Latest Updates
-
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ -
Holi 2026: ಹೋಳಿಯಂದು ನಿಮ್ಮ ರಾಶಿಗೆ ಪ್ರಕಾರ ಈ ಉಪಾಯ ಮಾಡಿ! ಸಕಲ ಸಮಸ್ಯೆ- ಸಂಕಷ್ಟಗಳಿಂದ ಮುಕ್ತಿ ಸಿಗುತ್ತೆ -
ಈ ಟ್ರಿಕ್ ಬಳಸಿ ಮಾಡಿ ಗರಿಗರಿ ಆಲೂ ಚಿಪ್ಸ್! ಬಿಳಿಯಾಗಿ ಬರಲು.. ವರ್ಷವಿಡೀ ಕೆಡದಂತೆ ಇಡೋದು ಹೇಗೆ? -
ಹೋಳಿ ಸಂಭ್ರಮ.. ಸಂಗಾತಿಯ ಸಹವಾಸ ನೆಮ್ಮದಿ ನೀಡುತ್ತೆ! ಭಾವನೆಗಳ ಜೊತೆ ಆಟ ಬೇಡ -
March 04 Horoscope: ಆರ್ಥಿಕ ಲಾಭದ ಕಾರಣದಿಂದ ನೆಮ್ಮದಿ ಇದೆ! -
ನಿಮ್ಮ ಅತ್ತಿಗೆಗೆ ಈ ಹಾರ್ಟ್ ಟಚಿಂಗ್ ಶಾಯರಿ ಕಳಿಸಿ! ಲವ್ & ಕನೆಕ್ಷನ್ ಡಬಲ್ ಆಗುತ್ತೆ - Happy Holi 2026 -
ಸಿಸ್ಟರ್.. 40ರ ಬಳಿಕ ಪಿಸ್ತಾ ಒಂದು ವರ! ಮೂಳೆ, ಹೃದಯ & ಹಾರ್ಮೋನ್ ಬ್ಯಾಲೆನ್ಸ್.. ಪಿಸ್ತಾನೇ ಏಕೆ ಬೇಕು? -
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ?
ವೈರಲ್: ಶಬರಿಮಲೆಗೆ ತೆರಳುತ್ತಿದ್ದ ಭಕ್ತರ ಬಸ್‌ಗೆ ಅಡ್ಡವಾದ ಕಾಡಾನೆ, ಅದರ ವರ್ತನೆ ನೋಡಿದವರು ಅಯ್ಯಪ್ಪನ ಪವಾಡ ಅಂತಿದ್ದಾರೆ
ಶಬರಿಮಲೆಗೆ ಭಕ್ತರು ಹೋಗುತ್ತಿರುವಾಗ ಬಸ್‌ಗೆ ಅಡ್ಡಹಾಕಿದ ಕಾಡನೆ, ಆದರೆ ಅದು ವರ್ತಿಸಿದ ರೀತಿ ನೋಡಿ ಅಯ್ಯಪ್ಪ ಸ್ವಾಮಿಯ ಪವಾಡ ಅಂತಿದ್ದಾರೆ ನೆಟ್ಟಿಗರು
ಅಯ್ಯಪ್ಪಭಕ್ತರಿಗೆ ತೊಂದರೆ ಕೊಡದ ಹೋದ ಕಾಡನೆಯ ವೀಡಿಯೋ ವೈರಲ್ ಆಗುತ್ತಿದೆ. ಈ ಘಟನೆ ನಡೆದಿದ್ದು ಕೊಡಗಿನಲ್ಲಿ. ಕೊಡಗಿನಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿಯೇ ಇದೆ, ಕಾಡುದಾರಿಯಲ್ಲಿ ಮಾತ್ರವಲ್ಲ, ತೋಟಗಳಲ್ಲಿಯೂ ಎದುರಾಗುವುದು, ಕೆಲವೊಂದು ಕಡೆಗಳಲ್ಲಿ ಮನುಷ್ಯರು ಓಡಾಡುವ ದಾರಿಯಲ್ಲಿ ಸಂಜೆ ಹೊತ್ತಿಗೆ ಕಾಡಾನೆಯ ದರ್ಶನವಾಗುವುದು ಸಹಜ.

ಹಾಗೆಯೇ ಕೊಡಗಿನಲ್ಲಿ ಶಬರಿಮಲೆಗೆ ಹೊರಟಿದ್ದ ಅಯ್ಯಪ್ಪ ಭಕ್ತರಿಗೆ ಕಾಡಾನೆ ಎದುರಾಗಿದೆ, ಆದರೆ ನಂತರ ದೃಶ್ಯ ನೋಡುವಾಗ ತುಂಬಾನೇ ಖುಷಿಯಾಗುತ್ತೆ, ಆ ಗಣಪತಿಯೇ ಬಂದು ಅವರಿಗೆ ಆಶೀರ್ವಾದ ಮಾಡಿತೇ ಎಂದು ಅನಿಸದೆ ಇರಲ್ಲ, ಈ ವೀಡಿಯೋ ನೋಡುವಾಗ ನಮಗೆ ಖುಷಿಯಾಗುತ್ತೆ, ಆದರೆ ಮಿನಿ ಬಸ್‌ನಲ್ಲಿದ್ದ ಆ ಭಕ್ತರಿಗೆ ಖಂಡಿತ ಗಾಬರಿಯಾಗಿರುತ್ತದೆ.
ಆದರೋ ಅವರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರವನ್ನು ಬಿಡದೆ ಪಠಿಸುತ್ತಾರೆ, ಆನೆ ಆ ಮಿನಿ ಬಸ್ ಬಂದು ಅದರ ಮುಂದುಗಡೆ ಹಾಕಿದ್ದ ಹೂವಿನ ಮಾಲೆಯನ್ನು ಕಿತ್ತು ತನ್ನ ತಲೆಯ ಮೇಲೆ ಹಾಕಿ, ತಲೆಯನ್ನು ಖುಷಿಯಿಂದ ಕುಣಿಸಿ ಅಲ್ಲಿಂದ ತೆರಳುತ್ತದೆ, ಈ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ಗಮನ ಸೆಳೆದಿದೆ.
A wild elephant walks upto a bus carrying pilgrims from Somwarpet to Sabarimala near Thithimathi. It removes a flower garland from Lord Ayyappa's photo on the bus's front and places it on its head. Without troubling devotees, the elephant allows the bus to proceed.
— Kodagu Connect (@KodaguConnect) January 12, 2024
VC: WhatsApp pic.twitter.com/xX8hjOPLE7
ಅಯ್ಯಪ್ಪಸ್ವಾಮಿ ಭಕ್ತರು ಸೋಮವಾರಪೇಟೆಯಿಂದ ತಿತಿಮತಿ ದಾರಿಯಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಡಾನೆ ಎದುರು ಬಂದಿದೆ, ಅವರು ಗಾಡಿ ನಿಲ್ಲಿಸಿ ಅಯ್ಯಪ್ಪನ ಮೇಲೆ ಭಾರ ಹಾಕಿ ಅಯ್ಯಪ್ಪ ಸ್ವಾಮಿ ಮಂತ್ರ ಪಠಣೆ ಮಾಡಲಾರಂಭಿಸುತ್ತಾರೆ, ಅಯ್ಯಪ್ಪಸ್ವಾಮಿಯ ಪವಾಡವೆಂಬಂತೆ ಆನೆ ಏನೂ ತೊಂದರೆ ಮಾಡದೆ ಹೋಗಿದೆ.
ಕಾಡಾನೆ ಹೇಗೆ ವರ್ತಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ
ಕಾಡಾನೆ ಹೇಗೆ ವರ್ತಿಸುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ, ಅದಕ್ಕೆ ಬಸ್ ಅನ್ನು ತಳ್ಳಿ ಉರುಳಿಸುವುದು ದೊಡ್ಡ ವಿಷಯವೇನೂ ಅಲ್ಲ, ಅಲ್ಲದೆ ಬಸ್ ಒಳಗಡೆಯಿಂದ ಮಂತ್ರಗಳ ಘೋಷಣೆ ಕೇಳುತ್ತಿತ್ತು, ಅದು ಗಾಬರಿಯಾಗುವ ಬದಲು ಖುಷಿಯಿಂದ ತಲೆ ಅಲ್ಲಾಡಿಸಿ ಅಲ್ಲಿಂದ ಮರಳಿದೆ.
ಈ ವೀಡಿಯೋವನ್ನು X ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಅಯ್ಯಪ್ಪ ಭಕ್ತರ ಇದು ಅಯ್ಯಪ್ಪಸ್ವಾಮಿಯ ಪವಾಡ ಎಂದು ಹೇಳುತ್ತಿದ್ದಾರೆ.



Click it and Unblock the Notifications











