Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಿಥುನ ರಾಶಿಯಲ್ಲಿ ಶುಕ್ರ ಸಂಚಾರ : ಈ ರಾಶಿಯವರಿಗೆ ಹಣಕಾಸಿನ ಬಲ
ಶುಕ್ರ ಗ್ರಹವು ಮೇ 2 ರಂದು ಮಿಥುನ ರಾಶಿಗೆ ಸಂಚಾರ ಮಾಡಲಿದೆ. ಅಲ್ಲಿಂದ ಮೇ 30ರವರೆಗೆ ಶುಕ್ರನು ಮಿಥುನ ರಾಶಿಯಲ್ಲೇ ಇರಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಹಾಗಾದ್ರೆ ಮಿಥುನ ರಾಶಿಗೆ ಶುಕ್ರನು ಸಂಚಾರ ಮಾಡುತ್ತಿರೋದ್ರಿಂದ ಯಾವೆಲ್ಲಾ ರಾಶಿಯವರಿಗೆ ಶುಭ ಫಲವನ್ನು ಹೊತ್ತು ತರಲಿದ್ದಾನೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮಿಥುನ ರಾಶಿಗೆ ಶುಕ್ರನು ಸಂಚಾರ ಮಾಡಿರೋದ್ರಿಂದ ಮೇಷ ರಾಶಿಯವರು ಶುಭ ಫಲವನ್ನು ನಿರೀಕ್ಷೇ ಮಾಡಬಹುದು. ಈ ಅವಧಿಯಲ್ಲಿ, ನೀವು ನಿಮ್ಮ ಒಡಹುಟ್ಟಿದವರ ಸಹಾಯದಿಂದ ನಿಮ್ಮ ಹಣವನ್ನು ಖರ್ಚು ಮಾಡಬಹುದು. ವ್ಯವಹಾರದ ದೃಷ್ಟಿಯಿಂದಲೂ ಈ ಸಮಯವು ತುಂಬಾ ಚೆನ್ನಾಗಿರಲಿದೆ. ಸಣ್ಣ ಪ್ರಯಾಣದಿಂದ ವ್ಯಾಪಾರ ಲಾಭವಾಗಲಿದೆ. ಸ್ನೇಹಿತರೊಂದಿಗೆ ಮೋಜು ಮಾಡಲು ಬಯಸುತ್ತೀರಿ. ಇನ್ನೂ ಸಂಗಾತಿಯ ಜೊತೆಗೆ ಉತ್ತಮ ಕ್ಷಣಗಳನ್ನು ಕಳೆಯುತ್ತೀರಿ. ಈ ತಿಂಗಳಲ್ಲಿ ನಿಮಗೆ ಆರ್ಥಿಕ ಲಾಭವಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿಗೆ ಶುಕ್ರನು ಸಂಚಾರ ಮಾಡಿರೋದ್ರಿಂದ ಮಿಥುನ ರಾಶಿಯವರಿಗೆ ಇದು ಉತ್ತಮ ಸಮಯ ಅಂತಾನೇ ಹೇಳಬಹುದು. ಶುಕ್ರನ ಆಗಮನದಿಂದ ಮಿಥುನ ರಾಶಿಯವರ ವ್ಯಕ್ತಿತ್ವ ಸುಧಾರಿಸುತ್ತದೆ. ಆಸ್ತಿಯನ್ನು ಖರೀದಿಸಲು ಇದು ಒಳ್ಳೆಯ ಸಮಯ. ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳಿಂದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿಯೂ ಪ್ರಗತಿಯಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ನೀವು ನಿಮಗಾಗಿ ಹಣವನ್ನು ಖರ್ಚು ಮಾಡಲು ಬಯಸುತ್ತೀರಿ.
ಸಿಂಹ ರಾಶಿ
ಮಿಥುನ ರಾಶಿಗೆ ಶುಕ್ರನು ಸಂಚಾರ ಮಾಡಿರೋದ್ರಿಂದ ಸಿಂಹ ರಾಶಿಯವರ ಆದಾಯದಲ್ಲಿ ಗಣನೀಯ ಏರಿಕೆಯಾಗಲಿದೆ. ಕೆಲಸದ ಸ್ಥಳದಲ್ಲಿಯೂ ಕೂಡ ಯಾವುದೇ ತೊಂದರೆಯಾಗೋದಿಲ್ಲ. ಈ ಸಮಯದಲ್ಲಿ ಕೆಲಸಗಳೆಲ್ಲಾ ನೀವು ಅಂದುಕೊಂಡಂತೆ ನೆರವೇರುತ್ತದೆ. ವಿದ್ಯಾರ್ಥಿಗಳು ನಿಮ್ಮ ಶಿಕ್ಷಣದ ಮೇಲೆ ನೀವು ಹೆಚ್ಚು ಗಮನಹರಿಸಬೇಕು. ನಿಮ್ಮ ಮಕ್ಕಳಿಂದಲೂ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಸಂಗಾತಿಯ ಜೊತೆಗೆ ಸುಮಧುರ ಕ್ಷಣಗಳನ್ನು ಕಳೆಯುತ್ತೀರಿ.
ತುಲಾ ರಾಶಿ
ಮಿಥುನ ರಾಶಿಗೆ ಶುಕ್ರನು ಸಂಚಾರ ಮಾಡಿರೋದ್ರಿಂದ ತುಲಾ ರಾಶಿಯವರಿಗೆ ಧನಲಾಭದ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನೀವು ಪೂರ್ವಜರ ಆಸ್ತಿ ಅಥವಾ ಉತ್ತರಾಧಿಕಾರವನ್ನು ಪಡೆಯಬಹುದು. ಇದರ ಜೊತೆಗೆ ನಿಮಗೆ ಬರಬೇಕಾದ ಹಣವನ್ನು ಮರಳಿ ಪಡೆಯುತ್ತೀರಿ. ಈ ಸಮಯದಲ್ಲಿ ನೀವು ದೀರ್ಘ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಯಶಸ್ಸು ಪಡೆಯುತ್ತೀರಿ ಹಾಗೂ ನಿಮ್ಮ ಗೌರವ ಹೆಚ್ಚಾಗುತ್ತದೆ.
ಮೀನ ರಾಶಿ
ಮಿಥುನ ರಾಶಿಗೆ ಶುಕ್ರ ಸಂಕ್ರಮಣದಿಂದಾಗಿ ಮೀನ ರಾಶಿಯವರು ಉತ್ತಮ ಫಲ ನಿರೀಕ್ಷೇ ಮಾಡಬಹುದು. ಹೊಸ ವಾಹನ ಖರೀದಿ ಮಾಡಬಹುದು. ಮನೆಯಲ್ಲಿ ದೊಡ್ಡ ವಸ್ತುವಿನ ಆಗಮನದಿಂದ ನೀವು ಲಾಭ ಪಡೆಯುತ್ತೀರಿ. ಈ ಸಮಯದಲ್ಲಿ, ನಿಮ್ಮ ಒಡಹುಟ್ಟಿದವರಿಂದ ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುತ್ತೀರಿ. ವಿವಾಹಿತರು ತಮ್ಮ ಸಂಬಂಧಿಕರಿಂದ ಸಹಕಾರ ಮತ್ತು ಸಹಾಯವನ್ನು ಪಡೆಯುತ್ತಾರೆ. ಈ ಅವಧಿಯು ಉದ್ಯಮಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ.



Click it and Unblock the Notifications

