Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಏ. 6ಕ್ಕೆ ತುಲಾ ರಾಶಿಯಲ್ಲಿ ಪಿಂಕ್‌ಮೂನ್: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವವೇನು?
ಏಪ್ರಿಲ್ 6ಕ್ಕೆ ಹುಣ್ಣಿಮೆ, ಈ ಹುಣ್ಣಿಮೆ ಇತರ ಹುಣ್ಣಿಮೆಯಂತೆಯಲ್ಲ ತುಂಬಾನೇ ವಿಶೇಷವಾಗಿದೆ. ಏಕೆಂದರೆ ಖಗೋಳದಲ್ಲಿ ಪಿಂಕ್ ಮೂನ್ ಕಂಡು ಬರಲಿದೆ.
ಬೆಳದಿಂಗಳಿನ ಚಂದ್ರ ಮತ್ತಷ್ಟು ದೊಡ್ಡದಾಗಿ ಕಂಗೊಳಿಸಲಿದ್ದಾನೆ. ಚಂದ್ರ ಭೂಮಿಯ ಸಮೀಪ ಬಂದಾಗ ಪಿಂಕ್ ಮೂನ್ ಏರ್ಪಡಲಿದೆ.

ಪಿಂಕ್ ಮೂನ್ ಎಂದರೆ ಚಂದ್ರ ಪಿಂಕ್ ಬಣ್ಣದಲ್ಲಿ ಕಾಣುವುದೇ?
ಹಾಗೇನಿಲ್ಲ, ಈ ಸಮಯದಲ್ಲಿ ಅಮೆರಿಕದಲ್ಲಿ ಅರಳುವ ಗ್ರೌಂಡ್ ಫ್ಲೋಕ್ಸ್ ಎಂಬ ಕಾಡು ಹೂಗಳು ಅರಳುತ್ತದೆ, ಅವುಗಳು ನೋಡಲು ಪಿಂಕ್ ಬಣ್ಣದಿಂದ ಕೂಡಿರುತ್ತದೆ. ಅದೇ ಹೆಸರನ್ನು ಈ ಹುಣ್ಣಿಮೆಗೆ ಇಡಲಾಗಿದೆ.
ನಮ್ಮಲ್ಲಿ ಈ ಹುಣ್ಣಿಮೆಗೆ ಚೈತ್ರ ಹುಣ್ಣಿಮೆಯೆಂದು ಕರೆಯಲಾಗುವುದು. ಪಿಂಕ್ ಮೂನ್ ಸಮಯದಲ್ಲಿ ಸಮುದ್ರ ತೀರಕ್ಕೆ ಹೋಗಬೇಡಿ ಎಂದು ಹೇಳಲಾಗುವುದು, ಇದು ಮೂಢನಂಬಿಕೆಯಲ್ಲ ಏಕೆಂದರೆ ಈ ದಿನ ಸಮುದ್ರದಲ್ಲಿ ಅಲೆಗಳು ತುಂಬಾ ವೇಗವಾಗಿ ಬಂದು ಅಪ್ಪಳಿಸುವುದು. ಹೀಗಾಗಿ ಈ ದಿನ ಸಮುದ್ರದ ಬಳಿ ಹೋಗಬೇಡಿ ಎಂದು ಹಿರಿಯರು ಎಚ್ಚರಿಸುತ್ತಾರೆ.
ಈ ಪಿಂಕ್ ಮೂನ್ ಅನ್ನು ಕನ್ನಡದಲ್ಲಿ ಚೈತ್ರ ಹುಣ್ಣಿಮೆ ಎಂದು ಕರೆಯುತ್ತಾರೆ. ಈ ಚೈತ್ರ ಹುಣ್ಣಿಮೆ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ, ಈ ಹುಣ್ಣಿಮೆ ಯಾವ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ:
ಮೇಷ ರಾಶಿ:
ಈ ಚೈತ್ರ ಹುಣ್ಣಿಮೆ ಮೇಷ ರಾಶಿಯವರಿಗೆ ಸಂಬಂಧದ ಮೇಲೆ ಒಳ್ಳೆಯ ಪ್ರಭಾವ ಬೀರಿದೆ. ನಿಮ್ಮ ಸಂಗಾತಿ ಜೊತೆಗಿ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು. ಕೆಲವೊಂದು ಸಮಸ್ಯೆಗಳಿಗೆ ಇಬ್ಬರು ಮನಸ್ಸು ಬಿಚ್ಚಿ ಮಾತನಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ವೃಷಭ ರಾಶಿ
ಈ ಸಮಯದಲ್ಲಿ ನೀವು ವೃತ್ತಿ ಬದುಕಿನಲ್ಲಿ ತುಂಬಾನೇ ಬ್ಯುಸಿಯಾಗುತ್ತೀರಿ. ತಾಳ್ಮೆಯಿಂದ ಕಾದರೆ ಒಳ್ಳೆಯದು ನಿಮಗಾಗಿ ಖಂಡಿತ ಬರಲಿದೆ, ಹೊಸ ಕೌಶಲ್ಯ ಬೆಳೆಸಲು ಗಮನಹರಿಸಿ.
ಮಿಥುನ ರಾಶಿ
ಈ ಅವಧಿಯಲ್ಲಿ ಹೊಸ ಹವ್ಯಾಸ ಬೆಳೆಸಿಕೊಳ್ಳಬಹುದು. ಕೆಲವರು ಪ್ರೀತಿಯಲ್ಲಿ ಬೀಳಬಹುದು. ಈ ಅವಧಿ ತುಂಬಾನೇ ಶುಭವಾಗಿದ್ದು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ.
ಕರ್ಕ ರಾಶಿ
ಭಾವನಾತ್ಮಕವಾಗಿ ಹಲವು ಚಿಂತೆಗಳು ನಿಮ್ಮನ್ನು ಕಾಡುವುದು, ನೀವು ಅವುಗಳಿಂದ ಹೊರಬರಲು ಪ್ರಯತ್ನಿಸಬೇಕು. ಕುಟುಂಬದವರ ಖುಷಿಗಾಗಿ ಗಮನ ನೀಡಿ.
ಸಿಂಹ ರಾಶಿ
ಈ ಸಮಯದಲ್ಲಿ ನಿಮ್ಮ ಕ್ರಿಯಾಶೀಲತೆ ಮತ್ತಷ್ಟು ಹೆಚ್ಚಾಗಲಿದೆ. ಮನಸ್ಸಿನಲ್ಲಿರುವ ವಿಷಯದ ಬಗ್ಗೆ ಕೊರಗುವುದಕ್ಕಿಂತ ನಿಮ್ಮ ಮನಸ್ಸಿನ ಭಾವನೆಗಳನ್ನು ಆಪ್ತರ ಬಳಿ ಹಂಚಿಕೊಳ್ಳಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಆದಾಯದ ಹೊಸ ಮೂಲಗಳನ್ನು ಕಂಡುಕೊಳ್ಳುವಿರಿ. ಈ ಅವಧಿಯಲ್ಲಿ ಹಣವನ್ನು ನೋಡಿಕೊಂಡು ಖರ್ಚು ಮಾಡುತ್ತೀರಿ, ಆರ್ಥಿಕವಾಗಿ ಈ ಅವಧಿ ತುಂಬಾ ಒಳ್ಳೆಯದಿದೆ.
ತುಲಾ ರಾಶಿ
ಈ ಸಮಯ ನಿಮಗೆ ತುಂಬಾನೇ ಉತ್ತಮವಾಗಿದೆ. ನಿಮ್ಮ ಕೆಲಸ ಕಾರ್ಯಗಳು ಪೂರ್ಣವಾಗಲಿದೆ. ನಿಮ್ಮ ಕೆಲಸದ ಕಡೆಗೆ ಅಧಿಕ ಗಮನ ಕೊಡಿ, ಒಳ್ಳೆಯ ಫಲ ಸಿಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಒತ್ತಡದ ಕೆಲಸದಿಂದ ಸ್ವಲ್ಪ ವಿಶ್ರಾಂತಿ ಕಡೆಗೆ ಗಮನಹರಿಸುವುದು ಒಳ್ಳೆಯದು. ಮನಸ್ಸಿಗೆ ಖುಷಿ ಕೊಡುವ ಕಾರ್ಯಗಳನ್ನು ಮಾಡಿ.
ಧನು ರಾಶಿ
ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಸಂಗಾತಿಯೊಂದಿಗಿನ ಬದುಕಿನಲ್ಲಿ ಮಾಧುರ್ಯ ಹೆಚ್ಚಿರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಚೃತ್ತಿ ಜೀವನಕ್ಕೆ ಅನುಕೂಲಕರ. ನಿಮಗೆ ಬಡ್ತಿ ಸಿಗಲಿದೆ. ಹೊಸ ಆಲೋಚನೆಗಳು ಮಾಡುತ್ತಿರುವ ಕೆಲಸದಲ್ಲಿ ಏಕಾಗ್ರತೆ ತಪ್ಪಿಸಬಹುದು, ಹಾಗಾದಂತೆ ಎಚ್ಚರವಹಿಸಿ.
ಕುಂಭ ರಾಶಿ
ಈ ಸಮಯ ನಿಮಗೆ ಶುಭವಾಗಿದೆ. ನಿಮ್ಮ ಇತರ ಆಸಕ್ತಿಗಳಾದ ಟ್ರಾವೆಲ್ ಮಾಡುವುದು ಅಥವಾ ಏನಾದರೂ ಹೊಸತು ಕಲಿಯುವುದು ಇವುಗಳ ಕಡೆ ಗಮನಹರಿಸಲು ಇದು ಸೂಕ್ತ ಸಮಯವಾಗಿದೆ.
ಮೀನ ರಾಶಿ
ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿಕೆಲವು ಸವಾಲುಗಳು ಎದುರಾಗುವುದು ಆದರೆ ಇವುಗಳನ್ನು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸಿ. ಚಿಕ್ಕ ವಿಷಯಕ್ಕೆ ಕುಸಿಯಬೇಡಿ.



Click it and Unblock the Notifications

