Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸೆಪ್ಟೆಂಬರ್ ಈ 3 ರಾಶಿಯವರಿಗೆ ಅದೃಷ್ಟದ ತಿಂಗಳಾಗಿದೆ
ಸೆಪ್ಟೆಂಬರ್ ತಿಂಗಳ ಭವಿಷ್ಯ ನೋಡುವುದಾದರೆ ಈ ತಿಂಗಳು 3 ರಾಶಿಯರಿಗೆ ತುಂಬಾನೇ ಚೆನ್ನಾಗಿದೆ. ಈ ಅವಧಿಯಲ್ಲಿ ಈ 3 ರಾಶಿಯವರು ತಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣುವಿರಿ, ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡೋಣ:
ವೃಷಭ ರಾಶಿ
ವೃಷಭ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡು ಬರುವುದು, ಉದ್ಯೋಗಿಗಳು ಈ ಸಮಯದಲ್ಲಿ ಪ್ರಗತಿಯನ್ನು ಕಾಣುವಿರಿ, ಅಲ್ಲದೆ ವರ್ಗಾವಣೆ ಬಯಸಿದ್ದರೆ ಈ ಅವಧಿಯಲ್ಲಿ ನೆರವೇರಲಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಉತ್ತಮ ಲಾಭ ಕಾಣಬಹುದು. ಸೆಪ್ಟೆಂಬರ್ ಎರಡನೇ ವಾರ ನಿಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಗೊಂದಲಗಳು ದೂರಾಗಲಿದೆ. ತಿಂಗಳ ದ್ವಿತೀಯಾರ್ಧದಲ್ಲಿ ನೀವು ಹೆಚ್ಚಿನ ಶ್ರಮ ಹಾಕಿ ಕೆಲಸ ಮಾಡಬೇಕು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಹಣದ ವ್ಯವಹಾರಗಳ ಬಗ್ಗೆ ಎಚ್ಚರವಹಿಸಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ತುಂಬಾನೇ ಚೆನ್ನಾಗಿರಲಿದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಅನಿರೀಕ್ಷಿತ ಯಶಸ್ಸನ್ನು ಪಡೆಯಬಹುದು. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನಿಮ್ಮ ಕೆಲಸ ಅಥವಾ ವ್ಯವಹಾರಗಳಲ್ಲಿ ನೀವು ಲಾಭವನ್ನು ಪಡೆಯುತ್ತೀರಿ. ಈ ಜೀವನದಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಒಳ್ಳೆಯ ಅವಕಾಶಗಳನ್ನು ಪಡೆಯುವಿರಿ. ಈ ಅವಧಿಯಲ್ಲಿ ಬಾಕಿಯುಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿದೆ. ಇನ್ನು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಆದಾಯ ಚೆನ್ನಗಿರುವುದರಿಂದ ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಸಂಬಂಧದ ದೃಷ್ಟಿಯಿಂದಲೂ ಈ ಅವಧಿ ಉತ್ತಮವಾಗಿದೆ. ಒಟ್ಟಿನಲ್ಲಿ ಈ ತಿಂಗಳು ನಿಮಗೆ ನಿಮಗೆ ತುಂಬಾನೇ ಉತ್ತಮವಾಗಿರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ತಿಂಗಳು ತುಂಬಾನೇ ಚೆನ್ನಾಗಿರಲಿದೆ. ಅದೃಷ್ಟದ ಬೆಂಬಲ ನಿಮಗೆ ಸಿಗುವುದರಿಂದ ನಿಮ್ಮ ಎಲ್ಲಾ ಕೆಲಸಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು, ಉದ್ಯೋಗಿಗಳಿಗೆ ಬಡ್ತಿಯ ಅವಕಾಶವಿರುತ್ತದೆ. ತಿಂಗಳ ಮೊದಲಾರ್ಧದಲ್ಲಿ, ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕಸ್ಥಿತಿ ತುಂಬಾ ಚೆನ್ನಾಗಿರಲಿದೆ. ಹಣದ ಖರ್ಚು ಅಧಿಕವಿರಲಿದೆ, ಆದರೆ ಹಣದ ತೊಂದರೆ ಇರಲ್ಲ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಸೆಪ್ಟೆಂಬರ್ ತಿಂಗಳ ದ್ವಿತೀಯಾರ್ಧದಲ್ಲಿ, ನಿಮ್ಮ ಆರೋಗ್ಯ ಮತ್ತು ಸಂಬಂಧದ ಬಗ್ಗೆ ನೀವು ಸ್ವಲ್ಪ ಗಮನ ಹರಿಸಬೇಕು.



Click it and Unblock the Notifications