Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
BBK12: ಮತ್ತೊಂದು ಎಲಿಮಿನೇಷನ್; ಈ ವಾರ ಹೊರಗೆ ಬರೋದು ಯಾರು?
ಬಿಗ್‌ಬಾಸ್ ಸೀಸನ್ 12 ದಿನದಿಂದ ದಿನಕ್ಕೆ ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಈಗಾಗಲೇ 48 ದಿನ ಪೂರೈಸಿ ಶೋ ಮುಂದುವರೆಯುತ್ತಿದೆ. ಈ ವಾರದ ಕಿಚ್ಚನ ಪಂಚಾಯ್ತಿ ಕಳೆಕಟ್ಟಿದೆ. ಶನಿವಾರ(ನವೆಂಬರ್ 15) ಗಿಲ್ಲಿ, ರಕ್ಷಿತಾ, ರಾಶಿಕಾ, ರಿಷಾ ಗೌಡಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಇಬ್ಬರೂ ಸೇಫ್ ಕೂಡ ಆಗಿದ್ದಾರೆ.
ಈ ಬಾರಿ ಯಾರು ಬಿಗ್‌ಬಾಸ್ ಮನೆಯಿಂದ ಹೊರಬರುತ್ತಾರೆ ಎನ್ನುವುದು ನಿಜಕ್ಕೂ ಕುತೂಹಲ ಮೂಡಿಸಿದೆ. ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಮಾಳು ಆಯ್ಕೆಯಂತೆ ಜಾಹ್ನವಿ, ಅಶ್ವಿನಿ ಗೌಡ, ದೃವಂತ್, ರಾಶಿಕಾ, ರಕ್ಷಿತಾ, ಕಾಕ್ರೋಚ್ ಸುಧಿ ಅವರನ್ನು ನಾಮಿನೇಟ್ ಮಾಡಿದ್ದರು. ಗಲ್ಲಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಳೆದ ವಾರವೇ ರಿಷಾ ಗೌಡ ನೇರವಾಗಿ ನಾಮಿನೇಟ್ ಆಗಿದ್ದರು. ಇನ್ನು ರಘು ಕೂಡ ಈ ಲಿಸ್ಟ್ ಸೇರಿದ್ದು ಗೊತ್ತೇಯಿದೆ.

ನಿನ್ನೆ ಮೊದಲು ಅಶ್ವಿನಿ ಗೌಡ ಹಾಗೂ ರಕ್ಷಿತಾ ಸೇಫ್ ಆಗಿರುವುದನ್ನು ಸುದೀಪ್ ಹೇಳಿದ್ದರು. ಇನ್ನುಳಿದಂತೆ ರಘು, ದೃವಂತ್, ಜಾಹ್ನವಿ, ರಾಶಿಕಾ, ಸುಧಿ, ರಿಷಾ ಗೌಡ ನಾಮಿನೇಟ್ ಲಿಸ್ಟ್‌ನಲ್ಲಿದ್ದಾರೆ. ಈ ಆರು ಜನರಲ್ಲಿ ಯಾರು ಈ ವಾರ ಬಿಗ್‌ಬಾಸ್ ಜರ್ನಿ ಮುಗಿಸಿ ಮನೆಗೆ ವಾಪಸ್ ಬರುತ್ತಾರೆ ಎಂದು ಕಾದು ನೋಡಬೇಕಿದೆ.
ಪ್ರಬಲ ಸ್ಪರ್ಧಿಗಳೇ ನಾಮಿನೇಟ್ ಲಿಸ್ಟ್‌ನಲ್ಲಿ ಇರುವುದು ವಿಪರ್ಯಾಸ. ಹಾಗಾಗಿ ಯಾರು ಎಲಿಮಿನೇಟ್ ಆಗಬಹುದು ಎನ್ನುವುದೇ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಎನಿಸಿದೆ. 'ಸೂಪರ್ ಸಂಡೇ ವಿತ್ ಸುದೀಪ' ಹೊಸ ಪ್ರೋಮೊ ಕೂಡ ಬಂದು ವೈರಲ್ ಆಗ್ತಿದೆ. ಕಿಚ್ಚನ ರೀತಿ ಗಿಲ್ಲಿ ಮಾತನಾಡಿ ಎಲ್ಲರನ್ನು ರಂಜಿಸಿದ್ದಾರೆ. ಈವತ್ತಿನ ಎಪಿಸೋಡ್‌ನಲ್ಲಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಕಾಯ್ತಿದೆ. ಜೊತೆಗೆ ಎಲಿಮಿನೇಷನ್ ಶಾಕ್ ಕೂಡ ಇದೆ.
ರಾಶಿಕಾ ಹಾಗೂ ರಿಷಾ ಇಬ್ಬರಲ್ಲಿ ಒಬ್ಬರು ಬಿಗ್‌ಬಾಸ್ ಆಟವನ್ನು ಈ ವಾರ ಮುಗಿಸಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಬಿಗ್‌ಬಾಸ್‌ನಲ್ಲಿ ಊಹಿಸಿದಂತೆ ಏನು ನಡೆಯಲ್ಲ. ನಿನ್ನೆಯ ಎಪಿಸೋಡ್ ಕೊಂಚ ಕಾವು ಏರಿದ್ದು ಗೊತ್ತೇಯಿದೆ. ತಪ್ಪಾಗಿ ಮಾತನಾಡುವವರಿಗೆ ತಪ್ಪಾಗಿ ನಡೆದುಕೊಳ್ಳುವವರಿಗೆ ಕಿಚ್ಚಿನ ಮಾತಿನ ಚಾಟಿ ಏಟು ಬಿದ್ದಿದೆ. ಒಟ್ಟು 19 ಮಂದಿ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದರು. ಮಿನಿ ಫಿನಾಲೆ ವೀಕ್‌ನಲ್ಲಿ ಮೂವರು ಹೊರಬಂದಿದ್ದರು. ಮೂವರು ವೈಲ್ಡ್‌ಕಾರ್ಡ್ ಎಂಟ್ರಿ ಪಡೆದಿದ್ದರು.
ಕಳೆದ ವಾರ ಚಂದ್ರಪ್ರಭ ಎಲಿಮಿನೇಟ್ ಆಗಿ ಅಚ್ಚರಿ ಮೂಡಿಸಿದ್ದರು. ಅದಕ್ಕೂ ಮುನ್ನ ಮಲ್ಲಮ್ಮ ಮನೆಯಿಂದ ಹೊರ ಬಂದಿದ್ದರು. ಇದೀಗ 15 ಮಂದಿ ಮನೆಯಲ್ಲಿ ಇದ್ದಾರೆ. ಇವತ್ತು ಒಬ್ಬರ ಸಂಖ್ಯೆ ಕಮ್ಮಿ ಆಗಲಿದೆ. ಮಿನಿ ಫಿನಾಲೆ ಬಳಿಕ ಒಂದು ವಾರ ಎಲಿಮಿನೇಷನ್ ಇರಲಿಲ್ಲ. ಸದ್ಯಕ್ಕೆ ವೈಲ್ಡ್‌ಕಾರ್ಡ್ ಎಂಟ್ರಿ ಸ್ಪರ್ಧಿ ರಘು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕಳೆದ ವಾರ ಮಾಳು ಕ್ಯಾಪ್ಟನ್ ಆಗಿ ಮನೆ ಮಂದಿಯ ಅಸಮಾಧಾನಕ್ಕೆ ಗುರಿಯಾಗಿದ್ದರು.
ಬಿಗ್‌ಬಾಸ್ ಆಟ ಇನ್ನು 50 ದಿನ ಬಾಕಿಯಿದೆ. ಗಿಲ್ಲಿ ಟ್ರೋಫಿ ಗೆಲ್ತಾರೆ ಎಂದು ಸಾಕಷ್ಟು ಜನ ಭಾವಿಸಿದ್ದಾರೆ. ಗಿಲ್ಲಿ ಮುಂದೆ ಉಳಿದವರೆಲ್ಲಾ ಗೌಣ ಆಗಿಬಿಟ್ಟಿದ್ದಾರೆ ಎನ್ನಬಹುದು. ಇನ್ನುಳಿದಂತೆ ದೃವಂತ್ ಈಗ ಖಡಕ್ ಆಟ ಶುರು ಮಾಡಿದ್ದಾರೆ. ಇತ್ತೀಚೆಗೆ ಅಶ್ವಿನಿ ಮನೆ ಮಂದಿಯ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
Credit: Filmibeat



Click it and Unblock the Notifications
