Just In
Don't Miss
- Sports
ಐಎಸ್ಎಲ್: ಸಮಬಲ ಸಾಧಿಸಿದ ಕೇರಳ ಬ್ಲಾಸ್ಟರ್ಸ್, ಜೆಮ್ಷೆಡ್ಪುರ
- Movies
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
- News
ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್ಯುವಿ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೀಡಿಯೋ: ವ್ಯಕ್ತಿಯನ್ನು ಅಪ್ಪಿ ಮುತ್ತಿಕ್ಕುತ್ತಿರುವ ಸಿಂಹಗಳು!
ಕಾಡಿನ ರಾಜ ಸಿಂಹ ವ್ಯಕ್ತಿಯನ್ನು ಸ್ವಾಗತಿಸುವುದು, ಅದರ ತಂಡದ ಉಳಿದ ಸದಸ್ಯರು ಆ ಮನುಷ್ಯನನ್ನು ಅಪ್ಪಿ ಮುದ್ದಾಡುವುದು ಇವೆಲ್ಲಾ ಕತೆಗಳಲ್ಲಿ, ಸಿನಿಮಾಗಳಲ್ಲಿ ನೋಡಿರುತ್ತೀರಿ. ಆದರೆ ನಿಜವಾಗಲು ಆ ರೀತಿ ನಡೆಯಲು ಸಾಧ್ಯವೇ? ಹೂಂ... ಖಂಡಿತ ಸಾಧ್ಯವಿಲ್ಲ ಎನ್ನುವಿರಿ. ಆದರೆ ಸಿನಿಮಾ, ಕತೆಯಲ್ಲಿ ಬರುತ್ತಿದ್ದ ಅಂಥ ಕಾಲ್ಪನಿಕ ಪಾತ್ರಕ್ಕೆ ಇಲ್ಲಿ ಜೀವ ಬಂದಿದೆ.
ಸಿಂಹಗಳು ಪ್ರೀತಿಯಿಂದ ಆ ವ್ಯಕ್ತಿಯನ್ನು ಸ್ವಾಗತಿಸುವುದು ಅವುಗಳ ಜೊತೆ ಆಡುವ ವೀಡಿಯೋವೊಂದು ಇಂಟರ್‌ನೆಂಟ್‌ನಲ್ಲಿ ವೈರಲ್ ಆಗಿದೆ. ಇದನ್ನು ಮ್ಯಾಕೈ ಎಂಬ ಟ್ವಿಟರ್ ಬಳಕೆದಾರರು ಹಾಕಿದ್ದು, ಈ ವೀಡಿಯೋ ನೋಡಿ ಅಚ್ಚರಿಗೊಳಗಾದೆ ಎಂದಿದ್ದಾರೆ. ಇದೀಗ ಆ ಅದ್ಭುತ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ಡೀನ್ ಷ್ನೇಯ್ಡರ್ ಎಂಬವರನ್ನು ಕಾಡಿನಲ್ಲಿ ಸಿಂಹ ಹಾಗೂ ಅದರ ಕುಟುಂಬ ಸದಸ್ಯರು ಸ್ವಾಗತಿಸುವ ರೀತಿ ನೀವು ಊಹಿಸಲೂ ಸಾಧ್ಯವಿಲ್ಲ, ಅಷ್ಟು ಅದ್ಭುತವಾಗಿದೆ ನೋಡಿ. ಡೀನ್ ಷ್ನೇಯ್ಡರ್ ಕೂಡ ಈ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿ ಕೊಂಡಿದ್ದು 'ದೂರವಿರುವಾಗಲೇ ನಾವೆಷ್ಟು ಪ್ರೀತಿಸುತ್ತಿದ್ದೇವೆ ಎಂದು ಗೊತ್ತಾಗುವುದು, ಈ ರೀತಿಯ ಗೌರವದ ಸ್ವಾಗತ ಸಿಕ್ಕಿರುವುದು ತೃಪ್ತಿ ತಂದಿದೆ' ಎಂದಿದ್ದಾರೆ.
I literally stalked this guy’s IG stories/page until he posted this video. I can exhaust my data on his page. This is so satisfying to watch pic.twitter.com/PtkAVTZQsQ
— Mackie (@Amakah_) January 12, 2020
ಆ ವೀಡಿಯೋದಲ್ಲಿ ಡೀನ್ 'ಇದಕ್ಕಿಂತ ವಿಶ್ವದಲ್ಲಿ ನನಗೇನು ಬೇಕಾಗಿಲ್ಲ. ಸುಮಾರು ಎರಡೂವರೆ ವಾರಗಳ ಬಳಿಕ ನಾನು ನನ್ನ ಕುಟುಂಬದವರನ್ನು ನೋಡುತ್ತಿದ್ದೇನೆ, ಕೊನೆಗೂ ನಾವೆಲ್ಲಾ ಜೊತೆಗಿದ್ದೇವೆ' ಎಂದು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೂ ನಡೆಯಲು ಸಾಧ್ಯನಾ ಎಂದು ಪ್ರತಿಯೊಬ್ಬರಿಗೆ ಅಚ್ಚರಿ ಮೂಡಿಸುವ ಈ ವೀಡಿಯೋಗಳು ಇಂಟರ್‌ನೆಟ್‌ನಲ್ಲಿ ತುಂಬಾ ಸದ್ದು ಮಾಡುತ್ತಿದ್ದಾರೆ. ಡೀನ್ ಹಾಗೂ ಸಿಂಹಗಳ ನಡುವಿನ ಪ್ರೀತಿ ನೋಡಿ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.
He has more than 9 lives pic.twitter.com/ebJRLhK7UW
— Wale Gates 🇳🇬🇬🇧 (@walegates) January 13, 2020