Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶ್ರಾವಣ ರವಿ ಪ್ರದೋಷ ವ್ರತ 2023 : ಶುಭ ಮುಹೂರ್ತ, ಉಪವಾಸ, ಪೂಜಾ ವಿಧಿ ಹೇಗೆ ಆಚರಿಸಬೇಕು?
ಪ್ರದೋಷ ವ್ರತವನ್ನು ಕೃಷ್ಣನ ತ್ರಯೋದಶಿ ತಿಥಿ ಮತ್ತು ಪ್ರತಿ ತಿಂಗಳ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆಯಾದರೂ ಶ್ರಾವಣ ಮಾಸದಲ್ಲಿ ಬರುವ ಪ್ರದೋಷ ವ್ರತವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಈ ಪ್ರದೋಷ ವ್ರತವು ಅಧಿಕಮಾಸದ ಶುಕ್ಲ ಪಕ್ಷದಲ್ಲಿ ಬಂದಿದ್ದು, ಈ ದಿನದಂದು ಶಿವನನ್ನು ಆರಾಧಿಸುವುದರಿಂದ ರೋಗಗಳು, ದೋಷಗಳು ಮತ್ತು ದುಃಖಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ. ಅಷ್ಟಕ್ಕು ಪ್ರದೋಷ ವ್ರತವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ, ಮಹತ್ವ ಹಾಗೂ ಪೂಜಾ ವಿಧಿ ಬಗ್ಗೆ ತಿಳಿದುಕೊಳ್ಳೋಣ.

ಪ್ರದೋಷ ವ್ರತ 2023 ದಿನಾಂಕ :
ಅಧಿಕ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯನ್ನು ಜುಲೈ 30, 2023 ರಂದು ಶ್ರಾವಣ ಎರಡನೇ ಪ್ರದೋಷ ವ್ರತವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಭಾನುವಾರವಾದ್ದರಿಂದ ರವಿಪ್ರದೋಷ ವ್ರತ ಎಂದು ಕರೆಯಲಾಗುತ್ತದೆ.
ಶ್ರಾವಣ ರವಿ ಪ್ರದೋಷ ವ್ರತ 2023 ಮುಹೂರ್ತ :
ಪಂಚಾಂಗದ ಪ್ರಕಾರ ಶ್ರಾವಣ ಅಧಿಕಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯು ಜುಲೈ 30, 2023 ರಂದು ಬೆಳಿಗ್ಗೆ 10.34 ಕ್ಕೆ ಪ್ರಾರಂಭವಾಗುತ್ತದೆ. ಜುಲೈ 31 ರ ಸೋಮವಾರದಂದು ಬೆಳಿಗ್ಗೆ 07:26 ಕ್ಕೆ ಇದು ಕೊನೆಗೊಳ್ಳುತ್ತದೆ.
ಶಿವಪೂಜಾ ಸಮಯ - ಸಂಜೆ 07:14 ರಿಂದ ರಾತ್ರಿ 09:19 (ಜುಲೈ 30, 2023)
ರವಿ ಪ್ರದೋಷ ವ್ರತದ ಮಹತ್ವವೇನು?
ಭಾನುವಾರದಂದು ಪ್ರದೋಷ ವ್ರತವನ್ನು ಆಚರಿಸೋದ್ರಿಂದ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು. ಭಾನುವಾರ ಶಿವ-ಶಕ್ತಿಯ ಆರಾಧನೆಯಿಂದ ದಾಂಪತ್ಯ ಸುಖವೂ ಉತ್ತಮಗೊಳ್ಳುತ್ತಂತೆ. ಶ್ರಾವಣದಲ್ಲಿ ಪ್ರದೋಷ ವ್ರತವನ್ನು ಆಚರಿಸೋದ್ರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಂತೆ. ಅಷ್ಟೇ ಅಲ್ಲದೇ ಈ ವ್ರತದ ಫಲವಾಗಿ ನಮ್ಮೆಲ್ಲಾ ಸಂಕಷ್ಟಗಳು ನೆರವೇರಲಿದೆ.
ರವಿ ಪ್ರದೋಷ ವ್ರತದ ದಿನದಂದು ಶಿವಲಿಂಗಕ್ಕೆ ರುದ್ರಾಭಿಷೇಕ ಮತ್ತು ಶೃಂಗಾರಕ್ಕೆ ವಿಶೇಷ ಮಹತ್ವವಿದೆ. ಈ ದಿನ ಮನಃಪೂರ್ವಕವಾಗಿ ಉಪವಾಸ ಮಾಡಿ ಪೂಜಿಸುವುದರಿಂದ ಬಯಸಿದ ಫಲ ಮತ್ತು ಆರೋಗ್ಯ ಉತ್ತಮವಾಗುತ್ತದೆ. ಹಾಗೂ ಶಿವನ ಆಶೀರ್ವಾದದಿಂದ ಆಯಸ್ಸು ವೃದ್ಧಿಯಾಗುತ್ತದೆ. ಸ್ಕಂದ ಪುರಾಣದ ಪ್ರಕಾರ ಪ್ರದೋಷ ತಿಥಿಯ ದಿನದಂದು ಶಿವನು ಕೈಲಾಸ ಪರ್ವತದಲ್ಲಿ ನೆಲೆಸುತ್ತಾನಂತೆ. ಈ ಉಪವಾಸದ ಪ್ರಭಾವದಿಂದ ಜಾತಕದಲ್ಲಿ ನವಗ್ರಹದ ಸ್ಥಾನವು ಬಲಗೊಳ್ಳುತ್ತದೆ. ಮತ್ತು ನೀವು ಬಿಕ್ಕಟ್ಟಿನಿಂದ ಮುಕ್ತವಾಗುತ್ತೀರಿ.
ಪ್ರದೋಷ ವ್ರತದೊಂದಿಗೆ ಸೂರ್ಯ ಮತ್ತು ಚಂದ್ರರ ಸಂಬಂಧವೇನು?
ರವಿ ಪ್ರದೋಷ ವ್ರತವು ಸೂರ್ಯ ಮತ್ತು ಚಂದ್ರನಿಗೂ ಸಂಬಂಧಿಸಿದೆ. ಚಂದ್ರನು ಶಿವನೊಂದಿಗೆ ಇದ್ದಾನೆ. ಆದ್ದರಿಂದ ಪ್ರದೋಷ ತಿಥಿಯಂದು ಉಪವಾಸ ಮಾಡುವುದರಿಂದ ಜಾತಕದಲ್ಲಿ ಚಂದ್ರನ ಸ್ಥಾನವು ಬಲವಾಗಿರುತ್ತದೆ. ಮತ್ತು ಸೂರ್ಯನು ಪ್ರದೋಷವು ಗ್ರಹಗಳ ರಾಜನಾದ ಸೂರ್ಯನಿಗೆ ಸಂಬಂಧಿಸಿದೆ. ಆದ್ದರಿಂದ ಈ ದಿನ ರವಿಯೋಗವೂ ನಿರ್ಮಾಣವಾಗುತ್ತದೆ. ಆದ್ದರಿಂದಲೇ ರವಿಪ್ರದೋಷದಂದು ಉಪವಾಸವಿದ್ದು ಶಿವನ ಆರಾಧನೆ ಮಾಡಿದರೆ ಸೂರ್ಯ ಮತ್ತು ಚಂದ್ರರು ಶುಭಫಲಗಳನ್ನು ನೀಡುತ್ತಾರೆ. ಮತ್ತು ಜಾತಕದಿಂದ ಅಶುಭ ದೂರವಾಗುತ್ತಂತೆ. ಅದೇ ಸಮಯದಲ್ಲಿ ಗೌರವವು ಹೆಚ್ಚಾಗುತ್ತದೆ ಮತ್ತು ಮಾನಸಿಕ ಶಾಂತಿಯನ್ನು ಸಾಧಿಸಲಾಗುತ್ತದೆ.
ಈ ದಿನ ಉಪವಾಸ ವ್ರತ ಹೇಗೆ ಮಾಡಬೇಕು?
ಪ್ರದೋಷ ತಿಥಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಧ್ಯಾನಾಸಕ್ತರಾಗಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಪೂಜಾ ಕೋಣೆಯಲ್ಲಿ ದೀಪವನ್ನು ಹಚ್ಚಿ ಅಕ್ಷತೆಯನ್ನು ಕೈಯಲ್ಲಿ ಹಿಡಿದು ಉಪವಾಸ ವ್ರತವನ್ನು ಕೈಗೊಳ್ಳಿ. ಇದರ ನಂತರ ಹತ್ತಿರದ ದೇವಾಲಯಕ್ಕೆ ಹೋಗಿ ಶಿವಲಿಂಗವನ್ನು ಪೂಜಿಸಿ ಮತ್ತು ಇಡೀ ದಿನ ಉಪವಾಸವನ್ನು ಕೈಗೊಳ್ಳಿ. ಇದರ ನಂತರ ನಿಮ್ಮ ಮನಸ್ಸಿನಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತಿರಿ. ಸಂಜೆ ಮತ್ತೆ ಪ್ರದೋಷ ಸಮಯಕ್ಕೆ ಸರಿಯಾಗಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನು ಇರಿಸಿ. ಮತ್ತು ಎಂಟು ಬಾರಿ ನಮಸ್ಕಾರವನ್ನು ಅರ್ಪಿಸಿ.
ಇದಾದ ಬಳಿಕ ಶಿವಲಿಂಗಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಗಂಗಾಜಲವನ್ನು ಬೆರೆಸಿ ಪಂಚಾಮೃತದಿಂದ ಅಭಿಷೇಕ ಮಾಡಿ. ಮತ್ತು ಶಿವಲಿಂಗಕ್ಕೆ ಗಾಂಜಾ, ದಾತುರ, ಬಿಲ್ವಪತ್ರೆ ಹೂವುಗಳು ಮತ್ತು ನೈವೇದ್ಯವನ್ನು ಅರ್ಪಿಸಿ. ಇದರ ನಂತರ ಧೂಪ, ದೀಪಗಳನ್ನು ಬೆಳಗಿಸುವ ಮೂಲಕ ಶಿವನಿಗೆ ಆರತಿಯನ್ನು ಮಾಡಿ. ಪ್ರದೋಷ ವ್ರತದ ಕಥೆಯನ್ನು ಆಲಿಸಿ ಅಥವಾ ಓದಿ. ಇದಾದ ಬಳಿಕ ನೀವು ಆಹಾರವನ್ನು ಸೇವಿಸಬಹುದು.



Click it and Unblock the Notifications

