Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಹಾವಿನ ಜೊತೆ ಆಡುತ್ತಿರುವ ಪುಟ್ಟ ಹುಡುಗಿ! ವೀಡಿಯೋ ವೈರಲ್
ಆ ವೀಡಿಯೋ ಫೆಬ್ರವರಿ 28ಕ್ಕೆ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಲಾಗಿತ್ತು, ಅ ವೀಡಿಯೋ ತುಂಬಾನೇ ವೈರಲ್ ಆಗಿದ್ದು ನೋಡಿದವರು ಆ ಹುಡುಗಿಯೇನು ಟಾಯ್ ಜೊತೆ ಆಡ್ತಾ ಇದ್ದಾಳಾ? ಎಂದು ಕೇಳುತ್ತಿದ್ದಾರೆ. ಹೌದು ಆಕೆ ದೊಡ್ಡ ಹಾವಿನ ಜೊತೆ ಆಡುತ್ತಿರುವುದನ್ನು ನೋಡಿ ಜನರು ಅಚ್ಚರಿ ಪಡುತ್ತಿದ್ದಾರೆ.

ಹಾವನ್ನು ಮುಟ್ಟು ಹಾಗೂ ಹಿಡಿಯುವ ದೈರ್ಯ ಕೆಲವೇ ಕೆಲವರಿಗಷ್ಟೇ ಇರುತ್ತದೆ. ಹಾವು ಮನೆಯೊಳಗೆ ಬಂದ್ರೆ ಸಾಕು, ಅದನ್ನು ಹಿಡಿದು ತೆಗೆದುಕೊಂಡು ಹೋಗುವವರಿಗೆ ಯಾರೂ ಮನೆಯೊಳಗಡೆ ಹೋಗುವ ಧೈರ್ಯ ಮಾಡಲ್ಲ.
ಏಕೆಂದರೆ ಅದು ಕಚ್ಚಿ ಬಿಟ್ಟರೆ ತಕ್ಷಣವೇ ಚಿಕಿತ್ಸೆ ಸಿಕ್ಕರಷ್ಟೇ ಬದುಕಲು ಸಾಧ್ಯ, ಆದರೆ ಹಾವು ಕಚ್ಚಿದಾಗ ಬದುಕುಳಿಯುವವರು ತುಂಬಾನೇ ಕಡಿಮೆ ಆದ್ದರಿಂದ ಹಾವು ಎಂದರೆ ಜನ ದೂರ ಓಡಿ ಹೋಗುತ್ತಾರೆ.
ಕೆಲವೇ ಕೆಲವು ಜನರಷ್ಟೇ ಹಾವಿನ ಜೊತೆ ಸ್ನೇಹ ಬಯಸುತ್ತಾರೆ, ಅಚ್ಚರಿಯೆಂದರೆ ಎಂಥದ್ದೇ ಹಾವು ಆದರೂ ಅಂಥವರ ಜೊತೆ ತುಂಬಾ ಚೆನ್ನಾಗಿ ಇರುತ್ತದೆ, ಅದನ್ನು ನೋಡುವುದೇ ಒಂದು ಅಚ್ಚರಿ. ಹಾವನ್ನು ಸಾಕುತ್ತಿರುವವರೂ ಅನೇಕರು ಇದ್ದಾರೆ. ಅಂಥ ಎಷ್ಟೋ ವೀಡಿಯೋಗಳನ್ನು ನೋಡುತ್ತೇವೆ. ಅವರಿಗೂ- ಹಾವಿಗೂ ಅದೇನು ನೆಂಟೋ ದೇವರಿಗೇ ಗೊತ್ತು...
ನಾವು ಈ ವೀಡಿಯೋದಲ್ಲಿ ನೋಡುತ್ತಿರುವ ಹುಡುಗಿಯ ಹೆಸರು ಅರ್ನಿನಾ. ಮನೆಯೊಳಗಡೆ ಕಾರ್ಪೆಟ್‌ನಲ್ಲಿ ಕುಳಿತು ಹಾವಿನೊಂದಿಗೆ ಆಡ್ತಾ ಇದ್ದಾಳೆ, ಹಾವು ಮುಂದೆ ಚಲಿಸುತ್ತಿದ್ದಂತೆ ಹಿಂದೆಕ್ಕೆ ಎಳೆದು ಆಡುತ್ತಿರುವ ವೀಡಿಯೋ ನೋಡಿದರೆ ನಮ್ಮ ಮೈ ಝುಂ ಅನಿಸುವುದು.
ಕಳೆದ ವರ್ಷ ಕೂಡ ಒಂದು ಫೋಟೋ ತುಂಬಾನೇ ವೈರಲ್ ಆಗಿತ್ತು. ಒಬ್ಬ ಬಾಲಕಿ ಮೊಬೈಲ್ ನೋಡುತ್ತಾ ಮನೆಯ ಹೊರಗಡೆ ಕೂತಿರುತ್ತಾಳೆ, ಹೆಬ್ಬಾವೊಂದು ಹಾಯಾಗಿ ಅವಳ ಮಡಿಲಿನಲ್ಲಿ ಮಲಗಿರುತ್ತೆ, ಆ ಫೋಟೋ ನೋಡಿದಾಗ ಹಾವು ಹಾಗೂ ಆ ಹುಡುಗಿಯ ನಡುವೆ ಎಂಥ ಬಾಂಧವ್ಯ ಇದೆ ಎಂಬುವುದು ತಿಳಿಯುತ್ತೆ.
ಯುವಕನೊಬ್ಬ ತನ್ನ ಸಾಕು ಪ್ರಾಣಿಗಳಾದ ಗಿಣಿ ಹಾಗೂ ಹಾವಿನೊಂದಿಗೆ ವಾಕ್ ಹೋಗುತ್ತಿರುವ ವೀಡಿಯೋ ಕೂಡ ಈ ಹಿಂದೆ ತುಂಬಾನೇ ವೈರಲ್ ಆಗಿತ್ತು. ಅದು ಆಸ್ಟ್ರೇಲಿಯಾದ ಯುವಕನ ವೀಡಿಯೋ ಆಗಿದೆ.
I have questions pic.twitter.com/R6hI9LDWFE
— Rachael (@RachaelHasIdeas) February 28, 2021



Click it and Unblock the Notifications

