Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
45 Box Office Day 7 : ಬಾಕ್ಸಾಫೀಸ್‌ನಲ್ಲಿ ಹೇಗಿದೆ ಶಿವತಾಂಡವ ? ಉಪ್ಪಿ, ರಾಜ್ ಜುಗಲಬಂದಿ- 7ನೇ ದಿನ '45' ಗಳಿಸಿದ್ದೆಷ್ಟು ?
ಸಾಮಾನ್ಯಕ್ಕೆ ಇಬ್ಬರು ಸ್ಟಾರ್ ಗಳು ಒಂದೇ ಚಿತ್ರಕ್ಕೆ ಬಣ್ಣ ಹಚ್ಚಿದರೆ, ನಿರ್ದೇಶಕರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತೆ. ಸ್ವಾರದ್ವಯರ ವರ್ಚಸ್ಸಿಗೆ ಅನುಗುಣವಾಗಿ, ಅವರ ಅಭಿಮಾನಿಗಳನ್ನ ಗಮನದಲ್ಲಿಟ್ಟುಕೊಂಡು ಕಥೆಯನ್ನ ಹೆಣೆಯಬೇಕಾಗುತ್ತೆ. ಇಬ್ಬರ ಪಾತ್ರಕ್ಕೂ ಸಮಾನವಾದ ಪ್ರಾಮುಖ್ಯತೆಯನ್ನೂ ನೀಡಬೇಕಾಗುತ್ತೆ. ಚೂರು ಹೆಚ್ಚು ಕಡಿಮೆ ಆದರೂ.. ಇಬ್ಬರು ಸ್ಟಾರ್ ಗಳ ನಡುವಿನ ಈಗೋ ಕ್ಲ್ಯಾಶು ಆ ಸಿನಿಮಾವನ್ನೇ ಬಲಿ ಪಡೆಯುವ ಸಾಧ್ಯತೆ ಇರುತ್ತೆ.
ಇಂತಹದ್ದರಲ್ಲಿ ಮೂರು ಸ್ಟಾರ್‌ಗಳನ್ನು ಒಂದು ಕಡೆ ಸೇರಿಸಿ ಸಿನಿಮಾ ಮಾಡುವುದು ಸುಲಭ ಅಲ್ಲ. ಆದರೂ ಈ ಅಸಾಧ್ಯ ಕೆಲಸವನ್ನು ಸಾಧ್ಯವನ್ನಾಗಿಸಿದ ಅರ್ಜುನ್ ಜನ್ಯ ತಮ್ಮ ಮೊದಲ ಪ್ರಯತ್ನದಲ್ಲಿಯೇ ಮಾಡರ್ನ್ ಪುರಾಣ ಹೇಳುವ ಪ್ರಯತ್ನ ಮಾಡಿದ್ದಾರೆ. ಜೀವನದ ಪಾಠ ಮಾಡಿ ಗೆಲುವಿನತ್ತ ಮುಖ ಮಾಡಿದ್ದಾರೆ.

ಹೌದು, ಈ ಕಲಿಯುಗದಲ್ಲಿ ಪ್ರೇಕ್ಷಕರಿಗೆ ಗರುಡ ಪುರಾಣ ಇಷ್ಟವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್ ಮೇಲೆ ಹದ್ದಿನ ಕಣ್ಣಿಡುವ ''ಸ್ಯಾಕ್ನಿಲ್'' ಈ ಚಿತ್ರದ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು ಆ ಪ್ರಕಾರ ನಿನ್ನೆ (ಡಿಸೆಂಬರ್ 31) ಈ ಚಿತ್ರ ಅಂದಾಜು ನಲವತ್ತೇರಡು ಲಕ್ಷವನ್ನು ದೋಚಿದೆ. ಈ ಮೂಲಕ ಏಳು ದಿನದಲ್ಲಿ ಹದಿಮೂರು ಕೋಟಿ ಮೂವತ್ತೇರಡು ಲಕ್ಷವನ್ನು ಈ ಚಿತ್ರ ಗಳಿಸಿದೆ.
ಸ್ಯಾಕ್ನಿಲ್ ಪ್ರಕಾರ ''45''ಚಿತ್ರದ ಮೊದಲ 5 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಗುರುವಾರ] - ₹ 5.5 ಕೋಟಿ
ಎರಡನೇ ದಿನ [ಶುಕ್ರವಾರ] - ₹2 ಕೋಟಿ
ಮೂರನೇ ದಿನ [ಶನಿವಾರ] - ₹1.95 ಕೋಟಿ
ನಾಲ್ಕನೇ ದಿನ [ಭಾನುವಾರ]- ₹2 ಕೋಟಿ
ಐದನೇ ದಿನ [ಸೋಮವಾರ]- ₹85 ಲಕ್ಷ
ಆರನೇ ದಿನ [ಮಂಗಳವಾರ]- ₹60 ಲಕ್ಷ
ಏಳನೇ ದಿನ [ಬುಧವಾರ] - ₹42 ಲಕ್ಷ * ಅಂದಾಜು
ಒಟ್ಟು ಗಳಿಕೆ - ₹ 13.32 ಕೋಟಿ
ಅಂದ್ಹಾಗೇ ''45'' ಪ್ಯಾನ್ ಇಂಡಿಯಾ ಸಿನಿಮಾ. ಕಳೆದ ವಾರ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಚಿತ್ರ ಇಂದು (ಜನವರಿ 1 ) ಹೊಸ ವರ್ಷದ ಪ್ರಯುಕ್ತ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಕೂಡ ಬಿಡುಗಡೆಯಾಗಿದೆ. ಈ ಹಿನ್ನೆಲೆ ಇಂದು ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ತಮಿಳು ಮತ್ತು ತೆಲುಗಿನಲ್ಲಿ 45 ಚಿತ್ರಕ್ಕೆ ಉತ್ತಮವಾದ ರೆಸ್ಫಾನ್ಸ್ ಸಿಗುವ ನಿರೀಕ್ಷೆ ಇದೆ.
ಇನ್ನು ಚಿತ್ರ ತೆರೆಗೆ ಬಂದು ಒಂದು ವಾರವಾಗಿದೆ. ಪೈರಸಿ ಕೂಡ ಈ ಚಿತ್ರಕ್ಕೆ ತಾಗಿದೆ. ಆದರೂ ಕೂಡ ಬೆಂಗಳೂರು ಸೇರಿ ಹಲವಡೆ ಈ ಚಿತ್ರ ನೋಡುವ ಉತ್ಸಾಹ ಪ್ರೇಕ್ಷಕರಲ್ಲಿದೆ. ಇದಕ್ಕೆ ಪುರಾವೆ ಎಂಬಂತೆ ಇಂದು (ಜನವರಿ 1 ) ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದರು ಕೂಡ ಬೆಂಗಳೂರಿನ M5 Ecity, ವೆಗಾ ಸಿಟಿ, ಭಾರತೀಯ ಮಾಲ್ ಸೇರಿ ಕೆಲವಡೆ ಕೆಲ ಪ್ರದರ್ಶನದ ಟಿಕೆಟ್‌ಗಳು ವೇಗವಾಗಿ ಬಿಕರಿಯಾಗುತ್ತಿವೆ. ಈ ಎಲ್ಲ ಅಂಶಗಳ ಇಂದಿನ ಗಳಿಕೆಯ ಮೇಲೆ ಪರಿಣಾಮ ಬೀರಿದರು ಬೀರಬಹುದು. ''45'' ಚಿತ್ರದ ಅಂಕಿ ಅಂಶ ನಾಳೆ (ಜನವರಿ 2) ಹೆಚ್ಚಾದರು ಆಗಬಹುದು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.
Credit: Filmibeat



Click it and Unblock the Notifications


