Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
Gold Rate Today: ಅಬ್ಬಬ್ಬಾ ಲಾಟರಿ, ಚಿನ್ನದ ಬೆಲೆ 2,510 ರೂ. ಇಳಿಕೆ! ಖರೀದಿಸೋಕೆ ಬೆಸ್ಟ್ ಟೈಂ
ಅಬ್ಬಬ್ಬಾ ಲಾಟರಿ.. ಚಿನ್ನ ಪ್ರಿಯರ ಮುಖದಲ್ಲಿ ಸಂತಸ. ಅಂತೂ ಇಂತೂ ದೊಡ್ಡ ಮಟ್ಟದಲ್ಲೇ ಭಾರತದಲ್ಲಿ ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ. ಊಹೆಯೂ ಮಾಡದ ರೀತಿಯಲ್ಲಿ ಏರಿಕೆ ಕಾಣುತ್ತಿದ್ದ ಚಿನ್ನದ ದರ (Gold Rate), ಇಂದು ಊಹೆಯೂ ಮಾಡದಷ್ಟು ಕುಸಿತ ಕಂಡಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ? 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆಯಾಗಿದೆ. ಅಂದರೆ 1 ಗ್ರಾಂ ಬೆಲೆ ಇಂದು 13,620 ರೂ. ಆಗಿದ್ದು, ನಿನ್ನೆ 13,925 ರೂ. ಇತ್ತು. ನಿನ್ನೆಯೂ ಚಿನ್ನದ ಬೆಲೆ ಇಳಿಕೆಯಾಗಿತ್ತು. ಆದ್ರೆ ನಿನ್ನೆಗಿಂತಲೂ ಇಂದು ₹305 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,08,960 ರೂ. ಆಗಿದ್ದು, ನಿನ್ನೆ 1,11,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,440 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,36,200 ರೂ. ಆಗಿದ್ದು, ನಿನ್ನೆ 1,39,250 ರೂ. ಇತ್ತು. ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ನಿನ್ನೆಗಿಂತ ಇಂದು ಒಟ್ಟು ₹3,050 ರೂ. ವ್ಯತ್ಯಾಸವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,62,000 ರೂ. ಆಗಿದ್ದು, ನಿನ್ನೆ 13,92,500 ರೂ. ಇತ್ತು. ಒಟ್ಟು 30,500 ರೂ. ಕಮ್ಮಿಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,485 ರೂ. ಆಗಿದ್ದು, ನಿನ್ನೆ 12,765 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹280 ರೂ. ವ್ಯತ್ಯಾಸವಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 99,880 ರೂ. ಆಗಿದ್ದು, ನಿನ್ನೆ 1,02,120 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,240 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,24,850 ರೂ. ಆಗಿದ್ದು, ನಿನ್ನೆ 1,27,650 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,800 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 12,48,500 ರೂ. ಆಗಿದ್ದು, ನಿನ್ನೆ 12,76,500 ರೂ. ಇತ್ತು. ನಿನ್ನೆಗಿಂತ ಇಂದು ಒಟು 28,000 ರೂ. ಇಳಿಮುಖವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ ಸಾಮಾನ್ಯವಾಗಿ 18 ಕ್ಯಾರಟ್ ಚಿನ್ನ ಕಮ್ಮಿ ಬೆಲೆಗೆ ಸಿಗುತ್ತದೆ. ಅಂದರೆ ಇಂದು 1 ಗ್ರಾಂ ಬೆಲೆ ₹10,193 ರೂ. ಆಗಿದ್ದು, ನಿನ್ನೆ 10,444 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 251 ರೂ. ಕುಸಿತವಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹81,544 ರೂ. ಆಗಿದ್ದು, ನಿನ್ನೆ 83,552 ರೂ. ಇತ್ತು. ನಿನ್ನೆಗಿಂತ ಇಂದು 2,008 ರೂ. ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು 1,01,930 ರೂ. ಆಗಿದ್ದು, ನಿನ್ನೆ 1,04,440 ರೂ. ಇತ್ತು. ಒಟ್ಟು 2,510 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 10,19,300 ರೂ. ಆಗಿದ್ದು, ನಿನ್ನೆ 10,44,400 ರೂ. ಇತ್ತು.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,746, 22K ರೂ. 12,600, 18K ರೂ. 10,505
ಮುಂಬೈ: 24K ರೂ. 13,620, 22K ರೂ. 12,485, 18K ರೂ. 10,193
ದೆಹಲಿ: 24K ರೂ. 13,635, 22K ರೂ. 12,500, 18K ರೂ. 10,208
ಕೋಲ್ಕತ್ತಾ: 24K ರೂ. 14,620, 22K ರೂ. 12,485, 18K ರೂ. 10,193
ಬೆಂಗಳೂರು: 24K ರೂ. 14,620, 22K ರೂ. 12,485, 18K ರೂ. 10,193
ಹೈದರಾಬಾದ್: 24K ರೂ. 14,620, 22K ರೂ. 12,485, 18K ರೂ. 10,193
ಕೇರಳ: 24K ರೂ. 14,620, 22K ರೂ. 12,485, 18K ರೂ. 10,193
ಪುಣೆ: 24K ರೂ. 14,620, 22K ರೂ. 12,485, 18K ರೂ. 10,193
ವಡೋದರಾ: 24K ರೂ. 13,625, 22K ರೂ. 12,490, 18K ರೂ. 10,198
ಅಹಮದಾಬಾದ್: 24K ರೂ. 13,625, 22K ರೂ. 12,490, 18K ರೂ. 10,198
ಇಂದು ಬೆಳ್ಳಿ ಬೆಲೆ ಎಷ್ಟಿದೆ?
ಇದೀಗ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದ್ದ ಬೆಳ್ಳಿ ದರ ಕೂಡಾ ಇಂದು ಭಾರೀ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ ಇಂದು ₹240 ರೂ. ಆಗಿದ್ದು, ನಿನ್ನೆ ₹258 ರೂ. ಇತ್ತು. ನಿನ್ನೆಗಿಂತ ಇಂದು ₹18 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ 1,920 ರೂ. ಆಗಿದೆ. ನಿನ್ನೆ ₹2,064 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹144 ರೂ. ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,400 ರೂ. ಆಗಿದೆ. 100 ಬೆಳ್ಳಿ ದರ 24,000 ರೂ., 1000 ಗ್ರಾಂ ಬೆಳ್ಳಿ ಬೆಲೆ 2,40,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 30ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟ ಅಂದರೆ $4,549.71 ತಲುಪಿದ ನಂತರ, 0322 GMT ವೇಳೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.7%ಇಳಿಕೆ ಕಂಡು $4,363.79 ಕ್ಕೆ ತಲುಪಿದೆ.
Credit: Goodreturns



Click it and Unblock the Notifications











