Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ವಾರ ಭವಿಷ್ಯ: ವೈದಿಕಶಾಸ್ತ್ರ ಪ್ರಕಾರ ಈ ವಾರ ಈ 5 ರಾಶಿಗಳಿಗೆ ಅನುಕೂಲಕರ
ಪ್ರಮುಖ ಗ್ರಹಗಳಾದ ಸೂರ್ಯ ಮಕರ ರಾಶಿಯಲ್ಲಿದೆ, ಶನಿ ಕುಂಭ ರಾಶಿಯಲ್ಲಿದೆ, ಶುಕ್ರ ಧನು ರಾಶಿಯಲ್ಲಿ, ಬುಧ ವೃಶ್ಚಿಕ ರಾಶಿಯಲ್ಲಿದೆ. ಈ ವಾರ ಗ್ರಹಗತಿಗಳ ಸ್ತಾನವು ಈ 5 ರಾಸಿಗಳಿಗೆ ಹೆಚ್ಚು ಶುಭವಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರೇ ಜ್ಯೋತಿಷ್ಯದ ಪ್ರಕಾರ ಈ ವಾರ ಅನುಕೂಲಕರವಾಗಿದೆ.ಈ ಸಮಯವು ಉದ್ಯಮಿಗಳಿಗೆ ಬಹಳ ಲಾಭದಾಯಕವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ಈ ಸಮಯದಲ್ಲಿ ದೊಡ್ಡ ಆರ್ಥಿಕ ಲಾಭ ಪಡೆಯುತ್ತೀರಿ. ಹೂಡಿಕೆಗೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ಈ ಸಮಯವು ನಿಮಗೆ ಸರಾಸರಿಯಾಗಿರುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವಾರ ಆರ್ಥಿಕವಾಗಿ ತುಂಬಾ ಚೆನ್ನಾಗಿದೆ. ಈ ಸಮಯದಲ್ಲಿ ನೀವು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ದೂರಾಗಲಿದೆ. ವೃತ್ತಿ ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ. ಸಣ್ಣ ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭ ಪಡೆಯಬಹುದು. ಈ ರಾಶಿಯ ನಿರುದ್ಯೋಗಿಗಳು ಉದ್ಯೋಗವನ್ನುವನ್ನು ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಒಳ್ಳೆಯ ಕೆಲಸ ಸಿಗುವ ಸೂಚನೆಯಿದೆ, ನಿಮ್ಮ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಿ.
ಕನ್ಯಾ ರಾಶಿ
ಈ ವಾರ ಕುಟುಂಬದೊಂದಿಗೆ ಬಹಳ ಖುಷಿಯಿಂದ ಕಳೆಯಲು ಸಾಧ್ಯವಾಗುವುದು, ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ. ನೀವು ಅವಿವಾಹಿತರಾಗಿದ್ದು ವಿವಾಹವಾಗಲು ಬಯಸಿದ್ದರೆ ಈ ವಾರ ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಉದ್ಯೋಗಿಗಳಿಗೆ ಸಮಯ ಒಳ್ಳೆಯದಿದೆ. ಉದ್ಯೋಗಸ್ಥರು ಕಚೇರಿಯಲ್ಲಿ ಹೆಚ್ಚಿನ ಗೌರವವನ್ನು ಪಡೆಯಬಹುದು. ವಿಶೇಷವಾಗಿ ನೀವು ಸರ್ಕಾರಿ ಕೆಲಸ ಮಾಡುತ್ತಿದ್ದರೆ ಈ ಸಮಯವು ನಿಮಗೆ ತುಂಬಾ ಶುಭವಾಗಿರುತ್ತದೆ. ಹಣಕಾಸಿನ ನಿರ್ಧಾರಗಳ ಬಗ್ಗೆ ಜಾಗ್ರತೆವಹಿಸಿ.
ಕುಂಭ ರಾಶಿ
ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಈ ವಾರ ಶುಭವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಕೆಲಸದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಅದೃಷ್ಟದ ಸಮಯ. ನೀವು ಅಂದುಕೊಂಡಂತೆಯೇ ನಿಮ್ಮ ಕೆಲಸ ಕಾರ್ಯಗಳು ಪೂರ್ಣವಾಗಲಿದೆ. ಉದ್ಯೋಗದಲ್ಲಿರುವವರು ಉನ್ನತ ಸ್ಥಾನವನ್ನು ಪಡೆಯಬಹುದು. ನಿಮ್ಮ ಆದಾಯವೂ ಹೆಚ್ಚಾಗುವ ಲಕ್ಷಣಗಳಿವೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಈ ವಾರ ನಿಮಗೆ ತುಂಬಾ ಚೆನ್ನಾಗಿರಲಿದೆ.
ಮೀನ ರಾಶಿ
ಮನೆಯ ವಾತಾವರಣ ಸಂಭ್ರಮದಿಂದ ಕೂಡಿರಲಿದೆ. ಮನೆಯಲ್ಲಿ ಕೆಲವು ಶುಭ ಕಾರ್ಯಗಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಆಗಾಗ್ಗೆ ಸ್ನೇಹಿತರು ಮತ್ತು ಸಂಬಂಧಿಕರ ಭೇಟಿ ಇರುತ್ತದೆ. ಆದರೆ ಖರ್ಚಿನ ವಿಷಯದಲ್ಲಿ ಸ್ವಲ್ಪ ಜಾಗ್ರತೆವಹಿಸಿ. ವಾರದ ಮಧ್ಯದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮಿಗಳು ಇದ್ದಕ್ಕಿದ್ದಂತೆ ದೊಡ್ಡ ಲಾಭವನ್ನು ಗಳಿಸಬಹುದು. ಈ ಅವಧಿಯಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಸಹ ನೀವು ನಿರ್ಧರಿಸುತ್ತೀರಿ. ಅದೇ ಸಮಯದಲ್ಲಿ, ಉದ್ಯೋಗಿಗಳ ಮೇಲೆ ಕೆಲಸದ ಹೊರೆ ಕಡಿಮೆ ಇರಲಿದೆ. ಆದ್ದರಿಂದ ರಿಲ್ಯಾಕ್ಸ್ ಆಗಿ ಇರುತ್ತೀರಿ.



Click it and Unblock the Notifications