Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಶ್ರಾವಣ ವಿನಾಯಕ ಚತುರ್ಥಿ 2023 : ಶುಭ ಮುಹೂರ್ತ, ಆಚರಣೆ ಹೇಗಿರಬೇಕು?
ಶ್ರಾವಣ ಮಾಸದ ಕೊನೆಯ ಗಣೇಶ ಚತುರ್ಥಿಯನ್ನು ಆಗಸ್ಟ್ 20 ರಂದು ಆಚರಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಮತ್ತು ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.

ಶ್ರಾವಣ ಮಾಸದ ವಿನಾಯಕ ಚತುರ್ಥಿಯ ದಿನದಂದು ಉಪವಾಸ ಆಚರಿಸಲಾಗುತ್ತದೆ. ಮತ್ತು ಆ ದಿನ ಗಣೇಶನನ್ನು ಪೂಜಿಸಲಾಗುತ್ತದೆ. ಈ ದಿನದ ಗಣೇಶನಿಗಾಗಿ ಉಪವಾಸವನ್ನು ಮಾಡೋದ್ರಿಂದ ನಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಾಗುತ್ತಂತೆ. ಮತ್ತು ಗಣೇಶನು ಮನೆಯಲ್ಲಿ ಸಂಪತ್ತು ಮತ್ತು ಧಾನ್ಯಗಳಿಂದ ತುಂಬಿರುವಂತೆ ಆಶೀರ್ವದಿಸುತ್ತಾನಂತೆ. ಅಷ್ಟಕ್ಕೂ ಈ ಉಪವಾಸವನ್ನು ಯಾವಾಗ ಆಚರಣೆ ಮಾಡಲಾಗುತ್ತೆ? ಪೂಜಾ ಮಹತ್ವವೇನು? ಆಚರಣಾ ವಿಧಿ ಬಗ್ಗೆ ತಿಳಿದುಕೊಳ್ಳೋಣ.
ವಿನಾಯಕ ಚತುರ್ಥಿಯ ಶುಭ ಸಮಯ ಯಾವುದು?
ಪಂಚಾಂಗದ ಪ್ರಕಾರ ಆಗಸ್ಟ್ 19ರಂದು ರಾತ್ರಿ 10.19ಕ್ಕೆ ವಿನಾಯಕ ಚತುರ್ಥಿ ಆರಂಭವಾಗಲಿದೆ. ಇದು ಆಗಸ್ಟ್ 21 ರಂದು ರಾತ್ರಿ 12.21 ಕ್ಕೆ ಕೊನೆಗೊಳ್ಳುತ್ತದೆ. ಇನ್ನೂ ವಿನಾಯಕ ಚತುರ್ಥಿ ಉಪವಾಸವನ್ನು ಆಗಸ್ಟ್ 20 ರಂದು ಆಚರಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಗಣೇಶನ ಪೂಜೆಯನ್ನು ಮಧ್ಯಾಹ್ನದ ಸಮಯದಲ್ಲಿ ಮಾಡಲಾಗುತ್ತದೆ. ಆಗಸ್ಟ್ 20 ರಂದು ಬೆಳಿಗ್ಗೆ 11.26 ರಿಂದ ಮಧ್ಯಾಹ್ನ 1.58 ರವರೆಗೆ ಪೂಜೆಗೆ ಶುಭ ಮುಹೂರ್ತವಿರುತ್ತದೆ. ಈ ಸಮಯದಲ್ಲಿ ಪೂಜೆ ಮಾಡೋದ್ರಿಂದ ಒಳ್ಳೆಯದಾಗುತ್ತಂತೆ.
ಶ್ರಾವಣ ಚತುರ್ಥಿಯ ಮಹತ್ವವೇನು?
ಶ್ರಾವಣ ಮಾಸದಲ್ಲಿ ಶಿವನ ಜೊತೆಗೆ ಆತನ ಮಗ ಎಂದು ಕರೆಯಲ್ಪಡುವ ಗಣೇಶನ ಪೂಜೆಗೂ ವಿಶೇಷ ಪ್ರಾಮುಖ್ಯತೆ ಇದೆ. ಗಣೇಶನ ಆರಾಧನೆಯ ಸಂದರ್ಭದಲ್ಲಿ ದೇವರಿಗೆ ಗರಿಕೆಯನ್ನು ಅರ್ಪಿಸಿ. ಇದರ ಜೊತೆಗೆ ಮೋದಕ, ಲಡ್ಡೂಗಳನ್ನು ಅರ್ಪಿಸುವುದು ವಿಶೇಷ ಮಹತ್ವವನ್ನು ಹೊಂದಿದೆ.
ಶ್ರಾವಣ ವಿನಾಯಕ ಚತುರ್ಥಿಯ ಆಚರಣೆಗಳು ಹೇಗಿರುತ್ತೆ?
ಶ್ರಾವಣ ವಿನಾಯಕ ಚತುರ್ಥಿಯ ದಿನದಂದು ಮುಂಜಾನೆಯೇ ಸ್ನಾನ ಮಾಡಿ ವಿನಾಯಕನ ಸಂಕಲ್ಪ ಮಾಡಬೇಕು. ಆ ನಂತರ ಕೆಂಪು ಬಟ್ಟೆಯನ್ನು ಕೆಳಗೆ ಹಾಕಿ ಅದರ ಮೇಲೆ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ದೇವರಿಗೆ ಗರಿಕೆ, ಪುಷ್ಪ, ಪಂಚಮೇವ, ಪಂಚಾಮೃತ, ಅನ್ನವನ್ನು ಅರ್ಪಿಸಿ. ಇದರ ಜೊತೆಗೆ ಮೋದಕ ಮೋತಿಚೂರ್ ಲಡ್ಡುಗಳನ್ನು ಅರ್ಪಿಸಿ. ಮತ್ತು ನಂತರ ಗಣೇಶನ ಮಂತ್ರಗಳೊಂದಿಗೆ ಆರತಿ ಮಾಡಿ. ನಂತರ ಪ್ರಸಾದವನ್ನು ಎಲ್ಲರಿಗೂ ವಿತರಣೆ ಮಾಡಿ.



Click it and Unblock the Notifications
