Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗುಡ್‌ನ್ಯೂಡ್.. ಗುಡ್‌ನ್ಯೂಸ್! ಮತ್ತೆ ಪಾತಾಳದತ್ತ ಮುಖ ಮಾಡಿದ ಚಿನ್ನದ ಬೆಲೆ
ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್, ಗುಡ್ ನ್ಯೂಸ್.. ಕೊನೆಗೂ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ಚಿನ್ನದ ಬೆಲೆ ಏರಿಕೆಯಿಂದ ಚಿಂತೆಗೀಡಾಗಿದ್ದ, ಬಂಗಾರ ಪ್ರಿಯರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಹೌದು, ಚಿನ್ನದ ಬೆಲೆ (Today Gold Rate) ಇಂದು (ನ.15) ಭಾರೀ ಇಳಿಕೆ ಕಂಡಿದೆ. ಹಾಗಿದ್ರೆ ಒಟ್ಟು ಎಷ್ಟು ಇಳಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ 1 ಗ್ರಾಂ ಚಿನ್ನದ ಬೆಲೆ ಇಂದು ₹196 ರೂ. ಇಳಿಕೆ ಕಂಡಿದೆ. ಅಂದರೆ ಒಟ್ಟು ಬೆಲೆ 12,508 ರೂ. ಆಗಿದೆ. ನಿನ್ನೆ 12,704 ರೂ. ಇತ್ತು. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹1,00,064 ರೂ. ಆಗಿದ್ದು, ನಿನ್ನೆ 1,01,632 ಇತ್ತು. ನಿನ್ನೆಗಿಂತ ಇಂದು 1,568 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,25,080 ರೂ. ಆಗಿದೆ. ಒಟ್ಟು 1,960 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,50,800 ರೂ. ಆಗಿದ್ದು, ನಿನ್ನೆ 12,70,400 ರೂ. ಇತ್ತು. ಈ ಮೂಲಕ ಒಂದೇ ದಿನ 19,600 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ 11,465 ರೂ. ಆಗಿದ್ದು, ನಿನ್ನೆ ₹11,645 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹180 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 91,720 ರೂ. ಆಗಿದ್ದು, ನಿನ್ನೆ 93,160 ರೂ. ಇತ್ತು. ಒಂದೇ ದಿನದಲ್ಲಿ 1,440 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,14,650 ರೂ ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,46,500 ರೂ. ಆಗಿದ್ದು, ನಿನ್ನೆ 11,64,500 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 18,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,381 ರೂ. ಆಗಿದ್ದು, ನಿನ್ನೆ 9,528 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 147 ರೂ. ಇಳಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹75,048 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 93,810 ರೂ. ಆಗಿದ್ದು, ಒಟ್ಟು 1,470 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,38,100 ರೂ. ಆಗಿದೆ. ಈ ಮೂಲಕ 14,700 ರೂ. ಇಳಿಕೆ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,600, 22K ರೂ. 11,550, 18K ರೂ. 9,640
ಮುಂಬೈ: 24K ರೂ. 12,508, 22K ರೂ. 11,465, 18K ರೂ. 9,381
ದೆಹಲಿ: 24K ರೂ. 12,523, 22K ರೂ. 11,480, 18K ರೂ. 9,396
ಕೋಲ್ಕತ್ತಾ: 24K ರೂ. 12,508, 22K ರೂ. 11,465, 18K ರೂ. 9,381
ಬೆಂಗಳೂರು: 24K ರೂ. 12,508, 22K ರೂ. 11,465, 18K ರೂ. 9,381
ಹೈದರಾಬಾದ್: 24K ರೂ. 12,508, 22K ರೂ. 11,465, 18K ರೂ. 9,381
ಕೇರಳ: 24K ರೂ. 12,508, 22K ರೂ. 11,465, 18K ರೂ. 9,381
ಪುಣೆ: 24K ರೂ. 12,508, 22K ರೂ. 11,465, 18K ರೂ. 9,381
ವಡೋದರಾ: 24K ರೂ. 12,513, 22K ರೂ. 11,470, 18K ರೂ. 9,386
ಅಹಮದಾಬಾದ್: 24K ರೂ. 12,513, 22K ರೂ. 11,470, 18K ರೂ. 9,386
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 14ರ ರಾಯಿಟರ್ಸ್ ವರದಿ ಪ್ರಕಾರ, ಈ ವಾರ ಏಷ್ಯಾದ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದು, ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆ ಬೆಳವಣಿಗೆ ಸ್ವಲ್ಪ ಕುಂಠಿತಗೊಂಡಿದೆ. ಭಾರತದಲ್ಲಿ ಇಳಿಕೆ ಪ್ರಮಾಣ 5 ತಿಂಗಳಳ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ.
GMT 1933 ಮಧ್ಯಾಹ್ನ 02:33ರ ಹೊತ್ತಿಗೆ ಸ್ಪಾಟ್ ಚಿನ್ನದ ದರವೂ ಪ್ರತೀ ಔನ್ಸ್‌ಗೆ 1.9% ರಷ್ಟು ಕುಸಿದು $4,092.72 ಕ್ಕೆ ತಲುಪಿದೆ. ಆದ್ರೆ ಹಿಂದಿನ ವಹಿವಾಟಿನಲ್ಲಿ 3% ಕ್ಕಿಂತ ಹೆಚ್ಚು ಕುಸಿತ ಕಂಡಿದ್ದು, ಬೆಳ್ಳಿ ದರ ಮಾತ್ರ 2.3% ರಷ್ಟು ಹೆಚ್ಚಾಗಿದೆ.
ಬೆಳ್ಳಿ ಬೆಲೆ:
ಚಿನ್ನದ ದರ ಇಳಿಕೆಯಾದಂತೆ, ಬೆಳ್ಳಿ ದರ ಕೂಡಾ ಇಳಿಕೆಯಾಗಿದೆ. ಇಂದು 1 ಗ್ರಾಂ ಬೆಳ್ಳಿ ದರ 169 ರೂ ಆಗಿದ್ದು, ನಿನ್ನೆ 173.10 ರೂ. ಇತ್ತು. ಈ ಮೂಲಕ ಒಂದೇ ದಿನ 4.10 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿದರ ₹1,352 ರೂ. ಆಗಿದ್ದು, ನಿನ್ನೆ ₹1,384.80 ರೂ. ಇತ್ತು. ಒಟ್ಟು ₹32.80 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ಇಂದು ₹1,690, 100 ಗ್ರಾಂ ಬೆಳ್ಳಿ ದರ ₹16,900 ರೂ., 1000 ಗ್ರಾಂ ಬೆಳ್ಳಿ ಬೆಲೆ ಇಂದು ₹1,69,000 ರೂ. ಆಗಿದೆ.
Credit: Goodreturns



Click it and Unblock the Notifications
