ತಮ್ಮ ಚಿತ್ರರಂಗದಲ್ಲಿ 50-100 ಕೋಟಿ ಗಡಿಯನ್ನು ದಾಟಿದ ಸಿನಿಮಾಗಳನ್ನು ಉದಾಹರಣೆಯನ್ನಾಗಿ ನೀಡಿ ಕನ್ನಡ ಚಿತ್ರರಂಗದ ಅಪಹಾಸ್ಯ ಮಾಡುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತಾರಗೊಂಡಿದೆ.

ಇಂದು 100-200 ಕೋಟಿ ಕನ್ನಡ ಚಿತ್ರರಂಗಕ್ಕೆ ಲೆಕ್ಕಕ್ಕೇ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ '' ಸು ಫ್ರಮ್ ಸೋ''... ''777 ಚಾರ್ಲಿ".. '' ವಿಕ್ರಾಂತ್ ರೋಣ'' ಇನ್ನೂ ಕೆಲ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಇತ್ತೀಚೆನ ವರ್ಷಗಳಲ್ಲಿ 100 ಕೋಟಿಯನ್ನು ದೋಚಿವೆ.
ಇನ್ನೂ ಕನ್ನಡ ಚಿತ್ರರಂಗಕ್ಕೆ ಕಳಶ ಪ್ರಾಯದಂತೆ ಇರುವ ಕೆಜಿಎಫ್ ಚಿತ್ರದ ಎರಡನೇ ಭಾಗದ 100, 200, 300 ಅಲ್ಲ ಗಲ್ಲಾಪೆಟ್ಟಿಗೆಯಲ್ಲಿ 1200 ಕೋಟಿ ಗಳಿಸಿದೆ. ಈ ಮೂಲಕ ಹೊಸದೊಂದು ಇತಿಹಾಸವನ್ನು ಬರೆದಿದೆ.
ಬಾಲಿವುಡ್‌ನವರಿಗೆ 1000 ಕೋಟಿ ಮರಿಚೀಕೆಯಾಗಿದ್ದ ಸಂದರ್ಭದಲ್ಲಿ ಸೃಷ್ಟಿಯಾಗಿದ್ದ ಈ ದಾಖಲೆಯನ್ನು ತಮಿಳು ಮತ್ತು ಮಲಯಾಳಂ ಚಿತ್ರರಂಗದವರು ಅದ್ಯಾವ ಕಾಲಕ್ಕೆಎನ್ನುವುದು ಗೊತ್ತಿಲ್ಲ. ಆದರೆ.. ಮತ್ತೊಂದು 1000 ಕೋಟಿ ಸಾಮ್ರಾಜ್ಯ ಸ್ಥಾಪನೆ ಮಾಡುವಲ್ಲಿ ಹೊಂಬಾಳೆ ಸಂಸ್ಥೆ ಸದ್ಯ ಎಡವಿದೆ. ಕನ್ನಡ ಸಿನಿಮಾಸಕ್ತರ 1000 ಕೋಟಿ ಕನಸು ಬಹುತೇಕ ಭಗ್ನವಾಗಿದೆ.
ಹೌದು ''ಕಾಂತಾರ- ಅಧ್ಯಾಯ 1'' 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಕೇವಲ ಭಾರತದಲ್ಲಿಯೇ ₹ 589.5 ಕೋಟಿ ಹಣವನ್ನು ದೋಚಿದೆ. ಇನ್ನು ನಿನ್ನೆ (ಅಕ್ಟೋಬರ್ 27- 26ನೇ ದಿನ ) ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹ 2.92 ಕೋಟಿಯನ್ನು ಗಳಿಸಿದೆ. ಸೋಮವಾರವಾದ ಹಿನ್ನೆಲೆ.. ರಜಾ ದಿನಗಳು ಮುಕ್ತಾಯವಾಗಿರುವ ಹಿನ್ನೆಲೆ.. ''ಕಾಂತಾರ'' ಗಳಿಕೆಯಲ್ಲಿ ನಿನ್ನೆ ಶೇಕಡಾ 72% ಕುಸಿತ ಕಂಡು ಬಂದಿದ್ದರಲ್ಲಿ ಅಚ್ಚರಿಯೇನು ಇಲ್ಲ. ಆದರೆ ಎಲ್ಲರಿಗೆ ಆಶ್ಚರ್ಯ ತಂದಿದ್ದು ಹೊಂಬಾಳೆ ಸಂಸ್ಥೆಯ ನಿರ್ಧಾರ.
ಯಾಕೆಂದರೆ.. ''ಕಾಂತಾರ -1 '' ₹1000 ಕೋಟಿ ಗಡಿಯನ್ನು ತಲುಪುವಂತಹ ಸಾಮರ್ಥ್ಯವನ್ನು ಹೊಂದಿದ್ದ ಚಿತ್ರ. ಇವತ್ತು ಕೂಡ ಚಿತ್ರಮಂದಿರದಲ್ಲಿ ಚಿತ್ರ ರಸಿಕರ ಮೊದಲ ಆದ್ಯತೆ ''ಕಾಂತಾರ'' ಚಿತ್ರವೇ ಆಗಿತ್ತು. ಈ ವಾರಾಂತ್ಯದಲ್ಲಿ ಮತ್ತೆ ಗಳಿಕೆಯಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಕೂಡ ಇತ್ತು. ಆದರೆ.. ಅಷ್ಟರಲ್ಲಿಯೇ ''ಕಾಂತಾರ 1'' ಇದೇ ಅಕ್ಟೋಬರ್ 31ರಂದು ''ಅಮೆಜಾನ್ ಪ್ರೈಮ್''ನಲ್ಲಿ ಪ್ರಸಾರವಾಗಲಿದೆ.
ಸಹಜವಾಗಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಲಿದೆ. ಗಳಿಕೆ ಕುಸಿಯಲಿದೆ. ಈ ಮೂಲಕ ₹1000 ಕೋಟಿಯ ಕನಸು ಭಗ್ನವಾದಂತೆ ಆಗಲಿದೆ. ಈ ಹಿನ್ನೆಲೆ ಹಲವರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇಷ್ಟೊಂದು ಅವಸರ- ಆತುರವಾದರೂ ಏನಿತ್ತು. ಇನ್ನೂ ಸ್ವಲ್ಪ ದಿನದ ನಂತರ ಓಟಿಟಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ.
ಅಂದ್ಹಾಗೇ ''www.koimoi.com'' ವರದಿಯ ಪ್ರಕಾರ ಸಪ್ತಸಾಗರದಾಚೆಯ ಗಳಿಕೆಯನ್ನು ಕೂಡ ಸೇರಿಸಿದರೆ ''ಕಾಂತಾರ 1'' ಚಿತ್ರದ ಈ 26 ದಿನದ ಗಳಿಕೆ ₹800 ಕೋಟಿಯ ಗಡಿಯನ್ನು ದಾಟಿದೆ. ಇನ್ನುಳಿದಂತೆ ಸದ್ಯ ಅಮೆಜಾನ್ ಪ್ರೈಂಗೆ ಚಿತ್ರ ಲಗ್ಗೆ ಇಡುತ್ತಿದ್ದು ಹಿಂದಿ ಪ್ರೇಕ್ಷಕರು ಹಿಂದಿಯಲ್ಲಿ ''ಕಾಂತಾರ-1'' ನೋಡಲು ಇನ್ನೂ ಕೆಲ ದಿನ ಕಾಯಬೇಕಿದೆ.
ಇನ್ನು ಅಕ್ಟೋಬರ್ 31ರಂದೇ ''ಕಾಂತಾರ-1'' ಇಂಗ್ಲೀಷ್‌ನಲ್ಲಿ ಬಿಡುಗಡೆಯಾಗಲಿದೆ. ಆಗ ಹೊರದೇಶಗಳಲ್ಲಿ ಚಿತ್ರದ ಗಳಿಕೆ ಹೆಚ್ಚಾಗುತ್ತಾ..? ಚಿತ್ರ ಬಾಕ್ಸಾಫೀಸ್‌ನಲ್ಲಿ ₹1000 ಕೋಟಿಯ ಗಡಿಯನ್ನು ದಾಟುತ್ತಾ ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.
Credit: Filmibeat



Click it and Unblock the Notifications












