Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜೂನ್ ತಿಂಗಳಿನಲ್ಲಿ 3 ಗ್ರಹಗಳ ಸಂಚಾರ : ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ಪ್ರತಿ ತಿಂಗಳು ಕೂಡ ಗ್ರಹಗಳ ಸಂಚಾರ ನಡೆಯುತ್ತದೆ. ಅನೇಕ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುತ್ತವೆ. ಜೂನ್ ತಿಂಗಳಿನಲ್ಲೂ ಕೂಡ ಮೂರು ಗ್ರಹಗಳ ಸಂಚಾರ ನಡೆಯಲಿದೆ. ಈ ಗ್ರಹಗಳ ಸಂಚಾರದಿಂದ ಅನೇಕ ರಾಶಿಯವರಿಗೆ ಶುಭ ಫಲಗಳನ್ನೂ ನೀಡಿದ್ರು. ಇನ್ನೂ ಕೆಲವು ರಾಶಿಗಳಿಗೆ ಅಶುಭ ಫಲವನ್ನು ನೀಡಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಇದರಿಂದ ಒಳ್ಳೆಯದಾಗಲಿದೆ ಅನ್ನೋದನ್ನು ತಿಳಿಯೋಣ.
ಜೂನ್ ತಿಂಗಳಿನಲ್ಲಿ ಗ್ರಹಗಳ ಸಂಚಾರ :
* ವೃಷಭ ರಾಶಿಯಲ್ಲಿ ಬುಧ ಸಂಚಾರ - ಜೂನ್ 7, ಸಂಜೆ 7.58ಕ್ಕೆ
* ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರ - ಜೂನ್ 15, ಸಂಜೆ 6.29ಕ್ಕೆ
* ಮಿಥುನ ರಾಶಿಯಲ್ಲಿ ಬುಧ ಸಂಚಾರ - ಜೂನ್ 24, ಮಧ್ಯಾಹ್ನ 12.48ಕ್ಕೆ

ಈ ರಾಶಿಯವರಿಗೆ ಶುಭ ಫಲವಿರಲಿದೆ
ಮೇಷ ರಾಶಿ
ಮೇಷ ರಾಶಿಯ ಜೂನ್ ತಿಂಗಳಲ್ಲಿ 4 ಗ್ರಹಗಳ ಸಂಚಾರದ ಲಾಭವನ್ನು ಪಡೆಯಲಿದ್ದಾರೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಉದ್ಯೋಗಸ್ಥರು ಗ್ರಹಗಳ ಸ್ಥಾನ ಬದಲಾವಣೆಯಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ಕುಟುಂಬದಲ್ಲಿ ಸಂತೋಷ ತುಂಬಿರುತ್ತದೆ. ಈ ಅವಧಿಯಲ್ಲಿ ನೀವು ಭೂಮಿ, ಕಟ್ಟಡ ಮತ್ತು ವಾಹನ ಖರೀದಿಸಬಹುದು. ನೀವು ವಿದೇಶಿ ಕಂಪನಿಯೊಂದಿಗೆ ವ್ಯವಹರಿಸುವ ಆಲೋಚನೆಯನ್ನು ಮಾಡುತ್ತಿದ್ದರೆ ಅದು ಯಶಸ್ವಿಯಾಗುವ ಸಾಧ್ಯತೆಯಿದೆ.
ಮಿಥುನ ರಾಶಿ
ಜೂನ್ ತಿಂಗಳಿನಲ್ಲಿ ಈ ಗ್ರಹಗಳ ಸಂಚಾರವು ಮಿಥುನ ರಾಶಿಯವರಿಗೆ ಶುಭ ಪಲವನ್ನು ಹೊತ್ತುತರಲಿದೆ. ನಿಮಗೆ ನಿಮ್ಮ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿ ದೊಡ್ಡ ಲಾಭದ ಸಾಧ್ಯತೆಯಿದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ತಂದೆಯೊಂದಿಗಿನ ಸಂಬಂಧವು ಬಲವಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿದೆ. ನಿಮ್ಮ ಮನಸ್ಸು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುತ್ತದೆ.
ಕನ್ಯಾರಾಶಿ
ಜೂನ್ ನಲ್ಲಿ ಕನ್ಯಾ ರಾಶಿಯವರ ಅದೃಷ್ಟವು ಬೆಳಗಲಿದೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಬಲವಾಗುತ್ತದೆ. ನಿಮ್ಮ ಸ್ಥಗಿತಗೊಂಡ ಕೆಲಸವನ್ನು ಈ ತಿಂಗಳು ಪೂರ್ಣಗೊಳಿಸಬಹುದು. ವ್ಯಾಪಾರಸ್ಥರಿಗೂ ವಿಶೇಷ ಲಾಭ ದೊರೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣ ಬರುವ ಸಾಧ್ಯತೆಗಳಿವೆ. ಅವಿವಾಹಿತರು ವಿವಾಹ ಭಾಗ್ಯವಿದೆ. ಸರಕಾರದ ಯೋಜನೆಗಳ ಲಾಭ ದೊರೆಯಲಿದೆ.
ತುಲಾ ರಾಶಿ
ತುಲಾ ರಾಶಿಯ ಜೂನ್ ತಿಂಗಳಿನಲ್ಲಿ ಗ್ರಹಗಳ ಸಂಚಾರದಿಂದ ಬಹಳಷ್ಟು ಪ್ರಯೋಜನ ಪಡೆಯಲಿದ್ದಾರೆ. ಈ ತಿಂಗಳು ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಕಾಣುವ ಸಾಧ್ಯತೆಗಳಿದೆ. ಕನ್ಯಾ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭ ದೊರೆಯಲಿದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸೌಕರ್ಯಗಳು ಹೆಚ್ಚಾಗುತ್ತವೆ. ವಾಹನ ಮತ್ತು ಆಸ್ತಿ ಖರೀದಿಸಬಹುದು. ಸಂಗಾತಿಯೊಂದಿಗೆ ಉತ್ತಮ ಸಂಬಂಧಗಳು ರೂಪುಗೊಳ್ಳುತ್ತವೆ.



Click it and Unblock the Notifications
