Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Gold Rate India: ಭಾರತದಲ್ಲಿ ಪಾತಾಳಕ್ಕಿಳಿದ ಚಿನ್ನದ ದರ! 24 ಕ್ಯಾರಟ್ ಬಂಗಾರ ಭರ್ಜರಿ ಇಳಿಕೆ
ಭಾರತದಲ್ಲಿ ಚಿನ್ನ ಪ್ರಿಯರು ಬಹಳಷ್ಟು ಜನ ಇದ್ದಾರೆ. ಅದರಲ್ಲೂ ಡಿಜಿಟಲ್ ಮೂಲಕ ಅನೇಕ ಜನರು ಹೂಡಿಕೆ ಮಾಡುತ್ತಾರೆ. ಕೆಲವರು ಡೈರೆಕ್ಟ್ ಖರೀದಿ ಮಾಡಿದ್ರೆ, ಇನ್ನೂ ಕೆಲವು ಸ್ವಲ್ಪ ಸ್ವಲ್ಪ ಹೂಡಿಕೆ ಮಾಡಿಕೊಂಡು ಬರುತ್ತಾರೆ. ಇತ್ತೀಚೆಗೆ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ಆದ್ದರಿಂದ ದಿನಹೋದಂತೆ ಚಿನ್ನ ಪ್ರಿಯರಿಗೆ ನಿರಾಸೆಯೇ ಮೂಡುತ್ತಿದೆ. ಆದ್ರೆ ಕೆಲವು ದಿನಗಳಿಂದ ಚಿನ್ನ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇದೆ. ಇಂದು ಚಿನ್ನದ ಬೆಲೆ (Gold Rate Today) ಮತ್ತೆ ಇಳಿಕೆಯಾಗಿದ್ದು, ಹಾಗಿದ್ರೆ ಇಂದು (ನ.07) ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ ಬೆಲೆ ಇಂದು ತಕ್ಕ ಮಟ್ಟಿಗೆ ಇಳಿಕೆಯಾಗಿದೆ. 24K ಚಿನ್ನದ 1 ಗ್ರಾಂ ಬೆಲೆ ₹12,202 ರೂ. ಆಗಿದೆ. ನಿನ್ನೆ ₹12,257 ರೂ ಇತ್ತು. ಈ ಮೂಲಕ 55 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹97,616 ರೂ. ಆಗಿದ್ದು, ನಿನ್ನೆ ₹98,056 ಇತ್ತು. ಒಂದೇ ದಿನ ₹440 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,22,020 ರೂ. ಆಗಿದ್ದು, ನಿನ್ನೆ 1,22,570 ರೂ. ಇತ್ತು. ಈ ಮೂಲಕ 10 ಗ್ರಾಂ ಚಿನ್ನದಲ್ಲಿ ₹550 ರೂ. ಇಳಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,20,200 ರೂ. ಆಗಿದ್ದು, ನಿನ್ನೆ 12,25,700 ರೂ. ಇತ್ತು. ಈ ಮೂಲಕ ಒಂದೇ ದಿನ 5,500 ರೂ. ಇಳಿಕೆಯಾಗಿದೆ
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ 11,185 ರೂ. ಆಗಿದ್ದು, ನಿನ್ನೆ ₹11,235 ರೂ. ಇತ್ತು. ಈ ಮೂಲಕ ಒಂದೇ ದಿನ ₹50 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 89,480 ರೂ. ಆಗಿದ್ದು, ನಿನ್ನೆ 89,880 ರೂ. ಇತ್ತು. ಒಂದೇ ದಿನದಲ್ಲಿ ₹400 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,11,850 ರೂ ಆಗಿದ್ದು, ನಿನ್ನೆ ₹1,12,350 ರೂ ಇತ್ತು. ನಿನ್ನೆಗಿಂತ ಇಂದು ₹500 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,18,500 ರೂ. ಆಗಿದ್ದು, ನಿನ್ನೆ 11,23,500 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 9,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನ ಸಾಮಾನ್ಯವಾಗಿ ಕಡಿಮೆ ಬೆಲೆ ಹೊಂದಿರುತ್ತದೆ. ಅದೇ ರೀತಿ ಇಂದು 1 ಗ್ರಾಂ ಬೆಲೆ ₹9,152 ರೂ. ಆಗಿದ್ದು, ನಿನ್ನೆ 9,193 ರೂ. ಇತ್ತು. ನಿನ್ನೆಗಿಂತ ಇಂದು ಬರೀ 41 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹73,216 ರೂ. ಆಗಿದೆ. ನಿನ್ನೆ 73,544 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 328 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 91,520 ರೂ. ಆಗಿದ್ದು, ನಿನ್ನೆ 91,930 ರೂ. ಇತ್ತು. ಈ ಮೂಲಕ ಒಟ್ಟು 410 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 9,15,200 ರೂ. ಆಗಿದ್ದು, ನಿನ್ನೆ 9,19,300 ರೂ. ಇತ್ತು. ಈ ಮೂಲಕ ಒಂದೇ ದಿನ 4,100 ರೂ. ಇಳಿಕೆ ಕಂಡುಬಂದಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,295, 22K ರೂ. 11,270, 18K ರೂ. 9,400
ಮುಂಬೈ: 24K ರೂ. 12,202, 22K ರೂ. 11,185, 18K ರೂ. 9,152
ದೆಹಲಿ: 24K ರೂ. 12,217, 22K ರೂ. 11,203, 18K ರೂ. 9,167
ಕೋಲ್ಕತ್ತಾ: 24K ರೂ. 12,202, 22K ರೂ. 11,188, 18K ರೂ. 9,152
ಬೆಂಗಳೂರು: 24K ರೂ. 12,202, 22K ರೂ. 11,188, 18K ರೂ. 9,152
ಹೈದರಾಬಾದ್: 24K ರೂ. 12,202, 22K ರೂ. 11,188, 18K ರೂ. 9,152
ಕೇರಳ: 24K ರೂ. 12,202, 22K ರೂ. 11,188, 18K ರೂ. 9,152
ಪುಣೆ: 24K ರೂ. 12,202, 22K ರೂ. 11,185, 18K ರೂ. 9,152
ವಡೋದರಾ: 24K ರೂ. 12,207, 22K ರೂ. 11,193, 18K ರೂ. 9,157
ಅಹಮದಾಬಾದ್: 24K ರೂ. 12,207, 22K ರೂ. 11,193, 18K ರೂ. 9,157
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 7ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ಚಿನ್ನದ ಬೆಲೆ ಏರಿಕೆಯಾಗಿದೆ. ಏಕೆಂದರೆ ಅಮೆರಿಕಾದ ಖಾಸಗಿ ವಲಯದ ಉದ್ಯೋಗ ವರದಿಗಳು ಮಾರುಕಟ್ಟೆ ದುರ್ಬಲತೆಯನ್ನು ಸೂಚಿಸಿದ್ದಕ್ಕೆ ಡಾಲರ್ ಮೌಲ್ಯ ಕುಸಿತ ಕಂಡಿದೆ. ಇನ್ನು ಸ್ಪಾಟ್ ಚಿನ್ನದ ದರ ಶುಕ್ರವಾರ 0.4% ಏರಿಕೆಯಾಗಿ ಜಿಎಂಟಿ 03:41 ವೇಳೆಗೆ ಪ್ರತೀ ಔನ್ಸ್‌ಗೆ $3,994.03 ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಇನ್ನು ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆಯಷ್ಟೇ ಬೆಲೆಯನ್ನು ಇಂದು ಕಾಯ್ದುಕೊಂಡಿದೆ. 1 ಗ್ರಾಂ ಬೆಳ್ಳಿ ದರ ಇಂದು 152.50 ರೂ. ಇದೆ. ನಿನ್ನೆಯೂ ಅಷ್ಟೇ ಬೆಲೆ ಇತ್ತು. ಅಲ್ಲದೇ 8 ಗ್ರಾಂ ಬೆಳ್ಳಿ ದರ 1,220 ರೂ., 10 ಗ್ರಾಂ ಬೆಳ್ಳಿ ದರ ₹1,525 ರೂ, 100 ಗ್ರಾಂ ಬೆಳ್ಳಿ ಬೆಲೆ ₹15,250 ರೂ, 1000 ಗ್ರಾಂ ದರ ₹1,52,500 ರೂ.ನಷ್ಟಿದೆ.
Credit: Goodreturns



Click it and Unblock the Notifications











