Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
Bihar Election Results 2025: ಮತ ಎಣಿಕೆಯಲ್ಲಿ ಈಗಲೂ NDA ಭಾರೀ ಮುನ್ನಡೆ, MGB ಹಿನ್ನಡೆ..updates
ನವದೆಹಲಿ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆ 2025 ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣೆ ಸಿಬ್ಬಂದಿ ಮತ ಎಣಿಕೆ ಮುಂದುವರಿಸಿದ್ದಾರೆ. ಬೆಳಗ್ಗೆ 10.30ರ ಹೊತ್ತಿಗೆ NDA ಪಕ್ಷವೇ ಮುನ್ನಡೆ ಸಾಧಿಸಿಕೊಂಡು ಬರುತ್ತಿದೆ. ಹಿನ್ನಡೆ ಅನುಭವಿಸುತ್ತಿರುವ ಆರ್‌ಜೆಡಿ ಕಳೆದ ಬಾರಿಗಿಂತ ಈ ಬಾರಿ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ. ಎರಡು ಕಡೆಯ ಕಾರ್ಯಕರ್ತರು, ನಾಯಕರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ವಿಕ್ಟರಿ ವಿಜೃಂಭಿಸಲು ತಯಾರಿ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಯಿತು. ಅರಂಭದಿಂದಲೂ ಒಟ್ಟು 243 ಸೀಟುಗಳ ಪೈಕಿ ಮುನ್ನಡೆ ಕಾಯ್ದುಕೊಂಡಿದ್ದ ಎನ್‌ಡಿಎ 10 ಗಂಟೆ ಹೊತ್ತಿಗೆ ಬರೋಬ್ಬರಿ 168 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಜೆಡಿಯು ಸಹ 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮತ ಎಣಿಕೆ ಸುಸೂತ್ರವಾಗಿ ಮುಂದುವರಿದಿದೆ. ಹಿಂದೆ ಇದ್ದರೂ ಸಹಿತ ಈ ಸಲ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಆರ್‌ಜೆಡಿ ತೀವ್ರ ಪೈಪೋಟಿ ಒಡ್ಡಿದೆ.

ಮೊದಲು ಬೆಳಗ್ಗೆ 9 ಗಂಟೆಯವರೆಗಿನ ಮತ ಎಣಿಕೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 130 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಮಹಾಘಟಬಂಧನ್ 111 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ನಂತರ ಬದಲಾವಣೆ ಆಯಿತು.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇತ್ತ ಎನ್‌ಡಿಎ ನೇತೃತ್ವದಲ್ಲಿ ಜೆಡಿಯು ನಾಯಕ ಸಿಎಂ ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಹತ್ತನೇ ಬಾರಿ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ರಾಜ್ಯದಲ್ಲಿ ಬ್ಯಾನರ್ ಹಾಕಿಸಿದ್ದಾರೆ. ಲಾಡು ಸಿಹಿ ತನಿಸುಗಳನ್ನು ಹಂಚಿ ಕಾರ್ಯಕರ್ತರು, ಬೆಂಬಲಿಗರು ಕುಣಿಯುತ್ತಿದ್ದಾರೆ.
ಪ್ರಧಾನಿ ಮೋದಿ ಚುನಾವಣೆ ನಿಯಂತ್ರಿಸುತ್ತಾರೆ: "ರಾಗಾ' ಸೇನಾಧ್ಯಕ್ಷನ ಗಂಭೀರ ಆರೋಪ
ಇಂದು ಸಂಜೆ 05ಗಂಟೆವರೆಗ ಎತ ಎಣಿಕೆ ನೆಡೆಯಲಿದೆ. ಒಟ್ಟು 4,372 ಎಣಿಕೆ ಕೋಷ್ಟಕಗಳು ಮತ್ತು 18,000 ಕ್ಕೂ ಹೆಚ್ಚು ಎಣಿಕೆ ಏಜೆಂಟ್‌ಗಳು ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈಗಾಗಲೇ ಬಂದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಗೆ ಬಿಹಾರದ ಜನರು ಮತ್ತೆ ಅಧಿಕಾರ ನೀಡಲಿದ್ದಾರೆ. ಮಹಾಘಟಬಂಧನ್ ಮೈತ್ರಿಕೂಟವನ್ನು ಅಧಿಕಾರದಿಂದ ದೂರ ಇಡಲಿದ್ದಾರೆ. ಮತ್ತೊಮ್ಮ ಮೋದಿ ಸರ್ಕಾರ ತರಲು ಮನಸ್ಸು ಮಾಡಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿತ್ತು.
ಒಟ್ಟು 243 ಕ್ಷೇತ್ರಗಳಲ್ಲಿ 122 ಮ್ಯಾಜಿಕ್ ನಂಬರ್ ಆಗಿದೆ. ನವೆಂಬರ್ 06ರಂದು ಮೊದಲ ಹಂತದಲ್ಲಿ ಮತ್ತು ನವೆಂಬರ್ 11ರಂದು ಎರಡನೇ ಹಂತದಲ್ಲಿ ಮತದಾನ ಸುಸೂತ್ರವಾಗಿ ನಡೆದಿತ್ತು. ಸದ್ಯ ಮತ ಎಣಿಕೆ ಎಲ್ಲೆಡೆ ಸರಾಗವಾಗಿ ನಡೆದಿದೆ ಎಂದು ಚುನಾವಣೆ ಆಯೋಗ ಮಾಹಿತಿ ನೀಡಿದೆ.
Credit: Oneindia



Click it and Unblock the Notifications
