Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಜೂನ್ 17 ರಿಂದ ಶನಿ ಕೃಪೆಯಿಂದ ಈ ರಾಶಿಯವರ ಅದೃಷ್ಟ ಖುಲಾಯಿಸಲಿದೆ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಹಿಮ್ಮೆಟ್ಟುವುದು ಮಂಗಳಕರವಲ್ಲ. ಶನಿ ಹಿಮ್ಮೆಟ್ಟಿದರೆ ಇದರಿಂದ ಉಂಟಾಗುವ ದುಷ್ಪರಿಣಾಮ ಮತ್ತಷ್ಟು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಶನಿಯ ಈ ಚಲನೆಯಿಂದ ಕೆಲ ರಾಶಿಯವರಿಗೆ ಅಶುಭವಾದರೆ ಇನ್ನೂ ಕೆಲವು ರಾಶಿಯವರಿಗೆ ಇದರಿಂದ ಒಳ್ಳೆಯದಾಗಲಿದೆ. ಜೂನ್ 17 ರಿಂದ ಶನಿಯು ಹಿಮ್ಮೆಟ್ಟಲ್ಲಿದ್ದು, ಇದರ ಪರಿಣಾಮವಾಗಿ ಕೆಲ ರಾಶಿಯವರಿಗೆ ಫಲ ಪ್ರದವಾಗಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಒಳ್ಳೆಯದಾಗಲಿದೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಶನಿಯು ಹಿಮ್ಮುಖವಾಗಿ ಚಲಿಸುತ್ತಿರೋದ್ರಿಂದ ಮೇಷ ರಾಶಿಯವರಿಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮದಿಂದಾಗಿ ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ. ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ. ಹಿರಿಯ ಸಹೋದರನೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ.

ನೀವು ಪೂರ್ವಜರ ಆಸ್ತಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಇದಕ್ಕಾಗಿ ನೀವು ನಿಮ್ಮ ಸಹೋದರನ ಸಹಾಯ ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಈ ಸಮಯದಲ್ಲಿ ಅನೇಕ ಸವಾಲುಗಳು ನಿಮ್ಮ ಮುಂದೆ ಬರುತ್ತವೆ. ಅದರ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರೆ ನೀವು ಸಾಕಷ್ಟು ಹಣವನ್ನು ಸಹ ಪಡೆಯುತ್ತೀರಿ. ಹೀಗಾಗಿ ಯೋಚಿಸಿ ಮುಂದಿನ ಹೆಜ್ಜೆ ಇಟ್ಟರೆ ಉತ್ತಮ.
ವೃಷಭ ರಾಶಿ
ಶನಿಯು ಹಿಮ್ಮುಖವಾಗಿ ಚಲಿಸುತ್ತಿರೋದ್ರಿಂದ ವೃಷಭ ರಾಶಿಯವರಿಗೆ ಈ ಸಮಯವು ತುಂಬಾನೇ ಉತ್ತಮವಾಗಿರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣುತ್ತೀರಿ. ನಿಮ್ಮ ಮಾತು ಮತ್ತು ನಡವಳಿಕೆಯ ಮೇಲೆ ನೀವು ನಿಯಂತ್ರಣ ಹೊಂದಿರಬೇಕು. ನೀವು ನಿಮ್ಮ ಅಧಿಕಾರಿಗಳೊಂದಿಗೆ ಜೊತೆಯಾಗಿ ಕೆಲಸ ಮಾಡಿದರೆ ವೃತ್ತಿಜೀವನದಲ್ಲಿ ಪ್ರಗತಿ ಕಾಣುತ್ತೀರಿ.
ನಿಮಗೆ ಸಾಮಾಜಿಕ ಕ್ಷೇತ್ರದಲ್ಲಿ ಪ್ರತಿಷ್ಠೆ ದೊರೆಯಲಿದೆ. ರಾಜಕೀಯದಲ್ಲಿ ಸಾರ್ವಜನಿಕರ ಸಂಪೂರ್ಣ ಬೆಂಬಲವಿರುತ್ತದೆ. ನ್ಯಾಯಾಂಗ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇದು ಉತ್ತಮ ಸಮಯ. ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಈ ಸಮಯವು ನಿಮಗೆ ಹಣಕಾಸಿನ ವಿಷಯಗಳಲ್ಲಿ ಪ್ರಯೋಜನಕಾರಿಯಾಗಿದೆ.
ಧನು ರಾಶಿ
ಶನಿಯು ಹಿಮ್ಮುಖವಾಗಿ ಚಲಿಸುತ್ತಿರೋದ್ರಿಂದ ನಿಮ್ಮ ಸ್ವಭಾವ ಆಕ್ರಮಣಕಾರಿಯಾಗುತ್ತದೆ. ಈ ಸಮಯದಲ್ಲಿ ನಿಮ್ಮ ಹಠ ಹೆಚ್ಚಾಗುತ್ತದೆ. ಇನ್ನೂ ನೀವು ಸಾಕಷ್ಟು ಪ್ರಗತಿ ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ದಿಟ್ಟ ಹೆಜ್ಜೆಯು ನಿಮಗೆ ಲಾಭವನ್ನು ನೀಡುತ್ತದೆ. ಆದರೆ ಅಪಾಯವನ್ನು ಎಚ್ಚರಿಕೆಯಿಂದ ನಿಭಾಯಿಸಿ. ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ವ್ಯಾಪಾರ ಮತ್ತು ಕೆಲಸದ ಸ್ಥಳದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತೀರಿ.
ಕುಂಭ ರಾಶಿ
ಶನಿಯು ಹಿಮ್ಮುಖವಾಗಿ ಚಲಿಸುತ್ತಿರೋದ್ರಿಂದ ಕುಂಭ ರಾಶಿಯವರು ಹೆಚ್ಚು ಕಷ್ಟಪಡಬೇಕಾದ ಸಾಧ್ಯತೆಯಿದೆ. ಆದರೆ ಶನಿದೇವನು ಅವರಿಗೆ ಅನ್ಯಾಯ ಮಾಡುವುದಿಲ್ಲ. ಮತ್ತು ಕಠಿಣ ಪರಿಶ್ರಮದ ಸಂಪೂರ್ಣ ಲಾಭವನ್ನು ಅವರಿಗೆ ನೀಡುತ್ತಾನೆ. ಬಹಳ ಸಮಯದಿಂದ ಹಾಗೇ ಉಳಿದಿದ್ದ ಯೋಜನೆಗಳು ಈ ಸಮಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನೀವು ಸ್ವಭಾವತಃ ಸ್ವಲ್ಪ ಸಂಶಯವನ್ನು ಹೊಂದುತ್ತೀರಿ. ಮತ್ತು ಯಾವುದನ್ನಾದರೂ ವಿಷಯವನ್ನು ತಿಳಿದುಕೊಳ್ಳಲು ಆಳವಾದ ಆಸಕ್ತಿಯನ್ನು ತೋರುತ್ತೀರಿ.
ಶಿಕ್ಷಣ, ಸಂಶೋಧನೆ, ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಈ ರಾಶಿಯವರು ಶನಿಯ ಈ ಸಂಕ್ರಮದ ಲಾಭವನ್ನು ಪಡೆಯುತ್ತಾರೆ. ಮಾನಸಿಕವಾಗಿ, ಈ ಸಮಯವು ನಿಮಗೆ ಸ್ವಲ್ಪ ಒತ್ತಡವನ್ನು ಉಂಟುಮಾಡಬಹುದು. ಆದರೆ ನಾವು ತಾಳ್ಮೆಯಿಂದ ಮುನ್ನಡೆದರೆ ಕೆಟ್ಟ ಸಮಯಗಳು ಕಳೆದು ಹೋಗುತ್ತದೆ. ನಿಮ್ಮ ಸಂಗಾತಿಯ ಸಲಹೆಯನ್ನು ಪಡೆಯಿರಿ. ಇದರಿಂದ ನಿಮ್ಮ ಸಮಸ್ಯೆಗಳನ್ನು ದೂರ ಮಾಡಬಹುದು.



Click it and Unblock the Notifications

