Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ರಾವಣ ಮಾಸ 2023 : ಈ ವಾಸ್ತು ಟಿಪ್ಸ್ ಪಾಲಿಸಿದ್ರೆ ಆರ್ಥಿಕತೆ ವೃದ್ಧಿಯಾಗುತ್ತೆ!
ಶ್ರಾವಣ ಮಾಸ ಹಿಂದೂಗಳ ಪವಿತ್ರ ಮಾಸ. ಈ ತಿಂಗಳಿನಲ್ಲಿ ಶಿವನನ್ನು ಭಕ್ತಿಯಿಂದ ಪೂಜಿಸಿದ್ರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತೆ ಎನ್ನುವ ನಂಬಿಕೆಯಿದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಶಿವನನ್ನು ಪೂಜೆ ಮಾಡೋದ್ರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರುತ್ತಂತೆ. ಇದ್ರ ಜೊತೆಗೆ ವಾಸ್ತು ಪ್ರಕಾರ ಕೆಲವೊಂದು ಪರಿಹಾರಗಳನ್ನು ಮಾಡಬೇಕಾಗುತ್ತದೆ. ಇದರಿಂದ ವಿಶೇಷ ಫಲಿತಾಂಶಗಳನ್ನು ಪಡೆಯಬಹುದಂತೆ. ಅಷ್ಟಕ್ಕು ಶ್ರಾವಣ ಮಾಸದಲ್ಲಿ ವಾಸ್ತು ಪ್ರಕಾರ ಏನು ಪರಿಹಾರ ಮಾಡಬೇಕು ಅನ್ನೋದನ್ನು ತಿಳಿಯೋಣ.
ನೀರಿನ ಕಾರಂಜಿ
ಶ್ರಾವಣ ಮಾಸದಲ್ಲಿ ಪೂರ್ವ ದಿಕ್ಕಿಗೆ ವಿಶೇಷ ಮಹತ್ವವಿದೆ. ಈ ತಿಂಗಳಿನಲ್ಲಿ ಮನೆಯ ಪೂರ್ವ ಮೂಲೆಯಲ್ಲಿ ಸಣ್ಣ ನೀರಿನ ಮೂಲವನ್ನು ಇರಿಸುವ ಮೂಲಕ ನೀವು ಈ ದಿಕ್ಕನ್ನು ಶಕ್ತಿಯುತಗೊಳಿಸಬಹುದು. ಹೀಗಾಗಿ ನೀವು ಸಣ್ಣ ಕೃತಕ ನೀರಿನ ಕಾರಂಜಿ ಮನೆಯ ಪೂರ್ವ ದಿಕ್ಕಿನಲ್ಲಿ ತಂದಿಡಬಹುದು.

ಅರ್ಧನಾರೀಶ್ವರ ರೂಪವು ಬಹಳ ವಿಶೇಷವಾಗಿದೆ
ವಾಸ್ತು ಪ್ರಕಾರ ಶ್ರಾವಣ ಮಾಸದಲ್ಲಿ ಪೂರ್ವ ದಿಕ್ಕಿನಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದರೆ ಶುಭ ಫಲಗಳು ದೊರೆಯುತ್ತಂತೆ. ಶ್ರಾವಣ ಮಾಸದಲ್ಲಿ ನೀವು ಶಿವನ ಅರ್ಧನಾರೀಶ್ವರ ರೂಪವಿರೋ ವಿಗ್ರಹವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಸ್ಥಾಪಿಸಬಹುದು.
ಸಾಧ್ಯವಾದರೆ ಬಿಳಿ ಅಮೃತಶಿಲೆಯ ಒಂದೇ ಕಲ್ಲಿನಿಂದ ಮಾಡಿದ ಅರ್ಧ ನಾರೀಶ್ವರನ ವಿಗ್ರಹವನ್ನು ಮನೆಯಲ್ಲಿ ತಂದು ಪ್ರತಿಷ್ಠಾಪಿಸಿ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾವ ಮನೆಯಲ್ಲಿ ಅರ್ಧ ನಾರೀಶ್ವರನ ವಿಗ್ರಹ ಇರುತ್ತದೆಯೋ ಆ ಮನೆಯಲ್ಲಿ ಪತಿ-ಪತ್ನಿಯರ ಬಾಂಧವ್ಯ ಚೆನ್ನಾಗಿರುತ್ತಂತೆ.
ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಿ
ಶ್ರಾವಣ ಮಾಸದಲ್ಲಿ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟರೆ ಶುಭ ಅಂತ ಹೇಳಲಾಗುತ್ತದೆ. ಹೀಗಾಗಿ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಿ. ಇದರಿಂದ ಮನೆಯ ವಾತಾವರಣ ಶುದ್ಧಿಯಾಗುವುದಲ್ಲದೆ ಪೂರ್ವಜರ ಆಶೀರ್ವಾದವೂ ದೊರೆಯುತ್ತದೆ. ಅವಿವಾಹಿತ ಮಹಿಳೆಯರು ಪ್ರತಿನಿತ್ಯ ಬೆಳಗ್ಗೆ ಎದ್ದು ತುಳಸಿಯನ್ನು ಭಕ್ತಿಯಿಂದ ಪೂಜಿಸಿದ್ರೆ ನಿಮಗೆ ತಕ್ಕ ವರ ಸಿಗುತ್ತಾನಂತೆ.
ರುದ್ರಾಕ್ಷಿ ಮಾಲೆಯನ್ನು ಧರಿಸಿ
ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಧರಿಸುವುದಕ್ಕೂ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸೋದ್ರಿಂದ ಗ್ರಹಗಳ ಋಣಾತ್ಮಕ ಪರಿಣಾಮಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ವ್ಯಕ್ತಿಯ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತಂತೆ. ಉತ್ತಮ ಆರೋಗ್ಯ ಮತ್ತು ಅದೃಷ್ಟಕ್ಕಾಗಿ ಪಂಚಮುಖಿ ರುದ್ರಾಕ್ಷವನ್ನು ಧರಿಸುವುದು ಉತ್ತಮ ಅಂತ ಹೇಳಾಗುತ್ತದೆ.
ಗೊರಟಿ ಹೂವು ಶಿವನಿಗೆ ಪ್ರಿಯವಾದ ವಸ್ತು
ಗೊರಟಿ ಹೂವು ಶಿವನಿಗೆ ಪ್ರಿಯವಾಗಿರೋದ್ರಿಂದ ಅದನ್ನು ಶಿವನ ಪೂಜೆಯಲ್ಲಿ ಬಳಕೆ ಮಾಡಲಾಗುತ್ತದೆ. ಈ ರೀತಿ ಮಾಡೋದ್ರಿಂದ ವ್ಯಕ್ತಿಯು ನಿರ್ಭೀತನಾಗುತ್ತಾನೆ ಮತ್ತು ಅವನ ಜೀವನದಲ್ಲಿನ ಸಮಸ್ಯೆಗಳು ಶೀಘ್ರವಾಗಿ ಪರಿಹರಿಸಲ್ಪಡುತ್ತವೆ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಗೊರಟಿ ಹೂವಿನ ಸಸ್ಯವನ್ನು ಮನೆಯ ಹೊರಗೆ ನೆಟ್ಟರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ.
ಉಪವಾಸ ವ್ರತ
ಶ್ರಾವಣ ಮಾಸದಲ್ಲಿ ಉಪವಾಸ ವ್ರತಕ್ಕೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ಒಂದು ಹೊತ್ತು ಊಟ ಮಾಡಿದರೆ ಒಳ್ಳೆಯದಂತೆ. ಹೀಗೆ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತಂತೆ.
ಶ್ರಾವಣ ತಿಂಗಳಿನಲ್ಲಿ ಈ ವಾಸ್ತು ಟಿಪ್ಸ್ ಫಾಲೋ ಮಾಡಿ :
- ಶ್ರಾವಣ ಮಾಸದಲ್ಲಿ ಬೆಳಗ್ಗೆ ಎದ್ದು ನಿತ್ಯ ಸ್ನಾನ ಮಾಡಿ. ಬಳಿಕ ಶಿವನ ಜಲಾಭಿಷೇಕವನ್ನು ಮಾಡಿ. ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಶಿವನ ಆರಾಧನೆಯೊಂದಿಗೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಬಹಳ ಫಲಪ್ರದವಾಗುತ್ತಂತೆ. ಹಾಗೂ ನಿಮಗೆ ಎಲ್ಲಾ ರೀತಿಯ ಸಂಕಟಗಳಿಂದ ಮುಕ್ತಿ ಸಿಗುತ್ತದೆ.
- ಶ್ರಾವಣ ಮಾಸದಲ್ಲಿ ಶಿವತಾಂಡವ ಸ್ತೋತ್ರವನ್ನು ಪಠಿಸಿದರೆ ಭಕ್ತರು ಜೀವನದಲ್ಲಿ ಯಾವುದೇ ರೀತಿಯ ಕಷ್ಟವನ್ನು ಎದುರಿಸುವುದಿಲ್ಲವಂತೆ. ಶಿವ ತಾಂಡವ ಸ್ತೋತ್ರವನ್ನು ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಪಠಣೆ ಮಾಡಬೇಕು. ಇದರಿಂದ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತಂತೆ. ಆದರೆ ಶಿವ ತಾಂಡವ ನೃತ್ಯವನ್ನು ಮಹಿಳೆಯರು ಮಾಡಬಾರದು.
- ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ಶ್ರಾವನ ಮಾಸದಲ್ಲಿ ನಿಮ್ಮ ಮನೆಗೆ ಶಿವಲಿಂಗವನ್ನು ತಂದು ಪೂಜೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಶಿವನ ಕೃಪೆ ಸದಾ ಇರುತ್ತಂತೆ. ಜೊತೆಗೆ ನಿಮಗೆ ಯಾವುದೇ ರೀತಿ ಆರ್ಥಿಕ ಸಮಸ್ಯೆ ಆಗೋದಿಲ್ಲ.
- ವಾಸ್ತು ಶಾಸ್ತ್ರದ ಪ್ರಕಾರ ವಾಸ್ತು ದೋಷದಿಂದ ನಿಮ್ಮ ಮನೆಯ ಪ್ರಗತಿ ನಿಂತಿದ್ದರೆ ಶ್ರಾವಣ ಸೋಮವಾರ ದಿನ ಶಮಿ ಗಿಡವನ್ನು ಮನೆಗೆ ತಂದು ಮನೆಯ ಮುಂಭಾಗ ನೆಡಿ. ಶಮಿ ಗಿಡಕ್ಕೆ ನಿತ್ಯ ನೀರು ಹಾಕೋದ್ರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಜೊತೆಗೆ ಶಮಿ ಗಿಡವು ಅಭಿವೃದ್ಧಿಯಾದಂತೆ ಮನೆಯ ಪ್ರಗತಿಯೂ ಆಗುತ್ತೆ ಎನ್ನುವ ನಂಬಿಕೆಯಿದೆ.
ನಿಮ್ಮ ಮನೆ ಮತ್ತು ಜೀವನದಲ್ಲಿ ಸಮಸ್ಯೆಗಳು ಇದ್ದಾಗ ಅದನ್ನು ಪರಿಹರಿಸಬೇಕೆಂದರೆ ಮನೆಯಲ್ಲಿ ಈ ರೀತಿಯ ಕೆಲವು ವಾಸ್ತು ಪರಿಹಾರಗಳನ್ನು ಮಾಡಿದರೆ ಎಲ್ಲವೂ ಸರಿಯಾಗುತ್ತಂತೆ.



Click it and Unblock the Notifications
