Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಶನಿವಾರ ಕಪ್ಪು ಆಂಜನೇಯನನ್ನು ಪೂಜಿಸಿದ್ರೆ ಶನಿಯ ವಕ್ರ ದೃಷ್ಟಿ ಬೀಳೋದಿಲ್ಲ!
ರಾಮಭಂಟನಾದ ಆಂಜನೇಯನನ್ನು ಪ್ರತಿಯೊಬ್ಬರೂ ವಿಶೇಷ ಭಕ್ತಿ-ಭಾವದಿಂದ ಪೂಜಿಸುತ್ತಾರೆ. ಅಂದ್ರೆ ಎಲ್ಲಿ ಆಂಜನೇಯನಿರುತ್ತಾನೋ ಅಲ್ಲಿ ಭಯ ಅನ್ನೋದು ಇರೋದಿಲ್ಲ. ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿರೋ ಆಂಜನೇಯ ಇಂದಿಗೂ ಭೂಲೋಕದಲ್ಲಿ ಸಂಚರಿಸುತ್ತಾ ತನ್ನ ಭಕ್ತರನ್ನು ಪೊರೆಯುತ್ತಿದ್ದಾನೆ ಎನ್ನುವ ನಂಬಿಕೆಯಿದೆ.

ಆಂಜನೇಯನ ದೇವಸ್ಥಾನಗಳಿಗೆ ಹೋದಾಗ ಕೆಲವೊಂದು ವಿಶೇಷತೆಗಳನ್ನು ನಾವು ನೋಡಿರ್ಬಹು. ಆಂಜನೇಯ ಧರಿಸಿರುವ ತುಳಸಿ ಮಾಲೆ ಮತ್ತು ಅಲ್ಲಿ ವಿತರಿಸುವ ಕೇಸರಿ ಬಣ್ಣದ ಪ್ರಸಾದ. ಇನ್ನೂ ಹೆಚ್ಚಿನ ಕಡೆಗಳಲ್ಲಿ ಆಂಜನೇಯನ ವಿಗ್ರಹವು ಕೇಸರಿ ಬಣ್ಣದಲ್ಲೇ ಇರುತ್ತದೆ.
ಲಾಲ್ ದೇಹ್ ಲಾಲಿ ಲಸೇ ಅರು ಧರಿ ಲಾಲ್ ಲಾಂಗೂರ್, ಬಜ್ರಾ ದೇಹ್ ದಾನವ್ ದಲನ್ ಜೈ ಜೈ ಜೈ ಕಪಿ ಸುರ್' ಎಂಬ ಪದ್ಯವನ್ನು ನೀವೆಲ್ಲಾ ಕೇಳಿರ್ತೀರಿ. ಈ ಪದ್ಯದ ಅರ್ಥ ಏನು ಅಂತ ನೋಡೋದಾದ್ರೆ 'ಓ ಭಗವಾನ್ ಹನುಮಾನ್! ನಿನ್ನ ದೇಹ, ನಿಮ್ಮ ಬಾಲ ಮತ್ತು ನಿಮ್ಮ ಬಟ್ಟೆ ಕೆಂಪು. ನೀನು ಕೆಂಪು ಸಿಂಧೂರವನ್ನೂ ಧರಿಸಿರುವೆ. ನಿನ್ನ ದೇಹವು ಸಿಡಿಲಿನಂತೆ ಕಠಿಣವಾಗಿದೆ. ಮತ್ತು ನೀನು ದುಷ್ಟರನ್ನು ನಾಶಮಾಡುತ್ತೀಯ ಎಂದು.
ಆಂಜನೇಯನ ಕಪ್ಪು ಬಣ್ಣದ ವಿಗ್ರಹವನ್ನು ಕಂಡಿದ್ದೀರಾ?
ಈ ಶ್ಲೋಕದಿಂದ ನಮಗೇನು ತಿಳಿಯುತ್ತೆ ಎಂದರೆ ಆಂಜನೇಯನು ಆತನ ಸಂಪೂರ್ಣವಾಗಿ ಕೆಂಪು ಬಣ್ಣವನ್ನು ಮಾತ್ರ ಧರಿಸುತ್ತಾನೆ. ನೀವೇನಾದ್ರು ಆಂಜನೇಯನ ದೇವಸ್ಥಾನಕ್ಕೆ ಹೋದರೆ ನೀವು ಎಲ್ಲಾ ದೇವಾಲಯಗಳಲ್ಲಿ ಕೆಂಪು ಅಥವಾ ಕೇಸರಿ ಬಣ್ಣದ ವಿಗ್ರಹವನ್ನು ಕಾಣಬಹುದು. ಆದ್ರೆ ನೀವು ಎಂದಾದರೂ ಕಪ್ಪು ಬಣ್ಣದ ಆಂಜನೇಯನ ವಿಗ್ರಹವನ್ನು ಕಂಡಿದ್ದೀರಾ?
ಕಪ್ಪು ಆಂಜನೇಯ ಸೃಷ್ಟಿಯಾಗಿದ್ಹೇಗೆ?
ಆಂಜನೇಯನು ತನ್ನ ಶಿಕ್ಷಣ ಪೂರ್ಣಗೊಂಡ ನಂತರ ಸೂರ್ಯ ದೇವನ ಬಳಿ ದಕ್ಷಿಣೆ ನೀಡೋದಕ್ಕೆ ತೆರಳುತ್ತಾರೆ. ಆಗ ಸೂರ್ಯ ದೇವನು ನನ್ನ ಮಗನಾದ ಶನಿದೇವನು ನನ್ನ ಮಾತನ್ನು ಕೇಳುತ್ತಿಲ್ಲ. ಗುರು ದಕ್ಷಿಣೆಯ ಬದಲಾಗಿ ಆತನನ್ನು ನೀನು ಇಲ್ಲಿಗೆ ಕರೆತರಬೇಕು ಎಂದು ಹೇಳುತ್ತಾರೆ. ಸೂರ್ಯ ದೇವನ ಮಾತಿನಂತೆ ಆಂಜನೇಯನು ಶನಿ ದೇವನ ಬಳಿ ತೆರಳುತ್ತಾರೆ.
ಆಂಜನೇಯನನ್ನು ನೋಡಿದ ತಕ್ಷಣ ಶನಿದೇವ ಕೋಪಗೊಳ್ಳುತ್ತಾನೆ. ಶನಿದೇವನು ಆಂಜನೇಯನ ಮೇಲೆ ತನ್ನ ಕೆಂಗಣ್ಣನ್ನು ಹಾಕುತ್ತಾನೆ. ಇದರಿಂದಾಗಿ ಆಂಜನೇಯನ ಮೈಬಣ್ಣವು ಕಪ್ಪು ಬಣ್ಣಕ್ಕೆ ತಿರುಗಿತು. ಇಷ್ಟಾದರೂ ತನ್ನ ಪಟ್ಟು ಬಿಡದ ಆಂಜನೇಯ ಶನಿದೇವನನ್ನು ಸೂರ್ಯ ದೇವನ ಬಳಿ ಕರೆದುಕೊಂಡು ಹೋಗುತ್ತಾನೆ.
ನಂತರ ಆಂಜನೇಯನ ಗುರುಭಕ್ತಿಯಿಂದ ಪ್ರಭಾವಿತನಾದ ಶನಿದೇವನು ಶನಿವಾರದ ದಿನ ಆಂಜನೇಯನನ್ನು ಯಾರು ಪೂಜಿಸುತ್ತಾರೆಯೋ ಅವರ ಮೇಲೆ ತನ್ನ ವಕ್ರ ದೃಷ್ಟಿಯನ್ನು ಬೀರುವುದಿಲ್ಲ ಎಂದು ಭರವಸೆ ನೀಡುತ್ತಾರೆ.
ಕಪ್ಪು ಬಣ್ಣದ ಆಂಜನೇಯನ ಮೂರ್ತಿ ಎಲ್ಲಿದೆ?
ಹೌದು, ಇಂದಿಗೂ ಕೂಡ ದೇಶದ ಕೆಲವು ಭಾಗಗಳಲ್ಲಿ ನಾವು ಕಪ್ಪು ಬಣ್ಣದ ಆಂಜನೇಯನ ವಿಗ್ರಹವನ್ನು ಕಣ್ತುಂಬಿಕೊಳ್ಳಬಹುದು. ಆದರೆ ಕಪ್ಪು ಬಣ್ಣದ ಆಂಜನೇಯನ ವಿಗ್ರಹ ನಮಗೆ ಕಾಣ ಸಿಗೋದು ತುಂಬಾನೇ ಅಪರೂಪ. ಆದರೆ ದೇಶದ ಕೆಲವು ಸ್ಥಳಗಳಲ್ಲಿ ಆಂಜನೇಯನ ಕಪ್ಪು ಬಣ್ಣದ ಪ್ರತಿಮೆಯನ್ನು ಕೂಡ ಸ್ಥಾಪಿಸಲಾಗಿದೆ. ಕಪ್ಪು ಕಲ್ಲಿನಿಂದ ಮಾಡಿದ ಆಂಜನೇಯನ ಮೂರ್ತಿಗಳು ಎಲ್ಲಿವೆ? ಮತ್ತು ಅವುಗಳು ಕಪ್ಪು ಬಣ್ಣದಲ್ಲಿ ಇರೋದಕ್ಕೆ ಕಾರಣ ಏನು ಅನ್ನೋದನ್ನು ಒಂದೊಂದಾಗಿಯೇ ತಿಳಿದುಕೊಳ್ಳೋಣ.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿದ್ದಾನೆ ಕಾಲಾ ಹನುಮಾನ್!
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿರುವ ಕಪ್ಪು(ಕಾಲಾ) ಹನುಮಂತನ ದರ್ಶನಕ್ಕೆ ದಿನ ನಿತ್ಯ ಲಕ್ಷಾಂತರ ಮಂದಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. 1836 ರಲ್ಲಿ ಈ ದೇವಾಲಯದಲ್ಲಿ ಕಪ್ಪು ಬಣ್ಣದ ಅಮೂಲ್ಯವಾದ ಕಲ್ಲಿನಿಂದ ಮಾಡಿದ ಆಂಜನೇಯನ ವಿಗ್ರಹವನ್ನು ಸ್ಥಾಪಿಸಲಾಯಿತು.
ಕನಸಿನಲ್ಲಿ ಬಂದು ಸುಳಿವು ಕೊಟ್ಟ ಆಂಜನೇಯ!
ನಿಜಾಮಾಬಾದ್ ನ ಶ್ರೀ ನಲ್ಲ ಹನುಮಾನ್ ದೇವಾಲಯದಲ್ಲಿ ಆಂಜನೇಯನ ವಿಗ್ರಹ ಸ್ಥಾಪಿಸಿರೋದ್ರ ಹಿಂದೆ ಒಂದು ರೋಚಕ ಕಥೆಯಿದೆ. ಆ ಸಮಯದಲ್ಲಿ ಈ ಪ್ರದೇಶವು ದಟ್ಟ ಅರಣ್ಯದ ಭಾಗವಾಗಿತ್ತು ಎಂದು ಹೇಳಲಾಗುತ್ತದೆ. ಒಂದು ದಿನ ವಿಗ್ರಹ ತಯಾರಕರು ಸಂತ ಶಿರೋಮಣಿ ಮಠದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲು ಎತ್ತಿನ ಬಂಡಿಯಲ್ಲಿ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಎತ್ತಿನ ಗಾಡಿ ನಿಂತಿತು.
ಎತ್ತಿನ ಗಾಡಿ ತೆಗೆಯಲು ಕೈಲಾದಷ್ಟು ಪ್ರಯತ್ನಿಸಿದರೂ ವಿಗ್ರಹ ಕದಲಲಿಲ್ಲ. ರಾತ್ರಿಯಾಗುತ್ತಿದ್ದಂತೆ ವಿಗ್ರಹ ಸಮೇತ ಕಾರನ್ನು ಈ ಜಾಗದಲ್ಲಿ ಬಿಟ್ಟು ಮನೆಗೆ ತೆರಳಿದ್ದರು. ಅದೇ ರಾತ್ರಿ ಭಗವಾನ್ ಆಂಜನೇಯ ಸಂತ ಶಿರೋಮಣಿ ಸದ್ಗುರು ಮಹಾರಾಜ್ ಸ್ವಾಮಿಗಳ ಕನಸಿನಲ್ಲಿ ಕಾಣಿಸಿಕೊಂಡರು ಮತ್ತು ವಾಹನ ನಿಲುಗಡೆಯ ಪಶ್ಚಿಮ ದಿಕ್ಕಿನಲ್ಲಿ ವಿಗ್ರಹವನ್ನು ಸ್ಥಾಪಿಸಲು ಹೇಳಿದರು. ಹೀಗಾಗಿ 1836 ರಲ್ಲಿ ಅವರು ಈ ದಟ್ಟವಾದ ಕಾಡಿನಲ್ಲಿ ಕಪ್ಪು ಕಲ್ಲಿನಿಂದ ಮಾಡಿದ ಆಂಜನೇಯನ ವಿಗ್ರಹವನ್ನು ಸ್ಥಾಪಿಸುತ್ತಾರೆ.
ಜೈಪುರದಲ್ಲಿದೆ ಎರಡು ಕಾಲಾ ಆಂಜನೇಯನ ದೇವಾಲಯ!
ನಿಜಾಮಾಬಾದ್ ಹೊರತುಪಡಿಸಿ ರಾಜಸ್ಥಾನದ ಜೈಪುರದಲ್ಲಿ ಆಂಜನೇಯನ ಎರಡು ಕಪ್ಪು ಬಣ್ಣದ ವಿಗ್ರಹಗಳಿವೆ. ಈ ವಿಗ್ರಹಗಳಲ್ಲಿ ಒಂದು ಬೆಳ್ಳಿಯ ಟಂಕಸಾಲೆಯಲ್ಲಿದೆ. ಮತ್ತು ಇನ್ನೊಂದು ಜಲಮಹಲ್ ಬಳಿ ಇದೆ. ಅಮೇರ್‌ನ ರಾಜಾ ಜೈಸಿಂಗ್ ಕಾವಲುಗಾರ ಜೈಪುರದ ಸಂಗನೇರಿ ಗೇಟ್‌ನ ಒಳಗೆ ಕಪ್ಪು ಹನುಮಂತನ ಪೂರ್ವಾಭಿಮುಖ ಪ್ರತಿಮೆಯನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ.
ಈ ದೇವಾಲಯ ನೋಡೋದಕ್ಕೆ ತುಂಬಾನೇ ಆಕರ್ಷಕವಾಗಿದೆ. ಹೊರಗಿನಿಂದ ನೋಡಿದರೆ ಈ ದೇವಾಲಯವು ಅರಮನೆಯಂತೆ ಕಾಣುತ್ತದೆ. ದೇವಾಲಯದಲ್ಲಿ ಆಂಜನೇಯನನ್ನು ಹೊರತುಪಡಿಸಿ ಇತರ ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಸಹ ಸ್ಥಾಪಿಸಲಾಗಿದೆ.
ಹೀಗಾಗಿ ಶನಿವಾರದ ದಿನ ಕಾಲಾ(ಕಪ್ಪು)ಆಂಜನೇಯನನ್ನು ಪೂಜಿಸಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಇಂದಿಗೂ ಇದೆ.



Click it and Unblock the Notifications