Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶವ ಸಂಸ್ಕಾರಕ್ಕೆ ಮಣ್ಣು, ಬೆಂಕಿ ಏನು ಬೇಡ..! ಜಲ ಸಂಸ್ಕಾರವೆಂಬ ಹೊಸ ವಿಧಾನ ರೆಡಿ..!
ನಗರಗಳು ಬೆಳೆದಂತೆ ದೊಡ್ಡ ದೊಡ್ಡ ಕಟ್ಟಡಗಳು, ಗಗನಚುಂಬಿಯಾಗಿ ಬೆಳೆದವು. ನೆಲದಲ್ಲಿ ಮಣ್ಣು ಸಹ ಸಿಗದಂತೆ ಕಾಂಕ್ರಿಟ್ ಆವರಿಸಿಕೊಂಡಿತು. ಈಗ ಜನರು ಸಾವಿಗೀಡಾದರೆ ಅವರ ಅಂತ್ಯಸಂಸ್ಕಾರಕ್ಕೂ ಸಹ ಜಾಗವಿಲ್ಲದ ಪರಿಸ್ಥಿತಿಗೆ ಬಂದುಬಿಟ್ಟಿದ್ದೇವೆ. ಹಳ್ಳಿಗಳು ಇದರಿಂದ ಹೊರತಾಗಿಲ್ಲ. ತಮಗೆ ರುದ್ರಭೂಮಿಯ ಕೊರತೆಯಿದೆ ಎಂದು ಇಂದಿಗೂ ಗಲಾಟೆಗಳು, ಹೋರಾಟಗಳು ನಡೆಯುತ್ತವೆ.
ಆದರೆ ಇದು ನಮ್ಮ ದೇಶಕ್ಕೆ ಮಾತ್ರವಲ್ಲ ವಿದೇಶದಲ್ಲೂ ಈ ಸಮಸ್ಯೆ ಇದೆ. ಆದರೆ ಇತ್ತೀಚಿಗೆ ವಿದ್ಯುತ್ ಚಿತಾಗಾರಗಳು ಸಹ ಹೆಚ್ಚಾಗಿವೆ. ದೇಶದಲ್ಲಿ ಈಗಲೂ ಸಾವಿರಾರು ಚಿತಾಗಾರಗಳು ವಿದ್ಯುತ್ ಚಾಲಿತವಾಗಿವೆ. ಆದರೆ ಇವು ಸಹ ಪರಿಸರಕ್ಕೆ ಹಾನಿ ಎಸಗುವಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುತ್ತವೆ. ಹೀಗಾಗಿ ಹೊಸದಾದ ಅಂತ್ಯಕ್ರಿಯೆಯ ವಿಧಾನವನ್ನ ಈಗ ಪರಿಚಯಿಸಲಾಗಿದೆ.
ಹೌದು ಇಂಗ್ಲೆಂಡ್‌ನ ವಿಜ್ಞಾನಿಗಳು ಹಲವಾರು ವರ್ಷಗಳ ಅಧ್ಯಯನದಿಂದ ನೀರಿನ ಮೂಲಕ ಅಂತ್ಯಸಂಸ್ಕಾರ ಮಾಡುವ ಹೊಸ ವಿಧಾನ ಕಂಡುಕೊಂಡಿದ್ದು ಇದಕ್ಕೆ ವಾಟರ್ ಕ್ರಿಮಿಷನ್ ಎನ್ನಲಾಗಿದೆ. ಭವಿಷ್ಯದಲ್ಲಿ ನೀರಿನ ಮೂಲಕವೇ ಅಂತ್ಯಸಂಸ್ಕಾರ ನಡೆಸಲು ಎಲ್ಲಾ ದೇಶಗಳು ಸಿದ್ಧತೆ ನಡೆಸಿವೆ. ಹಾಗಾದರೆ ಏನಿದು ನೀರಿನಿಂದ ಅಂತ್ಯಸಂಸ್ಕಾರ ಹೇಗೆ ನಡೆಸಲಾಗುತ್ತದೆ ಎಂಬುದನ್ನು ನಾವಿಂದು ನೋಡೋಣ.

ಅಕ್ವಾಮೇಶನ್, ರೆಸೋಮೇಷನ್ ಮತ್ತು ಜಲ ಶವಸಂಸ್ಕಾರ ಎಂದೂ ಕರೆಯಲ್ಪಡುವ ನೀರಿನ ಸಂಸ್ಕಾರವು ದೇಹವನ್ನು ಕೆಲವು ಗಂಟೆಯಲ್ಲಿ ಸಂಸ್ಕಾರ ಮಾಡಲಿದೆ. ಇದರಲ್ಲಿ ನಿಮಗೆ ನಿಮ್ಮ ಸಂಬಂಧಿಕರ ಮೂಳೆಗಳನ್ನು ಮಾತ್ರ ವಾಪಾಸು ನೀಡಲಾಗುತ್ತದೆ.
ಜಲ ಸಂಸ್ಕಾರ ನಡೆಯುವುದು ಹೇಗೆ?
ಶವವನ್ನು ಮೊದಲು ನೀರು ಮತ್ತು ಕ್ಷಾರೀಯ ದ್ರಾವಣದಿಂದ ತುಂಬಿದ ಉಕ್ಕಿನ ಪಾತ್ರೆಯಲ್ಲಿ ಇರಿಸಲಾಗುತ್ತದೆ. ನಂತರ ಅದನ್ನು ಬಿಸಿಮಾಡಲಾಗುತ್ತದೆ, ಇದು ಶವವನ್ನು ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸುತ್ತದೆ. ಅಮೈನೋ ಆಮ್ಲಗಳು, ಪೆಪ್ಟೈಡ್ಗಳು, ಸಕ್ಕರೆಗಳು ಮತ್ತು ಲವಣಗಳು ನೀರಿನಲ್ಲಿ ಬಿಡುಗಡೆಯಾಗುತ್ತದೆ.
ಸುಮಾರು ಮೂರರಿಂದ ನಾಲ್ಕು ಗಂಟೆಗಳ ನಂತರ, ಚರ್ಮವೆಲ್ಲಾ ನೀರಿನಲ್ಲಿ ಕರಗುತ್ತವೆ ಬರೀ ಮೂಳೆಗಳು ಮಾತ್ರ ಉಳಿಯುತ್ತವೆ. ನಂತರ ಅವುಗಳನ್ನು ಬಿಳಿ ಪುಡಿ ಪುಡಿ ಮಾಡಿ, ಒಂದು ಪಾತ್ರೆಯಲ್ಲಿ ಇರಿಸಿ ಮತ್ತು ಕುಟುಂಬಕ್ಕೆ ನೀಡಲಾಗುತ್ತದೆ.
ಆರೋಗ್ಯ, ಸುರಕ್ಷತೆ ಮತ್ತು ಪರಿಸರ ನಿಯಂತ್ರಣದ ಅನುಸರಣೆಗೆ ಒಳಪಟ್ಟು ನೀರಿನ ಶವಸಂಸ್ಕಾರವು ಯುಕೆಯಲ್ಲಿ ಈಗಾಗಲೇ ಕಾನೂನುಬದ್ಧವಾಗಿದೆ. ಜೊತೆಗೆ ನೂರಾರು ಶವಗಳ ಸಂಸ್ಕಾರ ಇದೇ ರೀತಿ ನಡೆಯುತ್ತಿದೆ. ಇದು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರೋಧಿ ನಾಯಕ ಡೆಸ್ಮಂಡ್ ಟುಟು 2021 ರಲ್ಲಿ ಅವರ ಮರಣದ ನಂತರ ಇದೇ ವಿಧಾನ ಆಯ್ಕೆ ಮಾಡಲಾಗಿತ್ತು. ಇದು ವಿದ್ಯುತ್ ಮತ್ತು ಅಗ್ನಿ ಸಂಸ್ಕಾರಕ್ಕಿಂತ ಐದು ಪಟ್ಟು ಕಡಿಮೆ ಶಕ್ತಿಯನ್ನು ಬಳಸುತ್ತದೆ. ಮತ್ತು ಪರಿಸರಕ್ಕೆ ಹಾನಿ ಮಾಡುವುದಿಲ್ಲವಂತೆ.
ಒಂದು ಸಾಂಪ್ರದಾಯಿಕ ಶವಸಂಸ್ಕಾರದಿಂದ ಸುಮಾರು 245 ಕೆಜಿ ಇಂಗಾಲ ಹೊರಸೂಸುವಿಕೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು 29,000 ಬಾರಿ ಚಾರ್ಜ್ ಮಾಡುವುದಕ್ಕೆ ಸಮಾನವಾಗಿರುತ್ತದೆ. ಆದರೆ ಈ ಜಲಸಂಸ್ಕಾರವು ಇದಕ್ಕಿಂತ ಕಡಿಮೆ ಮಟ್ಟದ ಇಂಗಾಲ ಹೊರಸೂಸುತ್ತದೆ. ಹೀಗಾಗಿ ಜಗತ್ತಿನಲ್ಲಿ ಈಗ ಬಳಕೆಯಲ್ಲಿರುವ ಅತ್ಯಂತ ಪರಿಸರ ಸ್ನೇಹಿ ಮಾರ್ಗವೆಂದು ಇದನ್ನು ಪರಿಗಣಿಸಲಾಗಿದೆ.
ಯಾವೆಲ್ಲಾ ದೇಶದಲ್ಲಿ ಜಲ ಸಂಸ್ಕಾರ ನಡೆಯುತ್ತಿದೆ?
ಇಂಗ್ಲೆಂಡ್‌ನಲ್ಲಿ ಆರಂಭಗೊಂಡ ಈ ಸೇವೆಯು ಈಗ ಯೂರೋಪ್ ಮತ್ತು ಆಫ್ರಿಕಾ ಖಂಡಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಅಲ್ಲಿ ಜಾಗದ ಕೊರತೆ ಹಾಗೂ ಅರಣ್ಯ ನಾಶ ಹೆಚ್ಚಾದ ಹಿನ್ನೆಲೆ ಈಗ ಜಲ ಸಂಸ್ಕಾರ ಹೆಚ್ಚಾಗುತ್ತಿದೆ. ಐರ್ಲೆಂಡ್ ಈ ವರ್ಷ ತನ್ನ ಮೊದಲ ನೀರಿನ ಶವಸಂಸ್ಕಾರ ಸೌಲಭ್ಯವನ್ನು ತೆರೆಯಲು ಸಿದ್ಧವಾಗಿದೆ. ಈ ಸೇವೆಯು ಯುಎಸ್, ಕೆನಡಾ ಮತ್ತು ದಕ್ಷಿಣ ಆಫ್ರಿಕಾದಲ್ಲಿಯೂ ಲಭ್ಯವಿದೆ.
ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್‌ಗಳು ಈಗಾಗಲೇ ಈ ವಿಧಾನ ಬಳಕೆಗೆ ಕಾನೂನಾತ್ಮಕ ಒಪ್ಪಿಗೆ ಪಡೆಯಲು ಮುಂದಾಗಿವೆ. ಇದನ್ನು ಹೊರತುಪಡಿಸಿ ಜನಸಂಖ್ಯೆ ಅಧಿಕವಿರುವ ರಾಷ್ಟ್ರಗಳು ಸಹ ಈ ವಿಧಾನದ ಕಡೆ ಹೆಚ್ಚು ಒಲವು ಹೊಂದಿದೆ. ಮುಂದೊಂದು ದಿನ ಭಾರತದಲ್ಲೂ ಈ ರೀತಿ ಜಲ ಸಂಸ್ಕಾರ ವಿಧಾನ ಬಂದರೆ ಅಚ್ಚರಿ ಏನಿಲ್ಲ.



Click it and Unblock the Notifications