Price Cut: LPG ಗ್ಯಾಸ್‌ ಬಳಕೆದಾರರಿಗೆ ಬಂಪರ್‌ ಸುದ್ದಿ! ಕೊನೆಗೂ ಭಾರೀ ಇಳಿಕೆಯಾಯ್ತು ಬೆಲೆ

By Prajwal B

ಮನೆಯ ಅಗತ್ಯ ಸೌಲಭ್ಯಗಳಲ್ಲಿ ಅಡುಗೆ ಗ್ಯಾಸ್‌ ಕೂಡಾ ಒಂದು. ಆದ್ರೆ ಕೆಲ ತಿಂಗಳಿಂದ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇದೆ. ಆದ್ರೆ ಇದೀಗ ಕೊನೆಗೂ ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಪ್ರತೀ ಬಾರಿ ಹೊಸ ತಿಂಗಳ ಆರಂಭದಲ್ಲಿ ಗ್ಯಾಸ್‌ ಬೆಲೆಯಲ್ಲಿ ಪರಿಷ್ಕರಣೆಯಾಗುತ್ತದೆ. ಅದೇ ರೀತಿ ಇಂದು (ನವೆಂಬರ್‌ 1) ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಹೌದು, ವಾಣಿಜ್ಯ ಬಳಕೆಯ (Commercial) 19 ಕೆಜಿ ಎಲ್‌ಪಿಜಿ ಸಿಲಿಂಡರ್‌ (LPG Cylinder) ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಈ ಮೂಲಕ ಹೋಟೆಲ್‌ ಮಾಲಕರು, ತಿಂಡಿ ವ್ಯಾಪಾರಿಗಳು, ಬೇಕರಿ ಮಾಲೀಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

Gas Price Cut

ನವೆಂಬರ್ 1 ಆರಂಭವಾಗುತ್ತಿದ್ದಂತೆ ಗುಡ್‌ ನ್ಯೂಸ್‌ ಸಿಕ್ಕಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಪ್ರತಿ ಸಿಲಿಂಡರ್‌ನಲ್ಲಿ ₹5 ರೂ. ಕಡಿಮೆ ಆಗಿದೆ. ಹಾಗಿದ್ರೆ ಯಾವ ಯಾವ ನಗರದಲ್ಲಿ ಎಷ್ಟಿದೆ ಬೆಲೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.

19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ:

ದೆಹಲಿ: ಇನ್ನು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ₹1,590.50 ಆಗಿದೆ. ಇದಕ್ಕೂ ಮುನ್ನ, ಅಕ್ಟೋಬರ್ ತಿಂಗಳಲ್ಲಿ, ಈ ಬೆಲೆ ₹1,595.50 ಇತ್ತು.

ಕೋಲ್ಕತ್ತಾದಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹6.50 ರಷ್ಟು ಕಡಿಮೆಯಾಗಿದ್ದು, ಆ ಮೂಲಕ ಇಂದಿನಿಂದ ₹1,694 ರೂ. ಆಗಿದೆ. ಅಕ್ಟೋಬರ್‌ನಲ್ಲಿ ಇದರ ಬೆಲೆ ₹1,700.50 ರೂ. ಇತ್ತು.

ಮುಂಬೈನಲ್ಲಿ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹5 ರಷ್ಟು ಇಳಿಕೆಯಾಗಿದೆ. ಈ ಮೂಲಕ ಒಟ್ಟಿ ಬೆಲೆ ₹1,542 ರೂ. ಆಗಿದೆ. ಹಿಂದಿನ ತಿಂಗಳು ಇದು ₹1,547 ರೂ. ಇತ್ತು.

ಚೆನ್ನೈನಲ್ಲೂ ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಕಮ್ಮಿಯಾಗಿದ್ದು, ನವೆಂಬರ್ ತಿಂಗಳಿಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹1,750 ರೂ. ಆಗಿದೆ. ಅಕ್ಟೋಬರ್‌ನಲ್ಲಿ ₹1,754.50 ರೂ ಇದ್ದ ಬೆಲೆಗೆ ಹೋಲಿಸಿದರೆ ಇದು ₹4.50 ರೂ. ರಷ್ಟು ಇಳಿಕೆಯಾಗಿದೆ.

ಅಕ್ಟೋಬರ್‌ನಲ್ಲಿ ಏರಿಕೆಯಾಗಿದ್ದ ಗ್ಯಾಸ್‌ ಬೆಲೆ:
ಅಕ್ಟೋಬರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಬಳಿಕ ಈ ಬದಲಾವಣೆಯಾಗಿದೆ. ಅಂದರೆ ಅಕ್ಟೋಬರ್‌ನಲ್ಲಿ ದೆಹಲಿ ಮತ್ತು ಮುಂಬೈನಲ್ಲಿ 19 ಕೆಜಿ ಸಿಲಿಂಡರ್ ಬೆಲೆ ₹15.50 ರೂ.ನಷ್ಟು ಹೆಚ್ಚಾಗಿತ್ತು. ಅದೇ ರೀತಿ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ತಲಾ ₹16.50 ರಷ್ಟು ಏರಿಕೆಯಾಗಿತ್ತು. ಆದ್ರೆ ಏರಿಕೆ ಪ್ರಮಾಣ ನೋಡಿದ್ರೆ, ಇಳಿಕೆ ಪ್ರಮಾಣದಲ್ಲಿ ತುಂಬಾನೇ ಕಡಿಮೆಯಾಗಿದೆ.

14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ:
ಇನ್ನು ಜನಸಾಮಾನ್ಯರು ಮನೆಯಲ್ಲಿ ಬಳಸುವ ಗ್ಯಾಸ್‌ ಸಿಲಿಂಡರ್‌ 14.2 ಕೆಜಿ ಆಗಿರುತ್ತದೆ. ಆದರೆ ಈ ಗಾತ್ರದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಏಪ್ರಿಲ್ 2025 ರಿಂದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದೀಗ ನವೆಂಬರ್‌ನಲ್ಲಿಯೂ ಇದೇ ಬೆಳವಣಿಗೆಯಾಗಿದೆ. ಆ ಪ್ರಕಾರ, ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಬೆಲೆ 853 ರೂ., ಕೋಲ್ಕತ್ತಾದಲ್ಲಿ ₹879 ರೂ., ಮುಂಬೈನಲ್ಲಿ ₹852.50 ರೂ. ಮತ್ತು ಚೆನ್ನೈನಲ್ಲಿ ₹868.50 ರೂ. ಆಗಿದೆ.

ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಎಲ್‌ಪಿಜಿ ಗ್ಯಾಸ್‌ ಪಡೆಯಲು ಸರಿಯಾದ ಮಾಹಿತಿ ಪಡೆಯುವುದು ಬಹಳ ಮುಖ್ಯ. ಆದ್ದರಿಂದ ಇಂಡೇನ್ ಎಲ್‌ಪಿಜಿ ಸಾಮಾನ್ಯವಾಗಿ 14.2 ಕೆಜಿ ಸಿಲಿಂಡರ್‌ಗಳಲ್ಲಿ ದೇಶೀಯ ಬಳಕೆಗೆ ಖರೀದಿಗೆ ಲಭ್ಯವಿದೆ. ಅಲ್ಲದೇ ಕೆಲವು ನಗರಗಳಲ್ಲಿ 5 ಕೆಜಿ ಸಿಲಿಂಡರ್‌ ಖರೀದಿಗೆ ಲಭ್ಯವಿದೆ. ಅದಕ್ಕಾಗಿ ನೀವು ದೇಶೀಯ ಗ್ಯಾಸ್‌ ವಿತರಕರನ್ನು ಸಂಪರ್ಕಿಸುವುದು ಉತ್ತಮ.

Credit: Goodreturns

X
Desktop Bottom Promotion