Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
Atal Pension Yojana: ದಿನಕ್ಕೆ 7 ರೂ. ಉಳಿಸಿ, ತಿಂಗಳಿಗೆ 5 ಸಾವಿರ ಆದಾಯ ಪಡೆಯಿರಿ!
ಹೆಚ್ಚಿನವರು ತಾವು ಉದ್ಯೋಗ (Job) ಗಿಟ್ಟಿಸಿಕೊಂಡ ತಕ್ಷಣವೇ ಉಳಿತಾಯ ಮಾಡಲು, ಎಲ್ಲಾದರೂ ಹೂಡಿಕೆ ಮಾಡಲು ಶುರು ಮಾಡುತ್ತಾರೆ. ಆದ್ರ ಇನ್ನೂ ಕೆಲವರು ಕೆಲಸಕ್ಕೆ ಸೇರಿ ನಿವೃತ್ತಿ ಹೊಂದಿದರೂ ಸೇವಿಂಗ್ಸ್ ಮಾಡ್ಬೇಕು, ಹೂಡಿಕೆ ಮಾಡ್ಬೇಕು ಅನ್ನೋ ಪ್ಲಾನ್‌ನಲ್ಲೇ ಇರುವುದಿಲ್ಲ. ಆದರೆ ನಿವೃತ್ತಿ ನಂತರವೂ ಉತ್ತಮ ಆದಾಯ ಸಂಪಾದಿಸಬೇಕು (Income) ಎಂಬ ಕನಸು ಇಟ್ಟುಕೊಂಡವರು ಈಗಲೇ ಹೂಡಿಕೆ (Investment) ಮಾಡಲು ಪ್ಲಾನ್ ಮಾಡಬೇಕು ಅನ್ನುತ್ತಾರೆ ಹಣಕಾಸು ತಜ್ಞರು.

ಹಾಗಿದ್ರೆ ನಿವೃತ್ತಿ ನಂತರವೂ ನಿಯಮಿತ ಆದಾಯ ಪಡೆಯಲು ಬಯಸುವವರಿಗೆ ಉತ್ತಮ ಆದಾಯ ನೀಡುವ ಪಿಂಚಣಿ ಯೋಜನೆಯೊಂದಿದೆ. ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಹಾಗಿದ್ರೆ ಆ ಯೋಜನೆ ಯಾವುದು? ಎಷ್ಟು ಹೂಡಿಕೆ ಮಾಡಿದ್ರೆ, ಎಷ್ಟು ಲಾಭ ಪಡೆಯಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಈ ಯೋಜನೆ ಬೆಸ್ಟ್:
ನಿವೃತ್ತಿ ನಂತರವೂ ಉತ್ತಮ ಆದಾಯ ಪಡೆಯಬೇಕೆಂದುಕೊಂಡವರಿಗೆ ಅಟಲ್ ಪಿಂಚಣಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ ವಿಶೇಷವಾಗಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು (ಸಣ್ಣ ಪ್ರಮಾಣದ ಉದ್ಯಮಗಳು, ಕೃಷಿ ಮತ್ತು ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು) ಮತ್ತು ಭವಿಷ್ಯದಲ್ಲಿ ಸ್ಥಿರ ಆದಾಯ ಪಡೆಯಲು ಬಯಸುವವರಿಗೆ ಅನುಕೂಲವಾಗಲಿದೆ.
ಎಷ್ಟು ಹೂಡಿಕೆ ಮಾಡಬೇಕು?
ಅಂದರೆ ನೀವು ಈ ಯೋಜನೆಯಲ್ಲಿ ಕೇವಲ ದಿನಕ್ಕೆ 7 ರೂ. ಉಳಿಸಿ, ತಿಂಗಳಿಗೆ 210 ರೂ. ಹೂಡಿಕೆ ಮಾಡಿ, ನಂತರ ಪ್ರತೀ ತಿಂಗಳು 5000 ರೂ. ಹಣವನ್ನು ಪಿಂಚಣಿಯಾಗಿ ಪಡೆಯಬಹುದು. ಕಡಿಮೆ ಹಣದೊಂದಿಗೆ ಹೂಡಿಕೆ ಮಾಡಲು ಅವಕಾಶ ನೀಡಿರುವುದು ಈ ಯೋಜನೆಯ ಮತ್ತೊಂದು ವಿಶೇಷತೆಯಾಗಿದೆ.
ಉದಾಹರಣೆಗೆ, ಯಾರಾದರು ಈ ಯೋಜನೆಯಡಿ 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರುವವರು ತಿಂಗಳಿಗೆ ಕೇವಲ 210 ರೂಪಾಯಿಗಳನ್ನು ಅಂದರೆ ದಿನಕ್ಕೆ ಸುಮಾರು 7 ರೂಪಾಯಿಯಂತೆ ಉಳಿಸಿ ಹೂಡಿಕೆ ಮಾಡಿ. ಹೀಗೆ ಹೂಡಿಕೆ ಮಾಡಿದವರು 60 ವರ್ಷದ ನಂತರ, ಪ್ರತಿ ತಿಂಗಳು 5,000 ರೂಪಾಯಿ ಪಿಂಚಣಿಯಾಗಿ ಹಣ ಸಿಗಲಿದೆ. ಆದರೆ, 32 ವರ್ಷ ವಯಸ್ಸಿನಲ್ಲಿ ಸೇರುವವರು ತಿಂಗಳಿಗೆ 689 ರೂಪಾಯಿಯಂತೆ ಹೂಡಿಕೆ ಮಾಡಬೇಕು.
2015-16 ರಲ್ಲಿ ಪ್ರಾರಂಭವಾದ ಈ ಅಟಲ್ ಪಿಂಚಣಿ ಯೋಜನೆ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಣೆ ಮಾಡುತ್ತದೆ. ಅಸಂಘಟಿತ ವಲಯದ ಕಾರ್ಮಿಕರು, ಸಣ್ಣ ಉದ್ಯಮಿಗಳು ಮತ್ತು ಸಂಬಳ ಪಡೆಯುವವರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಸರ್ಕಾರಿ ಸ್ವಾಮ್ಯದಲ್ಲಿರುವ ಈ ಯೋಜನೆಯು 60 ವರ್ಷಗಳ ನಂತರ ಪ್ರತಿ ತಿಂಗಳು 1,000 ರಿಂದ 5,000 ರೂಪಾಯಿಗಳವರೆಗೆ ಪಿಂಚಣಿ ಹಣವನ್ನು ನೀಡುತ್ತದೆ.ಸರ್ಕಾರಿ ಸ್ವಾಮ್ಯದಲ್ಲಿರುವ ಈ ಯೋಜನೆಯು 60 ವರ್ಷಗಳ ನಂತರ ಪ್ರತಿ ತಿಂಗಳು 1,000 ರಿಂದ 5,000 ರೂಪಾಯಿಗಳವರೆಗೆ ಪಿಂಚಣಿ ಹಣವನ್ನು ನೀಡುತ್ತದೆ. ಅಲ್ಲದೆ, ಸರ್ಕಾರವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ವಾರ್ಷಿಕವಾಗಿ ಗರಿಷ್ಠ 1,000 ರೂಪಾಯಿ ಅಥವಾ ನಿಮ್ಮ ಒಟ್ಟು ಠೇವಣಿಯ 50% ರಷ್ಟು ಅಂದರೆ ಯಾವುದು ಕಡಿಮೆ ಬರುತ್ತದೆಯೋ ಅಷ್ಟು ಮೊತ್ತವನ್ನು ಕೊಡುಗೆಯಾಗಿ ನೀಡುತ್ತದೆ.
ಸರ್ಕಾರದಿಂದ ನೀಡಲಾಗುವ ಈ ಕೊಡುಗೆಯ ಪ್ರಯೋಜನವು ತೆರಿಗೆ ಪಾವತಿಸದ ಮತ್ತು ಯಾವುದೇ ಇತರ ಸಾಮಾಜಿಕ ಭದ್ರತಾ ಸ್ಕೀಮ್‌ಗಳಲ್ಲಿ ನೋಂದಾಯಿಸದವರಿಗೆ ಮಾತ್ರ ನೀಡಲಾಗುತ್ತದೆ. ಈ ಯೋಜನೆಗೆ ಸೇರಲು 18 ರಿಂದ 40 ವರ್ಷ ವಯಸ್ಸಿನವರು ಅರ್ಹರಾಗಿರುತ್ತಾರೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
Credit: Goodreturns



Click it and Unblock the Notifications