Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
60ನೇ ವಯಸ್ಸಿನಲ್ಲಿ ಮಾಡೆಲ್ ಆದ ದಿನಗೂಲಿ ನೌಕರ: ಇವರ ಲುಕ್ ನೋಡಿದವರು ಫುಲ್ ಫಿದಾ
ಅದೃಷ್ಟವೆಂಬುವುದು ಯಾರನ್ನು ಹೇಗೆ ಕೈ ಹಿಡಿಯುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಇಂದು ಜೀರೋ ಆಗಿದ್ದ ವ್ಯಕ್ತಿ ನಾಳೆ ದೊಡ್ಡ ವ್ಯಕ್ತಿಯಾಗಬಹುದು. ಹೇಳಿ-ಕೇಳಿ ಇದು ಇಂಟರ್‌ನೆಟ್ ಕಾಲ, ಇದರಲ್ಲಿ ಎಷ್ಟೋ ಜನರು ರಾತ್ರೋ ರಾತ್ರಿ ಸ್ಟಾರ್‌ಗಳಾಗಿ ಬಿಟ್ಟಿದ್ದಾರೆ,ಈಗ ಅಂಥದ್ದೇ ಅದೃಷ್ಟ ಕೇರಳದ ದಿನ ಕೂಲಿ ಕಾರ್ಮಿಕನ ಪಾಲಿಗೆ ಲಭಿಸಿದೆ.

ದಿನಗೂಲಿ ನೌಕರ ಮಾಡೆಲ್ ಆಗಿ ಸ್ಟಾರ್ ಆದ ಕತೆ
ತನ್ನ 60ನೇ ವಯಸ್ಸಿನಲ್ಲಿ ಮಾಡೆಲ್ ಆದ ಆ ವ್ಯಕ್ತಿ ಹೆಸರು ಮಮ್ಮಿಕ್ಕಾ, ಕೇರಳದ ಕೋಝಿಕೋಡ್ ಜಿಲ್ಲೆಯವರು. ತಮ್ಮ ಮಾಡೆಲಿಂಗ್ ಲುಕ್‌ನಲ್ಲಿ ಹಾಲಿವುಡ್ ಸ್ಟಾರ್‌ಗಿಂತ ಏನೂ ಕಮ್ಮಿಯಿಲ್ಲ ಅಷ್ಟೊಂದು ಸ್ಟೈಲಿಷ್ ಆಗಿ ಗಮನ ಸೆಳೆದಿದ್ದಾರೆ. ಇದೀಗ ತನ್ನ ಮಾಡೆಲಿಂಗ್ ಸೆನ್ಸೇಷನಲ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಇವರ ಈ ಲುಕ್ ನೋಡಿದ ಮೇಲೆ ಅನೇಕ ಸಿನಿಮಾ ಅವಕಾಶಗಳು ಬರುವುದಂತೂ ಗ್ಯಾರಂಟಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಫೋಟೋಶೂಟ್ ಬದಲಾಯಿಸಿದ ಅದೃಷ್ಟ
ಕೊಡೈವಳ್ಳಿ ವೆನ್ನಕಾಡು ಎಂಬಲ್ಲಿ ದಿನಗೂಲಿ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು, ಆಗ ಕೇರಳದ ಫೋಟೋಗ್ರಾಫರ್ ಶರೀಕ್ ವಯಲಿಲ್ ಕಣ್ಣಿಗೆ ಈ ವ್ಯಕ್ತಿ ಬೀಳುತ್ತಾರೆ. ಇವರನ್ನು ನೋಡಿದ್ದೇ ಆ ಫೋಟೋಗ್ರಾಫರ್ ತಲೆಯಲ್ಲಿ ನಾನಾ ಯೋಚನೆಗಳು ಓಡುತ್ತವೆ. ಅವರನ್ನು ಒಪ್ಪಿಸಿ ಕರೆತಂದು ಅವರ ಲುಕ್ ಬದಲಾಯಿಸಿದ್ದಾರೆ.
ಅವರ ಲುಕ್ ನೋಡಿದವರು ವಾವ್! ಎಂದು ಎಂದು ಹೇಳುತ್ತಿದ್ದಾರೆ.

ಪ್ರಮೋಷನಲ್ ಫೋಟೋಶೂಟ್‌ಗೆ ಮಾಡೆಲ್ ಆದ ಮಮ್ಮಿಕ್ಕಾ
ಲುಂಗಿ, ಶರ್ಟ್ ತೊಡುತ್ತಿದ್ದ ಮಮ್ಮಿಕ್ಕಾಗೆ ಸೂಟ್ ಹಾಕಿ, ಕಣ್ಣಿಗೆ ಸನ್‌ಗ್ಲಾಸ್ ತೊಡಿಸಿ, ಕೈಗೆ iPad ಕೊಟ್ಟು ಫೋಟೋ ತೆಗೆಯಲಾಗಿದೆ.

ಸರ್ದಾಜಿ ಲುಕ್‌ನಲ್ಲಿ ಕಾಣಿಸಿಕೊಂಡ ಮಮ್ಮಿಕ್ಕಾ
ಬರೀ ಸೂಟ್‌ನಲ್ಲಿ ಅಷ್ಟೇ ಹಲವು ಡ್ರೆಸ್ಸಿಂಗ್‌ನಲ್ಲಿ ಇವರ ಫೋಟೋ ತೆಗೆಯಲಾಗಿದೆ. ಪ್ರತಿಯೊಂದು ಫೋಟೋದಲ್ಲಿ ತುಂಬಾ ಆಕರ್ಷಕವಾಗಿ ಕಂಡು ಬಂದಿದ್ದಾರೆ.

ಸೇಠ್‌ಜೀ
ಮಮ್ಮಿಕ್ಕಾ ಅವರ ಬ್ಯುಸ್‌ನೆಸ್ ಲುಕ್, ಸರ್ದಾಜೀ, ಸೇಠ್‌ಜೀ ಹೀಗೆ ಎಲ್ಲಾ ಲುಕ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

60ರ ಪ್ರಾಯದಲ್ಲಿ ಒಲಿದ ಅದೃಷ್ಟ
ಒಂದು ಸಾಧಾರಣ ದಿನಗೂಲಿ ನೌಕರ ಇಂದು ಸ್ಟಾರ್ ಆಗಿ ಬಿಟ್ಟಿದ್ದಾರೆ. ಅದಕ್ಕೆ ಹೇಳುವುದು ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಅಲ್ವಾ?



Click it and Unblock the Notifications
