Latest Updates
-
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ?
ಈ 6 ರಾಶಿಯವರು ಬೇರೆಯವರ ಕೈಗೊಂಬೆಯಾಗೋದಿಲ್ಲ!
ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಗುಣ-ನಡೆತೆಯೂ ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿರುತ್ತದೆ. ಆಲೋಚನೆ, ಗುಣ-ನಡೆತೆ ಎಲ್ಲವೂ ಒಬ್ಬರಿಗಿಂತ ಮತ್ತೊಬ್ಬರಲ್ಲಿ ವಿಭಿನ್ನವಾಗಿರುತ್ತದೆ. ಅಷ್ಟೇ ಯಾಕೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಗುಣದಲ್ಲೂ ಕೂಡ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಹಾಗೆನೇ ಜೀವನ ಎಲ್ಲಾ ಸಂದರ್ಭದಲ್ಲಿ ನಮ್ಮ ನಿಯಂತ್ರಣದಲ್ಲಿ ಇರುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ಕೆಲವೊಂದು ಬಾರಿ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನು ಮತ್ತೊಬ್ಬರು ನಿಯಂತ್ರಿಸುತ್ತಿರುತ್ತಾರೆ.
ಕೆಲವೊಂದು ಬಾರಿ ನಾವು ಯಾರ ನಿಯಂತ್ರಣಕ್ಕೆ ಒಳಪಡುತ್ತೇವೆಯೋ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಗೊಂಬೆಯಾಗಿ ಬಿಡುತ್ತೇವೆ. ಹೀಗಾಗಿ ಈ 6 ರಾಶಿಯವರು ಮತ್ತೊಬ್ಬರ ನಿಯಂತ್ರಣದಲ್ಲಿ ಇರೋದಕ್ಕೆ ಇಷ್ಟ ಪಡೋದಿಲ್ವಂತೆ. ಅಷ್ಟಕ್ಕೂ ಆ 6 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಯಾವಾಗಲೂ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಇರುತ್ತಾರೆ. ಇವರು ಯಾವುದೇ ಕಾರಣಕ್ಕೂ ಬೇರೆಯವರಿಂದ ಪ್ರಭಾವಿತರಾಗೋದಿಲ್ಲ. ಈ ರಾಶಿವರು ತಮ್ಮದೇ ಆದ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಬೇರೆಯವರು ಏನೋ ಹೇಳಿದರು ಎಂದು ಅವರ ತಾಳಕ್ಕೆ ಕುಣಿಯೋದಿಲ್ಲ. ಬೇರೆ ಯಾರದ್ದೋ ಮಾತನ್ನು ಕೇಳಿ ಇವರ ನಿರ್ಧಾರ ಖಂಡಿತ ಬದಲಾಗೋದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ವಿಚಾರಗಳನ್ನು ರಹಸ್ಯವಾಗಿ ಇಡುತ್ತಾರೆ. ಹಾಗೂ ಇವರು ತಮ್ಮ ಅಭಿಪ್ರಾಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ ಹೊರತು ಬೇರೆಯವರೊಂದಿಗೆ ಹಂಚಿಕೊಳ್ಳೋದಕ್ಕೆ ಹೋಗೋದಿಲ್ಲ. ಈ ರಾಶಿಯವರು ತಮ್ಮ ಯಾವುದೇ ಯೋಜನೆಗಳನ್ನು ಬೇರೆಯವರ ಬಳಿ ಹೇಳೋದಿಲ್ಲ. ಇವರು ಒಬ್ಬರೇ ಇದ್ದರೂ ಕೂಡ ತುಂಬಾನೇ ಸಮರ್ಥರಾಗಿ ಇರುತ್ತಾರೆ. ಹಾಗೂ ಇತರರ ನಿಯಂತ್ರಣಕ್ಕೆ ಒಳಪಡೋದಿಲ್ಲ.
ತುಲಾ ರಾಶಿ
ತುಲಾ ರಾಶಿಯವರು ಬೇರೆಯವರ ಇಚ್ಛೆಗೆ ಮಣಿಯೋದಿಲ್ಲ. ಇವರಿಗೆ ಜೊತೆಗಾರರು ಬೇಕಾಗಿರೋದಿಲ್ಲ. ತಮ್ಮ ಬದುಕನ್ನು ಒಂಟಿಯಾಗಿ ಸಾಗಿಸೋದಕ್ಕೆ ಇಷ್ಟ ಪಡುತ್ತಾರೆ. ಇವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಹಾಗೂ ತಮ್ಮನ್ನು ತಾವು ಹೆಚ್ಚು ನಂಬುತ್ತಾರೆ ಈ ರಾಶಿಯವರು. ಹಾಗೂ ಇವರ ವೈಯಕ್ತಿಕ ಜೀವನದ ಬಗ್ಗೆ ಯಾರ ಬಳಿಯೂ ವಿಚಾರಗಳನ್ನು ಹಂಚಿಕೊಳ್ಳೋದಿಲ್ಲ. ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಡುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಮೇಲೆ ಯಾವ ವ್ಯಕ್ತಿಯೂ ಪ್ರಭಾವ ಬೀರೋದಕ್ಕೆ ಸಾಧ್ಯವಿಲ್ಲ. ಇನ್ನೂ ಅವರ ಹಿಂದೆ ನೀವು ಎಷ್ಟೇ ಜಾಣ್ಮೆಯಿಂದ ಆಟ ಆಡಿದರೂ ಕೂಡ ಅವರನ್ನು ಸೋಲಿಸೋದು ಕಷ್ಟ. ಶತ್ರುಗಳ ಮೈಂಡ್ ಗೇಮ್ ಬಗ್ಗೆ ಈ ರಾಶಿಯವರು ಚೆನ್ನಾಗಿ ಅರಿತುಕೊಂಡಿರುತ್ತಾರೆ. ಇವರು ಯಾವಾಗಲೂ ಒಂದು ಚೌಕಟ್ಟನ್ನು ಹಾಕಿಕೊಂಡಿರುತ್ತಾರೆ. ಆ ಚೌಕಟ್ಟಿನ ಮಿತಿ ಮೀರಿ ಯಾರಿಗೂ ಒಳಬರೋದಕ್ಕೆ ಅವಕಾಶ ನೀಡೋದಿಲ್ಲ.
ಮಕರ ರಾಶಿ
ಮಕರ ರಾಶಿಯವರು ಒಂದು ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಂಡ್ರೆ ಮುಗಿತು. ಆ ನಿರ್ಧಾರಕ್ಕೆ ಅವರು ಬದ್ಧರಾಗಿ ಇರುತ್ತಾರೆ. ಆ ನಂತರ ಯಾರೂ ಅವರ ಮನವೊಲಿಸಿ ಆ ನಿರ್ಧಾರವನ್ನು ಬದಲು ಮಾಡೋದಕ್ಕೆ ಸಾಧ್ಯವಿಲ್ಲ. ಹಾಗೂ ಈ ರಾಶಿಯವರನ್ನು ಯಾರೂ ಕೂಡ ಅಷ್ಟೊಂದು ಸುಲಭವಾಗಿ ಮೂರ್ಖರಾಗಿಸೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ತನ್ನ ಸುತ್ತ-ಮುತ್ತ ಏನು ನಡೆಯುತ್ತಿದೆ ಅನ್ನೋದನ್ನು ಚೆನ್ನಾಗಿಯೇ ಅರಿತಿರುತ್ತಾರೆ.
ಧನು ರಾಶಿ
ಧನು ರಾಶಿಯ ವ್ಯಕ್ತಿಗಳು ತುಂಬಾನೇ ಪ್ರಾಮಾಣಿಕರು. ಆದರೆ ಬೇರೆ ಯಾರಾದರೂ ಇವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಅಂತ ಬಯಸಿದರೆ ಅದು ಸಾಧ್ಯ ಆಗೋದಿಲ್ಲ. ಧನು ರಾಶಿಯವರು ಬೇರೆಯವರು ಹೇಳಿದ ಮಾತನ್ನು ಕೇಳುತ್ತಾರೆ. ಹಾಗಂತ ಅವರ ಮಾತೇ ವೇದ ವಾಕ್ಯವೆಂದು ನಂಬೋದಕ್ಕೆ ಖಂಡಿತ ಹೋಗೋದಿಲ್ಲ.



Click it and Unblock the Notifications
