Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಇದಪ್ಪಾ ಗಂಡ ಅಂದ್ರೆ, ವಿಲ್ ಸ್ಮಿತ್ ಹೆಂಡತಿ ಬಗ್ಗೆ ಹೇಳಿದ ಕ್ರಿಸ್: ಆಸ್ಕರ್ ಸ್ಟೇಜ್‌ನಲ್ಲಿಯೇ ಆಯ್ತು ಕಪಾಳ ಮೋಕ್ಷ
94ನೇ ಆಸ್ಕರ್ ಕಾರ್ಯಕ್ರಮ ಹಿಂದೆಂದೂ ಘಟಿಸಿರದ ಅಪರೂಪದ ಘಟನೆಗೆ ಸಾಕ್ಷಿಯಾಯಿತು, ಇದೀಗ ಆ ಘಟನೆಯ ವೀಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

'ಗಂಡ ಎಂದರೆ ಹೀಗೆ ಇರಬೇಕು' ಎಂಬಂತಿದೆ ಅಮೆರಿಕನ್ ನಟ ವಿಲ್ ಸ್ಮಿತ್ ತೋರಿದ ವರ್ತನೆ. ಅಷ್ಟು ದೊಡ್ಡ ಸ್ಟೇಜ್‌ನಲ್ಲಿ ನಿಂತು ಒಬ್ಬ ತನ್ನ ಹೆಂಡತಿ ಬಗ್ಗೆ ತಮಾಷೆ ಮಾಡುತ್ತಿದ್ದರೆ ಅದನ್ನು ಸಹಿಸಲು ಸಾಧ್ಯವಾಗದೆ ಹೋಗಿ ಆ ವ್ಯಕ್ತಿಯ ಕೆನ್ನೆಗೆ ಬಾರಿಸಿ ಬಂದಿದ್ದಾರೆ.
ಡಾಕ್ಯೂಮೆಂಟರಿ ಅವಾರ್ಡ್ ನೀಡಲು ಬಂದಿದ್ದ ಕ್ರಿಸ್ ರಾಕ್ ನಟ ವಿಲ್ ಸ್ಮಿತ್ ಹೆಂಡತಿ ಜಾಡಾ ಪಿಂಕೆಟ್ ಸ್ಮಿತ್ ಕುರಿತು ತಮಾಷೆ ಮಾಡಲು ಪ್ರಾರಂಭಿಸಿದರು, ಪ್ರಾರಂಭದಲ್ಲಿ ವಿಲ್ ಕೂಡ ನಗುತ್ತಿದ್ದರು,ಆದರೆ ಜಾಡಾಗೆ ಆ ಜೋಕ್ ಅಷ್ಟು ಇಷ್ಟವಾಗದೆ ಕಣ್ಣರಳಿಸಿದಾಗ ವಿಲ್ ಸ್ಟೇಜ್‌ಗೆ ಹೋಗಿ ಕ್ರಿಸ್ ರಾಕ್ ಕೆನ್ನೆಗೆ ಹೊಡೆದು ಬಂದಿದ್ದಾರೆ.
ಆ ಒಂದು ಕ್ಷಣ ಇಡೀ ಆಡಿಟೋರಿಯಂ ಸ್ತಬ್ಧವಾಗಿತ್ತು. ತಮ್ಮ ಸೀಟ್‌ಗೆ ಮರಳಿದ ಮೇಲೂ 'ನನ್ನ ಹೆಂಡತಿಯನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು' ಎಂದು ಕಿರುಚಿ ಹೇಳಿದ್ದು ವಿಲ್ ಕೈಗೆ ಮೈಕ್ ಇಲ್ಲದಿದ್ದರೂ ಎಲ್ಲರಿಗೆ ಕೇಳಿಸಿತ್ತು.
ಕ್ರಿಸ್ 'ದಟ್ ವಾಸ್ ದಿ ಗ್ರೇಟಸ್ಟ್ ನೈಟ್ ಇನ್ ದಿ ಹಿಸ್ಟರಿ ಆಫ್ ಟೆಲಿವಿಷನ್'ಎಂದು ಹೇಳುವ ಮೂಲಕ ತಮಗಾದ ಅವಮಾನವನ್ನು ಹೊರ ಹಾಕಿದರು.
ವಿಲ್ ಸ್ಮಿತ್ ತಮ್ಮ ಮೊದಲ ಆಸ್ಕರ್ ಅವಾರ್ಡ್ ಸ್ವೀಕರಿಸಲು ಬಂದಿದ್ದರು. ಕಿಂಗ್ ರಿಚರ್ಡ್‌ನಲ್ಲಿ ಅವರ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ ದೊರೆತಿತ್ತು. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ ' ನಾನು ಅಕಾಡೆಮಿ ಬಳಿ ಕ್ಷಮೆ ಕೇಳುತ್ತೇನೆ, ಎಂದು ಹೇಳುತ್ತಾ ಕುಟುಂಬದ ಬಗ್ಗೆ ತುಂಬಾ ಭಾವುಕರಾಗಿ ಮಾತನಾಡುತ್ತಾ ನಾನೊಬ್ಬ ಕ್ರೇಜಿಯಸ್ಟ್ ಫಾದರ್ ಎಂದು ಹೇಳಿದರು. ಇವರನ್ನು ಇತರ ನಟರು ಬ್ರೇಕ್‌ನಲ್ಲಿ ಬಂದು ಸಮಧಾನಿಸಿದರು.
ವಿಲ್ ಸ್ಮಿತ್ ಹಾಗೂ ಜಾಡಾ ಇಬ್ಬರು ಒಂದು ಘಟ್ಟದಲ್ಲಿ ಬೇರೆಯಾಗಿದ್ದರು, ಅವರ ವೈವಾಹಿಕ ಬದುಕು ಕೊನೆಯಾಗಿತ್ತು, ಜಾಡಾ ಹೇಳುವ ಪ್ರಕಾರ ಅವರಿಬ್ಬರು ಮತ್ತೆ ಒಂದಾಗುತ್ತಾರೆ ಎಂದು ಊಹಿಸಿರಲಿಲ್ಲ, ಆದರೆ ಅವರಿಬ್ಬರು ಮತ್ತೆ ಒಂದಾಗಿ ಹಿಂದಿಗಿಂತಲೂ ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಗೌರವಿಸುತ್ತಿದ್ದಾರೆ.
ಅಲ್ಲದೆ ವಿಲ್ ಸ್ಮಿತ್ ಪತ್ನಿಗೆ ಜಾಡಾ ಒಂದು ವಿಚಿತ್ರವಾದ ಕಾಯಿಲೆ ಇದೆ, ಅದರ ಹೆಸರು Alopecia Areata. ಈ ಕಾಯಿಲೆ ಇರುವವರ ಕೂದಲು ಸಂಪೂರ್ಣವಾಗಿ ಉದುರಿ ಹೀಗುವುದು. ಇದರ ಕುರಿತು ಅವರು 2018ರಲ್ಲಿ ಹೇಳಿದ್ದರು, ಆ ಕಾರಣದಿಂದಲೇ ಜಾಡಾ ತನ್ನ ಕೂದಲನ್ನು ತುಂಬಾ ಚಿಕ್ಕದಾಗಿ ಮಾಡಿಸುತ್ತಾರೆ ಅಥವಾ ಬೋಳು ಮಾಡಿಸುತ್ತಾರೆ.



Click it and Unblock the Notifications


