Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಶನಿ ದೋಷದ ಕಷ್ಟಗಳಿಂದ ಪಾರಾಗಲು ಈ ಮಂತ್ರ 19000 ಬಾರಿ ಜಪಿಸಿ
ಜನರು ಶನಿದೋಷವೆಂದರೆ ಬೆಚ್ಚಿ ಬೀಳುತ್ತಾರೆ, ಅದಕ್ಕೆ ಕಾರಣ ಶನಿದೋಷ ಅಷ್ಟೊಂದು ಕಠಿಣವಾಗಿರುತ್ತದೆ. ಶನಿದೋಷವಿದ್ದರೆ ಜನರು ಅವಮಾನವನ್ನು ಎದುರಿಸಬೇಕಾಗುತ್ತದೆ, ಸಾಲು-ಸಾಲು ಕಷ್ಟಗಳು ಎದುರಾಗುವುದು, ಮಾಡುವ ಕೆಲಸದಲ್ಲಿ ಸರಿಯಾದ ಫಲ ಸಿಗುವುದಿಲ್ಲ, ವ್ಯವಹಾರದಲ್ಲಿ ನಷ್ಟವಾಗುವುದು ಹೀಗೆ ಅನೇಕ ಸಮಸ್ಯೆಗಳು ಉಂಟಾಗುವುದು, ಈ ಕಾರಣಕ್ಕೆ ಶನಿದೋಷವಿದ್ದರೆ ಅದಕ್ಕೆ ಪರಿಹಾರವೇನು ಎಂದು ತಿಳಿದುಕೊಳ್ಳಲು ಬಯಸುತ್ತಾರೆ.

ಅದರಲ್ಲೂ ಶನಿ ಮಹಾದಶವಿದ್ದರೆ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಶನಿಮಹಾದಶವಿದ್ದರೆ ಈ ಬಗೆಯ ಸಮಸ್ಯೆಗಳು ಎದುರಾಗುವುದು
* ಖಿನ್ನತೆ
* ಯಶಸ್ಸಿ ಸಿಗಲು ಕಷ್ಟವಾಗುವುದು
* ಆರೋಗ್ಯ ಸಮಸ್ಯೆ ಉಂಟಾಗುವುದು
* ಮಕ್ಕಳಾಗದಿರುವ ಸಮಸ್ಯೆ ಉಂಟಾಗುವುದು
* ಒಂದು ಬಗೆಯ ಗೊಂದಲ
* ಬೇಗನೆ ಕೋಪ ಬರುವುದು
* ಅನೈತಿಕ ಸಂಬಂಧ, ತೇಜೋವಧೆ ಉಂಟಾಗುವುದು
ಶನಿದೋಷವಿರುವವರು 19000 ಜಪ ಮಾಡುವುದರಿಂದ ಪರಿಹಾರ ಸಿಗುವುದು
ನೀವು ಶನಿ ದೋಷವಿರುವವರು ಶನಿ ಮಂತ್ರಗಳನ್ನು 19000 ಜಪ ಮಾಡುವುದರಿಂದ ಶನಿದೋಷದಿಂದ ಪರಿಹಾರ ಪಡೆಯಬಹುದು.
ಆದರೆ ಜಪ ಮಾಡುವಾಗ ಈ ಅಂಶಗಳ ಕಡೆಗೆ ಗಮನ ನೀಡಬೇಕು
* ಸ್ಪಷ್ಟವಾದ ಉಚ್ಛಾರಣೆ ಮೂಲಕ ಜಪ ಮಾಡಬೇಕು.
* ನಿಮಗೆ ಒಂದೇ ಬಾರಿ ಶನಿ ಮಂತ್ರ 19000 ಮಾಡಲು ಕಷ್ಟವಾಗಬಹುದು, ನೀವು ಸಮಯ ಸಿಕ್ಕುವಾಗ 100 ಬಾರಿಯಂಯತೆ ಮಾಡಬಹುದು.
* ಶನಿ ಜಪವನ್ನು ನೀವು ಶನಿವಾರದಿಂದ ಪ್ರಾರಂಭಿಸಬೇಕು.
* ಶನಿವಾರ ಶನಿದೇವಾಲಯಕ್ಕೆ ಹೋಗಿ ಶನಿದೇವರಿಗೆ ಪ್ರಾರ್ಥನೆ ಮಾಡಿ, ಸಾಸಿವೆಯೆಣ್ಣೆ ಅರ್ಪಿಸಿ ನಂತರ ಮಂತ್ರ ಜಪ ಮಾಡಬೇಕು.
* ಶನಿಜಪ ಮಾಡುವುದರಿಂದ ಧನಾತ್ಮಕ ಶಕ್ತಿ ನಿಮ್ಮನ್ನು ಆವರಿಸುವುದರಿಂದ ಋಣಾತ್ಮಕ ಶಕ್ತಿ ದೂರಾಗುವುದು.
ಈ ಶನಿ ಮಂತ್ರ ಪಠಿಸಿ.
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ ಓಂ ಹಿಂ ಶಂ ಶನಯೇ ನಮಃ ಓಂ ಶಂ ಶನೈಶ್ಚರಾಯ ನಮಃ
ಶನಿದೋಷ ನಿವಾರಣೆಗೆ ಇತರ ಪರಿಹಾರಗಳು
* ಶನಿವಾರ ಉಪವಾಸವಿದ್ದು ಶನಿದೇವನನ್ನು ಆರಾಧಿಸಿ
* ನಿರ್ಗತಿಕರಿಗೆ ನಿಮ್ಮಿಂದಾದ ಸಹಾಯ ಮಾಡಿ
* ನೀಲಮಣಿ ಧರಿಸಿ
* ಶನಿ ಮಾಲೆ ಧರಿಸಿ (14 ಮುಖಿ, ಸಪ್ತಮುಖಿ ಅಥವಾ 36 ಮುಖಿ ರುದ್ರಾಕ್ಷಿ ಮಾಲೆ ಧರಿಸಿ)
* ಶನಿವಾರ ಕಪ್ಪು ಎಳ್ಳು ದಾನ ಮಾಡಿ
* ಶನಿಯ ಉಂಗುರ ಧರಿಸಿ (ಶನಿ ಸಿಂಗಾಪುರ ಗ್ರಾಮದಲ್ಲಿರುವ ದೇವಾಲಯದಲ್ಲಿ ಸಿಗುವುದು)
ಜೊತೆಗೆ ಹನುಮಾನ್ ಚಾಲೀಸ ಪಠಿಸಿ: ಶನಿದೋಷದಿಂದ ಪಾರಾಗಲು ಹನುಮಂತನ ಪೂಜೆ ಮಾಡಿ, ಹನುಮಂತನ ಭಕ್ತರಿಗೆ ಶನಿ ತೊಂದರೆ ಕೊಡುವುದಿಲ್ಲ, ಈ ಕಾರಣ ಹನುಮಾನ್ ಚಾಲೀಸ ಪಠಿಸುವುದರಿಂದ ಮೂಲಕ ಶನಿಯ ಕಾಟದಿಂದ ಪಾರಾಗಬಹುದು.
ಶನಿ ಏಕಾಶರಿ ಮಂತ್ರ
"ಓಂ ಶಂ ಶನೈಶ್ಚರಾಯ ನಮಃ
ಶನಿ ಗಾಯತ್ರಿ ಮಂತ್ರ
"ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹೀ ತನ್ನೋ ಮಂದಃ ಪ್ರಚೋದಯಾತ್"
ಸಾಡೇಸಾತಿ ಶನಿ ಮಂತ್ರ
"ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ"
"ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ"
ಶನಿ ವೈದಿಕ ಮಂತ್ರ
"ಓಂ ಶನ್ನೋ ದೇವಿರಭಿಷ್ಟ್ದಾಪೋ ಭವಂತು ಪಿತಯೇ"



Click it and Unblock the Notifications
