Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಿಂಹ ರಾಶಿಯಲ್ಲಿರುವ ಶುಕ್ರದಿಂದಾಗ ರಾಜಯೋಗ: ಈ 3 ರಾಶಿಯವರಿಗೆ ಧನಯೋಗ
ಜುಲೈ7ಕ್ಕೆ ಶುಕ್ರನು ಸಿಂಹ ರಾಶಿಗೆ ಸಂಚರಿಸಿದೆ. ಸಿಂಹ ರಾಶಿಯ ಅಧಿಪತಿ ಸೂರ್ಯ, ಇದೀಗ ಶುಕ್ರ ಇದೇ ರಾಶಿಯಲ್ಲಿರುವುದರಿಂದ ರಾಜಯೋಗ ಏರ್ಪಡಲಿದೆ. ಆದರೆ ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಇರಲ್ಲ, ಶುಕ್ರ 1, 7, 9ನೇ ಸ್ಥಾನದಲ್ಲಿರುವವರು ಇದರ ಪ್ರಯೋಜನ ಪಡೆಯಲಿದ್ದಾರೆ.
ಈ ಶುಕ್ರ ಚಂಚಾರ ಈ ಮೂರು ರಾಶಿಯವರಲ್ಲಿ ರಾಜಯೋಗ ಏರ್ಪಡಿಸಿದ್ದು, ಈ ಸಮಯದಲ್ಲಿ ಈ ಮೂರು ರಾಶಿಯವರಿಗೆ ತುಂಬಾನೇ ಅನುಕೂಲಕರವಾಗರಲಿದೆ, ಆಗಸ್ಟ್ 7ರವರೆಗೆ ಈ ರಾಜಯೋಗವಿರಲಿದೆ:

ಮೇಷ ರಾಶಿ
ಮೇಷ ರಾಶಿಯವರಿಗೆ, ಶುಕ್ರನು ಎರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಈಗ ಶುಕ್ರನು ನಿಮ್ಮ ಐದನೇ ಮನೆಯಲ್ಲಿದೆ. ಈ ಮನೆಯಲ್ಲಿ ಕುಳಿತಿರುವ ಶುಕ್ರನ ಏಳನೇ ಅಂಶವು ನಿಮ್ಮ ಹನ್ನೊಂದನೇ ಮನೆಯಲ್ಲಿ ಅಂದರೆ ಲಾಭಸ್ಥಾನದಲ್ಲಿದೆ. ಶುಕ್ರನ ಸಂಚಾರವು ನಿಮ್ಮ ವೈವಾಹಿಕ ಮತ್ತು ಪ್ರೇಮ ಜೀವನಕ್ಕೆ ತುಂಬಾ ಒಳ್ಳೆಯದು. ಪ್ರೀತಿಸುತ್ತಿರುವವರು ಈ ಸಮಯದಲ್ಲಿ ತಮ್ಮ ಪ್ರೀತಿಯನ್ನು ಮನೆಯಲ್ಲಿ ಹೇಳಿ ಒಪ್ಪಿಗೆ ಪಡೆಯಲು ಸೂಕ್ತವಾಗಿದೆ. ಈ ಅವಧಿ ನಿಮಗೆ ಲಾಭದಾಯಕವಾಗಿರಲಿದೆ. ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸಬಹುದು. ವ್ಯಾಪಾರಸ್ಥರು ಈ ಸಮಯದಲ್ಲಿ ಒಳ್ಳೆಯ ಲಾಭ ಗಳಿಸುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಶುಕ್ರನು ಹತ್ತನೇ ಮತ್ತು ಮೂರನೇ ಮನೆಯ ಅಧಿಪತಿಯಾಗಿದ್ದು ಈ ಸಂಚಾರದ ಸಮಯದಲ್ಲಿ ಶುಕ್ರ ನಿಮ್ಮ ಮೊದಲ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಕುಳಿತಿರುವ ಶುಕ್ರನ ಸಪ್ತಮ ದೃಷ್ಟಿ ನಿಮ್ಮ ಏಳನೇ ಮನೆಯ ಮೇಲೆ ಅಂದರೆ ಹೆಂಡತಿಯ ಮನೆಯ ಮೇಲೆ ಇರಲಿದೆ. ಈ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ ನಿಮ್ಮ ಮಾತಿನಿಂದ ಜನರ ಮನಸ್ಸು ಗೆಲ್ಲುತ್ತೀರಿ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ, ನಿಮ್ಮ ಕೆಲಸವನ್ನು ಮೇಲಾಧಿಕಾರಿ ಮೆಚ್ಚಿಕೊಳ್ಳುತ್ತಾರೆ. ಈ ಸಮಯದಲ್ಲಿ ಅವಿವಾಹಿತರಿಗೆವಿವಾಹದ ಪ್ರಸ್ತಾಪವು ಬರಬಹುದು. ಒಡಹುಟ್ಟಿದವರು ಸಹ ಪ್ರಯೋಜನ ಪಡೆಯುತ್ತಾರೆ, ಕುಟುಂಬ ಸದಸ್ಯರ ಜೊತೆಗೆ ತುಂಬಾ ಚೆನ್ನಾಗಿರುತ್ತದೆ. ಈ ಅವಧಿ ತುಂಬಾನೇ ಅನುಕೂಲಕರವಾಗಿದೆ. ನಿಮ್ಮ ಕನಸು ನನಸಾಗಲಿದೆ.
ಧನು ರಾಶಿ
ಧನು ರಾಶಿಯವರಿಗೆ, ಶುಕ್ರನು ಆರು ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು, ನಿಮ್ಮ 9ನೇ ಮನೆಯಲ್ಲಿ ಇರಲಿದೆ, ಇದು ಅದೃಷ್ಟದ ಮನೆಯಾಗಿದೆ. ಈ ಮನೆಯಲ್ಲಿ ಕುಳಿತಿರುವ ಶುಕ್ರನ ದೃಷ್ಟಿ 3ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ ನಿಮ್ಮ ಗುರುಗಳು ಮತ್ತು ತಂದೆಯ ಆಶೀರ್ವಾದವನ್ನು ನೀವು ಪಡೆಯುತ್ತೀರಿ. ಈ ಸಮಯದಲ್ಲಿ ಮಾಡುವ ಪ್ರಯಾಣದಿಂದ ನೀವು ಲಾಭ ಗಳಿಸುತ್ತೀರಿ. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಧಾರ್ಮಿಕ ಪ್ರಯಾಣ ಮಾಡುತ್ತೀರಿ. ನೀವು ಉದ್ಯಮಿಯಾಗಿದ್ದರೆ ಮತ್ತು ದೀರ್ಘಕಾಲದವರೆಗೆ ಹೂಡಿಕೆಯನ್ನು ಹುಡುಕುತ್ತಿದ್ದರೆ, ಆ ಹೂಡಿಕೆಯಿಂದ ಈ ಅವಧಿಯಲ್ಲಿ ಲಾಭ ಸಿಗಲಿದೆ. ಈ ಸಮಯದಲ್ಲಿ, ನೀವು ಕೆಲಸವನ್ನು ಬದಲಾಯಿಸಲು ಬಯಸಿದರೆ, ಇದು ಅನುಕೂಲಕರ ಸಮಯವಾಗಿದೆ.



Click it and Unblock the Notifications
