Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ತಿರುಪತಿ ಪ್ರಸಾದದ ಬಗ್ಗೆ ತಮಾಷೆ ಮಾಡಿ ವಿವಾದಕ್ಕೆ ಸಿಲುಕಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ
ಸೋಶಿಯಲ್ ಮೀಡಿಯಾದಲ್ಲಿ ಕೆಲವರ ಹುಚ್ಚಾಟ ಮಿತಿ ಮೀರುತ್ತದೆ. ಸೆಲೆಬ್ರೆಟಿಗಳ ಪ್ರತಿ ನಡೆ, ಮಾತು, ವರ್ತನೆಯನ್ನು ಜನ ಗಮನಿಸುತ್ತಿರುತ್ತಾರೆ. ಆದರೆ ರೀಲ್ಸ್, ಯೂಟ್ಯೂಬ್ ವೀಡಿಯೋ ಮಾಡುವ ಭರದಲ್ಲಿ ಏನೋ ಮಾತನಾಡಿ ವಿವಾದಕ್ಕೆ ಸಿಲುಕುತ್ತಾರೆ. ಇದೀಗ ತಿರುಪತಿ ಲಡ್ಡು ಪ್ರಸಾದದ ಬಗ್ಗೆ ತಮಾಷೆ ಮಾಡಿ ನಿರೂಪಕಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ವಿವಾದಕ್ಕೆ ಸಿಲುಕಿದ್ದಾರೆ.
ಇತ್ತೀಚೆಗೆ ಪತಿಯ ಜೊತೆ ಬಿಗ್‌ಬಾಸ್ ತೆಲುಗು ಮಾಜಿ ಸ್ಪರ್ಧಿ, ನಿರೂಪಕಿ ಶಿವಜ್ಯೋತಿ ತಿರುಪತಿ ತಿರುಮಲ ಬೆಟ್ಟಕ್ಕೆ ಭೇಟಿ ನೀಡಿದ್ದರು. ಅಲ್ಲೇ ಒಂದಷ್ಟು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ತಿರುಪತಿಯಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. ಇನ್ನು ದರ್ಶನಕ್ಕೆ ಕ್ಯೂ ದೊಡ್ಡದಾಗಿರುತ್ತದೆ. ಕ್ಯೂನಲ್ಲಿ ಗಂಟೆಗಳ ಕಾಲ ನಿಂತು ದೇವರ ದರ್ಶನ ಮಾಡಿ ಬರುವಂತಾಗಿದೆ.

ಹೀಗೆ ಗಂಟೆಗಳ ಕಾಲ ಊಟ ನೀರು ಬಿಟ್ಟು ಭಕ್ತರು ಕ್ಯೂನಲ್ಲಿ ನಿಲ್ಲಬೇಕು. ಹಾಗಾಗಿ ಭಕ್ತರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿರುತ್ತಾರೆ. ಜನ ಇದ್ದಲ್ಲಿಗೆ ಪ್ರಸಾದದ ರೂಪದಲ್ಲಿ ಬೇಳೆ ಅನ್ನ, ಮೊಸರನ್ನ ಕೊಡುತ್ತಾರೆ. ಇದೇ ಪ್ರಸಾದದ ಬಗ್ಗೆ ನಿರೂಪಕಿ ಶಿವಜ್ಯೋತಿ ಹಾಗೂ ಆಕೆಯ ಪತಿ ಮತ್ತು ಸಹೋದರ ತಮಾಷೆ ಮಾಡಿ ವೀಡಿಯೋ ಮಾಡಿದ್ದಾರೆ. ಇದು ವೈರಲ್ ಆಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇವರ ಪ್ರಸಾದದ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಟ್ರೋಲ್ ಮಾಡುತ್ತಿದ್ದಾರೆ.
ಕ್ಯೂನಲ್ಲಿ ನಿಂತಿದ್ದ ಮೂವರು ಪ್ರಸಾದ ತೆಗೆದುಕೊಂಡು ತಮಾಷೆ ಮಾಡಿ ವೀಡಿಯೋ ಮಾಡಿದ್ದಾರೆ. "ಜೀವನದಲ್ಲಿ ಯಾವತ್ತು ಭಿಕ್ಷೆ ಬೇಡಿಲ್ಲ, ಇವತ್ತು ಬೇಡಿದ್ದು. ಬಹಳ ಕಾಸ್ಟ್ಲಿ ಭಿಕ್ಷುಕರು ನಾವು. ನಾವೇ ಕುಬೇರರು ಎಂದಿದ್ದಾರೆ. ಬಳಿಕ ಪತಿ ಗಂಗೂಲಿ ಅವರ ಬಳಿ ಹೋಗಿ ತಿರುಪತಿಯ ಬಹಳ ಶ್ರೀಮಂತ ಭಿಕ್ಷುಕರು ನಾವು" ಎಂದು ಹೇಳಿ ಶಿವಜ್ಯೋತಿ ವ್ಯಂಗ್ಯವಾಗಿ ನಕ್ಕಿದ್ದಾರೆ.
ನಿಮಗೆ ಪ್ರಸಾದ ಬೇಡ ಅಂದ್ರೆ ಉಪವಾಸ ಇರಿ, ಅದು ಬಿಟ್ಟು ಲಕ್ಷಾಂತರ ಜನ ಪ್ರಸಾದ ಎಂದು ಸೇವಿಸುವುದನ್ನು ತಮಾಷೆ ಮಾಡಬೇಡಿ, ವ್ಯಂಗ್ಯ ಮಾಡಬೇಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿವಜ್ಯೋತಿ ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಂದಹಾಗೆ ನಿರೂಪಕಿ ಶಿವಜ್ಯೋತಿ ಲವ್ ಮ್ಯಾರೇಜ್ ಆಗಿದ್ದರು. ಮಕ್ಕಳು ಆಗುತ್ತಿಲ್ಲ ಎಂದು ಬಹಳ ಟ್ರೋಲ್ ಎದುರಿಸಿದ್ದರು.
ತಿರುಪತಿ ತಿಮ್ಮಪ್ಪನನ್ನು ಪೂಜಿಸಿದರೆ ಸಂತಾನಪ್ರಾಪ್ತಿಯಾಗುತ್ತದೆ ಎಂದು ಕೆಲವರು ಸಲಹೆ ನೀಡಿದ್ದಕ್ಕೆ ಸಪ್ತ ಶನಿವಾರ ವ್ರತ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಶೇರ್ ಮಾಡುತ್ತಿದ್ದರು. ದೇವರ ಮೇಲೆ ಅಪಾರ ನಂಬಿಕೆ ಇದೆ. ಖಂಡಿತ ದೇವರು ನನ್ನ ಇಷ್ಟಾರ್ಥ ಪೂರೈಸುತ್ತಾನೆ ಎಂದು ಶಿವಜ್ಯೋತಿ ಹೇಳುತ್ತಿದ್ದರು. ತಿಂಗಳ ಹಿಂದೆ ತಾವು ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಮದುವೆಯಾಗಿ 10 ವರ್ಷಗಳ ಬಳಿಕ ಮನೆಗೆ ಹೊಸ ಅತಿಥಿ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ. ಇತ್ತೀಚೆಗೆ ಸೀಮಂತ ಕೂಡ ನಡೆದಿತ್ತು. ಆದರೆ ಆಕೆ ಈಗ ತಿಮ್ಮಪ್ಪನ ಪ್ರಸಾದದ ಬಗ್ಗೆ ತಮಾಷೆ ಮಾಡಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.
ದೇವರ ಮೇಲೆ ಇಷ್ಟೆಲ್ಲಾ ಭಕ್ತಿ ಇರುವ ಶಿವಜ್ಯೋತಿ ರೀಲ್ಸ್, ವೀಡಿಯೋ ಹುಚ್ಚಾಟಕ್ಕೆ ಹೀಗೆ ಮಾಡಿದ್ದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಗೊತ್ತಿಲ್ಲದೇ ಮಾತನಾಡಿಬಿಟ್ಟಿದ್ದಾರೆ, ಈಗ ಅರ್ಥ ಆಗಿರುತ್ತದೆ ಇನ್ನು ಮುಂದೆ ಇಂತಹ ತಪ್ಪು ಮಾಡಲ್ಲ ಬಿಡಿ ಎಂದು ಕೆಲವರು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಅಂದಹಾಗೆ ನಿರೂಪಕಿ ಶಿವಜ್ಯೋತಿ ಬಿಗ್‌ಬಾಸ್ ತೆಲುಗು ಸೀಸನ್-3ರ ಸ್ಪರ್ಧಿ ಆಗಿದ್ದರು. ಸಾವಿತ್ರಿ ಎನ್ನುವ ಮತ್ತೊಂದು ಹೆಸರು ಆಕೆಗಿದೆ.
Credit: Filmibeat



Click it and Unblock the Notifications