Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಯುಗಾದಿ ಹಬ್ಬದ ನಂಬಿಕೆಗಳೇನು..? ಪಚಡಿ ಸೇವಿಸುವುದೇಕೆ.? ಅದನ್ನು ಮಾಡುವುದು ಹೇಗೆ?
ಈ ವರ್ಷದ ಯುಗಾದಿ ಇನ್ನೇನು ಹತ್ತಿರ ಬರುತ್ತಿದೆ. ಇದೇ ಏಪ್ರಿಲ್ 9ರಂದು ಯುಗಾದಿ ಆಚರಿಸಲಾಗುತ್ತದೆ. ಯುಗಾದಿ ಹಿಂದೂಗಳಿಗೆ ಅತ್ಯಂತ ಪ್ರಮುಖ ಹಬ್ಬ, ಈ ಹಬ್ಬದ ಮೂಲಕ ಪ್ರತಿಯೊಂದು ಹಬ್ಬಕ್ಕೂ ಸ್ವಾಗತ ಸಿಗಲಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ಇನ್ನು ಯುಗಾದಿ ಅಂದರೆ ಹಿಂದೂಗಳ ಹೊಸ ವರ್ಷ ಅಂತಲೂ ಆಚರಿಸಲಾಗುತ್ತದೆ.
ಯುಗಾದಿಯನ್ನು ಹೊಸ ವರ್ಷದ ಆರಂಭ ಎಂಬ ಅರ್ಥದಲ್ಲೂ ಕರೆಯುತ್ತಾರೆ. ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೊಂಕಣ ಪ್ರದೇಶದವರಿಗೆ ಯುಗಾದಿ ಹೊಸ ವರ್ಷದ ಆರಂಭದ ಸೂಚನೆಯಾಗಿದೆ.
ಹಿಂದೂ ಶಾಸ್ತ್ರಗಳ ಪ್ರಕಾರ, ಈ ದಿನದಂದು ಬ್ರಹ್ಮನು ಜೀವಿಗಳ ಸೃಷ್ಟಿಗೆ ತೊಡಗಿದನು ಎಂಬುದು ಜನಜನಿತ. ದಕ್ಷಿಣ ಭಾರತದೆಲ್ಲೆಡೆ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮರಗಿಡಗಳು ಹಣ್ಣು ಹೂವುಗಳನ್ನು ನೀಡಲು ಪ್ರಾರಂಭಿಸಿದಂತೆ ಹೊಸ ಜೀವನದ ಆರಂಭಕ್ಕೆ ಯುಗಾದಿ ಕಾರಣವಾಗಿದೆ ಎಂಬುದು ಇದರ ಹಿಂದಿರುವ ನಂಬಿಕೆಯಾಗಿದೆ.

ಪ್ರತಿಯೊಬ್ಬರ ಜೀವನವು ನೋವು-ನಲಿವಿನಿಂದ ಕೂಡಿರುತ್ತದೆ. ಅವುಗಳನ್ನು ಸಮಾನ ದೃಷ್ಟಿಯಲ್ಲಿ ಸ್ವೀಕರಿಸಬೇಕು. ನೋವು ಎದುರಾದಾಗ ದೃತಿಗೆಡದೆ, ನಲಿವಿನಿಂದಾಗಿ ಅಹಂಕಾರಕ್ಕೆ ಒಳಗಾಗದೆ, ಎರಡು ಸಂದರ್ಭದಲ್ಲೂ ಸಮತೋಲನವನ್ನು ಕಾಯ್ದುಕೊಂಡು ಜೀವನವನ್ನು ನಡೆಸಬೇಕು. ಅಂತೆಯೇ ಒಂದು ವರ್ಷ ಎಂದರೆ 365 ದಿನಗಳು ಈ ದಿನಗಳಲ್ಲಿ ಸಂಪೂರ್ಣವಾಗಿ ಸಂತೋಷದಿಂದ ಹಾಗೂ ಕೇವಲ ದುಃಖದಿಂದಲೇ ಕೂಡಿರುವುದಿಲ್ಲ. ಸುಖ-ದುಃಖ ಎರದು ಚಕ್ರದ ರೀತಿಯಲ್ಲಿ ತಿರುಗುತ್ತಿರುತ್ತದೆ. ಆಗ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಸಾಗಬೇಕು ಎನ್ನುವುದೇ ಯುಗಾದಿ ಹಬ್ಬದ ಒಳಾರ್ಥ.
ಯುಗಾದಿಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದರಂತೆ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಬಹುಪಾಲು ಕಡೆ ಒಂದೇ ರೀತಿಯ ಆಚರಣೆ ಇದೆ. ಯಗಾದಿಯ ಆಚರಣೆ ಎರಡು ದಿನಗಳ ಹಿಂದೆಯೇ ಪ್ರಾರಂಭಗೊಳ್ಳುತ್ತದೆ. ಹಬ್ಬ ಪ್ರಾರಂಭವಾಗುವ ಮುನ್ನವೇ ಮನೆಯನ್ನು ಸ್ವಚ್ಛಗೊಳಿಸುವ ಕೆಲಸಗಳು ಹಬ್ಬದ ತಯಾರಿ ಮುಗಿದಿರಬೇಕು ಎಂಬುದು ಕಟ್ಟುನಿಟ್ಟಿನ ಕ್ರಮವಾಗಿದೆ. ಮನೆಯನ್ನು ಪರಿಸರವನ್ನು ಸ್ವಚ್ಛಗೊಳಿಸುವುದಲ್ಲದೆ ಯುಗಾದಿ ಕೆಲವೊಂದು ಆಚರಣೆಗಳನ್ನು ಹೊತ್ತು ತರುತ್ತದೆ.
ಯುಗಾದಿ ದಿನದಂದು ವಿಶೇಷವಾದ ಪಚಡಿಯನ್ನು ತಯಾರಿಸಲಾಗುತ್ತದೆ. ಉಪ್ಪು, ಸಿಹಿ, ಹುಳಿ, ಒಗರು, ಕಹಿ ಮತ್ತು ಖಾರ ಹೊಂದಿರುವ ವಿಶೇಷ ಪಚಡಿ ಇದಾಗಿದೆ. ಬೆಲ್ಲ, ಜೀವನದಲ್ಲಿ ಆಸಕ್ತಿ ಸೂಚಿಸುವ ಉಪ್ಪು, ಜೀವನದಲ್ಲಿ ಬರುವ ಕಷ್ಟಗಳ ಸೂಚನೆಯಾದ ಬೇವು, ಬದುಕಿನ ಸವಾಲಿನ ಕ್ಷಣಗಳಿಗೆ ಸೂಚನೆಯಾದ ಹುಳಿ, ಹೊಸ ಸವಾಲುಗಳು ಮತ್ತು ಕಾತರವನ್ನು ಸೂಚಿಸುವ ಎಳೆ ಮಾವಿನಕಾಯಿ ತುಂಡುಗಳು, ಬದುಕಿನಲ್ಲಿ ಸಿಟ್ಟಿಗೆ ಕಾರಣವಾದ ಕ್ಷಣಗಳನ್ನು ಸೂಚಿಸುವ ಮೆಣಸಿನ ಹುಡಿ ಹೀಗೆ ಈ ಆರೂ ಸಾಮಾಗ್ರಿಗಳನ್ನು ಬಳಸಿ ಪಚಡಿಯನ್ನು ತಯಾರಿಸಲಾಗುತ್ತದೆ.
ಜನರು ಬೆಳಗ್ಗೆ ಬೇಗನೆದ್ದು ಸ್ನಾನ ಮಾಡುತ್ತಾರೆ. ದೀಪಾವಳಿಯಂತೆ ಈ ಹಬ್ಬದಲ್ಲೂ ಎಣ್ಣೆ ಸ್ನಾನವೂ ಈ ದಿನದ ವಿಶೇಷವಾಗಿದೆ. ಮೈಗೆ ಎಣ್ಣೆ ಹಚ್ಚಿ ಈ ದಿನ ಸ್ನಾನಮಾಡಲಾಗುತ್ತದೆ. ಮನೆಯ ಬಾಗಿಲಿಗೆ ಮಾವಿನ ಎಲೆಯ ಹೊಸ ತೋರಣ ಕಟ್ಟಲಾಗುತ್ತದೆ. . ಶಿವ ಮತ್ತು ಪಾರ್ವತಿಯ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರಿಗೆ ಮಾವಿನ ಕಾಯಿಗಳೆಂದರೆ ತುಂಬಾ ಇಷ್ಟ ಎಂಬ ಪ್ರತೀತಿ ಇದೆ. ಆದ್ದರಿಂದ ಈ ದೇವರ ಕೃಪೆ ತಮ್ಮ ಮೇಲಿರಲಿದೆ ಎಂದು ಜನರು ಮಾವಿನ ತೋರಣಗಳಿಂದ ಮನೆಯನ್ನು ಅಲಂಕರಿಸುತ್ತಾರೆ.
ಯುಗಾದಿ ಪಚಡಿ ತಯಾರಿ ಹೇಗೆ?
- 1 ಚಮಚ ಹುಣಸೆಹಣ್ಣನ್ನು ಒಂದು ಚಿಕ್ಕ ಕಪ್ ಬಿಸಿ ನೀರಿನಲ್ಲಿ ಹಾಕಿಡಿ. ನಂತರ ಅದನ್ನು ಕಿವುಚಿ ಹುಣಸೆ ರಸ ತೆಗಿಯಿರಿ.
- ನಂತರ ಮುಕ್ಕಾಲು ಕಪ್ ನೀರು ಸೇರಿಸಿ
- ಬೆಲ್ಲವನ್ನು ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕಲೆಸಿ.
- ನಂತರ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ ಸೇರಿಸಿ, ಬೇವಿನ ಹೂ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.
- ನಂತರ 1/4 ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಸೇವಿಸಿ.



Click it and Unblock the Notifications











