Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
Gold Rate: ಸತತ 7 ದಿನಗಳ ನಂತರ ಚಿನ್ನದ ಬೆಲೆ ಇಳಿಕೆ! ಬರೋಬ್ಬರಿ 7,100 ರೂ. ಕುಸಿತ
ಸತತ 7 ದಿನಗಳ ಏರಿಕೆಯ ನಂತರ ಇದೀಗ ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಏನಪ್ಪಾ, ಇಷ್ಟೊಂದು ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಿದ್ದವರಿಗೆ, ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವಾರವಿಡೀ ಚಿನ್ನ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದ್ದ ದರ ಏರಿಕೆ, ಇದೀಗ ವರ್ಷಾಂತ್ಯದ ವಾರದ ಆರಂಭದಲ್ಲಿ ಗುಡ್ ನ್ಯೂಸ್ ಕೊಟ್ಟಿದೆ. ಕೊನೆಗೂ ಚಿನ್ನದ ಬೆಲೆ (Today Gold Rate) ಇಳಿಕೆಯಾಗಿದ್ದು, ಇಂದು ಭಾರತದಲ್ಲಿ ಚಿನ್ನದ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು 14,171 ರೂ. ಆಗಿದ್ದು, ನಿನ್ನೆ 14,242 ರೂ. ಇತ್ತು. ಕಳೆದೊಂದು ವಾರದಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂನಲ್ಲಿ ₹71 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,13,368 ರೂ. ಆಗಿದ್ದು, ನಿನ್ನೆ 1,13,936 ರೂ. ಇತ್ತು. ನಿನ್ನೆಗಿಂತ ಇಂದು ₹568 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,41,710 ರೂ. ಆಗಿದ್ದು, ನಿನ್ನೆ 1,42,420 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹710 ರೂ. ಕುಸಿತವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹14,17,100 ರೂ. ಆಗಿದ್ದು, ನಿನ್ನೆ 14,24,200 ರೂ. ಇತ್ತು. ಒಟ್ಟು 7,100 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,990 ರೂ. ಆಗಿದ್ದು, ನಿನ್ನೆ 13,055 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ ₹65 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,03,920 ರೂ. ಆಗಿದ್ದು, ನಿನ್ನೆ 1,04,440 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹520 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,29,900 ರೂ. ಆಗಿದ್ದು, ನಿನ್ನೆ 1,30,550 ರೂ. ಇತ್ತು. ನಿನ್ನೆಗಿಂತ ಇಂದು ₹650 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 12,99,000 ರೂ. ಆಗಿದ್ದು, ನಿನ್ನೆ 13,05,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 6,500 ರೂ. ವ್ಯತ್ಯಾಸವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 18 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು ₹10,628 ರೂ. ಆಗಿದ್ದು, ನಿನ್ನೆ 10,682 ರೂ. ಇತ್ತು. ನಿನ್ನೆಗಿಂತ ಇಂದು 54 ರೂ. ಕುಸಿತ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹85,024 ರೂ. ಆಗಿದ್ದು, ನಿನ್ನೆ 85,456 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 432 ರೂ. ಇಳಿಕೆ ಕಂಡಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು 1,06,280 ರೂ. ಆಗಿದ್ದು, ನಿನ್ನೆ 1,06,820 ರೂ. ಇತ್ತು. ಒಟ್ಟು 540 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 10,62,800 ರೂ. ಆಗಿದ್ದು, ನಿನ್ನೆ 10,68,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 5,400 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 14,204, 22K ರೂ. 13,020, 18K ರೂ. 10,865
ಮುಂಬೈ: 24K ರೂ. 14,171, 22K ರೂ. 12,990, 18K ರೂ. 10,628
ದೆಹಲಿ: 24K ರೂ. 14,186, 22K ರೂ. 13,005, 18K ರೂ. 10,633
ಕೋಲ್ಕತ್ತಾ: 24K ರೂ. 14,171, 22K ರೂ. 12,990, 18K ರೂ. 10,628
ಬೆಂಗಳೂರು: 24K ರೂ. 14,171, 22K ರೂ. 12,990, 18K ರೂ. 10,628
ಹೈದರಾಬಾದ್: 24K ರೂ. 14,171, 22K ರೂ. 12,990, 18K ರೂ. 10,628
ಕೇರಳ: 24K ರೂ. 14,171, 22K ರೂ. 12,990, 18K ರೂ. 10,628
ಪುಣೆ: 24K ರೂ. 14,171, 22K ರೂ. 12,990, 18K ರೂ. 10,628
ವಡೋದರಾ: 24K ರೂ. 14,176, 22K ರೂ. 12,995, 18K ರೂ. 10,633
ಅಹಮದಾಬಾದ್: 24K ರೂ. 14,176, 22K ರೂ. 12,995, 18K ರೂ. 10,633
ಇಂದು ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ, ಅತ್ತ ಬೆಳ್ಳಿ ಬೆಲೆ ಕೂಡಾ ಭಾರೀ ಇಳಿಕೆ ಕಂಡಿದೆ. ಈ ವರ್ಷವಂತೂ ಬೆಳ್ಳಿ ಬೆಲೆ ದಾಖಲೆಯಲ್ಲಿ ಏರಿಕೆ ಕಂಡಿತ್ತು. ಒಂದು ಗ್ರಾಂ ಬೆಳ್ಳಿ ದರ ಇಂದು ₹258 ರೂ. ಆಗಿದ್ದು, ನಿನ್ನೆ ₹262 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹4 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ 2,064 ರೂ. ಆಗಿದೆ. ನಿನ್ನೆ ₹2,096 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹32 ರೂ. ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,580 ರೂ. ಆಗಿದೆ. ಇನ್ನು 100 ಬೆಳ್ಳಿ ದರ 25,800 ರೂ., 1000 ಗ್ರಾಂ ಬೆಳ್ಳಿ ಬೆಲೆ 2,58,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 29ರ ರಾಯಿಟರ್ಸ್ ವರದಿ ಪ್ರಕಾರ, ಸೋಮವಾರ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬೆಳ್ಳಿಯ ವಹಿವಾಟು ದಿನದ ಆರಂಭದಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಪ್ರತೀ ಔನ್ಸ್‌ಗೆ $80 ರ ಸಮೀಪಕ್ಕೆ ರೀಚ್ ಆಗಿದೆ.
ಇನ್ನು ಶುಕ್ರವಾರ ದಾಖಲೆಯ ಗರಿಷ್ಠ $4,549.71 ತಲುಪಿದ ನಂತರ, 0426 GMT ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.4% ಇಳಿಕೆ ಕಂಡಿದೆ. ಆ ಪ್ರಕಾರ $4,512.30 ಕ್ಕೆ ತಲುಪಿದೆ.
Credit: Goodreturns



Click it and Unblock the Notifications
