Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಹುಲಿ ಮಾಡಿದ ಕಾರ್ಯ ನೋಡಿದರೆ ಮನುಷ್ಯ ತನ್ನ ಕೃತ್ಯಕ್ಕೆ ನಾಚಿಕೆಪಡಬೇಕು: ವೈರಲ್ ವೀಡಿಯೋ
ಈ ಭೂಮಿ ಮೇಲಿರುವ ಜೀವಗಳಲ್ಲಿ ಈ ಭೂಮಿಯನ್ನು ನಾಶ ಮಾಡುತ್ತಿರುವ ಜೀವಿಯೆಂದರೆ ಅದು ಮನುಷ್ಯ ಮಾತ್ರ... ಮನುಷ್ಯರಿಂದ ಈ ಭೂಮಿಗೆ, ಪ್ರಕೃತಿಗೆ ಆಗುತ್ತಿರುವ ಹಾನಿ ಅಷ್ಟಿಷ್ಟಲ್ಲ.
ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಬಳಸಿಕೊಳ್ಳುವುದು ಮಾತ್ರವಲ್ಲ, ಬೇಕು -ಬೇಕು ಅಂತಲೇ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ, ಅವನ ಅಂಥ ನಡೆಗೆ ಮುಖಕ್ಕೆ ಹೊಡೆಂದತಿದೆ ಹುಲಿ ಮಾಡಿದ ಕಾರ್ಯ... ಈ ವೀಡಿಯೋ ನೋಡಿದ ಮೇಲಾದರೂ ನಾವು ಮನುಷ್ಯ ಬದಲಾಗಬೇಕಾಗಿದೆ.

ಯಾರೋ ಬಾಟಲಿ ನೀರನ್ನು ಕುಡಿದು ಕಾಡಿನಲ್ಲಿರುವ ಕೊಳಕ್ಕೆ ಎಸೆದಿದ್ದಾರೆ, ಆದರೆ ಕೊಳಕ್ಕೆ ನೀರು ಕುಡಿಯಲು ಬರುವ ಹುಲಿ ಆ ಬಾಟಲಿಯನ್ನು ನೀರಿನಿಂದ ಕಚ್ಚಿ ಹೊರತೆಗೆದ ದೃಶ್ಯ ನಾಗರಿಕ ಸಮಾಜ ಯೋಚಿಸುವಂತೆ ಮಾಡಿದೆ. ಇದನ್ನು ವೈಲ್ಡ್‌ಲೈಫ್ ಫೋಟೋಗ್ರಾಫರ್ ದೀಪ್ ಕಾತಿಕಾರ್ ವೀಡಿಯೋ ತೆಗೆದಿದ್ದು ತಮ್ಮ ಸಾಮಾಜಿಕ ತಾಣದಲ್ಲಿ (Sweet gesture by the Tiger.
We will try to keep our jungles clean.
Cub of Bhanuskhindi , Ramdegi Hills
Video Date - Dec 2023) ಎಂದು ಬರೆದು ವೀಡಿಯೋ ಹಂಚಿಕೊಂಡಿದ್ದಾರೆ. ಆ ವೀಡಿಯೋ ನೋಡಿದವರು ಹುಲಿ ಮಾಡಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ನಾವು ಬದಲಾಗಬೇಕು.
ಕಾಡು ಪ್ರಾಣಿಗಳಿಗೆ ಯಾವುದು ಒಳ್ಳೆಯದು- ಯಾವುದು ಕೆಟ್ಟದ್ದು ಎಂದು ಗೊತ್ತಿದೆ, ಆದರೆ ನಮಗಲ್ಲ
ಕಾಡು ಪ್ರಾಣಿಗಳಿಗೆ ಯಾವುದು ಕೆಟ್ಟದು ಯಾವುದು ಒಳ್ಳೆಯದು ಎಂದು ಗೊತ್ತಿದೆ, ಆ ಪ್ಲಾಸ್ಟಿಕ್ ಕೊಳದಲ್ಲಿ ಇರುವುದು ಒಳ್ಳೆಯದಲ್ಲ ಎಂಬುವುದು ಆ ಹುಲಿಗೆ ಗೊತ್ತಿದೆ, ಆದರೆ ಅಲ್ಲಿಗೆ ಬಂದು ಆ ಪ್ಲಾಸ್ಟಿಕ್ ಬಾಟಲಿ ಎಸೆದವರಿಗೆ ಗೊತ್ತಾಗಿಲ್ಲ. ಈ ವೀಡಿಯೋ ನೋಡಿದವರು ಇನ್ನಾದರೂ ನಾವುಗಳು ನಿರ್ಲಕ್ಷ್ಯ ಬಿಡಬೇಕಾಗಿದೆ ಎಂದು ಹೇಳಿದರೆ ಮತ್ತೊಬ್ಬರು ಇದು ಒಂದು ರೀತಿ ಎಚ್ಚರಿಕೆ ಎಂದು ಹೇಳಿದ್ದಾರೆ.
ಈ ಹುಲಿ ದೊಡ್ಡದಾಗಿ ನಮಗೆ ಸಂದೇಶ ನೀಡಿದೆ ಎಂದು ನಂದ ಎಂಬವರು ಕಮೆಂಟ್ ಮಾಡಿದ್ದಾರೆ, ಹೀಗೆ ಈ ವೀಡಿಯೋ ನೋಡಿದವರು ಪ್ಲಾಸ್ಟಿಕ್ ಬಾಟಲಿ ಕಂಡಲ್ಲಿ ಎಸೆಯುವ ಮನಸ್ಸು ಮಾಡಲ್ಲ.
ಹಿಂದೆ ಇದೇ ರೀತಿ ಕಾಡನೆಯ ವೀಡಿಯೋವೊಂದು ವೈರಲ್ ಆಗಿತ್ತು
ವರ್ಷದ ಹಿಂದೆ ಒಂದು ಮನೆ ಪಕ್ಕ ಬರುವ ಕಾಡಾನೆ ಬಂದು ಸುತ್ತ-ಮುತ್ತ ಬಿದ್ದಿರುವ ಪ್ಲಾಸ್ಟಿಕ್ ಅನ್ನು ಎತ್ತಿ ಅಲ್ಲಿರುವ ಕಸದ ಬುಟ್ಟಿಗೆ ಹಾಕುವ ವೀಡಿಯೋ ತುಂಬಾನೇ ವೈರಲ್ ಆಗಿತ್ತು, ಆ ಕಾಡಾನೆಯ ಬುದ್ದಿಯನ್ನು ಎಲ್ಲರು ಮೆಚ್ಚಿಕೊಂಡಿದ್ದರು. ಆಗ ಕೂಡ ಮನುಷ್ಯರಿಗೆ ಇಲ್ಲದ ಬುದ್ಧಿ ಆ ಕಾಡಾನೆಗಿದೆ ಎಂದು ಹೇಳಿದ್ದರು.
ಪ್ಲಾಸ್ಟಿಕ್ ಅನ್ನು ಕಂಡ-ಕಂಡಲ್ಲಿ ಎಸೆಯಬೇಡಿ
ಇನ್ನೊಬ್ಬರು ಬದಲಾಗಲಿ ಎಂದು ಬಯಸುವ ಬದಲಿಗೆ ಮೊದಲು ನಾವು ಬದಲಾಗಬೇಕು, ಪರಿಸರದ ಮೇಲೆ ಕಾಳಜಿ ತೋರಬೇಕು. ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುವುದನ್ನು ಕಡಿಮೆ ಮಾಡಿ, ಅಲ್ಲದೆ ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಸಿಕ್ಕ ಕಡೆ ಎಸೆಯಬೇಡಿ, ಅದರಲ್ಲೂ ನದಿಗೆ ಎಸೆಯಬೇಡಿ, ಆ ಪ್ಲಾಸ್ಟಿಕ್ ಬಾಟಲಿಗಳನ್ನು ಜಲಚರಗಳು ತಿಂದರೆ ಅಥವಾ ಅದರಲ್ಲಿರುವ ರಾಸಾಯನಿಕಗಳು ನೀರಿನ ಶುದ್ಧತೆ ಹಾಳು ಮಾಡುತ್ತದೆ. ಇಂಥ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
ನಾವು ಪ್ರಕೃತಿಯನ್ನು ಜೋಪಾನ ಮಾಡದಿದ್ದರೆ ನಮ್ಮ ಮಕ್ಕಳೂ ನಮ್ಮ ಕೃತ್ಯದಿಂದ ತೊಂದರೆಯನ್ನು ಅನುಭವಿಸಬೇಆಗುವುದು. ಪರಿಸರ ರಕ್ಷಣೆ ಪ್ರತಿಯೊಬ್ಬ ಮನುಷ್ಯನ ಹೊಣೆಯಾಗಿದೆ. ಪರಿಸರ ಉಳಿದರೆ ಮಾತ್ರ ನಮ್ಮ ಉಳಿವು.



Click it and Unblock the Notifications