Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗಾರ್ಬೇಜ್ ಕೆಫೆ: ಈ ರೆಸ್ಟೋರೆಂಟ್‌ನಲ್ಲಿ ದುಡ್ಡು ಕೊಡಬೇಕಾಗಿಲ್ಲ ಪ್ಲಾಸ್ಟಿಕ್ ವೇಸ್ಟ್ ಕೊಟ್ಟರೆ ಸಿಗುತ್ತೆ ಫುಲ್ ಮೀಲ್ಸ್
ಕಸ ತಂದು ಕೊಟ್ಟರೆ ಮೃಷ್ಟಾನ ಭೋಜನ ಸಿಗುತ್ತೆ, ಈ ಪರಿ ಕಲ್ಪನೆ ಎಷ್ಟೊಂದು ಚೆನ್ನಾಗಿದೆ ಅಲ್ವಾ? ಆದರೆ ಇದು ಬರಿ ಕಲ್ಪನೆಯಾಗಿ ಉಳಿದಿಲ್ಲ, ಭಾರತದಲ್ಲಿ ಕಸ ಸ್ವೀಕರಿಸಿ ರುಚಿಯಾದ ಆಹಾರ ನೀಡುವ ರೆಸಗಟೋರೆಂಟ್ ಬಂದಿದೆ.
ಹೊಟ್ಟೆ ಹಸಿದಿದ್ದರೆ ಕಸವನ್ನು ನೀಡಿದರೆ ಸಾಕು ಆ ಹೋಟೆಲ್‌ನವರು ಹೊಟ್ಟೆ ತುಂಬಾ ಊಟ ಕೊಡುತ್ತಾರೆ.ನಾಲ್ಕು ರೊಟ್ಟಿ, 2 ಬಗೆಯ ತರಕಾರಿ, ದಾಲ್, ಅನ್ನ , ಸಲಾಡ್, ಮೊಸರು, ಉಪ್ಪಿನಕಾಯಿ, ಮೊಸರನ್ನ ಊಟ ನೀಡುತ್ತಾರೆ. ಭಾರತದಲ್ಲಿ ಕಸ ಕೊಟ್ಟರೆ ಊಟ ನೀಡುವ ಇದೇ ಮೊದಲ ರೆಸ್ಟೋರೆಂಟ್ ಆಗಿದ್ದು ಇದು ಒಳ್ಳೆಯ ಬೆಳವಣಿಗೆಯಾಗಲಿದೆ.

ಎಲ್ಲಿದೆ ಹೋಟೆಲ್?
ಈ ಹೋಟೆಲ್ ಛತ್ತೀಸ್‌ಗಢದ ಆಂಬಿಕಪೂರ್ ಜಿಲ್ಲೆಯಲ್ಲಿದೆ. ಈಹೋಟೆಲ್‌ಗೆ ಪ್ಲಾಸ್ಟಿಕ್ ವೇಸ್ಟ್ ತಂದುಕೊಟ್ಟರೆ ಅವರಿಗೆ ಆಹಾರ ನೀಡಲಾಗುವುದು. ಪರಿಸರವನ್ನು ಶುಚಿಯಾಗಿಸುವ ಒಂದು ಒಳ್ಳೆಯ ಉದ್ದೇಶದಿಂದ ಪ್ರಾರಂಭಿಸಿದ ಹೋಟೆಲ್ ಇದಾಗಿದೆ, ಈ ಪ್ರದೇಶ ಶುಚಿತ್ವಕ್ಕೆ ಹೆಸರುವಾಸಿಯಾದ ಪ್ರದೇಶವಾಗಿದೆ. ಇಲ್ಲಿಯ ನಿವಾಸಿಗಳು ಕೂಡ ಪರಿಸರವನ್ನು ಶುಚಿಯಾಗಿಡಲು ತುಂಬಾನೇ ಗಮನಹರಿಸುತ್ತಾರೆ. ಇದೀಗ ಆ ಪ್ರದೇಶದಲ್ಲಿ ಇಂಥದ್ದೊಂದು ಹೋಟೆಲ್ ಕೂಡ ಬಂದಿರುವುದರಿಂದ ಜನರು ಪ್ಲಾಸ್ಟಿಕ್ ವಸ್ತುಗಳನ್ನು ಅಲ್ಲಿಂದರಲ್ಲಿ ಎಸೆಯುವುದಿಲ್ಲ. ಅವುಗಳನ್ನು ಸಂಗ್ರಹಿಟ್ಟು ಇಲ್ಲಿಗೆ ತಂದು ಕೊಡುತ್ತಾರೆ, ಒಂದೊಳ್ಳೆಯ ಊಟ ಸಿಗುತ್ತದೆ ಎಂದ ಮೇಲೆ ಪ್ಲಾಸ್ಟಿಕ್ ಎಸೆಯುವ ತಪ್ಪು ಯಾರೂ ಮಾಡಲ್ಲ.
ಅರ್ಧ ಕೆಜಿ ಪ್ಲಾಸ್ಟಿಕ್ ವೇಸ್ಟ್ ತಂದರೆ ಬ್ರೇಕ್‌ಫಾಸ್ಟ್ ಸಿಗುತ್ತೆ
ಅರ್ಧ ಕೆಜಿ ಪ್ಲಾಸ್ಟಿಕ್ ತಂದುಕೊಟ್ಟೆ ಆಲೂ ಚಪಾತಿ, ಇಡ್ಲಿ, ಸಮೋಸಾ, ಬ್ರೆಡ್, ಚಾಪ್ಸ್ ಈ ಬಗೆಯ ಆಹಾರಗಳ ಪಡೆಯಬಹುದು. ಹಾಗಾಗಿ ವೇಸ್ಟ್‌ನಿಂದ ಕೂಡ ಜನರು ಲಾಭ ಮಾಡಿಕೊಳ್ಳಬಹುದು.
ಪ್ರತಿಯೊಂದು ನಗರದಲ್ಲಿಯೂ ಇಂಥ ರೆಸ್ಟೋರೆಂಟ್ ಬಂದರೆ ಭಾರತ ಮತ್ತಷ್ಟು ಸುಂದರವಾಗುವುದು
ಕಸದವರು ಒಣಕಸ-ಹಸಿ ಕಸ ವಿಂಗಡಿಸಿ ಕೊಡಿ ಎಂದು ಎಷ್ಟು ಹೇಳಿದರೂ ತುಂಬಾ ಜನ ಮಿಕ್ಸ್ ಮಾಡಿ ಕೊಡುತ್ತಾರೆ, ಒಬ್ಬರು ಕಸ ಎಸೆದರೆ ಸಾಕು, ಎಲ್ಲರು ಅಲ್ಲಿ ಆ ಜಾಗದಲ್ಲಿ ತಂದು ಎಸೆದು ಕಸದ ರಾಶಿ ಮಾಡಿ ಬಿಡುತ್ತಾರೆ, ನಮ್ಮ ಮನೆ ಶುದ್ಧವಾಗಿಡುವುದು ಮಾತ್ರವಲ್ಲ ಪರಿಸರ ಕೂಡ ಶುದ್ಧವಾಗಿಡಲು ಪ್ರತಿಯೊಬ್ಬರು ಪ್ರಯತ್ನ ಹಾಕಬೇಕು. ಆವಾಗ ಮಾತ್ರ ನಮ್ಮ ಪರಿಸರ ತುಂಬಾ ಶುದ್ಧವಾಗಿರುತ್ತದೆ.
ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮ ಗುರಿಯಾಗಬೇಕು
ಪರಿಸರ ದಿನಾಚರಣೆಗೆ ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರಿದರೆ ಸಾಲದು ಪ್ಲಾಸ್ಟಿಕ್ ಮುಕ್ತ ಪರಸರವಾಗಲು ನಾವೆಲ್ಲರೂ ಪ್ರಯತ್ನ ಹಾಕಬೇಕು. ಆದಷ್ಟೋ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು, ಬದಲಿಗೆ ಮಣ್ಣಿನಲ್ಲಿ ಸುಲಭವಾಗಿ ಕರಗುವಂಥ ಚೀಲಗಳನ್ನು ಬಳಸಬೇಕು.
ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೆ ವರ್ಷಗಟ್ಟಲೆ ಹಾಗೆಯೇ ಇರುತ್ತದೆ
ನೀವು ಪ್ಲಾಸ್ಟಿಕ್ ಭೂಮಿಗೆ ಹಾಕಿದರೆ ಅದು ಕರಗುವುದಿಲ್ಲ, ವರ್ಷಗಟ್ಟಲೆ ಹಾಗೆಯೇ ಇರುತ್ತದೆ, ಇದರಿಂದ ಭೂಮಿಯಲ್ಲಿ ನೀರು ಇಂಗುವುದಿಲ್ಲ, ಮಣ್ಣಿನ ಫಲವತ್ತತೆ ಕೂಡ ನಾಶವಾಗುವುದು, ಅಂಥ ಮಣ್ಣಿನಲ್ಲಿ ಬೆಳೆ ಬೆಳೆದರೆ ಬೆಳೆ ಕೂಡ ಸರಿಯಾಗಿ ಬರುವುದಿಲ್ಲ. ಹೀಗಾಗಿ ಪ್ಲಾಸ್ಟಿಕ್ ಬಳಸುವುದು ಕಡಿಮೆ ಮಾಡಬೇಕು.



Click it and Unblock the Notifications
