Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಆಯುರ್ವೇದದ ಪ್ರಕಾರ ಸ್ನಾನ ಮಾಡುವ ಸರಿಯಾದ ಸಮಯವೇನು? ನಿಯಮವೇನು ನೋಡಿ...!
ನಿತ್ಯ ಸ್ನಾನ ಮಾಡುವಾಗ ಕೆಲವರು ತಣ್ಣೀರು ಬಳಸುತ್ತಾರೆ, ಮತ್ತೆ ಕೆಲವರು ಬಿಸಿ ನೀರು ಬಳಸುತ್ತಾರೆ. ಆದರೆ ಸ್ನಾನ ಮಾಡುವುದು ಹಾಗೂ ಸ್ನಾನಕ್ಕೆ ಬಳಸಬೇಕಾದ ವಸ್ತುಗಳ ಕಡೆಗೂ ನಾವು ಗಮನಕೊಡಬೇಕಿದೆ. ಸ್ನಾನ ಮಾಡುವ ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಆಯುರ್ವೇದದ ಪ್ರಕಾರ ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು, ಅದರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಆರೋಗ್ಯ ಹಾಗೂ ಚರ್ಮದ ಕಾಂತಿಯ ದೃಷ್ಟಿಯಿಂದ ತಣ್ಣೀರು ಅಥವಾ ಬಿಸಿ ನೀರು ಯಾವ ನೀರಿನಲ್ಲಿ ಸ್ನಾನ ಮಾಡಿದರೆ ಉತ್ತಮ ಎಂಬ ಗೊಂದಲ ನಿಮಗಿದೆಯೇ?. ಯಾವುದನ್ನು ಆರಿಸಬೇಕೆಂದು ನೀವು ಹೇಗೆ ನಿರ್ಧರಿಸುತ್ತೀರಿ? ದೇಹದಿಂದ ಕೊಳೆ, ಬೆವರು ಮತ್ತು ಅನಗತ್ಯ ಅಂಶ ತೆಗೆದುಹಾಕುವುದರಿಂದ ಮನಸ್ಸನ್ನು ಪುನರುಜ್ಜೀವನಗೊಳಿಸುವವರೆಗೆ, ಒತ್ತಡವನ್ನು ಎದುರಿಸಲು ಮತ್ತು ಸ್ನಾಯುಗಳು ಮತ್ತು ನರಗಳನ್ನು ವಿಶ್ರಾಂತಿ ಮಾಡಲು ಪ್ರತಿದಿನ ಸ್ನಾನ ಮಾಡುವುದು ಮುಖ್ಯವಾಗಿದೆ.

ನೀವು ಹೇಗೆ ಮತ್ತು ಯಾವಾಗ ಸ್ನಾನ ಮಾಡುತ್ತೀರಿ ಎಂಬುದು ನಿಮ್ಮ ಶಕ್ತಿಯ ಮಟ್ಟಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆಯುರ್ವೇದದ ಪ್ರಕಾರ, ಸ್ನಾನ ಮಾಡುವ ಸಮಯ ಮಾತ್ರವಲ್ಲ, ನೀರಿನ ಸರಿಯಾದ ತಾಪಮಾನವೂ ಮುಖ್ಯವಾಗಿದೆ. ಸ್ನಾನ ಮಾಡಲು ಸಾಕಷ್ಟು ನೀರನ್ನು ಬಳಸಬೇಕು. ಪುರಾತನ ವೈದ್ಯಕೀಯ ಶಾಸ್ತ್ರವು ಅಭ್ಯಂಗವನ್ನು ಶಿಫಾರಸ್ಸು ಮಾಡುತ್ತದೆ. ಸ್ನಾನ ಮಾಡುವ ಮೊದಲು ದೋಶಗಳನ್ನು ಸಮತೋಲನಗೊಳಿಸಲು ಮತ್ತು ಅನಾರೋಗ್ಯವನ್ನು ತಡೆಗಟ್ಟಲು ಬೆಚ್ಚಗಿನ ಗಿಡಮೂಲಿಕೆಗಳಿಂದ ತುಂಬಿದ ಎಣ್ಣೆಯ ಬಳಕೆಯನ್ನು ಶಿಫಾರಸು ಮಾಡುತ್ತದೆ.
ಆಯುರ್ವೇದ ತಜ್ಞೆ ಡಾ. ನಿತಿಕಾ ಕೊಹ್ಲಿ ನಿಮ್ಮ ದೇಹ ಮತ್ತು ಮನಸ್ಸನ್ನು ತಿಳಿಗೊಳಿಸಲು ಹೊಸ ಹುರುಪು ನೀಡುವ ಸ್ನಾನದ ಅನುಭವಕ್ಕಾಗಿ ಕೆಲವು ಸಲಹೆಗಳನ್ನು ನೀಡುತ್ತಾರೆ.
ಹಲ್ಲುಗಳನ್ನು ಸ್ವಚ್ಛಗೊಳಿಸಿದ ನಂತರ ಮತ್ತು ಮಲ ಮೂತ್ರ ವಿಸರ್ಜನೆಯ ನಂತರ ಸೂರ್ಯೋದಯಕ್ಕೆ ಮುನ್ನವೇ ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕೆಂದು ಡಾ. ಕೊಹ್ಲಿ ಶಿಫಾರಸು ಮಾಡುತ್ತಾರೆ, ಇನ್ನೊಂದು ಬಾರಿ ಸೂರ್ಯಾಸ್ತದ ಸಮಯದಲ್ಲಿ, ಮೇಲಾಗಿ ಉಗುರು ಬೆಚ್ಚಗಿನ ನೀರಿನಿಂದ ಒತ್ತಡವನ್ನು ನಿವಾರಿಸಲು ಮತ್ತು ನಿಮ್ಮ ಸ್ನಾಯುಗಳು ಮತ್ತು ನರಗಳಿಗೆ ವಿಶ್ರಾಂತಿ ನೀಡಲು ಸ್ನಾನ ಮಾಡಬೇಕು ಎಂದಿದ್ದಾರೆ. ಈ ರೀತಿ ಮಾಡುವುದರಿಂದ ರಾತ್ರಿ ಉತ್ತಮವಾಗಿ ನಿದ್ರೆ ಮಾಡಬಹುದು ಎಂದು ಸಲಹೆ ನೀಡುತ್ತಾರೆ.
ಗಜೇಂದ್ರನಂತೆ ಸ್ನಾನ ಮಾಡಿ
ಒಬ್ಬ ವ್ಯಕ್ತಿಯು ಗಜೇಂದ್ರನಂತೆ ಸ್ನಾನ ಮಾಡಬೇಕು (ಆನೆಯಂತೆ ಸ್ನಾನ ಮಾಡುವುದು) ಎಂದು ಆಯುರ್ವೇದ ಪಠ್ಯದಲ್ಲಿ ಉಲ್ಲೇಖವಿದೆ. ಅಂದರೆ ಆನೆಯಂತೆ ನೀರನ್ನು ಮೈಮೇಲೆ ಸುರಿದುಕೊಳ್ಳುವುದು ಎಂದರ್ಥ, ಸ್ನಾನದ ವೇಳೆ ಎಣ್ಣೆ, ಅರಿಶಿನ, ಬೇವು ಬಳಸುವುದನ್ನು ಶಿಫಾರಸ್ಸು ಮಾಡುತ್ತದೆ.
ಸ್ನಾನದ ಮೊದಲು ಅಭ್ಯಂಗ, ಎಣ್ಣೆ ಮಸಾಜ್ ಅನ್ನು ಹೆಚ್ಚು ಶಿಫಾರಸು ಮಾಡಲಾಗಿದೆ. ಎಳ್ಳಿನ ಎಣ್ಣೆ ಅತ್ಯಂತ ಆದ್ಯತೆಯ ಎಣ್ಣೆಯಾಗಿದೆ. ಆದಾಗ್ಯೂ, ನೀವು ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಬಳಸಬಹುದು. ತಲೆಯಿಂದ ಕಾಲಿನವರೆಗೆ ಸಂಪೂರ್ಣವಾಗಿ ಎಣ್ಣೆಯಿಂದ ಮಸಾಜ್ ಮಾಡಿ ಬಳಿಕ ಕೆಲ ಹೊತ್ತು ವಿಶ್ರಾಂತಿ ಪಡೆಯಬೇಕು. ಬಳಿಕ ಗಿಡಮೂಲಿಕೆಯ ಸೋಪು ಅಥವಾ ಪುಡಿ ಬಳಸಬೇಕು ಎಂದು ಆರ್ಯುವೇದದಲ್ಲಿ ಉಲ್ಲೇಖವಿದೆ.
ಗಿಡಮೂಲಿಕೆಗಳ ಸ್ನಾನದ ಪುಡಿಯಲ್ಲಿ ಬಳಸುವ ಕೆಲವು ಪದಾರ್ಥಗಳು
ಬೆಸನ್ (ಬಂಗಾಳ ಗ್ರಾಂ)
ಮೂಂಗ್ ದಾಲ್
ಅರಿಶಿನ
ಗುಲಾಬಿ ದಳಗಳು
ಶ್ರೀಗಂಧದ ಮರ
ಬೇವಿನ ಎಲೆಗಳು
ವೆಟಿವರ್
ಉತ್ತಮ ಸ್ನಾನದ ಅನುಭವಕ್ಕಾಗಿ, ಉಗುರು ಬೆಚ್ಚಗಿನ ನೀರನ್ನು ಬಳಸಲು ಶಿಫಾರಸು ಮಾಡಲಾಗಿದೆ. ತಲೆ ಸ್ನಾನ ಮಾಡುವಾಗ ಆ ನೀರು ನೇರವಾಗಿ ಕಣ್ಣಿಗೆ ತಲುಪದಂತೆ ನೋಡಿಕೊಳ್ಳಬೇಕು. ಜೊತೆಗೆ ತಲೆ ಸ್ನಾನ ಮಾಡಲು ತಮ್ಮ ಕೋಣೆಯ ಉಷ್ಣಾಂಶಕ್ಕೆ ತಕ್ಕಂತೆ ನೀರನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಆರ್ಯುವೇದವು ಹೇಳುತ್ತದೆ.



Click it and Unblock the Notifications
