Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಪಾನ್‌ನಲ್ಲಿ 1250 ವರ್ಷಗಳಿಂದ ಪುರುಷರು ಬೆತ್ತಲೆಯಾಗಿ ಆಚರಿಸುವ ಹಬ್ಬದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಅನುಮತಿ
ಪ್ರತಿಯೊಂದು ದೇಶದಲ್ಲಿ ಕೆಲವೊಂದು ವಿಚಿತ್ರ ಅನಿಸುವ ಆಚರಣೆಗಳಿರುತ್ತದೆ, ಅದರಂತೆ ಜಪಾನ್‌ನಲ್ಲಿ ಪುರುಷರು ಸಂಪೂರ್ಣ ಬೆತ್ತಲಾಗಿ ಹಬ್ಬವನ್ನು ಆಚರಿಸುತ್ತಾರೆ, ಆದರೆ ಈ ಹಬ್ಬದಲ್ಲಿ ಮಹಿಳೆಯರು ಭಾಗವಹಿಸುತ್ತಿರಲಿಲ್ಲ. ಆದರೆ ಸುಮಾರು 1250 ವರ್ಷಗಳಿಂದ ಇದೇ ಮೊದಲ ಬಾರಿಗೆ ಈ ಹಬ್ಬ ವೀಕ್ಷಿಸಲು ಮಹಿಳೆಯರಿಗೆ ಅನುಮತಿ ಸಿಕ್ಕಿದೆ.
ಈ ಹಬ್ಬದಲ್ಲಿ ಮಹಿಳೆಯರು ವೀಕ್ಷಕರಾಗುವ ಅನುಮತಿ ಸಿಕ್ಕಿದೆ, ಆದರೆ ಪುರುಷರು ಸಂಪೂರ್ಣ ಬೆತ್ತಲಾಗಿ ಆಚರಿಸುವ ಕಡೆ ಹೋಗಲು ಅನುಮತಿ ಸಿಕ್ಕಿಲ್ಲ. ಪುರುಷರು ಒಂದು ತುಂಡು ಬಟ್ಟೆ ಕಟ್ಟಿಕೊಂಡಿರುತ್ತದೆ, ಆದರೂ ಸಂಪೂರ್ಣ ಬೆತ್ತಲೆಯಾಗಿರುತ್ತಾರೆ. ಈ ರೀತಿ ಬೆತ್ತಲೆಯಾಗಿ ಹಬ್ಬವನ್ನು ಆಚರಿಸಿದ ಪುರುಷರು ಮುಂದಿನ ವರ್ಷ ಅದೃಷ್ಟವನ್ನು ಪಡೆಯುತ್ತಾರೆ ಎಂದು ನಂಬಲಾಗುವುದು.

ಹಡ್ಕಾ ಮಾತ್‌ಸೂರಿ ಎಂಬ ಈ ಹಬ್ಬದಲ್ಲಿ ಪುರುಷರು ಭಾಗವಹಿಸುತ್ತಾರೆ, ಪ್ರತಿವರ್ಷ ಫೆಬ್ರವರಿ 22ರಮದು ಈ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ಹಬ್ಬದಲ್ಲಿ10, 000ಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ, ಅಷ್ಟೇ ಪ್ರಮಾಣದ ವೀಕ್ಷಕರು ಇರುತ್ತಾರೆ ಎಂದು ಹೇಳಲಾಗುವುದು. ಈ ಹಬ್ಬವನ್ನು ವೀಕ್ಷಿಸಲು ಟೌನ್‌ನ ಮಹಿಳೆಯರಿಂದ ಬೇಡಿಕೆ ಬರುತ್ತಿದೆಯಂತೆ.
ತುಂಬಾ ವರ್ಷಗಳಿಂದ ಮಹಿಳೆಯರು ಈ ಹಬ್ಬದಲ್ಲಿ ಭಾಗಿಯಾಗಲು ಬಯಸಿದ್ದರು, ಆದರೆ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಈ ಹಬ್ಬದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಕೆಲವರು ನಾವು ಪುರುಷರಾಗಿದ್ದರೆ ಈ ಹಬ್ಬದಲ್ಲಿ ಭಾಗಿಯಾಗಬಹುದಿತ್ತು ಎಂದು ಬಯಸಿದ್ದೂ ಉಂಟು.
ಈ ಹಬ್ಬದ ಹಿಂದಿರುವ ಕಾರಣ
ಈ ಹಬ್ಬವನ್ನು ಹಲವಾರು ಶತಮಾನಗಳಿಂದ ಆಚರಿಸುತ್ತಾ ಬರುತ್ತಿದೆ. ಪುರುಷರು ಬಿಳಿಯ ಫಂಡೋಶಿ ಎಂಬ ಬಟ್ಟೆ ಚಿಕ್ಕ ಬಟ್ಟೆ ಧರಿಸುತ್ತಾರೆ ಲಕೋಟೆ ರೀತಿಯ ತೆಳು ಬಟ್ಟೆಯದು. ಈ ಹಬ್ಬದ ದಿನದ ಕಾಲಿನಿಂದ ಎದೆಯರಿಗೆ ಕ್ಲೀನ್ ಶೇವ್ ಮಾಡಿರಬೇಕು, ನಂತರ ಬಟ್ಟೆಯನ್ನು ಬಿಚ್ಚಿ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಕಳುಹಿಸಕಾಗುವುದು. ನಂತರ ಹೀಗೆ ಹೋಗಿ ಶೈನ್ ಓಟೆಕೊವನ್ನು ಮುಟ್ಟುವ ಪ್ರಯತ್ನ ಮಾಡುತ್ತಾರೆ, ಹೂಗೆ ಮಾಡುವುದರಿಂದ ಅವರಿಗೆ ಅದೃಷ್ಟ ಲಭಿಸಲಿದೆ ಎಂಬ ನಂಬಿಕೆ.
ಈ ಹಬ್ಬದ ವಿಶೇಷತೆ
ಈ ಹಬ್ಬವನ್ನು ಚಳಿಗಾಲದಲ್ಲಿ ಆಚರಿಸಲಾಗುವುದು. ಈ ಹಬ್ಬದಲ್ಲಿ ಯಾವ ಬಟ್ಟೆಯನ್ನು ಧರಿಸಿದೆ ತೆಳುವಾಗ ಲಂಗೋಟಿ ರೀತಿಯ ಬಟ್ಟೆ ಹಾಕಿ ತುಂಬಾ ತಣ್ಣಗಿರುವ ನೀರಿನ ಕೊಳಕ್ಕೆ ಹಾರಲಾಗುವುದು. ಕೆಲವೊಂದು ಕಡೆ ಚಿಕ್ಕ ಹುಡುಗರು ಕೂಡ ಭಾಗವಹಿಸುತ್ತಾರೆ, ಆದರೆ ಇನ್ನು ಕೆಲವು ಕಡೆ ದೊಡ್ಡವರು ಅಷ್ಟೇ ಭಾಗವಹಿಸುತ್ತಾರೆ. ಆದರೆ ಕೊನೊಮಿಯಾ ಎಂಬ ಸ್ಥಳದಲ್ಲಿ ವಯಸ್ಸಿನ ನಿರ್ಬಂಧವಿಲ್ಲ.
ಈ ಹಬ್ಬ ಸಂಜೆ 4 ಗಂಟೆಗೆ ಶುರುವಾಗುವುದು, ಜಪಾನ್‌ನ ಸೈದಾಯಿ ಜಿ ದೇವಾಲಯದಿಂದ ಶುರುವಾಗುವುದು. ಈ ದೇವಾಲಯದಲ್ಲಿ ಈ ಸಂಪ್ರದಾಯ ಹುಟ್ಟಿಕೊಂಡಿತು ಎಂದು ಹೇಳಲಾಗುವುದು. ಇಲ್ಲಿ ಪವಿತ್ರ ಕೋಲುಗಳು ವಿಲ್ಲೋ ಎಂಬ ಗಿಡದ ಕೊಂಬುಗಳನ್ನು ಎಸೆಯಲಾಗುವುದು. ಇದಕ್ಕಶಗಿ ಹೋರಾಟ ನಡೆಯುತ್ತದೆ, ಇದನ್ನು ಪಡೆಯುವವರಿಗೆ ಅದೃಷ್ಟ ಕಾದಿದೆ ಎಂದು ಹೇಳಲಾಗುವುದು.



Click it and Unblock the Notifications