Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಚಿತ್ರಗಳ ನೋಡಿದ ತಕ್ಷಣ ನಿಮಗೆ ಕಂಡಿದ್ದೇನು..? ನಿಮ್ಮ ವ್ಯಕ್ತಿತ್ವ ಹೇಳಲಿವೆ ಫೋಟೋಗಳು..!
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣುಗಳು ಮತ್ತು ಮೆದುಳನ್ನು ಎಚ್ಚರಗೊಳಿಸುವ ಜೊತೆಗೆ ಒಂದಿಷ್ಟು ಯೋಚಿಸುವಂತೆಯೂ ಮಾಡುತ್ತವೆ. ಈ ರೀತಿಯ ಚಿತ್ರಗಳು ಒಬ್ಬರ ವ್ಯಕ್ತಿತ್ವವನ್ನೂ ಚಿತ್ರಿಸುತ್ತವೆ. ಅದೇ ರೀತಿ ಇಲ್ಲಿರುವ ಎರಡು ಚಿತ್ರಗಳು ಸಹ ನಿಮ್ ವ್ಯಕ್ತಿತ್ವವನ್ನು ಅಳಯಲಿದೆ. ನೀವು ಈ ಚಿತ್ರಗಳನ್ನು ನೋಡಿದ ತಕ್ಷಣ ನಿಮ್ಮ ಕಣ್ಣಿಗೆ ಯಾವ ಚಿತ್ರಣ ಮೂಡಿತು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದಾಗಿದೆ.
ಪಝಲ್ ತಜ್ಞ ಮಿಯಾ ಯಿಲಿನ್ ಅವರು ಹಂಚಿಕೊಂಡಿರುವ ಮೊದಲ ಚಿತ್ರದಲ್ಲಿ, ಮೊದಲು ನೀವು ಏನು ನೋಡಿದ್ದೀರಾ ಎಂಬುದನ್ನು ಗಮನದಲ್ಲಿಡಿ. ಈ ಚಿತ್ರವು ನೋಡುಗರಲ್ಲಿ ಹಲವು ರೀತಿಯ ಭಾವನೆ ಮೂಡಿಸಿದೆ. ಕೆಲವರಿಗೆ ಮೊದಲು ಇದು ಅನ್ಯಗ್ರಹದಂತೆ ಕಾಣಿಸಿದೆ. ಮತ್ತೆ ಕೆಲವರಿಗೆ ಆಕಾಶ ಮೊದಲ ಕಂಡಿದೆ. ಇನ್ನೂ ಹಲವರಿಗೆ ಕೊಳದಲ್ಲಿ ಬಿದ್ದಿರುವ ಮಹಿಳೆಯನ್ನು ಗುರುತಿಸಿದ್ದಾರೆ. ಇನ್ನೂ ಕೆಲವರು ರಾತ್ರಿಯ ಆಕಾಶದ ರಚನೆ ಗುರುತಿಸಿದ್ದಾರೆ.

(ಫೋಟೋ ಕೃಪೆ-ಟಿಕ್‌ಟಾಕ್)
ನೀವು ಮೊದಲು ಗ್ರಹವನ್ನು ನೋಡಿದರೆ
ಗ್ರಹವನ್ನು ಗಮನಿಸುವ ವ್ಯಕ್ತಿಗಳು ಹೆಚ್ಚು ಸೃಜನಶೀಲ ವ್ಯಕ್ತಿತ್ವ ಹೊಂದಿರುವವರು ಎಂದು ಹೇಳಲಾಗಿದೆ. ಆದರೆ ಅವರು ಹೊರ ಜಗತ್ತಿನ ಮುಂದೆ ತಮ್ಮ ಗುಣಗಳನ್ನು ಪ್ರದರ್ಶಿಸಲು, ತಮ್ಮ ಸೃಜಶೀಲ ವ್ಯಕ್ತಿತ್ವ ತೋರ್ಪಡಿಸಲು ಇಚ್ಛಿಸುವುದಿಲ್ಲವಂತೆ. ಅವರಲ್ಲಿ ಹಗಲು ಕನಸು ಕಾಣುವ ಇಲ್ಲವೆ ಫ್ಯಾಂಟಸಿ ಜಗತ್ತಿನಲ್ಲಿ ಕಾಲ ಕಳೆಯಲು ಹೆಚ್ಚು ಇಷ್ಟಪಡುತ್ತಾರೆ.
ನಿಮ್ಮ ಸುತ್ತಲಿನ ಲೋಕವನ್ನು ಹೆಚ್ಚು ಸುಂದರಗೊಳಿಸಲು ಇಷ್ಟಪಡುತ್ತಿರಿ. ಜೊತೆಗೆ ಯಾವಾಗಲೂ ಸಂತೋಷ ತುಂಬಿರುವಂತೆ ಮಾಡಲು ನೀವು ಮುಂದಾಗುತ್ತೀರಿ. ಎಲ್ಲಿ ಗಲಾಟೆ, ಗೊಂದಲ, ಕಷ್ಟಗಳು ಇರುವ ಕಡೆ ನೀವು ಆ ಪರಿಸ್ಥಿತಿ ಬದಲಾಯಿಸಲು ಯಾವಾಗಲು ಹಾತೊರೆಯುತ್ತೀರಿ. ಬೇರೆಯವರು ಕಷ್ಟಕ್ಕೆ ನೆರವಾಗುವುದು ನಿಮ್ಮ ಗುಣಗಳಲ್ಲಿ ಒಂದಾಗಿರುತ್ತದೆ.
ನೀವು ಮೊದಲು ಮಹಿಳೆಯನ್ನು ನೋಡಿದರೆ
ಸರೋವರದಲ್ಲಿ ಮಹಿಳೆ ತೇಲುತ್ತಿರುವುದನ್ನು ಆರಂಭದಲ್ಲಿ ಗಮನಿಸುವವರು ತುಂಬಾ ಶಾಂತವಾಗಿರುತ್ತಾರೆ. ಇತರರು ಕ್ಷುಲ್ಲಕ ವಿಷಯಗಳಲ್ಲಿ ಅಸಮಾಧಾನಗೊಂಡಾಗ ಮತ್ತು ತಮ್ಮ ಸುತ್ತಮುತ್ತಲಿನವರು ದೊಡ್ಡವರಂತೆ ವರ್ತಿಸುವುದನ್ನು ಇಷ್ಟಪಡುವುದಿಲ್ಲ. ವಿಶ್ರಾಂತಿಗಾಗಿ ಸಮಯವನ್ನು ಹುಡುಕಲು ನೀವು ಹೆಣಗಾಡುತ್ತಿದ್ದರೆ, ನಿಮ್ಮ ಕನಸಿನ ರಜಾದಿನವು ಪ್ರಕೃತಿಯ ನಡುವೆ ಸ್ವಯಂ-ಆರೈಕೆಯಲ್ಲಿ ತೊಡಗುವುದನ್ನು ಒಳಗೊಂಡಿರುತ್ತದೆ. ಈ ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಬಲವಾದ ನಿಷ್ಠೆಯನ್ನು ಪ್ರದರ್ಶಿಸುತ್ತಾರೆ, ಆಗಾಗ್ಗೆ ತಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಮತ್ತು ಅವರ ಸಂತೋಷಕ್ಕಾಗಿ ಎಲ್ಲಾ ಪ್ರಯತ್ನ ಮಾಡುತ್ತಿರುತ್ತಾರೆ.
ಮೊದಲು ಆಕಾಶ ನೋಡಿದರೆ?
ಈ ಚಿತ್ರದಲ್ಲಿ ನೀವು ಮೊದಲು ಆಶಾಶ ನೋಡಿದರೆ ನೀವು ಏಕಾಗ್ರತೆಯ ವ್ಯಕ್ತಿಯಾಗಿರುತ್ತೀರಿ. ಯಾವ ಕೆಲಸವನ್ನಾದರೂ ಅಚ್ಚುಕಟ್ಟಾಗಿ ನಿಗದಿತ ಸಮಯದಲ್ಲೇ ಮುಗಿಸುವ ಯತ್ನ ನಿಮ್ಮದಾಗಿರುತ್ತದೆ. ಬೇರೆಯವರ ಬಗ್ಗೆ ಯೋಚಿಸದೆ ನಿಮ್ಮ ಬೆಳವಣಿಗೆ ಕಡೆ ಹೆಚ್ಚು ಗಮನ ಹರಿಸಿರುತ್ತೀರಿ. ಆದರೆ ನಿಮ್ಮ ಬಳಿ ಹಣದ ಸಮಸ್ಯೆ ಹೆಚ್ಚಾಗಿರುತ್ತದೆ. ಆದರೆ ಎಲ್ಲಿಯೂ ಸಾಲ ಮಾಡುವ ಮನೋಭಾವ ನಿಮ್ಮದಾಗಿರುವುದಿಲ್ಲ.
ಈ ಚಿತ್ರದಲ್ಲಿ ಮೂರು ವಿಷಯಗಳಿವೆ. ಮರಗಳು, ದಂಪತಿ ಮತ್ತು ದೊಡ್ಡ ಮೀಸೆಯ ವ್ಯಕ್ತಿಯ ಮುಖ. ಮೂರರಲ್ಲಿ ಯಾವುದು ಮೊದಲು ನಿಮ್ಮ ಕಣ್ಣಿಗೆ ಬಿದ್ದಿದೆ ಎಂಬುದನ್ನು ನೆನಪಿಡಿ ಮತ್ತು ಚಿತ್ರವು ಏನು ಹೇಳುತ್ತಿದೆ ಎಂಬುದನ್ನು ನೋಡಿ.
ಮರಗಳು
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮ್ಮ ಕಣ್ಣುಗಳು ಮೊದಲು ಮರಗಳನ್ನು ನೋಡಿದರೆ, ನೀವು ಹೆಚ್ಚು ಸಮಯವನ್ನು ಪ್ರೀತಿಯಲ್ಲಿ ಕಳೆಯುತ್ತೀರಿ. ನಿಮ್ಮ ಸಂಗಾತಿಯ ಮೇಲೆ ನೀವು ಹೆಚ್ಚು ಪ್ರೀತಿಯನ್ನು ಹೊಂದಿರುತ್ತೀರಿ. ಯಾವುದೇ ವಿಷಯದಲ್ಲಿ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಯಾವಾಗಲೂ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಪ್ರೀತಿಯ ಜೋಡಿ
ಬಹುಶಃ ಈ ಚಿತ್ರದಲ್ಲಿ ನಿಮ್ಮ ಕಣ್ಣುಗಳು ಮೊದಲು ಪ್ರಣಯದಲ್ಲಿರುವ ಜೋಡಿಯನ್ನು ನೋಡಿದ್ದರೆ, ನೀವು ಸ್ಥಿರ ಮತ್ತು ಆರೋಗ್ಯಕರ ಸಂಬಂಧದಲ್ಲಿದ್ದೀರಿ ಎಂದರ್ಥ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಶಾಶ್ವತವಾಗಿ ಇರಲು ಬಯಸುತ್ತೀರಿ. ನಿಮ್ಮ ಜೀವನ ಸಂಗಾತಿಗಿಂತ ಜಗತ್ತಿನಲ್ಲಿ ಯಾವುದೂ ಮುಖ್ಯವಲ್ಲ ಎಂಬ ಮನಸ್ಥಿತಿಯಲ್ಲಿರುತ್ತೀರಿ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮ್ಮ ಕಣ್ಣುಗಳು ದೊಡ್ಡ ಮೀಸೆಯ ವ್ಯಕ್ತಿಯ ಮುಖವನ್ನು ಮೊದಲು ನೋಡಿದರೆ, ನೀವು ಸಂಬಂಧಕ್ಕಿಂತ ಏಕಾಂಗಿಯಾಗಿ ಬದುಕುವುದು ಉತ್ತಮ ಎಂದು ನೀವು ಭಾವಿಸುತ್ತೀರಿ. ನೀವು ಯಾವುದನ್ನೂ ಅಷ್ಟು ಸುಲಭವಾಗಿ ನಂಬುವುದಿಲ್ಲ. ಹೀಗಾಗಿ, ನೀವು ಆತುರದಲ್ಲಿ ಪ್ರೀತಿಯಲ್ಲಿ ಬೀಳುವುದಿಲ್ಲ, ಎಚ್ಚರಿಕೆಯಿಂದ ಯೋಚಿಸಿ ಮತ್ತು ಅದರ ನಂತರವೇ ಯಾವುದೇ ನಿರ್ಧಾರ ತೆಗೆದುಕೊಳ್ಳಿ.



Click it and Unblock the Notifications
