Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕ್ರೀಡಾಪಟುಗಳು ಪದಕ ಗೆದ್ದು ಕಚ್ಚುವುದೇಕೆ..? ಇದರ ಹಿಂದಿರುವ ಕಥೆ ಏನು?
ನಾಳೆಯಿಂದ ಕ್ರೀಡಾ ಹಬ್ಬ ಒಲಿಂಪಿಕ್ಸ್ ಆರಂಭಗೊಳ್ಳುತ್ತಿದೆ. ಪ್ಯಾರಿಸ್‌ನಲ್ಲಿ 2024ರ ಒಲಿಂಪಿಕ್ಸ್ ನಡೆಯಲಿದೆ. ಭಾರತದಿಂದ 117 ಕ್ರೀಡಾಪಟುಗಳು ಪದಕ ಬೇಟೆಗಾಗಿ ಪ್ಯಾರಿಸ್‌ಗೆ ತೆರಳಿದ್ದಾರೆ. ಕುಸ್ತಿ, ಬ್ಯಾಡ್ಮಿಂಟನ್, ಶೂಟಿಂಗ್, ಜಾವೆಲಿನ್ ಥ್ರೋ ಸೇರಿ ಹಲವು ವಿಭಾಗದಲ್ಲಿ ಈ ಬಾರಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಂತೂ ಇದೆ.
ಇನ್ನು ಒಲಿಂಪಿಕ್ಸ್‌ನಲ್ಲಿ ನೂರಾರು ದೇಶಗಳ ಕ್ರೀಡಾಪಟುಗಳು ಭಾಗಿಯಾಗುತ್ತಾರೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಯಾವುದಾದ್ರು ಪದಕ ಗೆಲ್ಲಬೇಕು ಅಂದ್ರೆ ಅದೊಂದು ದೊಡ್ಡ ಸಾಧನೆಯೇ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಎಂಬುದು ಇನ್ನೂ ಹಲವು ದೇಶಗಳಿಗೆ ಕನಸಾಗಿಯೇ ಉಳಿದಿದೆ.

ಇನ್ನು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ಕ್ರೀಡಾಪಟುಗಳಿಗೆ ಪದಕ ವಿತರಣೆ ಮಾಡುತ್ತಾರೆ. ಆದ್ರೆ ಈ ವೇಳೆ ಪದಕ ಗೆದ್ದ ಕ್ರೀಡಾಪಟುಗಳು ಕುತ್ತಿಗೆಗೆ ಪದಕ ಬೀಳುತ್ತಿದ್ದಂತೆ ಅದನ್ನು ಗಿಡಿದು ಕಚ್ಚುವುದನ್ನು ನಾವು ನೋಡಿರುತ್ತೇವೆ. ಇದು ಒಲಿಂಪಿಕ್ ಮಾತ್ರವಲ್ಲ, ಯಾವುದೇ ಕ್ರೀಡೆಯಲ್ಲೂ ಇದೇ ರೀತಿ ಮಾಡುತ್ತಾರೆ.
ಒಲಿಂಪಿಕ್ ಪದಕ ವಿಜೇತರು ಗೆದ್ದ ನಂತರ ತಮ್ಮ ಪದಕಗಳನ್ನು ಏಕೆ ಕಚ್ಚುತ್ತಾರೆ? ಇದರ ಹಿಂದಿರುವ ಕಥೆ ಏನು? ಈ ವಿಚಾರಗಳು ನಿಮಗೂ ಅಚ್ಚರಿ ತರಿಸಬಹುದು. ಏಕೆಂದರೆ ಈ ಪದಕ ಕಚ್ಚುವುದಕ್ಕೆ ನಿರ್ಧಿಷ್ಟ ಕಾರಣಗಳ ಹುಡುಕಿ ಹೊರಟರೆ ಇತಿಹಾಸಕ್ಕೆ ಕರೆದೊಯ್ಯುತ್ತದೆ.
ನಾವಿಂದು ಫೋಟೋಗಳೂ ವಿಡಿಯೋಗಳ ಮೂಲಕ ಕ್ರೀಡಾಪಟುಗಳು ಈ ಪದಕಗಳನ್ನು ಕಚ್ಚಿ ಸಂಭ್ರಮಿಸುವುದನ್ನು ಸೆರೆಹಿಡಿರುವುದು ನೋಡಿದ್ದೇವೆ. ಅದರೆ ಈ ಸಂಪ್ರದಾಯ ನಡೆದು ಬಂದಿರುವುದು ಬಹಲ ಕಾಲದ ಹಿಂದಿನಿಂದ ಅದರಲ್ಲೂ ಈ ಕ್ಯಾಮರಾಗಳೇ ಇಲ್ಲದಿರುವಾಗಲೂ ಕ್ರೀಡಾಪಟುಗಳು ಪದಕಗಳ ಕಚ್ಚುತ್ತಿದ್ದರು.
ಮೊದಲು ಚಿನ್ನದ ಪದಕ ಗೆದ್ದ ಕ್ರೀಡಾಪಟು ಅದು ನೈಜ ಚಿನ್ನವೇ ಎಂಬುದನ್ನು ಖಾತ್ರಿ ಪಡಿಸಲು ಅದನ್ನು ಕಚ್ಚುತ್ತಿದ್ದ. ಗಟ್ಟಿ ಬಂಗಾರವು ಮೆದುವಾಗಿರುವುದರಿಂದ ಆತ ಕಚ್ಚಿದ ತಕ್ಷಣ ಆತನ ಹಲ್ಲಿನ ಗುರುತು ಮೂಡುತ್ತಿತ್ತು. ಇದರಿಂದ ಆತನಿಗೆ ಚಿನ್ನ ಎಂಬುದನ್ನು ಖಚಿತ ಮಾಡಿಕೊಳ್ಳುತ್ತಿದ್ದ. ಬೆಳ್ಳಿ ಪದಕದ ವಿಚಾರದಲ್ಲು ಇದೇ ರೀತಿ ನಡೆದಿತ್ತು. ಆದರೆ ಬೆಳ್ಳಿ ಪದಕಕ್ಕೆ ಇಷ್ಟೊಂದು ಗಾಢವಾಗಿ ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ.
ಆಧುನಿಕ ಒಲಿಂಪಿಕ್ ಪದಕಗಳು 1912 ರಿಂದ ಇನ್ನು ಮುಂದೆ ಘನ ಚಿನ್ನವಾಗದಿದ್ದರೂ, ಅವುಗಳನ್ನು ಪ್ರಾಥಮಿಕವಾಗಿ ಚಿನ್ನದ ಲೇಪನದೊಂದಿಗೆ ಬೆಳ್ಳಿಯಿಂದ ಮಾಡಲಾಗಿದ್ದರೂ, ಈ ಐತಿಹಾಸಿಕ ದೃಢೀಕರಣ ಪರೀಕ್ಷೆಗೆ ಒಪ್ಪಿಗೆಯಾಗಿ ಪದಕವನ್ನು ಕಚ್ಚುವ ಕ್ರಿಯೆಯು ಮುಂದುವರಿಯುತ್ತಿದೆ. ಮುಂದುವರೆದು ಈ ಸಂಪ್ರದಾಯವು ಕ್ರೀಡಾಪಟುಗಳ ಕಷ್ಟವನ್ನು ನೆನೆಯಲು ಅವರ ಬೆವರಿನ ಹನಿಯ ಪ್ರತಿಫಲದ ಊಟ ಎಂಬ ಸಂಕೇತವಾಗಿ ಅವರು ಕಚ್ಚುತ್ತಿದ್ದರು ಎಂದು ತಿಳಿದುಬಂದಿದೆ.
ಚಿನ್ನವನ್ನು ಕಚ್ಚುವುದು ಈಗ ವಿಜಯದ ಸಂಕೇತ ಹಾಗೂ ಜಯ ದಾಖಲಿಸಿದ್ದನ್ನು ಜಗತ್ತಿಗೆ ತೋರ್ಪಡಿಸುವ ಸಂಕೇತವೆಂದು ಅವರು ಭಾವಿಸಿದ್ದಾರೆ. ತದನಂತರ ಫೋಟೋಗಳಿಗೆ ಫೋಸ್ ಕೊಡುವಾಗ ಕ್ರೀಡಾಪಟುಗಳು ಪದಕವನ್ನ ಕೈಯಲ್ಲಿ ಹಿಡಿದುಕೊಳ್ಳುವುದು ಹಾಗೂ ಬಾಯಲ್ಲಿ ಕಚ್ಚಿ ಹಿಡಿಯುವುದನ್ನು ಮಾಡುತ್ತಿದ್ದರು. ಇದು ನಂತರ ಹಾಗೆ ಬೆಳೆದುಕೊಂಡು ಬಂದಿದೆ.
ಅಂದಿನಿಂದ ಇಂದಿನವರೆಗೂ ಕ್ರೀಡಾಟುಗಳು ಫೋಟೋಗಳಿಗೆ ಪೋಸ್ ಕೊಡುವಾಗ ಯಾವು ಗೆದ್ದಿರುವ ಪದಕವನ್ನು ಬಾಯಲ್ಲಿ ಕಚ್ಚಿ ಹಿಡಿಯುತ್ತಾರೆ. ಆದರೆ ಹಲವರಿಗೆ ಇದರ ಉದ್ದೇಶವೂ ತಿಳಿದಿಲ್ಲ. ಜೊತೆಗೆ ಇದರ ಇತಿಹಾಸವು ಇಲ್ಲ. ಹಾಗೆ ಇದನ್ನು ಮೊದಲು ಯಾರು ಆರಂಭಿಸಿದರು ಎಂಬುದು ಸಹ ಯಾರಿಗೂ ತಿಳಿದಿಲ್ಲ, ಕುತ್ತಿಗೆಗೆ ಪದಕ ಬಿದ್ದ ಕೂಡಲೇ ಕ್ರೀಡಾಪಟುಗಳು ಅವನ್ನು ಬಾಯಲ್ಲಿ ಕಚ್ಚಿ ಹಿಡಿಯುತ್ತಾರೆ.



Click it and Unblock the Notifications