Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್‌ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
BBK12: ಗಿಲ್ಲಿಗೆ ಸರ್‌ಪ್ರೈಸ್ ಗಿಫ್ಟ್ ಕೊಟ್ಟ ಕಾವ್ಯಾ ತಂದೆ; ಮನೆಮಂದಿಗೆ ಅಚ್ಚರಿ
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ಕಳೆಕಟ್ಟಿತ್ತು. ರಘು ಅವರ ಮಗ, ಗಿಲ್ಲಿ ಅವರ ತಂದೆ-ತಾಯಿ, ಕಾವ್ಯಾ ಶೈವ ಸಹೋದರ, ತಂದೆ- ತಾಯಿ ಕೂಡ ದೊಡ್ಮನೆ ಒಳಗೆ ಹೋಗಿದ್ದರು. ಈ ವಾರ ಕೂಡ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಗಿಲ್ಲಿ ವೀಕ್ಷಕರ ಮನಗೆದ್ದಿರುವುದು ಗೊತ್ತೇಯಿದೆ.
ಮೊದಲಿನಿಂದ ಗಿಲ್ಲಿ ಹಾಗೂ ಕಾವ್ಯಾ ನಡುವಿನ ಸ್ನೇಹ, ಕಿರಿಕ್ ಎಲ್ಲಾ ಗೊತ್ತೇಯಿದೆ. ಇಬ್ಬರೂ ಮನೆ ಒಳಗೆ ಜಂಟಿಯಾಗಿ ಹೋಗಿದ್ದರು. ಆ ಬಳಿಕ ಕೂಡ ಸ್ನೇಹ ಮುಂದುವರೆಯಿತು. ಸದಾ ಟಾಮ್ ಅಂಡ್ ಜೆರ್ರಿ ತರ ಇಬ್ಬರೂ ಜಗಳ ಆಡುತ್ತಾ, ತಮಾಷೆ ಮಾಡುತ್ತಾ ಮನೆಯಲ್ಲಿ ಕಾಲ ಕಳೆಯುತ್ತಿದ್ಧಾರೆ. ಗಿಲ್ಲಿ ಕಾಮಿಡಿ ಬಗ್ಗೆ ಕಾವ್ಯಾ ಬೇಸರ ವ್ಯಕ್ತಪಡಿಸಿರುವುದು ಇದೆ. ಒಮ್ಮೆ ಆತನನ್ನು ನಾಮಿನೇಟ್ ಮಾಡಿದ್ದು ಕೂಡ ಗೊತ್ತೇಯಿದೆ.

ನಾನು ನಿನ್ನ ಪ್ರೀತಿ ಮಾಡ್ತಿದ್ದೀನಿ ಎಂದು ಕಾವ್ಯಾ ಹಿಂದೆ ಗಿಲ್ಲಿ ಓಡಾಡುವುದು, ಆಕೆ ಇದೆಲ್ಲಾ ನನಗೆ ಇಷ್ಟವಿಲ್ಲ, ಸ್ನೇಹಿತರಾಗಿರೋಣ ಎನ್ನುವುದನ್ನು ನೋಡಿದ್ದೇವೆ. ಗಿಲ್ಲಿ ಕೈಗೆ ಕಾವ್ಯಾ ರಾಕಿ ಕಟ್ಟಿದ್ದ ಘಟನೆ ಕೂಡ ನಡೆದಿತ್ತು. ಆದರೂ ಗಿಲ್ಲಿ ತನ್ನ ವರಸೆ ಬದಲಿಸಲಿಲ್ಲ. ಇದೀಗ ಕಾವ್ಯಾ ಪೋಷಕರು ಬಂದು ಗಿಲ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಕಾವ್ಯಾ ತಂದೆ ಗಿಲ್ಲಿಗೆ ಉಡುಗೊರೆ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಕಾವ್ಯಾ ಅವರ ತಾಯಿ ಸಾವಿತ್ರಿ ಹಾಗೂ ಸಹೋದರ ಕಾರ್ತಿಕ್ ಮನೆಯೊಳಗೆ ಬಂದಿದ್ದರು. ಬಿಗ್‌ಬಾಸ್ ನಿಯಮ ಮೀರಿದ ಕಾರಣಕ್ಕೆ ಹೊರಗೆ ಬರುವಂತಾಗಿತ್ತು. ಹಾಗಾಗಿ ಕಾವ್ಯಾ ಕಣ್ಣೀರು ಹಾಕಿದ್ದರು. ಬಳಿಕ ಕಾವ್ಯಾ ಅವರ ತಂದೆ, ತಾಯಿ ಬಂದಿದ್ದಾರೆ. ಮನೆಯಲ್ಲಿ "ಪದೇ ಪದೆ ರಘು ಕೈಯಲ್ಲಿದ್ದ ಬ್ರೇಸ್‌ಲೆಟ್ ತೆಗೆದುಕೊಳ್ಳುತ್ತಿದ್ರು. ಅದಕ್ಕೆ ನಾವು ಗಿಲ್ಲಿ ಬ್ರೇಸ್‌ಲೆಟ್ ಕೊಟ್ವಿ" ಎಂದು ಕಾವ್ಯಾ ತಂದೆ ಹೇಳಿದ್ದಾರೆ.
"ಗಿಲ್ಲಿ ಯಾವತ್ತೂ ನಿನ್ನ ಬಿಟ್ಟುಕೊಟ್ಟಿಲ್ಲ. ನೀನೂ ಬಿಟ್ಟುಕೊಡಬೇಡ. ಗಿಲ್ಲಿನ ಅಣ್ಣ ಎಂದು ಕರೆಯಬೇಡ. ನೀವು ಫ್ರೆಂಡ್ಸ್" ಎಂದು ಕಾವ್ಯಾಗೆ ತಾಯಿ ಸಾವಿತ್ರಿ ತಿಳಿಸಿದ್ದಾರೆ. "ನಿನ್ನ - ಗಿಲ್ಲಿ ಸ್ನೇಹ ಹೊರಗಡೆ ನೆಕ್ಸ್ಟ್ ಲೆವೆಲ್ ಇದೆ" ಎಂದು ಕಾವ್ಯಾಳ ಸಹೋದರ ಹೇಳಿದ್ದು ಗೊತ್ತೇಯಿದೆ. ಈ ಹಿಂದೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಗಿಲ್ಲಿ ಹಾಗೂ ಕಾವ್ಯಾ ಸ್ಪರ್ಧಿಸಿದ್ದರು. ಆದರೆ ಬಿಗ್‌ಬಾಸ್ ಮನೆಗೆ ಬಂದ ಮೇಲೆ ಇಬ್ಬರ ಸ್ನೇಹ ಹೆಚ್ಚಾಗಿದೆ.
ಬೇರೆ ಸ್ಪರ್ಧಿಗಳ ಮನೆ ಮಂದಿ ಕೂಡ ಗಿಲ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ. ಅದನ್ನು ಬಹಿರಂಗವಾಗಿ ಮನೆಯೊಳಗೆ ಹೋಗಿ ಹೇಳಿದ್ದಾರೆ. ಇಷ್ಟು ದಿನ ಸ್ಪರ್ಧಿಗಳ ಬಗ್ಗೆ ತಮಾಷೆ ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದ ಗಿಲ್ಲಿ ಈ ವಾರ ಅವರ ಮನೆಮಂದಿಯ ಬಗ್ಗೆ ಕೂಡ ತಮಾಷೆ ಮಾಡಿದ್ದಾರೆ. ಸ್ವತಃ ತಮ್ಮ ತಂದೆ-ತಾಯಿಯನ್ನು ಕಿಚಾಯಿಸಿದ್ದಾರೆ. "ಗಿಲ್ಲಿ ಹೊರಗಡೆ ಹೇಗೆ ಇರ್ತಾನೋ, ಬಿಗ್‌ಬಾಸ್ ಮನೆಯೊಳಗೆ ಕೂಡ ಹಂಗೆ ಇದ್ದಾನೆ" ಎಂದು ತಾಯಿ ಸವಿತಾ ಹೇಳಿದ್ದಾರೆ.
ಫ್ಯಾಮಿಲಿ ರೌಂಡ್ ಆಗಿದ್ದರೂ ಈ ವಾರ ಎಲಿಮಿನೇಷನ್ ಶಾಕ್ ಎದುರಾಗಿದೆ. ಅದು ಕೂಡ ಡಬಲ್ ಎಲಿಮಿನೇಷನ್. ಶನಿವಾರ ಸೂರಜ್ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಗೆ ಬಂದಿದ್ದಾರೆ. ಭಾನುವಾರ ಮತ್ತೊಂದು ಎಲಿಮಿನೇಷನ್ ನಡೆಯಲಿದೆ. ಸ್ಪಂದನಾ ಅಥವಾ ಧನುಷ್ ದೊಡ್ಮನೆಯಿಂದ ಹೊರಬರುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಕಿರುತೆರೆ ನಟಿ ಅನುಪಮಾ ಗೌಡ ಭಾನುವಾರದ ಸಂಚಿಕೆಗೆ ಅತಿಥಿಯಾಗಿ ಮನೆ ಒಳಗೆ ಹೋಗಿದ್ದಾರೆ.
'ಮಾರ್ಕ್' ಸಿನಿಮಾ ಪ್ರಚಾರದ ಹಿನ್ನೆಲೆಯಲ್ಲಿ ಸುದೀಪ್ ಈ ವೀಕೆಂಡ್ ಪಂಚಾಯ್ತಿಗೆ ಹಾಜರಾಗಿಲ್ಲ. ಶನಿವಾರ ನಿರ್ದೇಶಕ ಪ್ರೇಮ್ ಹಾಗೂ ನಟಿ ರೀಷ್ಮಾ ನಾಣಯ್ಯ ಅತಿಥಿಗಳಾಗಿ ಹೋಗಿದ್ದರು. ಇನ್ನು ಗಿಲ್ಲಿ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
Credit: Filmibeat



Click it and Unblock the Notifications
