Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಚಾರ 2023 : ಈ ರಾಶಿಯವರಿಗೆ ಧನ ನಷ್ಟ!
ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಚಾರ ಮಾಡುತ್ತಿರೋದ್ರಿಂದ ಕೆಲವೊಂದು ರಾಶಿಯವರಿಗೆ ಈ ಸಂಚಾರದಿಂದ ಸಂಕಷ್ಟಗಳು ಎದುರಾಗಲಿದೆ. ಶುಕ್ರನು ಮೇ 30 ರಂದು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಮತ್ತು ಜುಲೈ 7 ರವರೆಗೆ ಅದೇ ರಾಶಿಯಲ್ಲಿ ಇರಲಿದ್ದಾನೆ. ಜೂನ್ ತಿಂಗಳ ಶುಕ್ರ ಸಂಕ್ರಮಣದಿಂದ ಕೆಲವೊಂದು ರಾಶಿಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಇದರಿಂದ ತೊಂದರೆ ಆಗಲಿದೆ ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ಕರ್ಕಾಟಕ ರಾಶಿಯಲ್ಲಿ ಶುಕ್ರನು ಸಂಚಾರ ಮಾಡುತ್ತಿರೋದ್ರಿಂದ ವೃಷಭ ರಾಶಿಯವರು ಕೊಂಚ ಜಾಗರೂಕರಾಗಿ ಇರಬೇಕು. ನಿಮ್ಮ ಸ್ನೇಹಿತರಿಂದಾಗಿ ನೀವು ತೊಂದರೆಗೆ ಒಳಗಾಗಬಹುದು. ಪ್ರೀತಿಸಿದವರ ಜೊತೆಯಲ್ಲಿ ಕಲಹ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಕೆಲವು ಹವ್ಯಾಸಗಳು ನಿಮ್ಮ ಜೇಬು ಖಾಲಿ ಮಾಡಿಬಿಡಬಹುದು. ಆದ್ದರಿಂದ ಯಾವುದೇ ಬೇಡದ ವಿಚಾರದ ಬಗ್ಗೆ ಉತ್ಸುಕರಾಗಿ ಇರಬೇಡಿ.ಇದರಿಂದ ನಿಮಗೆ ನಷ್ಟ ಉಂಟಾಗುತ್ತದೆ.

ಸಿಂಹ ರಾಶಿ
ಕರ್ಕಾಟಕ ರಾಶಿಯಲ್ಲಿ ಶುಕ್ರನು ಸಂಚಾರ ಮಾಡುತ್ತಿರೋದ್ರಿಂದ ಸಿಂಹ ರಾಶಿಯವರಿಗೆ ಈ ಸಮಯದಲ್ಲಿ ಕೆಲವೊಂದು ಸಂಕಷ್ಟಗಳು ಎದುರಾಗಲಿದೆ. ನಿಮ್ಮ ಖರ್ಚುಗಳು ಹೆಚ್ಚಾಗಿ ಜೇಬು ಖಾಲಿಯಾಗುವ ಪರಿಸ್ಥಿತಿ ಬರಬಹುದು. ನಿಮಗೆ ಯಾವುದೇ ಕೆಲಸ ಮಾಡುವುದಕ್ಕೂ ಈ ಸಮಯದಲ್ಲಿ ಆಸಕ್ತಿ ಇರೋದಿಲ್ಲ. ಆರ್ಥಿಕ ಸಂಕಷ್ಟ ಎದುರಾದಿತು. ಕೆಲಸದ ಸ್ಥಳದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು. ಈ ಸಮಯದಲ್ಲಿ ಶೀತ ಮತ್ತು ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಬರಬಹುದು. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಧನು ರಾಶಿ
ಕರ್ಕಾಟಕ ರಾಶಿಯಲ್ಲಿ ಶುಕ್ರನು ಸಂಚಾರ ಮಾಡುತ್ತಿರೋದ್ರಿಂದ ಧನು ರಾಶಿಯವರು ಈ ಸಮಯದಲ್ಲಿ ಹಣಕಾಸಿನ ವಿಚಾರಗಳಲ್ಲಿ ಜಾಗರೂಕರಾಗಿರಬೇಕು. ಆದಷ್ಟು ಉಳಿತಾಯದ ಬಗ್ಗೆ ಗಮನ ಕೊಡಿ. ಅನೈತಿಕ ಚಟುವಟಿಕೆಗಳಿಂದ ದೂರ ಇದ್ದರೆ ನಿಮಗೆ ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ಕುಟುಂಬದೊಂದಿಗೆ ನೀವು ಜಗಳವಾಡಬಹುದು. ಕೆಲಸದ ಸ್ಥಳದಲ್ಲಿ ಮಹಿಳಾ ಕೆಲಸಗಾರರೊಂದಿಗೆ ಉತ್ತಮವಾಗಿ ನಡೆದುಕೊಳ್ಳಿ. ಉದ್ಯೊಗದ ಸ್ಥಳದಲ್ಲಿ ಜಗಳ ಮಾಡಿಕೊಳ್ಳಬೇಡಿ. ಮೌನವಾಗಿದ್ದಷ್ಟು ಒಳ್ಳೆಯದು. ಕೌಟುಂಬಿಕ ಜೀವನದಲ್ಲಿ ಒತ್ತಡ ಎದುರಾಗಬಹುದು.
ಕುಂಭ ರಾಶಿ
ಕರ್ಕಾಟಕ ರಾಶಿಯಲ್ಲಿ ಶುಕ್ರನು ಸಂಚಾರ ಮಾಡುತ್ತಿರೋದ್ರಿಂದ ಕುಂಭ ರಾಶಿಯವರು ನಿಮ್ಮ ವಿರೋಧಿಗಳಿಂದ ದೂರ ಇರಬೇಕು. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ತುಂಬಾ ಬಲಶಾಲಿಯಾಗಿರುತ್ತಾರೆ. ನಿಮ್ಮ ವಿರೋಧಿಗಳು ನಿಮಗೆ ತುಂಬಾ ತೊಂದರೆ ಕೊಡಬಹುದು. ನಿಮ್ಮ ಆರೋಗ್ಯದ ಕಾಳಜಿ ವಹಿಸಿ. ಇನ್ನೂ ಹೊಸ ಕೆಲಸ ಮಾಡಬೇಕು ಅಂದುಕೊಂಡಿದ್ದರೆ ಸದ್ಯಕ್ಕೆ ಅಂತಹ ಯೋಚನೆಯಿಂದ ದೂರವಿರಿ. ಇದರಿಂದ ನಿಮಗೆ ಒಳ್ಳೆಯದಾಗೋದಿಲ್ಲ.



Click it and Unblock the Notifications
