Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ 5 ರಾಶಿಯವರು ಹಳೆಯ ಪ್ರೀತಿಯನ್ನು ಮತ್ತೆ ಸೇರ ಬಯಸೋದಿಲ್ಲ!
ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವರು ನಮ್ಮಿಂದ ದೂರವಾಗ್ತಾರೆ. ಕಾರಣಗಳು ಹಲವಿರಬಹುದು. ಬ್ರೇಕ್ ಅಪ್ ಆದಾಗ ಆಗುವ ನೋವಿದ್ಯಲ್ಲ ಅದನ್ನು ಪದಗಳಲ್ಲಿ ವಿವರಿಸೋದಕ್ಕೆ ಸಾಧ್ಯವಿಲ್ಲ. ಪ್ರೀತಿಸಿದವರು ಬಿಟ್ಟು ಹೋದ ಮೇಲೆ ಕೂಡ ಪದೇ ಪದೇ ಅವರ ನೆನಪು ನಮಗೆ ಕಾಡುತ್ತಿರುತ್ತದೆ. ಅವರನ್ನೇ ನೆನೆದು ಎಷ್ಟೋ ಜನ ಕಣ್ಣೀರು ಹಾಕುತ್ತಾರೆ ಕೂಡ.
ಎಷ್ಟೋ ಬಾರಿ ಹಳೆಯ ಪ್ರೀತಿಯನ್ನು ಮತ್ತೆ ಸೇರುವ ಮನಸ್ಸಾಗುತ್ತದೆ. ಆದರೆ ಕೆಲವರು ಗಟ್ಟಿ ಮನಸ್ಸು ಮಾಡಿಕೊಂಡಿರುತ್ತಾರೆ. ಒಂದು ಸಾರಿ ಬ್ರೇಕ್ ಅಪ್ ಆದವರ ಜೊತೆಗೆ ಅವರು ಮತ್ತೆ ಒಂದಾಗೋದಕ್ಕೆ ಇಷ್ಟ ಪಡೋದಿಲ್ಲ. ಹಳೆಯ ಪ್ರೀತಿಯನ್ನು ನೆನಪಿಸಿಕೊಳ್ಳೋದಿರಲಿ ಅವರ ಮುಖ ನೋಡೋದಕ್ಕೂ ಇಷ್ಟ ಪಡೋದಿಲ್ಲ. ಅಷ್ಟಕ್ಕು ಹಳೆಯ ಪ್ರೀತಿಯ ಜೊತೆಗೆ ಮತ್ತೆ ಒಂದಾಗಲು ಇಷ್ಟ ಪಡದೇ ಇರೋ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಸಿಂಹ ರಾಶಿ
ಸಿಂಹ ರಾಶಿಯವರು ರಾಜರಂತೆ ಬದುಕುತ್ತಾರೆ. ಇವರು ತಮ್ಮ ಪ್ರೀತಿಗೆ ತುಂಬಾನೇ ಬೆಲೆ ಕೊಡುತ್ತಾರೆ. ಆದರೆ ಒಂದು ಸಾರಿ ಬ್ರೇಕ್ ಅಪ್ ಆದರೆ ಅವರ ಜೊತೆಗೆ ಮತ್ತೆ ಒಂದಾಗೋದಕ್ಕೆ ಮನಸ್ಸು ಮಾಡೋದಿಲ್ಲ. ಬ್ರೇಕ್ ಅಪ್ ನಂತರ ಮತ್ತೆ ಒಂದಾಗೋದು ಅವಮಾನ ಎಂದು ಅವರು ಪರಿಗಣಿಸುತ್ತಾರೆ. ಪ್ರೀತಿಸಿದವರು ಬಿಟ್ಟು ಹೋದ ನಂತರ ಆ ನೋವಿನಿಂದ ಹೊರ ಬರೋದಕ್ಕೆ ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಾರೆ.
ಆದರೆ ಯಾವ ಕಾರಣಕ್ಕೂ ಹಳೆಯ ಪ್ರೀತಿಯನ್ನು ಮತ್ತೆ ಸೇರೋದಿಲ್ಲ. ನಿಮ್ಮ ತಪ್ಪಿಗೆ ಪ್ರಾಯಶ್ಚಿತ ಆಗಲಿ ಎಂದುಕೊಳ್ಳುತ್ತಾರೆಯೇ ಹೊರತು ಹಳೆಯ ಪ್ರೀತಿಯ ಜೊತೆಗೆ ಮತ್ತೆ ಒಂದಾಗೋದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಪ್ರೀತಿಯಲ್ಲಿ ತುಂಬಾನೇ ನಂಬಿಕೆ ಇಟ್ಟಿರುತ್ತಾರೆ. ಆದರೆ ಒಂದು ಸಾರಿ ಅವರಿಗೆ ನಂಬಿಕೆ ದ್ರೋಹ ಆದರೆ ಅವರು ಸಹಿಸೋದಿಲ್ಲ. ಬಿಟ್ಟು ಹೋದವರನ್ನು ಮತ್ತೆ ಸೇರುವ ಮನಸ್ಸು ಇವರಿಗೆ ಇರೋದಿಲ್ಲ. ವೃಶ್ಚಿಕ ರಾಶಿಯವರಿಗೆ ಅಪ್ರಾಮಾಣಿಕರಾಗಿರೋದು, ಅಪ್ರಬುದ್ಧತೆಯನ್ನು ತೋರುವುದು ಇವರಿಗೆ ಇಷ್ಟ ಆಗೋದಿಲ್ಲ. ಇದನ್ನು ಅವರು ದ್ವೇಷಿಸುತ್ತಾರೆ. ಜಗಳವಾಗಿ ಬಿಟ್ಟು ಹೋದವರನ್ನು ಮತ್ತೆ ಮನವೊಲಿಸಿ ವಾಪಾಸ್ಸ್ ಕರೆದುಕೊಂಡು ಬರುವ ಮನಸ್ಸು ಇವರಿಗೆ ಇರೋದಿಲ್ಲ.
ಧನು ರಾಶಿ
ಧನು ರಾಶಿಯವರು ವೈಯಕ್ತಿಕ ಸ್ವಾತಂತ್ರಕ್ಕೆ ಹೆಚ್ಚಿನ ಗೌರವ ಕೊಡುತ್ತಾರೆ. ಅವರು ಪ್ರೀತಿಸಿದವರಿಗೆ ಪ್ರಾಮುಖ್ಯತೆ ಕೊಟ್ಟು, ಒಳ್ಳೆಯ ರೀತಿಯಲ್ಲಿ ಅವರ ಜೊತೆಗೆ ಜೀವನ ನಡೆಸುತ್ತಾರೆ. ಆದರೆ ಒಂದು ಸಾರಿ ಪ್ರೀತಿಸಿದವರು ಬಿಟ್ಟು ಹೋದರೆ ಅವರ ಹಿಂದೆ ಬಿದ್ದು ಮತ್ತೆ ಪ್ರೀತಿ ಮಾಡುವಂತೆ ಕೇಳಿಕೊಳ್ಳೋದಿಲ್ಲ. ಧನು ರಾಶಿಯವರು ಅವರಷ್ಟಕ್ಕೆ ಜೀವನ ಸಾಗಿಸುತ್ತಾರೆ. ಕಳೆದು ಹೋದ ಪ್ರೀತಿಯನ್ನು ಮತ್ತೆ ಹುಡುಕುವ ಪ್ರಯತ್ನ ಮಾಡೋದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಸ್ವಯಂ ನಿಯಂತ್ರಣ ಮಾಡಿಕೊಳ್ಳುವ ಕಲೆಯಿದೆ. ಆರಂಭದಲ್ಲಿ ತಾವು ಪ್ರೀತಿಸಿದವರ ಜೊತೆಗೆ ಭಿನ್ನಾಬಿಪ್ರಾಯಗಳು ಆದರೆ ಅದನ್ನು ಸರಿ ಪಡಿಸೋದಕ್ಕೆ ಪ್ರಯತ್ನಿಸುತ್ತಾರೆ. ತಮ್ಮನ್ನು ದಿಕ್ಕರಿಸಿ ಹೋದವರ ಹಿಂದೆ ಮತ್ತೆ ಮತ್ತೆ ಬೀಳುವವರಲ್ಲ ಇವರು. ತಮಗೆ ಮೋಸ ಮಾಡಿದವರನ್ನೂ ಎಂದಿಗೂ ಇವರು ಕ್ಷಮಿಸೋದಿಲ್ಲ. ಯಾರ ಸಾಹಾಸವೂ ಬೇಡವೆಂದು ತಮ್ಮಷ್ಟಕ್ಕೆ ತಾವು ಜೀವನ ಸಾಗಿಸುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ತಾವು ಪ್ರೀತಿಸುವವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅವರ ಜೊತೆಗೆ ಬಾಳ್ವೆ ಮಾಡುತ್ತಾರೆ. ಪ್ರೀತಿಸಿದವರ ಜೊತೆಗೆ ದೂರವಾಗುವ ಯೋಚನೆ ಕೂಡ ಇರೋದಿಲ್ಲ. ಒಂದು ವೇಳೆ ಅವರೇನಾದರೂ ತಿರಸ್ಕರಿಸಿ ದೂರ ಹೋದರೆ ತುಂಬಾನೇ ನೊಂದುಕೊಳ್ಳುತ್ತಾರೆ. ಆದರೆ ಬಿಟ್ಟು ಹೋದವರ ಜೊತೆಗೆ ಯಾವುದೇ ಕಾರಣಕ್ಕೂ ಮತ್ತೆ ಒಂದಾಗೋದಿಲ್ಲ. ತಮ್ಮ ಯೋಗ್ಯತೆ ಮತ್ತು ತಾವು ಪ್ರೀತಿಸಿದವರ ಯೋಗ್ಯತೆಯ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ.



Click it and Unblock the Notifications