Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Vibhuvana Sankashti Chaturthi 2023: ಆಗಸ್ಟ್ 4ಕ್ಕೆ ವಿಭುವನ ಸಂಕಷ್ಟಿ ಚತುರ್ಥಿ ಶುಭ ಮುಹೂರ್ತ, ಆಚರಣಾ ವಿಧಿ!
ಆಗಸ್ಟ್ 4 ರಂದು ವಿಭುವನ ಸಂಕಷ್ಟಿ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳಲ್ಲಿ ಎರಡು ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ. ಒಂದು ಕೃಷ್ಣ ಪಕ್ಷದಲ್ಲಿ ಮತ್ತು ಇನ್ನೊಂದು ಶುಕ್ಲ ಪಕ್ಷದಲ್ಲಿ. ಆದರೆ ವಿಭುವನ ಸಂಕಷ್ಟ ಚತುರ್ಥಿಯು ಪ್ರತಿ ಮೂರು ವರ್ಷಗಳಿಗೊಮ್ಮೆ ಮಾತ್ರ ಬರುತ್ತದೆ. ಹೀಗಾಗಿ ಇದನ್ನು ತುಂಬಾನೇ ವಿಶೇಷವೆಂದು ಪರಿಗಣಿಸಲಾಗಿದೆ.
ಸಾಮಾನ್ಯವಾಗಿ ಈ ವಿಭುವನ ಸಂಕಷ್ಟಿ ಚತುರ್ಥಿತಿಯು ಶ್ರಾವಣ ಮಾಸದಲ್ಲಿ ಮಾತ್ರ ಬರುತ್ತದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ವಿಭುವನ ಸಂಕಷ್ಟಿ ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನದಂದು ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಈ ವಿಭುವನ ಸಂಕಷ್ಟಿ ಚತುರ್ಥಿ ದಿನದಂದು ಗಣೇಶನನ್ನು ಪೂಜಿಸೋದ್ರಿಂದ ನಿಮ್ಮ ಬದುಕಿನಲ್ಲಿ ಸಂತೋಷ ಮತ್ತು ಸಮೃದ್ಧಿಯು ಹೆಚ್ಚಾಗುತ್ತಂತೆ. ಈ ದಿನ ಉಪವಾಸ ಕೈಗೊಂಡ್ರೆ ತುಂಬಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ. ಅಷ್ಟಕ್ಕು ವಿಭುವನ ಸಂಕಷ್ಟಿ ಚತುರ್ಥಿ ವ್ರತವನ್ನು ಯಾವ ರೀತಿ ಆಚರಣೆ ಮಾಡಬೇಕು? ಶುಭ ದಿನಾಂಕ, ಮುಹೂರ್ತ ಹಾಗೂ ಪೂಜಾ ವಿಧಿಗಳ ಬಗ್ಗೆ ತಿಳಿಯೋಣ.
ವಿಭುವನ ಸಂಕಷ್ಠಿ ಚತುರ್ಥಿ 2023 ದಿನಾಂಕ :
ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯು ಆಗಸ್ಟ್ 4 ರಂದು ಶುಕ್ರವಾರ ಮಧ್ಯಾಹ್ನ 12.45 ಕ್ಕೆ ಪ್ರಾರಂಭವಾಗುತ್ತದೆ. ಇದು ಆಗಸ್ಟ್ 05 ರಂದು ಶನಿವಾರ ರಾತ್ರಿ 09:39 ಕ್ಕೆ ಕೊನೆಗೊಳ್ಳುತ್ತದೆ. ಈ ದಿನದಂದು ಗಣೇಶನೊಂದಿಗೆ ಚಂದ್ರನ ಪೂಜೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆಗಸ್ಟ್ 4 ರಂದು ಚಂದ್ರೋದಯದ ಸಮಯವಾಗಿರುತ್ತದೆ. ಹೀಗಾಗಿ ವಿಭುವನ ಸಂಕಷ್ಟಿ ಚತುರ್ಥಿಯ ಉಪವಾಸವನ್ನು ಆಗಸ್ಟ್ 4 ರಂದು ಮಾತ್ರ ಆಚರಿಸಲಾಗುತ್ತದೆ.
ವಿಭುವನ ಸಂಕಷ್ಟ ಚತುರ್ಥಿ 2023 ಪೂಜಾ ಸಮಯ :
ಆಗಸ್ಟ್ 4 ರಂದು ವಿಭುವನ ಸಂಕಷ್ಟಿ ಚತುರ್ಥಿಯ ದಿನದಂದು ಪೂಜೆಗೆ ಶುಭ ಮುಹೂರ್ತವು ಮುಂಜಾನೆ 05.39 ರಿಂದ 07.21 ರವರೆಗೆ ಇರುತ್ತದೆ. ಇದಾದ ನಂತರ ಎರಡನೇ ಮುಹೂರ್ತವು ಬೆಳಿಗ್ಗೆ 10.45 ರಿಂದ ಮಧ್ಯಾಹ್ನ 03.52 ರವರೆಗೆ ಇರುತ್ತದೆ.
ವಿಭುವನ ಸಂಕಷ್ಟಿ ಚತುರ್ಥಿ 2023 ಚಂದ್ರೋದಯ ಸಮಯಗಳು :
ಆಗಸ್ಟ್ 4 ರಂದು ಚಂದ್ರನು ರಾತ್ರಿ 09:20 ಕ್ಕೆ ಉದಯಿಸುತ್ತಾನೆ. ಈ ದಿನ ಚಂದ್ರೋದಯದ ಸಮಯದಲ್ಲಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ ಉಪವಾಸವನ್ನು ಮುರಿಯಬಹುದು.
ವಿಭುವನ ಸಂಕಷ್ಟಿ ಚತುರ್ಥಿ 2023 ಪೂಜಾ ವಿಧಾನ ಹೇಗಿರಬೇಕು?
- ವಿಭುವನ ಸಂಕಷ್ಟ ಚತುರ್ಥಿಯ ದಿನ ಬೆಳಗ್ಗೆ ಬೇಗ ಎದ್ದು ಪವಿತ್ರ ಸ್ನಾನ ಮಾಡಿ
- ಈ ದಿನ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜೆ ಮಾಡಬೇಕು
- ಪೂಜೆ ಮಾಡುವಾಗ ನಿಮ್ಮ ಮುಖವನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು
- ದೇವರನ್ನು ಸ್ವಚ್ಛವಾದ ಆಸನದ ಮೇಲೆ ಪ್ರತಿಷ್ಠಾಪನೆ ಮಾಡಬೇಕು
- ದೇವರ ವಿಗ್ರಹ ಅಥವಾ ಚಿತ್ರದ ಮುಂದೆ ದೀಪಗಳನ್ನು ಬೆಳಗಿಸಿ
- ಓಂ ಗಣೇಶಾಯ ನಮಃ ಅಥವಾ ಓಂ ಗಣ ಗಣಪತಯೇ ನಮಃ ಎಂದು ಜಪಿಸಿ
- ಪೂಜೆಯ ನಂತರ ದೇವರಿಗೆ ಲಡ್ಡು ಅಥವಾ ಎಳ್ಳಿನ ಸಿಹಿತಿಂಡಿಗಳನ್ನು ಅರ್ಪಿಸಿ
- ಸಂಜೆ ವ್ರತ ಕಥಾವನ್ನು ಓದಬೇಕು
- ಸಂಜೆ ಚಂದ್ರನನ್ನು ನೋಡಿದ ನಂತರ ನಿಮ್ಮ ಉಪವಾಸವನ್ನು ಮುರಿಯಬೇಕು
- ನಿಮ್ಮ ಉಪವಾಸವನ್ನು ಪೂರ್ಣಗೊಳಿಸಿದ ನಂತರ ದಾನ ಮಾಡಿ
ವಿಭುವನ ಸಂಕಷ್ಟ ಚತುರ್ಥಿ ವ್ರತದ ಮಹತ್ವವೇನು?
ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಅವನು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಹೀಗಾಗಿ ಪವಿತ್ರ ವಿಭುವನ ಸಂಕಷ್ಟಿ ಚತುರ್ಥಿಯ ದಿನದಂದು ಉಪವಾಸವಿದ್ದು ಗಣಪತಿಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತೆ ಎಂದು ನಂಬಲಾಗಿದೆ.
ಹಿಂದೂ ಧರ್ಮದಲ್ಲಿ ವಿಭುವನ ಸಂಕಷ್ಟ ಚತುರ್ಥಿಗೆ ವಿಶೇಷ ಮಹತ್ವವನ್ನು ನೀಡಲಾಗಿದ್ದು ಈ ದಿನ ಭಕ್ತಿಯಿಂದ ಉಪವಾಸ ವ್ರತವನ್ನು ಕೈಗೊಂಡರೆ ನಮ್ಮೆಲ್ಲಾ ಕಷ್ಟಗಳು ಪರಿಹಾರವಾಗಿ ಇಷ್ಟಾರ್ಥ ನೆರವೇರುತ್ತೆ ಎನ್ನುವ ನಂಬಿಕೆಯಿದೆ.



Click it and Unblock the Notifications

