Year Ender 2025: ಈ ವರ್ಷ ನಾವು ಕಳೆದುಕೊಂಡ ಗಣ್ಯರು, ನಟ-ನಟಿಯರು!

2025ನೇ ವರ್ಷವೂ ಮುಗಿಯುವ ಹಂತ ತಲುಪಿದೆ. ಹಾಗೆ 2025ರಲ್ಲಿ ಹಲವು ರೀತಿಯ ಘಟನೆಗಳು ನಡೆದಿರುವುದನ್ನು ನಾವು ನೆನೆಯಬಹುದು ಅದ್ರಲ್ಲು ಹಲವು ಪ್ರಮುಖ ಗಣ್ಯರನ್ನು ನಾವು 2025ರಲ್ಲಿ ಕಳೆದುಕೊಂಡಿದ್ದೇವೆ. ದಶಕಗಳ ಕಾಲ ಅವರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಅವರು ಅಂತಿಮ ದಿನ ಕಳೆದಿದ್ದಾರೆ.

ಅದ್ರಲ್ಲೂ ಕಲಾವಿದರು, ರಾಜಕೀಯ ಗಣ್ಯರು, ಉದ್ಯಮಿಗಳು, ಸಮಾಜಸೇವಕರು ಸೇರಿದಂತೆ ಹಲವರು ಈ ವರ್ಷ ನಮ್ಮನ್ನಗಲಿದ್ದಾರೆ. ಅವರನ್ನು ನೆನೆಯುವುದು ಸಹ ಅವರ ಸೇವೆಗೆ ನಾವು ನೀಡುವ ಗೌರವ ಎನ್ನಬಹುದು. ಹಾಗಾದ್ರೆ 2025ರಲ್ಲಿ ನಾವು ಯಾರನೆಲ್ಲಾ ಕಳೆದುಕೊಂಡೆವು ಎಂಬುದನ್ನು ಒಮ್ಮೆ ಮರು ನೆನಪು ಮಾಡಿಕೊಳ್ಳೋಣ.

ಮನೋಜ್ ಕುಮಾರ್

ಬಾಲಿವುಡ್ ಚಿತ್ರರಂಗದ ದಿಗ್ಗಜ ನಟ ಮನೋಜ್ ಕುಮಾರ್ ಈ ವರ್ಷ ಏಪ್ರಿಲ್ 4ರಂದು ನಿಧನರಾದರು. ಹಿಂದಿ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ದೇಶಭಕ್ತ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು, ಅವರು ಹಲವಾರು ರಾಷ್ಟ್ರೀಯತೆ-ವಿಷಯದ ಚಲನಚಿತ್ರಗಳಲ್ಲಿ ನಿರ್ದೇಶನ ಮತ್ತು ನಟನೆಯ ಮೂಲಕ ಇದನ್ನು ಸಾಧಿಸಿದರು ಮತ್ತು ಅವರನ್ನು "ಭರತ್ ಕುಮಾರ್" ಎಂದು ಕರೆಯಲಾಗಿತ್ತು. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೀಡಲಾಯಿತು.

Actors And Actresses We Lost This Year

ಧರ್ಮೇಂದ್ರ

ಬಾಲಿವುಡ್ ಸೂಪರ್ ಸ್ಟಾರ್ ಧರ್ಮೇಂದ್ರ ಡಿಯೋಲ್ ಸಹ ವಯೋ ಸಹಜ ಅನಾರೋಗ್ಯ ಕಾರಣದಿಂದಾಗಿ ಈ ವರ್ಷ ಮೃತಪಟ್ಟರು. ನವೆಂಬರ್ 24, 2025 ರಂದು ಮುಂಬೈನ ಜುಹು ನಿವಾಸದಲ್ಲಿ 89 ನೇ ವಯಸ್ಸಿನಲ್ಲಿ ಅವರು ಅಸುನೀಗಿದರು. ಹಿರಿಯ ನಟ ಮತ್ತು ನಿರ್ಮಾಪಕ ಧರ್ಮೇಂದ್ರ ಅವರು ಚಲನಚಿತ್ರೋದ್ಯಮ ಮತ್ತು ಅಭಿಮಾನಿಗಳನ್ನು ಹೊಂದಿದ್ದರು.

ಅಸ್ರಾಣಿ

ಹಿರಿಯ ನಟ ಮತ್ತು ಹಾಸ್ಯನಟ ಅಸ್ರಾನಿ ಅವರು ಅಕ್ಟೋಬರ್ 20, 2025 ರಂದು ತಮ್ಮ 84 ನೇ ವಯಸ್ಸಿನಲ್ಲಿ ಮುಂಬೈನ ಜುಹುದಲ್ಲಿರುವ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬಾಲಿವುಡ್‌ನ ದಿಗ್ಗಜರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ತಮ್ಮ ಹಾಸ್ಯ ನಟನೆಯ ಮೂಲಕ ಮನೆಮಾತಾಗಿದ್ದರು.

ರಾಕೇಶ್ ಪೂಜಾರಿ

ಕನ್ನಡ ಸಿನಿಮಾಗಳಲ್ಲಿ ಈಗಷ್ಟೇ ಹೆಜ್ಜೆ ಇಟ್ಟು ನಟನೆ ಮೂಲಕ ಎಲ್ಲರ ಗಮನ ಸೆಳೆದಿದದ್ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಈ ವರ್ಷ ಎಲ್ಲರಿಗೂ ಆಘಾತ ಉಂಟು ಮಾಡಿದ್ರು. ಕಾಂತಾರಾ ಚಾಪ್ಟರ್ 1 ಸಿನಿಮಾದಲ್ಲಿ ನಟಿಸಿದ್ದ ಅವರು ಚಿತ್ರ ತೆರೆ ಮೇಲೆ ಬರುವ ಮುನ್ನವೇ ಅಕಾಲಿಕ ಮರಣಕ್ಕೆ ತುತ್ತಾದರು. ಸ್ನೇಹಿತರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು ಕುಸಿದು ಬಿದ್ದು ಮೃತಪಟ್ಟಿದ್ದರು. ಅವರು ಮೇ 12 2025ರಂದು ನಿಧರಾದರು.

ಸಾಲು ಮರದ ತಿಮ್ಮಕ್ಕ

ವೃಕ್ಷ ಮಾತೆ ಎಂಬ ಬಿರುದು ಪಡೆದ ಸಾಲು ಮರದ ತಿಮ್ಮಕ್ಕ ನವೆಂಬರ್ 14ರಂದು ತಮ್ಮ 114ನೇ ವಯಸ್ಸಿನಲ್ಲಿ ಮೃತಪಟ್ಟರು. ಬಹುಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನರಾದರು.

ನಟ ಉಮೇಶ್

ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯನಟ ಉಮೇಶ್ ಅವರು ಆಸ್ಪತ್ರೆಯಲ್ಲಿ ನಿಧನರಾದರು. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರು.

ನಟ ಸಂತೋಷ್

ಕರಿಯ-2, ಗಣಪ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟ ಸಂತೋಷ್ ಚಾಂಡೀಸ್ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಫಲಿಸದೆ ಆಗಸ್ಟ್ 5ರಂದು ನಿಧನರಾಗಿದ್ದರು.

ರಾಜು ತಾಲೀಕೋಟೆ

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ರಂಗಕರ್ಮಿ ರಾಜು ತಾಳಿಕೋಟೆ ಅಕ್ಟೋಬರ್ 13ರಂದು ನಿಧನರಾದರು. ಅನಾರೋಗ್ಯ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಹರೀಶ್ ರಾಜ್

ಕೆಜಿಎಫ್ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟ ಹರೀಶ್ ರಾಜ್ ಈ ವರ್ಷ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ನಿಧನರಾದರು. ಅವರ ಚಿಕಿತ್ಸೆಗಾಗಿ ಹಲವು ನಟರು ಸಹಾಯ ಮಾಡಿದ್ದರೂ ಸಹ ಅವರನ್ನು ಉಳಿಸಿಕೊಳ್ಳಲು ಆಗಿರಲಿಲ್ಲ.

English summary

Year Ender 2025: Celebrities, Actors And Actresses We Lost This Year!

Many artists, political figures, businessmen, social workers, and others will be among us this year. Remembering them is also a tribute to their service.
Story first published: Thursday, December 18, 2025, 9:59 [IST]
X
Desktop Bottom Promotion