Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಹಿಳಾ ದಿನದ ವಿಶೇಷವಾಗಿ ತಂದ ಪುನೀತ್ ಇರುವ ಈ ವೀಡಿಯೋ ಆಯ್ತು ವೈರಲ್
ಈ ಆಧುನಿಕ ಜಗತ್ತಿನಲ್ಲಿಯೂ ಹೆಣ್ಣಿನ ಶೋಷಣೆ ನಿಂತಿಲ್ಲ. ಸಮಾಜದಲ್ಲಿ ಆಕೆಯನ್ನು ತಪ್ಪಾಗಿ ಕಾಣುವ ದೃಷ್ಟಿಕೋನ ಬದಲಾಗಿಲ್ಲ. ಇಂದಿಗೂ ಹೆಣ್ಣು ಸಂಘರ್ಷದ ಜೀವನ ನಡೆಸುತ್ತಿದ್ದಾಳೆ.
ಆಕೆಯನ್ನೂ ಎಲ್ಲಾ ಸ್ತರದಿಂದಲೂ ಮೇಲೆ ತರಬೇಕು, ಆಕೆಯ ಬದುಕನ್ನುಉತ್ತಮವಾಗಿಸಬೇಕು, ಆಕೆಗೆ ಪುರುಷರಷ್ಟೇ ಸಮಾನಳು ಎಂದು ಆಕೆಯಲ್ಲಿ ಮನೋಸ್ಥೈರ್ಯ ತುಂಬಲು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ದಿನಾವರಣೆಯೆಂದರೆ ಅದೊಂದು ಹಬ್ಬವಲ್ಲ ಬದಲಿಗೆ ಆಕೆಯಲ್ಲಿ ಧೈರ್ಯವನ್ನು ತುಂಬುವ ಹಾಗೂ ಪುರುಷರು ಆಕೆಯತ್ತ ನೋಡುವ ದೃಷ್ಟಿಕೋನ ಬದಲಾಯಿಸಲೆಂದೇ ಇರುವ ದಿನ.

ಈ ದಿನ ಹಿಂದೆ ಒಂದು ಕ್ರಾಂತಿಕಾರಿಯಾದ ಹೆಣ್ಣಿದ್ದಾಳೆ, ಆಕೆ ನ್ಯೂಯಾರ್ಕ್‌ನ ಕ್ಲಾರಾ ಜೆಟ್‌ಕಿನ್. ಈಕೆ ಮಹಿಳಾ ಕಾರ್ಮಿಕೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಆ ದಿನವನ್ನು 1975ರಲ್ಲಿ ವಿಶ್ವಸಂಸ್ಥೆ ಮಹಿಳಾ ದಿನವಾಗಿ ಘೋಷಿಸಿತು.
ಎಲ್ಲಾ ಪುರುಷರು ಎಂದು ಮಹಿಳೆಯರನ್ನು ಗೌರವದಿಂದ ಕಾಣುತ್ತಾರೋ ಅಂದು ಮಹಿಳೆಯ ಜೀವನದ ಸಂಘರ್ಷ ಕೊನೆಯಾಗುತ್ತದೆ. ಮಹಿಳೆಯನ್ನು ಗೌರವದಿಂದ ಕಾಣಿ ಎಂದು ಸಂದೇಶ ಸಾರುವ ವೀಡಿಯೋವೊಂದು ವೈರಲ್ ಆಗಿದೆ. ಚುಡಾಯಿಸುವ ಹುಡುಗರಿಗೆ ಸಮಾಜ ಹೇಗೆ ಪ್ರತಿಕ್ರಿಯಿಸಿ ಮಹಿಳೆಯ ಗೌರವನ್ನು ಹೆಚ್ಚಿಸಿದರು ಎಂಬುವುದನ್ನು ಈ ವೀಡಿಯೋದಲ್ಲಿ ನೋಡಬಹುದು. ಇದರಲ್ಲಿ ನಟ ಪುನೀತ್‌ರಾಜ್ ಕುಮಾರ್ ಕೂಡ ಮಾತನಾಡಿ ಎಲ್ಲರೂ ಸೇರಿ ಮಹಿಳೆಗೆ ನಿರ್ಭಯ ಸಮಾಜ ಕಟ್ಟೋಣ ಎಂಬ ಸಂದೇಶ ಸಾರಿದ್ದಾರೆ ನೋಡಿ.



Click it and Unblock the Notifications
