Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಧುರ ನೀತಿಯನ್ನು ಪಾಲಿಸಿದವನಿಗೆ ಜೀವನದಲ್ಲಿ ಖುಷಿ, ಯಶಸ್ಸು ಖಂಡಿತ
ಮನುಷ್ಯ ಜೀವನದಲ್ಲಿ ಖುಷಿಯಾಗಿರೋದಕ್ಕೆ ಏನೆಲ್ಲಾ ಮಾಡುತ್ತಾನೆ. ಹಣ, ಆಸ್ತಿ, ಅಂತಸ್ತು ಎಲ್ಲವನ್ನೂ ಸಂಪಾದನೆ ಮಾಡುತ್ತಾನೆ. ಸ್ನೇಹಿತರ, ಸಂಬಂಧಿಕರ ಪ್ರೀತಿ, ವಿಶ್ವಾಸ ಗಳಿಸೋದಕ್ಕೆ ಪ್ರಯತ್ನಿಸುತ್ತಾನೆ. ಆದರೂ ಕೂಡ ಕೆಲವೊಂದು ಸಲ ತನ್ನ ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳೋದ್ರಲ್ಲಿ ಸೋತು ಹೋಗುತ್ತಾನೆ.
ಮಹಾಭಾರತ ಕಾಲದ ಮಹಾನ್ ಚಿಂತಕ ಹಾಗೂ ವಿಧ್ವಾಂಸನಾಗಿದ್ದ ವಿಧುರನ ಬಗ್ಗೆ ನಿಮ್ಮಗೆಲ್ಲಾ ಗೊತ್ತೇ ಇದೆ. ಈತ ಪ್ರಮುಖ ರಾಜಕೀಯ ಶಾಸ್ತ್ರಜ್ಞನು ಹೌದು.

ಈತನು ರೂಪಿಸಿದ ನೀತಿಗಳು ಇಂದಿಗೂ ಜನ ಜೀವನಕ್ಕೆ ದಾರಿ ದೀಪವಾಗಿದೆ. ಇನ್ನೂ ಜೀವನದಲ್ಲಿ ಖುಷಿಯಾಗಿರೋದಕ್ಕೂ ವಿಧುರನು ಕೆಲವೊಂದು ನೀತಿಗಳನ್ನು ರೂಪಿಸಿದ್ದಾನೆ. ಅವುಗಳು ಯಾವುದು ಅನ್ನೋದನ್ನ ತಿಳಿಯೋಣ.
1. ಜ್ಞಾನ
ವಿಧುರನ ಪ್ರಕಾರ ಜ್ಞಾನ ಅನ್ನೋದು ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ನಮ್ಮಲ್ಲಿ ಅಗಾಧ ಜ್ಞಾನವಿದ್ದಾಗ ಎಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ನಮ್ಮ ಜ್ಞಾನವನ್ನು ಉಪಯೋಗಿಸಿ ಸುಲಭವಾಗಿ ಆಚೆ ಬರಬಹುದು. ಇನ್ನೂ ಯಾವ ವ್ಯಕ್ತಿ ಜ್ಞಾನ ಸಂಪಾದಿಸುತ್ತಾನೋ ಆತ ಸಮಾಜದಲ್ಲಿ ಉತ್ತಮ ಗೌರವ ಪಡೆಯುತ್ತಾನೆ, ಇತರರಿಗೆ ಮಾರ್ಗದಶನ ಮಾಡಬಹುದು ಹಾಗೂ ಸ್ವಯಂಪೂರ್ಣ ಬದುಕನ್ನು ಕಟ್ಟಿಕೊಳ್ಳಬಹುದು. ಇಂತಹ ವ್ಯಕ್ತಿ ಯಶಸ್ವಿಯೂ ಆಗುತ್ತಾನೆ. ಜೀವನದಲ್ಲಿ ತುಂಬಾನೇ ಖುಷಿಯಾಗಿಯೂ ಇರುತ್ತಾನೆ.
2. ಧೈರ್ಯ
ವಿಧುರ ನೀತಿಯ ಪ್ರಕಾರ ಯಾವ ವ್ಯಕ್ತಿಗೆ ಭಯ ಇರೋದಿಲ್ಲವೋ ಆತ ಏನು ಕೆಲಸ ಮಾಡಬೇಕಾದರೂ ದೈರ್ಯದಿಂದ ಮುನ್ನುಗ್ಗುತ್ತಾನೆ. ಬೇರೆಯವರಿಗಾಗಿ ಕಾಯೋದಿಲ್ಲ. ಭಯ ಇದ್ದಾಗ ಮಾತ್ರ ಇನ್ನೊಬ್ಬರ ಮೇಲೆ ಅವಲಂಬಿತವಾಗಲೇ ಬೇಕಾಗುತ್ತದೆ. ಹೀಗಾಗಿ ಯಾರು ದೈರ್ಯವಂತನಾಗಿರುತ್ತಾನೋ ಆತ ಯಶಸ್ವಿಯಾಗುತ್ತಾನೆ. ಹಾಗೂ ಜೀವನದಲ್ಲಿ ಖುಷಿಯಾಗಿರುತ್ತಾನೆ.
3. ಸರಳತೆ
ವಿಧುರ ನೀತಿಯ ಪ್ರಕಾರ ಎಷ್ಟು ದೊಡ್ಡ ವ್ಯಕ್ತಿಯಾರೂ ಆತನಲ್ಲಿ ಸರಳತೆ ಅನ್ನೋದು ಇರಲೇಬೇಕಾಗುತ್ತದೆ. ಯಾರೇ ಆದರೂ ಸರಿ ಹಣ ಅಥವಾ ಅಧಿಕಾರದ ದರ್ಪ ತೋರಲೇಬಾರದು. ಇದ್ಯಾವುದು ಜೀವನದಲ್ಲಿ ಶಾಶ್ವತ ಅಲ್ಲ. ಹೀಗಾಗಿ ಯಾರು ಕಡೇವರೆಗೂ ಸರಳತೆಯಿಂದ ಜೀವನವನ್ನು ನಡೆಸುತ್ತಾನೋ ಆತ ಯಶಸ್ಸು ಸಾಧಿಸುತ್ತಾನೆ ಹಾಗೆಯೇ ಖುಷಿಯಾಗಿರುತ್ತಾನೆ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
4. ನಿಯಂತ್ರಣ
ವಿಧುರನ ಪ್ರಕಾರ ಜೀವನದಲ್ಲಿ ಎಲ್ಲಾ ವಿಚಾರಗಳ ಮೇಲೆ ಯಾರಿಗೆ ನಿಯಂತ್ರಣ ಇರುತ್ತದೋ ಅವನಿಗೆ ಎಂದಿಗೂ ಸೋಲಿಲ್ಲ. ಕೋಪ, ಖುಷಿ, ದು:ಖ, ಮಾತು ಹೀಗೆ ಎಲ್ಲದರ ಮೇಲೆ ನಿಯಂತ್ರಣ ಹೊಂದಿರುವವನು ಮಾತ್ರ ಯಶಸ್ಸು ಸಾಧಿಸೋದಕ್ಕೆ ಸಾಧ್ಯ. ಹೀಗಾಗಿ ಜೀವನದ ಬಂಡಿಯನ್ನು ಸಂತೋಷದಿಂದ ಸಾಗಿಸಬೇಕೆಂದರೆ ಅದ್ರಲ್ಲಿ ನಿಯಂತ್ರಣ ಅನ್ನೋ ಕೀಲಿ ಇರಲೇಬೇಕು.
5. ಸರಿ ಹಾಗೂ ತಪ್ಪುಗಳ ಬಗ್ಗೆ ಅರಿತುಕೊಳ್ಳಿ
ವಿಧುರನ ಪ್ರಕಾರ ನಾವು ಯಾವಾಗ ನೈತಿಕವಾಗಿ ಬದುಕುತ್ತೇವೋ ಆಗ ಮಾತ್ರ ನಮಗೆ ಯಶಸ್ಸು ಒಲಿಯೋದಕ್ಕೆ ಸಾಧ್ಯ. ಯಾವ ವ್ಯಕ್ತಿಯು ಬುದ್ಧಿವಂತಿಕೆ ಹಾಗೂ ಜ್ಞಾನವನ್ನು ಬಳಸಿಕೊಂಡು ಸರಿ-ತಪ್ಪುಗಳನ್ನು ಗುರುತಿಸುವ ಶಕ್ತಿ ಹೊಂದಿರುತ್ತಾನೋ ಆ ವ್ಯಕ್ತಿ ಯಾವತ್ತಿಗೂ ತನ್ನ ನಿರ್ಧಾರಗಳಿಂದ ಪಶ್ಚಾತಾಪ ಪಡೋದಿಲ್ಲ. ಹಾಗೂ ಖುಷಿಯಾದ ಜೀವನವನ್ನು ಸಾಗಿಸುತ್ತಾನೆ.
ಜೀವನದಲ್ಲಿ ಖುಷಿಯಾಗಿರಬೇಕೆಂದರೆ ನೂರಾರು ಮಾರ್ಗಗಳಿದೆ. ಆದರೆ ಅವೆಲ್ಲಾ ನಿಮಗೆ ಶಾಶ್ವತ ಖುಷಿಯನ್ನು ನೀಡುತ್ತವೆ ಎಂಬ ಗ್ಯಾರಂಟಿ ಇಲ್ಲ. ಹೀಗಾಗಿ ವಿಧುರನ ಈ ನೀತಿಗಳನ್ನು ಪಾಲಿಸಿದರೆ ಜೀವನದುದ್ದಕ್ಕೂ ಮನುಷ್ಯ ಖುಷಿಯಾಗಿರಬಹುದು.



Click it and Unblock the Notifications



